ಚುಂಗಾ ಪಿಠಾ
ಚುಂಗಾ ಪಿಠಾ (ಸುಂಗಾ ಪಿಠಾ) ಬಾಂಗ್ಲಾದೇಶದ ಸಿಲ್ಹೆಟ್ ಪ್ರದೇಶದಲ್ಲಿ ತನ್ನ ಮೂಲವನ್ನು ಹೊಂದಿರುವ ಅಕ್ಕಿಯ ಒಂದು ಸಾಂಪ್ರದಾಯಿಕ ಬಿಲ್ಲೆಖಾದ್ಯ.[೧] ಬಿದಿರು ಮತ್ತು ಅಂಟಂಟಾದ ಅನ್ನ ಚುಂಗಾ ಪಿಠಾದ ಮುಖ್ಯ ಘಟಕಾಂಶಗಳಾಗಿದ್ದರೂ, ಇದನ್ನು ಬಿನ್ನಿ ಅಕ್ಕಿ, ಹಾಲು, ಸಕ್ಕರೆ, ಕೊಬ್ಬರಿ ಮತ್ತು ಅಕ್ಕಿ ಪುಡಿಯಿಂದ ಕೂಡ ತಯಾರಿಸಬಹುದು.[೨][೩] ಅಂಟು ಅನ್ನವನ್ನು ಎಳೆ ಬಿದಿರಿನೊಳಗೆ ತುಂಬಿ ಹೊಗೆಯಲ್ಲಿ ನಿಧಾನವಾಗಿ ಬೇಯಿಸಿ ಈ ಅನನ್ಯ ಖಾದ್ಯವನ್ನು ತಯಾರಿಸಲಾಗುತ್ತದೆ.[೪]
ಈ ಸಾಂಪ್ರದಾಯಿಕ ಖಾದ್ಯವು ಅಸ್ಸಾಮಿ ಜನರಲ್ಲಿಯೂ ಪ್ರಸಿದ್ಧವಾಗಿದೆ.[೫]
ಸಿಲ್ಹೆಟ್‍ನ ವಿವಿಧ ಬುಡಕಟ್ಟುಗಳು ಬಿದಿರನ್ನು ಕತ್ತರಿಸಿ ಅದರೊಳಗೆ ನೆನೆಸಿದ ಅಕ್ಕಿಯನ್ನು ಹಾಕುವ ಸಂಪ್ರದಾಯವನ್ನು ಹೊಂದಿದ್ದವು. ಕ್ರಮೇಣವಾಗಿ, ಈ ಆಹಾರವು ಗುಡ್ಡಗಾಡು ಪ್ರದೇಶದಿಂದ ಬಯಲಿನಲ್ಲಿ ವಾಸಿಸುವ ಸಿಲ್ಹೆಟಿಗಳಲ್ಲಿ ಜನಪ್ರಿಯವಾಗಲು ಶುರುವಾಯಿತು. ಕಾಲಕ್ರಮೇಣ, ಈ ಚುಂಗಾ (ಬಿದಿರಿನ ಕೊಳವೆ) ಖಾದ್ಯವು ಚುಂಗಾ ಪಿಠಾ ಎಂದು ಪರಿಚಿತವಾಯಿತು.[೬]
ಉಲ್ಲೇಖಗಳು
ಬದಲಾಯಿಸಿ- ↑ "সিলেটের ঐতিহ্যবাহী চুঙ্গাপুড়া পিঠার প্রধান উপকরণ ঢলুবাঁশ হারিয়ে যেতে চলেছে" (in Bengali). 13 December 2017. Retrieved 16 January 2016.
- ↑ Mohammed Al-Khusaibi; Nasser Al-Habsi; Mohammad Shafiur Rahman (eds.). Traditional Foods: History, Preparation, Processing and Safety. p. 132. Retrieved 22 March 2020.
- ↑ "The Beckoning Beauty of Barak". BIT MESRAr. 21 December 2017. Archived from the original on 5 ಜುಲೈ 2020. Retrieved 28 April 2020.
- ↑ "Food for thought: Understanding Bangladeshi cuisine". The Daily Star. February 24, 2017. Retrieved 29 April 2020.
- ↑ "Sunga Pitha". xobdo.org. Archived from the original on 22 ಮಾರ್ಚ್ 2020. Retrieved 22 March 2020.
- ↑ "ঐতিহ্যবাহী খাবার সিলেটের চুঙ্গা পিঠা". The Daily Ittefaq (in Bengali). Retrieved 13 January 2016.