ಚಿಕನ್-ಎಂಬ ವಿಶಿಷ್ಠ ಕಸೂತಿ ಕಲೆ

ನಮ್ಮ ದೇಶದ, ’ಉತ್ತರ ಪ್ರದೇಶ’ದ ಸುಪ್ರಸಿದ್ಧ ’ಕಸೂತಿ ಕಲೆ ಇದಾಗಿದೆ. ’ಲಖ್ನೋ’ ಪಟ್ಟಣದ ಕಲಾಕಾರರು, ಹತ್ತಿ ಮತ್ತು ರೇಷ್ಮೆ ಬಟ್ಟೆಗಳ ಮೇಲೆ, ಚಿತ್ತಾರ ರಚಿಸುವ ಈ ಕಲೆ, ಸುಮಾರು, ಮೂರು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಈ ಕಲೆ ಮೂಲತಃ ’ಪರ್ಷಿಯಾ’ ದೇಶದ್ದು. (ಇಂದಿನ ಇರಾನ್) ’ಮುಘಲ್ ಬಾದಷಾ ಜಹಾಂಗೀರ್', ನ ಪತ್ನಿ, 'ನೂರ್ ಜಹಾನ್' ಳ ಪ್ರಯತ್ನದಿಂದ ಈ ಕಲೆ ಭಾರತ ತಲುಪಿರಬಹುದೆಂದು ಕೆಲವರ ಅಭಿಪ್ರಾಯ. ದೆಹಲಿಯಲ್ಲಿ 'ಮುಘಲ'ರ ಪ್ರಾಬಲ್ಯ ಕಡಿಮೆಯಾದಂದತೆ, 'ಚಿಕನ್ ಕಲೆ'ಯನ್ನೇ ಜೀವನೋಪಾಯಕ್ಕೆ ಅವಲಂಭಿಸಿದ್ದ ಕಾರೀಗಾರರು, ಜೀವನದ ನಿರ್ವಹಣೆಗೆ, ದಕ್ಷಿಣದ 'ಅವಧ್' ರಾಜ್ಯಕ್ಕೆ ವಲಸೆ ಬಂದರು. 'ಅವಧ್ ನವಾಬ'ರೂ ಈ ಕಲೆಗೆ ಪ್ರೋತ್ಸಾಹ ಕೊಟ್ಟರು. ಹಾಗಾಗಿ ಅಂದಿನ ದಿನಗಳಲ್ಲಿ 'ಚಿಕನ್' ಕಲೆಯಿಂದ ಶೋಭಿತ ವಸ್ತ್ರಗಳು 'ಲಖ್ನೋ' ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿದ್ದವು.

'ಚಿಕನ್ ಕಸೂತಿ ಕಲೆ'

ಚಿಕನ್ ಕಲೆಯ ವೈಶಿಷ್ಟ್ಯ ಬದಲಾಯಿಸಿ

'ಕಸೂತಿ'ಯನ್ನು ಹತ್ತಿಯ ಸೀರೆ ಮುಂತಾದ ವಸ್ತ್ರಗಳ ಮೇಲೆ ಮೂಡಿಸಬಹುದು, 'ಕುರ್ತಾ-ಸಲ್ವಾರ್' ಉಡುಪಿನ ಮೇಲೂ ಸೃಷ್ಟಿಸಬಹುದು. ಮೊದಲು ಬಟ್ಟೆಗಳ ಮೇಲೆ ಸೂಕ್ಷ್ಮವಾದ ವಿನ್ಯಾಸವನ್ನು ನಿರ್ಮಿಸಿ, ನಂತರ, 'ಕಸೂತಿ'ಯ ವಿನ್ಯಾಸಗಳಿಂದ ತುಂಬಲಾಗುತ್ತದೆ. 'ಚಿಕನ್' ಪ್ರಕಾರದ ಚಿತ್ರಕಲೆಯಲ್ಲಿ ಸುಮಾರು ೪೦ ಕ್ಕೂ ಹೆಚ್ಚು ಭಿನ್ನ ಪ್ರಕಾರದ ವೈವಿಧ್ಯಮಯ ಮಾದರಿಯ ಕಸೂತಿ ಹೊಲಿಗೆಗಳಿವೆ.

ಜಾಲಿವರ್ಕ್ ಬದಲಾಯಿಸಿ

ಈ ಪದ್ಧತಿಯಲ್ಲಿ ಚಿಕ್ಕಚಿಕ್ಕ ವಿನ್ಯಾಸಗಳನ್ನು ಕತ್ತರಿಸಿ, ಕಸೂತಿಯ ಜಾಲರಿಗಳಿಂದ ತುಂಬಿಸುವ 'ಜಾಲಿವರ್ಕ್' ಎಂಬ 'ವಿಶೇಷ ಕಸೂತಿ ಶೈಲಿ', ಇವುಗಳಲ್ಲಿ ಒಂದು ವಿಶಿಷ್ಟ ಮಾದರಿಯೆಂದು 'ಚಿಕನ್ ಕಲೆ'ಯನ್ನು ಬಲ್ಲವರು ಹೇಳುತ್ತಾರೆ.

ಬೇಡಿಕೆ ಹೆಚ್ಚು ಬದಲಾಯಿಸಿ

'ಚಿಕನ್ ಕಸೂತಿಯಿಂದ ಅಲಂಕೃತವಾದ ವಸ್ತ್ರ'ಗಳಿಗೆ, 'ಸೀರೆ, ಸಲ್ವಾರ್-ಕಮೀಜ್ ಉಡುಪು'ಗಳಿಗೆ 'ವಿದೇಶ' ಗಳಲ್ಲಿ ಭಾರಿ ಬೇಡಿಕೆಯಿದೆ.