ಚುಂಚನಕಟ್ಟೆ ಜಲಪಾತ

ಚುಂಚನಕಟ್ಟೆ ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕಿನಲ್ಲಿರುವ ಒಂದು ಪ್ರವಾಸಿ ತಾಣ. ಕರ್ನಾಟಕ ರಾಜ್ಯದ ಜೀವನಾಡಿಯಾದ ಕಾವೇರಿ ನದಿಯು ಇಲ್ಲಿ ಸುಮಾರು ೬೫ ಅಡಿಗಳ[] ಎತ್ತರದಿಂದ ಭೋರ್ಗರೆಯುತ್ತಾ ದುಮ್ಮಿಕ್ಕಿ ಮೋಹಕ ಜಲಪಾತವನ್ನು ಸೃಷ್ಟಿಸುತ್ತಾಳೆ. ಚುಂಚನಕಟ್ಟೆಯು ಕೃಷ್ಣರಾಜನಗರದಿಂದ ೧೫ ಕಿ.ಮಿ ದೂರದಲ್ಲಿ ಇದೆ. ಶ್ರೀರಾಮನು ತನ್ನ ವನವಾಸಕಾಲದಲ್ಲಿ ತನ್ನ ಪತ್ನಿ ಸೀತಾದೇವಿಯೊಡನೆ ಇಲ್ಲಿಗೆ ಬಂದಿದ್ದನೆಂಬ ಐತಿಹ್ಯವಿದೆ. ಇಲ್ಲಿರುವ ಕೋದಂಡರಾಮ ದೇವಾಲಯವು ಪ್ರಸಿದ್ದಿ ಪಡೆದಿದೆ. ಇಲ್ಲಿಯ ವಿಶೇಷವೆಂದರೆ ಶ್ರೀರಾಮನ ಬಲಬದಿಗೆ ಸೀತಾದೇವಿಯ ವಿಗ್ರಹವಿದೆ ಇಲ್ಲಿರುವ ಜಲಪಾತವು ಕಾವೇರಿನದಿಯ ಮೊದಲ ಜಲಪಾತವಾಗಿದ್ದು ಇಲ್ಲಿ ಕರ್ನಾಟಕದಲ್ಲೆ ಹೆಸರುವಾಸಿಯಾದ ದನಗಳ ಜಾತ್ರೆ ಯು ಜನವರಿ ತಿಂಗಳಲ್ಲಿ ನಡೆದು ಮಕರ ಸಂಕ್ರಾಂತಿಯ ಹಿಂದಿನ ದಿನ ಶ್ರೀಕೋದಂಡರಾಮ ದೇವರ ರಥೋತ್ಸವ ನಡೆಯಲಿದ್ದು ಇದಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ,

ಇದನ್ನೂ ನೋಡಿ




ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕಿನ ಚುಂಚನಕಟ್ಟೆ ಎಂಬಲ್ಲಿ ಕಾವೇರಿ ನದಿಯು ಒಂದು ಅದ್ಭುತವಾದ ಜಲಪಾತವನ್ನು ಸೃಷ್ಟಿಸಿದೆ. ಈ ಜಲಪಾತವು ನೋಡುಗರಿಗೆ ಮತ್ತು ಪ್ರವಾಸಿಗರ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತದೆ.ಈ ಸ್ಥಳದ ಮತ್ತೊಂದು ವಿಶೇಷ ಎಂದರೆ ಇಲ್ಲಿನ ಕೋದಂಡ ರಾಮನ ದೇವಾಲಯ. ಈ ದೇವಾಲಯವು ಸಹ ಬಹಳ ಸುಂದರವಾದ ರಚನೆಯನ್ನು ಒಳಗೊಂಡಿದೆ.ಈ ಚುಂಚಕಟ್ಟೆ ಜಲಪಾತ ದುಮ್ಮಿಕುವ ರಬಸವು ಸುತ್ತಲಿನ ಹಳ್ಳಿಗಳಿಗೂ ಕೇಳುತ್ತದೆ. ಆದರೆ, ಈ ಜಲಪಾತದ ಅಥವಾ ಈ ನದಿ ಹರಿಯುವ ರಭಸ ಎಷ್ಟೇ ಇದ್ದರೂ ಸಹ ಈ ದೇವಾಲಯದ ಗರ್ಭಗುಡಿಯ ಒಳಗಡೆ ಕೇಳುವುದಿಲ್ಲ. ಇದಕ್ಕೆ ಕಾರಣ ಎಂದರೆ,ಅಲ್ಲಿನ ಸ್ಥಳೀಯರು ಹೇಳುವ ಪ್ರಕಾರ ರಾಮಾಯಣದ ಕಾಲದಲ್ಲಿ ರಾಮ, ಸೀತೆ, ಲಕ್ಷ್ಮಣರು ಎಲ್ಲಿ ಕೆಲವು ಸಮಯ ವಾಸವಾಗಿದ್ದರು ಎಂದು ಹೇಳಲಾಗಿದೆ. ಹಾಗೂ ಆ ಸಂದರ್ಭದಲ್ಲಿ "ಚುಂಚ-ಚುಂಚಿ" ಎಂಬ ರಾಕ್ಷಸರು ವಾಸವಿದ್ದರು. ಅವರು ಆ ಪ್ರದೇಶದ ಪ್ರಜೆಗಳಿಗೆ ನೀಡುತ್ತಿದ್ದ ಹಿಂಸೆ ಇಂದ ಮುಕ್ತಿ ನೀಡಲು ರಾಮನು ಆ ರಾಕ್ಷಸರ ವದೆ ಮಾಡಿದ ಸಂದರ್ಭದಲ್ಲಿ ಆ ರಾಕ್ಷಸರು ನಮ್ಮ ಹೆಸರು ಎಲ್ಲಿಗೆ ಕೊನೆಯಾಗುವುದು ಎಂದು ದುಃಖಿತರಾದ ಸಂದರ್ಭದಲ್ಲಿ ರಾಮನು ಈ ಪ್ರದೇಶಕ್ಕೆ ಚುಂಚನಕಟ್ಟೆ ಎಂದು ನಾಮಕರಣ ಮಾಡಿದನು. ಹೀಗೆ ಚುಂಚಾರಣ್ಯ ಎಂದು ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕು ಚುಂಚನಕಟ್ಟೆ ಎಂಬಲ್ಲಿ ಕಾವೇರಿ ನದಿಯು ಒಂದು ಅದ್ಭುತವಾದ ಜಲಪಾತವನ್ನು ಸೃಷ್ಟಿಸಿದೆ. ಈ ಜಲಪಾತವು ನೋಡುಗರಿಗೆ ಮತ್ತು ಪ್ರವಾಸಿಗರ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತದೆ. ಈ ಸ್ಥಳದ ಮತ್ತೊಂದು ವಿಶೇಷ ಎಂದರೆ ಇಲ್ಲಿನ ಕೋದಂಡ ರಾಮನ ದೇವಾಲಯ. ಈ ದೇವಾಲಯವು ಸಹ ಬಹಳ ಸುಂದರವಾದ ರಚನೆಯನ್ನು ಒಳಗೊಂಡಿದೆ.ಈ ಚುಂಚಕಟ್ಟೆ ಜಲಪಾತ ದುಮ್ಮಿಕುವ ರಬಸವು ಸುತ್ತಲಿನ ಹಳ್ಳಿಗಳಿಗೂ ಕೇಳುತ್ತದೆ. ಆದರೆ, ಈ ಜಲಪಾತದ ಅಥವಾ ಈ ನದಿ ಹರಿಯುವ ರಭಸ ಎಷ್ಟೇ ಇದ್ದರೂ ಸಹ ಈ ದೇವಾಲಯದ ಗರ್ಭಗುಡಿಯ ಒಳಗಡೆ ಕೇಳುವುದಿಲ್ಲ. ಇದಕ್ಕೆ ಕಾರಣ ಎಂದರೆ, ಅಲ್ಲಿನ ಸ್ಥಳೀಯರು ಹೇಳುವ ಪ್ರಕಾರ ರಾಮಾಯಣದ ಕಾಲದಲ್ಲಿ ರಾಮ, ಸೀತೆ, ಲಕ್ಷ್ಮಣರು ಇಲ್ಲಿ ಕೆಲವು ಸಮಯ ವಾಸವಾಗಿದ್ದರು ಎಂದು ಹೇಳಲಾಗಿದೆ. ಹಾಗೂ ಆ ಸಂದರ್ಭದಲ್ಲಿ "ಚುಂಚ-ಚುಂಚಿ" ಎಂಬ ರಾಕ್ಷಸರು ವಾಸವಿದ್ದರು. ಅವರು ಆ ಪ್ರದೇಶದ ಪ್ರಜೆಗಳಿಗೆ ನೀಡುತ್ತಿದ್ದ ಹಿಂಸೆ ಇಂದ ಮುಕ್ತಿ ನೀಡಲು ರಾಮನು ಆ ರಾಕ್ಷಸರ ವದೆ ಮಾಡಿದ ಸಂದರ್ಭದಲ್ಲಿ ಆ ರಾಕ್ಷಸರು ನಮ್ಮ ಹೆಸರು ಇಲ್ಲಿಗೆ ಕೊನೆಯಾಗುವುದು ಎಂದು ದುಃಖಿತರಾದ ಸಂದರ್ಭದಲ್ಲಿ ರಾಮನು ಈ ಪ್ರದೇಶಕ್ಕೆ ಚುಂಚನಕಟ್ಟೆ ಎಂದು ನಾಮಕರಣ ಮಾಡಿದನು. ಹೀಗೆ ಚುಂಚಾರಣ್ಯ ಎಂದು ಇದ್ದ ಪ್ರದೇಶ ಕ್ರಮೇಣ ಚುಂಚನಕಟ್ಟೆ ಆಯಿತು. ಹೀಗೆ ಅಲ್ಲಿ ಸೀತೆ-ರಾಮ ಕಾಲಕಳೆಯುತಿದ್ದ ಸಂಧರ್ಭದಲ್ಲಿ, ಒಮ್ಮೆ ಸೀತೆ ವಿಶ್ರಾಂತಿ ಪಡೆಯುತಿದ್ದ ವೇಳೆಯಲ್ಲಿ ಸೀತೆಗೆ ತೊಂದರೆ ಆಗಬಾರದೆಂಬ ಕಾರಣದಿಂದ ರಾಮನು ಕಾವೇರಿ ಹರಿಯುವ ಹಾದಿಗೆ ಅಡ್ಡಲಾಗಿ ಬಾಣ ಬಿಟ್ಟು ನೀನು ಹರಿಯುವ ಸದ್ದು ನನ್ನ ಸೀತೆ ಇರುವಲ್ಲಿಗೆ ಕೇಳಕೂಡದು ಎಂದು ಆಜ್ಞೆ ಮಾಡಿದನಂತೆ. ಆಗಿನಿಂದ ಕಾವೇರಿ ನದಿ ಹರಿಯುವ ಶಬ್ದ ಕೋದಂಡ ರಾಮ ದೇವಾಲಯದ ಒಳಭಾಗಕ್ಕೆ ಕೇಳುವುದಿಲ್ಲ. ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ. ಇಲ್ಲಿನ ಮತ್ತೊಂದು ವಿಶೇಷ ಎಂದರೆ, ಎಲ್ಲಿನ ಜಲಪಾತದ ಒಂದು ಭಾಗದಲ್ಲಿ ಹಳದಿ ಬಣ್ಣದ ನೀರು ಹರಿಯುತ್ತದೆ. ಇದರ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿದಾಗ ಅವರು ಹೇಳಿದ್ದೇನೆಂದರೆ, ಸೀತೆ-ರಾಮರ ವನವಾಸದ ಸಂದರ್ಭದಲ್ಲಿ ಸೀತೆಯು ಜಳಕ ಮಾಡುವಾಗ ಅವರು ಬಳಸಿದ ಅರಿಶಿನ,ಸೀಗೆಕಾಯಿಯ ಬಣ್ಣ ಎಂದು ಹೇಳಿದರು.ಆಶ್ಚರ್ಯ ಎಂಬಂತೆ ಆ ಸ್ಥಳದಲ್ಲಿ ಈಗಲೂ ಸಹ ಆ ಸುಗಂಧ ಇನ್ನೂ ಸುಳಿದಾಡುತ್ತದೆ. ಚುಂಚನಕಟ್ಟೆ ಜಲಪಾತದ ಆ ಭಾಗವನ್ನು ಈಗಲೂ ಅಲ್ಲಿನ ಜನರು "ಸೀತೆ ಬಚ್ಚಲು"ಎಂದೂ ಕರೆಯುತ್ತಾರೆ. ಹಾಗೂ ಇಲ್ಲಿನ ಜನರು ಹೇಳುವ ಪ್ರಕಾರ ಆ ಕಾಲದಲ್ಲಿ ರಾಮನ ರಥೋತ್ಸವ ಒಂದು ಚಿನ್ನದ ತೇರಿನಲ್ಲಿ ನಡೆಯುತಿತ್ತು. ಆ ತೇರು ದೈವಾಂಶ ದಿಂದ ಕೂಡಿತ್ತು. ಆ ಕಾಲದಲ್ಲಿ ಯಾರೋ ರಾಮನ ನಿಂದನೆ ಮಾಡಿ ಅವಹೇಳನವಾಗಿ ಮತನಾಡಿದ್ದರಿಂದ. ಆ ತೇರು ಕಾವೇರಿ ನದಿಯಲ್ಲಿ ಮುಳುಗಿತು ಎಂಬ ವದಂತಿ ಇದೆ ಆದರೆ ಇದಕ್ಕೆ ಸೂಕ್ತ ಆಧಾರಗಳಿಲ್ಲ.

ಉಲ್ಲೇಖಗಳು

ಬದಲಾಯಿಸಿ
  1. "Chunchanakatte Falls". india9. Retrieved 2006-12-09.