ಚಿಕನ್ ಲಾಲಿಪಾಪ್ ಇಂಡಿಯನ್ ಚೈನೀಸ್ ಪಾಕಪದ್ಧತಿಯಲ್ಲಿ ಜನಪ್ರಿಯವಿರುವ ಒಂದು ಕ್ಷುಧಾವರ್ಧಕ. ಚಿಕನ್ ಲಾಲಿಪಾಪ್ ಮೂಲಭೂತವಾಗಿ ಒಂದು ತುದಿಯಿಂದ ಅಣಿಗೊಳಿಸಲಾದ ಕೋಳಿಮಾಂಸದ ಕಿರುರೆಕ್ಕೆ, ಮತ್ತು ಇದರಲ್ಲಿ ಮಾಂಸವನ್ನು ಮೂಳೆ ತುದಿಯಿಂದ ಸಡಿಲವಾಗಿ ಕತ್ತರಿಸಿ ಕೆಳಕ್ಕೆ ತಳ್ಳಲಾಗುತ್ತದೆ ಮತ್ತು ಇದರಿಂದ ಲಾಲಿಪಾಪ್ ರೂಪ ಸೃಷ್ಟಿಯಾಗುತ್ತದೆ. ಇದನ್ನು ಸಾಮಾನ್ಯವಾಗಿ ಬಿಸಿಯಾಗಿ ಸೆಚ್ವಾನ್ ಸಾಸ್‍ನೊಂದಿಗೆ ಬಡಿಸಲಾಗುತ್ತದೆ. ಚಿಕನ್ ಲಾಲಿಪಾಪ್ಅನ್ನು ಸಾಮಾನ್ಯವಾಗಿ ಕೋಳಿಮಾಂಸ ರೆಕ್ಕೆ ಅಥವಾ ತೊಡೆಯನ್ನು ಬಳಸಿ ತಯಾರಿಸಲಾಗುತ್ತದೆ. ಇದನ್ನು ಖಾರದ ಪುಡಿ ಮತ್ತು ಅರಿಶಿನವನ್ನು ಮುಖ್ಯ ಪದಾರ್ಥಗಳಾಗಿ ಒಳಗೊಂಡ ಮಸಾಲೆಭರಿತ ಕೆಂಪು ಕಲಸಿದ ಹಿಟ್ಟಿನಿಂದ ಲೇಪಿಸಿ ಕರಿಯಲಾಗುತ್ತದೆ ಅಥವಾ ಬೇಕ್ ಮಾಡಲಾಗುತ್ತದೆ.