ಚಿಪೋಟ್ಲೆ
ಚಿಪೋಟ್ಲೆ ಒಂದು ಹೊಗೆಯಾಡಿಸಿ ಒಣಗಿಸಿದ ಹಾಲಪೇನ್ಯೊ. ಅದು ಮುಖ್ಯವಾಗಿ ಮೆಕ್ಸಿಕನ್ ಮತ್ತು ಮೆಕ್ಸಿಕನ್-ಅಮೇರಿಕನ್, ಟೆಕ್ಸ್-ಮೆಕ್ಸ್, ಹಾಗೂ ನೈಋತ್ಯ ತಿನಿಸುಗಳಂತಹ ಮೆಕ್ಸಿಕನ್-ಪ್ರೇರಿತ ಪಾಕಪದ್ಧತಿಗಳಲ್ಲಿ ಬಳಸಲಾದ ಒಂದು ಮೆಣಸಿನಕಾಯಿ. ಇತ್ತೀಚಿನವರೆಗೆ, ಚಿಪೋಟ್ಲೆಗಳು ಹೆಚ್ಚಾಗಿ ಮಧ್ಯ ಹಾಗೂ ದಕ್ಷಿಣ ಮೆಕ್ಸಿಕೋದ ಮಾರುಕಟ್ಟೆಗಳಲ್ಲಿ ಕಂಡುಬರುತ್ತಿದ್ದವು. ಮೆಕ್ಸಿಕನ್ ಆಹಾರ ಹೊರದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿತ್ತಿದ್ದಂತೆ, ವಿಶೇಷವಾಗಿ ಅಮೇರಿಕ ಮತ್ತು ಕ್ಯಾನಡಾದಲ್ಲಿ, ಹಾಲಪೇನ್ಯೊ ಉತ್ಪಾದನೆ ಮತ್ತು ಸಂಸ್ಕರಣೆ ಉತ್ತರ ಮೆಕ್ಸಿಕೊಗೆ ವಿಸ್ತರಿಸಲು ಪ್ರಾರಂಭಿಸಿತು, ಮತ್ತು ಅಂತಿಮವಾಗಿ ಸಂಸ್ಕರಣೆ ಅಮೇರಿಕ ಮತ್ತು ಚೀನಾದಂತಹ ಇತರ ಸ್ಥಳಗಳಲ್ಲಿ ಪ್ರಾರಂಭವಾಯಿತು.