ಚುನಾವಣಾ ಠೇವಣಿ
ಒಂದು ಚುನಾವಣಾ ವ್ಯವಸ್ಥೆಯಲ್ಲಿ, ಠೇವಣಿ ಎಂದರೆ ಶಾಸನಸಭೆಯಲ್ಲಿ ಸದಸ್ಯತ್ವದಂತಹ ಒಂದು ಚುನಾಯಿತ ಹುದ್ದೆಗಾಗಿ ಒಬ್ಬ ಅಭ್ಯರ್ಥಿಯು ಚುನಾವಣೆಗೆ ನಿಲ್ಲುವ ಅನುಮತಿ ಪಡೆಯುವ ಮುನ್ನ ಚುನಾವಣಾ ಪ್ರಾಧಿಕಾರಕ್ಕೆ ಪಾವತಿಸಬೇಕಾದ ಹಣದ ಮೊತ್ತ.
ಸಾಮಾನ್ಯ ಪರಿಸ್ಥಿತಿಯಲ್ಲಿ, ಅಭ್ಯರ್ಥಿಯು ಚಲಾಯಿಸಲಾದ ಮತಗಳ ಒಂದು ನಿರ್ದಿಷ್ಟ ಪ್ರಮಾಣವನ್ನು ಪಡೆದರೆ ಪಡೆದ ಠೇವಣಿಯನ್ನು ಅಭ್ಯರ್ಥಿಗೆ ಚುನಾವಣೆಯ ನಂತರ ಮರುಪಾವತಿಸಲಾಗುತ್ತದೆ. ಸ್ಥಾನವನ್ನು ಗೆಲ್ಲುವ ಯಾವುದೇ ವಾಸ್ತವಿಕ ಸಾಧ್ಯತೆ ಇಲ್ಲದ ಗೌಣ ಅಭ್ಯರ್ಥಿಗಳು ಅಥವಾ ಪಕ್ಷಗಳ ವ್ಯಾಪನೆಯನ್ನು ತಗ್ಗಿಸುವುದು ಠೇವಣಿಯ ಉದ್ದೇಶವಾಗಿರುತ್ತದೆ. ಅಭ್ಯರ್ಥಿಯು ಮರುಪಾವತಿಯ ಕನಿಷ್ಠ ಮಿತಿಯನ್ನು ಸಾಧಿಸದಿದ್ದರೆ ಠೇವಣಿಯನ್ನು ಕಳೆದುಕೊಳ್ಳುತ್ತಾನೆ.
ಭಾರತ
ಬದಲಾಯಿಸಿಭಾರತದಲ್ಲಿ, ಲೋಕಸಭೆಯ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ₹25,000 ಯ ಭದ್ರತಾ ಠೇವಣಿಯನ್ನು ಪಾವತಿಸಬೇಕು. ವಿಧಾನ ಸಭೆ ಚುನಾವಣೆಗಳಿಗೆ ಈ ಮೊತ್ತವು ₹10,000 ಆಗಿರುತ್ತದೆ.[೧][೨][೩][೪]
ಉಲ್ಲೇಖಗಳು
ಬದಲಾಯಿಸಿ- ↑ "FAQs – Contesting for Elections". Election Commission of India. Archived from the original on 20 ಆಗಸ್ಟ್ 2018. Retrieved 8 September 2011.
- ↑ "Electoral system in India" (PDF). National Institute of Open schooling. Archived from the original (PDF) on 24 March 2012. Retrieved 8 September 2011.
- ↑ "Forfeited deposits fill EC coffers". ಟೈಮ್ಸ್ ಆಫ್ ಇಂಡಿಯ. 24 April 2004. Archived from the original on 26 ಸೆಪ್ಟೆಂಬರ್ 2012. Retrieved 8 September 2011.
- ↑ "Election Commission of India". Archived from the original on 2018-08-20. Retrieved 2020-04-06.