ಚೀಟಿ ನಿಧಿ

ಭಾರತದ ಉಳಿತಾಯ ಹಾಗೂ ಸಾಲದ ವ್ಯವಸ್ಥೆ

ಚೀಟಿ ನಿಧಿಯು (ಚೀಟಿ ವ್ಯವಹಾರ, ಚಿಟ್ ಫ಼ಂಡ್) ಭಾರತದಲ್ಲಿ ಬಳಕೆಯಲ್ಲಿರುವ ಒಂದು ಬಗೆಯ ಆವರ್ತಕ ಉಳಿತಾಯ ಹಾಗೂ ಸಾಲದ ಖಾತೆ ಸಂಘದ ವ್ಯವಸ್ಥೆಯಾಗಿದೆ.[] ಚೀಟಿ ನಿಧಿ ಯೋಜನೆಗಳನ್ನು ಹಣಕಾಸು ಸಂಸ್ಥೆಗಳು ಸಂಘಟಿಸಬಹುದು, ಅಥವಾ ಅನೌಪಚಾರಿಕವಾಗಿ ಸ್ನೇಹಿತರು, ನೆಂಟರು ಅಥವಾ ನೆರೆಹೊರೆಯವರೊಳಗೆ ಸಂಘಟಿಸಬಹುದು. ಚೀಟಿ ನಿಧಿಗಳ ಕೆಲವು ಮಾರ್ಪಾಡುಗಳಲ್ಲಿ, ಉಳಿತಾಯಗಳು ನಿರ್ದಿಷ್ಟ ಉದ್ದೇಶಕ್ಕಾಗಿ ಇರುತ್ತವೆ. ಚೀಟಿ ನಿಧಿಗಳು ಹಲವುವೇಳೆ ಕಿರುಬಂಡವಾಳ ಸಂಸ್ಥೆಗಳಾಗಿರುತ್ತವೆ.[]

ಹೇಗೆ ಕೆಲಸ ಮಾಡುತ್ತದೆ

ಬದಲಾಯಿಸಿ

ಚೀಟಿ ನಿಧಿಯು ಚಂದಾದಾರರು ಎಂದು ಕರೆಯಲ್ಪಡುವ ಸದಸ್ಯರ ಗುಂಪನ್ನು ಒಳಗೊಂಡಿರುತ್ತದೆ. ಒಬ್ಬ ಸಂಘಟಕ, ಒಂದು ಕಂಪನಿ ಅಥವಾ ವಿಶ್ವಾಸಾರ್ಹ ನೆಂಟ ಅಥವಾ ನೆರೆಯವನು ಗುಂಪನ್ನು ಒಟ್ಟಾಗಿ ತಂದು ಗುಂಪಿನ ಚಟುವಟಿಕೆಗಳನ್ನು ನಿರ್ವಹಿಸುತ್ತಾನೆ. ತನ್ನ ಕೆಲಸಕ್ಕಾಗಿ, ಸಂಘಟಕನಿಗೆ ಪ್ರತಿ ತಿಂಗಳು ಅಥವಾ ಹಿಂಪಡೆಯುವ ಸಮಯದಲ್ಲಿ ಪಾಲು ನೀಡಲಾಗುತ್ತದೆ. (ಅನೌಪಚಾರಿಕ ಸಂದರ್ಭಗಳಲ್ಲಿ ಶುಲ್ಕವನ್ನು ಬಿಟ್ಟುಬಿಡಬಹುದು.)

ನಿಧಿಯು ಒಂದು ಘೋಷಿತ ದಿನಾಂಕದಂದು ಆರಂಭವಾಗಿ ಎಷ್ಟು ಚಂದಾದಾರರು ಇರುತ್ತಾರೊ ಅಷ್ಟು ತಿಂಗಳು ಮುಂದುವರೆಯುತ್ತದೆ. ಪ್ರತಿ ತಿಂಗಳು, ಚಂದಾದಾರರು ತಮ್ಮ ಮಾಸಿಕ ಕಂತುಗಳನ್ನು ನಿಧಿಯಲ್ಲಿ ಹಾಕುತ್ತಾರೆ. ನಂತರ, ಆ ತಿಂಗಳು ಒಬ್ಬ ಚಂದಾದಾರನು ತೆಗೆದುಕೊಳ್ಳಲು ಇಚ್ಛಿಸುವ ಕನಿಷ್ಠತಮ ಮೊತ್ತವನ್ನು ನಿರ್ಧರಿಸಲು ಮುಕ್ತ ಹರಾಜನ್ನು ನಡೆಸಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Rao, Preethi; Buteau, Sharon (2018-05-04). "Modelling credit and savings behaviour of chit fund participants". Gates Open Research. 2: 26. doi:10.12688/gatesopenres.12767.1. ISSN 2572-4754.{{cite journal}}: CS1 maint: unflagged free DOI (link)
  2. "Does Competition in the Microfinance Industry Necessarily Mean Over-borrowing? Ratul Lahkar, Viswanath Pingali, Santadarshan Sadhu, December 2012" (PDF). Archived from the original (PDF) on 2014-10-22. Retrieved 2014-03-02.