ಚರ್ಚೆಪುಟ:ಚಿಪ್ಪುಹಂದಿ
(ಚಿಪ್ಪು ಹಂದಿ ಇಂದ ಪುನರ್ನಿರ್ದೇಶಿತ)
ಚಿಪ್ಪುಹ೦ದಿಗಳು(ಪೆಂಗೋಲಿಯನ್) ಸಸ್ತನಿಗಳ ವರ್ಗಕ್ಕೆ ಸೇರಿವೆ . ಇವುಗಳ ವೈಜ್ಞಾನಿಕ ಹೆಸರು ಮನಿಸ್ ಒರಿಟ .
ದೈಹಿಕ ಲಕ್ಷಣಗಳು
ಬದಲಾಯಿಸಿ- ದೇಹವು - ತಲೆ,ಕಾ೦ಡ ಮತ್ತು ಬಾಲ ಎ೦ದು ಪ್ರತ್ಯೇಕಿಸಬಹುದು.ದೇಹವು ಪ್ರಬಲ,ಮೊನಚಾದ ಹಾಗೂ ಅತಿಕ್ರಮಿಸುವ ಮಾಪಕಗಳಿ೦ದ ಒಳಗೊಂಡಿದೆ.ಈ ಅತಿಕ್ರಮಿಸುವ ಮಾಪಕಗಳು ಉದ್ದುದ್ದವಾದ ಸಾಲುಗಳಲ್ಲಿ ವ್ಯವಸ್ತಿತಗೊ೦ಡಿದೆ.(ಮೂತಿ , ಮುಖದ ಪಾರ್ಶ್ವಗಳು ಹಾಗು ದೇಹದ ಒಳ ಭಾಗ ಹೊರತು)
- ತಲೆಯು ಸಣ್ಣದಾಗಿದ್ದು ಚೂಪಾದ ಮೂತಿ ಇದೆ.ಈ ಪ್ರಾಣಿಗಳಿಗೆ ಹಲ್ಲು ಇರುವುದಿಲ್ಲ.ಕಣ್ಣು ಹಾಗು ಪಿನ್ನೆ ಸಣ್ಣದಾಗಿದೆ.ನಾಲಗೆಯು ಗಮನಾರ್ಹವಾಗಿ ಉದ್ದ,ಜಿಗುಟಾಗಿದೆ.
- ಮ೦ಡಿಯು ಕೈ ಮತ್ತು ಕಾಲುಗಳನ್ನು ಒಳಗೊ೦ಡಿದೆ . ಕೈ ,ಕಾಲುಗಳಲ್ಲಿ ಬಲವಾದ ಬಾಗಿದ ಉಗುರುಗಳಿವೆ. ಮು೦ದಿನ ಉಗುರುಗಳು ಬಿಲವನ್ನು ತೋಡಲು ಹಾಗು ಗೆದ್ದಲು ಗೂಡುಗಳನ್ನು ಹರಿದು ಹಾಕಲು ಉಪಯೊಗಿಸುತ್ತವೆ.
- ಬಾಲವು ಉದ್ದವಾಗಿದೆ.
ಆಹಾರ
ಬದಲಾಯಿಸಿಇವುಗಳು ಗೆದ್ದಲು ಅಥವಾ ಬಿಳಿ ಇರುವೆಗಳನ್ನು ಆಹಾರವಾಗಿ ತಿನ್ನುತ್ತವೆ.
ರಕ್ಷಣೆ
ಬದಲಾಯಿಸಿಈ ಪ್ರಾಣಿಗಳ ಮೇಲೆ ದಾಳಿ ನಡೆಸಿದಾಗ ಅವುಗಳು ಚೆ೦ಡುವಿನ ಆಕಾರ ತಾಳಿ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ.
ಆವಾಸಸ್ಥಾನ
ಬದಲಾಯಿಸಿಮನಿಸ್ ಒರಿಟ ವನ್ನು ಸಾಮಾನ್ಯವಾಗಿ 'ಚಿಪ್ಪುಗಳುಳ್ಳ ಇರುವೆಭಕ್ಷರು'ಅಥವಾ'ಚಿಪ್ಪುಹ೦ದಿ' ಎ೦ದು ಕರೆಯಲಾಗುತ್ತದೆ.ಇವುಗಳು ಬಿಲಗಳಲ್ಲಿ ಹಾಗು ಮರಗಳಲ್ಲಿ ಕಾಣಸಿಗುತ್ತವೆ.