ಚುಟ್ಟ (ಚುರುಟು) ಉತ್ಪಾದನೆಯ ಸಮಯದಲ್ಲಿ ಎರಡೂ ತುದಿಗಳು ಕತ್ತರಿಸಲ್ಪಡುವ ಒಂದು ಶೋಧಕರಹಿತ ಉರುಳೆಯಾಕಾರದ ಹೊಗೆಬತ್ತಿ. ಚುಟ್ಟಗಳು ಕ್ರಮೇಣ ಮೊನಚಾಗುವುದಿಲ್ಲವಾದ್ದರಿಂದ, ಇವನ್ನು ಯಾಂತ್ರಿಕವಾಗಿ ಸುತ್ತುವುದು ಅಗ್ಗವಾಗಿದೆ, ಮತ್ತು ಇವುಗಳ ಕಡಿಮೆ ವೆಚ್ಚದ ಕಾರಣ ಇವು ಜನಪ್ರಿಯವಾಗಿವೆ.

ಚುಟ್ಟಗಳ ತಯಾರಿಕೆ

ಚುಟ್ಟ ತಮಿಳುನಾಡಿನಲ್ಲಿ ಹುಟ್ಟಿಕೊಂಡಿತು. ಚುಟ್ಟಗಳು ಮತ್ತೊಂದು ಶೋಧಕರಹಿತ ಭಾರತೀಯ ಮೂಲದ ಉತ್ಪನ್ನವಾದ ಬೀಡಿಗಳಿಗಿಂತ ಹೆಚ್ಚು ಉದ್ದವಾಗಿರುತ್ತವೆ.

ಚುಟ್ಟಗಳು ಭಾರತ ಮತ್ತು ಬರ್ಮಾದಲ್ಲಿ ಸಾಂಪ್ರದಾಯಿಕವಾಗಿವೆ, ಮತ್ತು ಹಾಗಾಗಿ ಬ್ರಿಟೀಷ್ ಸಾಮ್ರಾಜ್ಯದ ದಿನಗಳಲ್ಲಿ ಬ್ರಿಟಿಷರಲ್ಲಿ ಜನಪ್ರಿಯವಾಗಿದ್ದವು.

ಆದಷ್ಟು ತಿಳಿದಿರುವಂತೆ, ಭಾರತದಲ್ಲಿ ಚುಟ್ಟದ ಸೇದಿಕೆಯನ್ನು ಉಷ್ಣವಲಯದ ರೋಗಗಳ ವಿರುದ್ಧದ ಪ್ರತಿರೋಧಕ ಶಕ್ತಿಯೊಂದಿಗೆ ಕೂಡ ಸಂಬಂಧಿಸಲಾಗಿತ್ತು.

ಚುಟ್ಟವು ಸಾಮಾನ್ಯವಾಗಿ ಉರುಳೆಯಾಕಾರದ್ದಾಗಿರುತ್ತದೆಂದು ವ್ಯಾಖ್ಯಾನಿಸಲಾಗುತ್ತದಾದರೂ, ಬರ್ಮಾದಲ್ಲಿನ ಮನೆಯಲ್ಲಿ ಸುತ್ತಲ್ಪಟ್ಟ ಚುಟ್ಟಗಳು ಕೆಲವೊಮ್ಮೆ ಶಂಕುವಿನಾಕಾರದ್ದಾಗಿರುತ್ತವೆ.[೧]

ಉಲ್ಲೇಖಗಳು ಬದಲಾಯಿಸಿ

  1. "Cigars and Cheroots". Travel2photograph.wordpress.com.

ಬಾಹ್ಯ ಸಂಪರ್ಕಗಳು ಬದಲಾಯಿಸಿ

"https://kn.wikipedia.org/w/index.php?title=ಚುಟ್ಟ&oldid=909701" ಇಂದ ಪಡೆಯಲ್ಪಟ್ಟಿದೆ