ಚಿನಾಬ್ ರೈಲ್ವೇ ಸೇತುವೆ

ಚಿನಾಬ್ ರೈಲ್ವೇ ಸೇತುವೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಬಕಾಲ್ ಮತ್ತು ಕೌರಿ ಎಂಬಲ್ಲಿ, ಚೀನಾಬ್ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಕಮಾನು ಅಧಾರಿತ ಸೇತುವೆಯಾಗಿದೆ.

ಜಮ್ಮುವಿನ ಉಧಾಮ್‌ಪುರ ಮತ್ತು ಕಾಶ್ಮೀರ ಕಣಿವೆಯ ವಾಯುವ್ಯಕ್ಕೆ ಇರುವ ಬಾರಾಮುಲ್ಲಾ ಪಟ್ಟಣಗಳ ನಡುವೆ ರೈಲ್ವೇ ಸಂಪರ್ಕಜಾಲವನ್ನು ನಿರ್ಮಿಸುವ ಸಲುವಾಗಿ, ಭಾರತೀಯ ರೈಲ್ವೆಯ ಉತ್ತರ ವಿಭಾಗವು ಕೈಗೊಂಡಿರುವ ಬೃಹತ್ ಯೋಜನೆಯಾದ ಉಧಾಮ್‌ಪುರ್ ಶ್ರೀನಗರ್ ಬಾರಾಮುಲ್ಲಾ ರೈಲ್ ಲಿಂಕ್ ಅಡಿಯಲ್ಲಿ ಈ ಕಮಾನು ಸೇತುವೆ ನಿರ್ಮಾಣದ ಕಾರ್ಯ ನಡೆಯುತ್ತಿದೆ[]. ಭಾರತೀಯ ರೈಲ್ವೇಯ ವಿಭಾಗವಾದ ಉತ್ತರ ರೈಲ್ವೇ ಈ ಯೊಜನೆ ಮತ್ತು ಸೇತುವೆ ನಿರ್ಮಾಣದ ಹೊಣೆ ಹೊತ್ತಿದೆ. ಸೇತುವೆಯ ನಿರ್ಮಾಣವು ಪೂರ್ಣಗೊಂಡ ನಂತರ ವಿಶ್ವದ ಅತೀ ಎತ್ತರದ ರೈಲ್ವೇ ಸೆತುವೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ.

ಭಾರತದ ಇತರ ರಾಜ್ಯಗಳೊಂದಿಗೆ ಜಮ್ಮು ಮತ್ತು ಕಾಶ್ಮೀರ ಕಣಿವೆಯನ್ನು ರೈಲು ಜಾಲದ ಮೂಲಕ ಬೆಸೆಯುವ ಸಲುವಾಗಿ ಭಾರತೀಯ ರೈಲ್ವೇಯ ವಿಭಾಗವಾದ ಉತ್ತರ ರೈಲ್ವೇಯು ಉಧಾಮ್‌ಪುರ್ ಶ್ರೀನಗರ್ ಬಾರಾಮುಲ್ಲಾ ರೈಲ್ ಲಿಂಕ್ ಹೆಸರಿನ ಬೃಹತ್ ಯೋಜನೆಯನ್ನು 2003ರಲ್ಲಿ ಘೋಷಿಸಿತು[][]. ಒಟ್ಟು ೨೭೨ ಕಿಮೀ ಉದ್ದದ ಈ ಯೋಜನೆಯನ್ನು ೨೦೦೨ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯೆಂದು ಘೋಷಿಸಿತು ಮಾತ್ರವಲ್ಲ ಈ ಯೋಜನೆಗೆ ಸಂಪೂರ್ಣವಾಗಿ ಕೇಂದ್ರವೇ ಹಣ ಬಿಡುಗಡೆ ಮಾಡಿತು[]. ಜಮ್ಮುವಿನ ಉದಾಂಪುರದಿಂದ ಕಾಶ್ಮೀರದ ಬಾರಾಮುಲ್ಲಾ ಪಟ್ಟಣಗಳ ನಡುವಿನ ಈ ಯೋಜನೆಯಲ್ಲಿ ಒಟ್ಟು ೩೮ ಸುರಂಗ ಮಾರ್ಗ, ೯೨೭ ಸೇತುವೆಗಳು(ಚಿನಾಬ್ ರೈಲ್ವೇ ಸೇತುವೆಯೂ ಸೇರಿದಂತೆ, ಸಣ್ಣ ಮತ್ತು ದೊಡ್ಡ ಸೇತುವೆಗಳು) ಬರುತ್ತವೆ. ಚೆನಾಬ್ ರೈಲು ಸೇತುವೆಯನ್ನು ಮೂಲತಃ ಡಿಸೆಂಬರ್ 2009 ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು[]. ಆದಾಗ್ಯೂ, ಸೆಪ್ಟೆಂಬರ್ 2008 ರಲ್ಲಿ, ಸೇತುವೆಯ ಸ್ಥಿರತೆ ಮತ್ತು ಸುರಕ್ಷತೆಯ ಮೇಲಿನ ಭಯದಿಂದಾಗಿ ಯೋಜನೆಯು ಸ್ಥಗಿತಗೊಂಡಿತು. ಆದರೆ 2015 ರಲ್ಲಿ ಪೂರ್ಣಗೊಳಿಸುವ ಗುರಿಯೊಂದಿಗೆ ಸೇತುವೆಯ ಕೆಲಸವನ್ನು 2010 ರಲ್ಲಿ ಮರುಪ್ರಾರಂಭಿಸಲಾಯಿತು[].

ಸೇತುವೆಯ ವಿನ್ಯಾಸ ಕಾರ್ಯವನ್ನು ಐಐಎಸ್‌ಸಿ ಬೆಂಗಳೂರಿಗೆ ವಹಿಸಲಾಯಿತು. ಹಾಗೆಯೇ ಭಾರತದ ಮೂರನೇ ಅತಿದೊಡ್ಡ ಕಟ್ಟಡ ನಿರ್ಮಾಣ ಸಂಸ್ಥೆ ಶಾಪೂರ್ಜಿ ಪಲ್ಲೊನ್‌ಜಿ ಗ್ರೂಪ್‌ನ ಭಾಗವಾದ ಆಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ ಗೆ ಸೇತುವೆಯ ನಿರ್ಮಾಣ ಕಾರ್ಯವನ್ನು ನೀಡಲಾಯಿತು. ಕೊಂಕಣ ರೈಲ್ವೇ ಕಾರ್ಪೊರೇಷನ್ ಪ್ರಮುಖ ನಿರ್ಮಾಣ ನಿರ್ಧಾರಗಳನ್ನು ತೆಗೆದುಕೊಂಡಿತು.

ವಿನ್ಯಾಸ

ಬದಲಾಯಿಸಿ

ಯೋಜನೆಯ ಅಂಕಿ ಅಂಶಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Alignment Plan- USBRL Project". usbrl.org. Northern Railway Construction Organization- Northern Railway. Archived from the original on 27 ಸೆಪ್ಟೆಂಬರ್ 2022. Retrieved 13 August 2022.
  2. "Alignment Plan- USBRL Project". usbrl.org. Northern Railway Construction Organization- Northern Railway. Archived from the original on 27 ಸೆಪ್ಟೆಂಬರ್ 2022. Retrieved 13 August 2022.
  3. "Chenab Bridge, Jammu and Kashmir, India". railway-technology.com. Railway-technology.com. Retrieved 28 August 2022.
  4. "USBRL KASHMIR RAIL LINK PROJECT" (PDF). drwingler.com. Dr. rer. nat. Frank August Wingler. Retrieved 20 August 2022.
  5. "J&K; to have world's tallest bridge". timesofindia.indiatimes.com. TOI. Archived from the original on 2012-10-18. Retrieved 28 August 2022.
  6. "Highest railway bridge in J&K; to be ready by 2015". timesofindia.indiatimes.com. TOI. Archived from the original on 2013-05-11. Retrieved 28 August 2022.