(Marathi: चिंचपोकळी), ಮುಂಬಯಿನ ಒಂದು ಉಪನಗರಿ. ಸಿ.ಎಸ್.ಟಿ. ಕಡೆಗೆ ಹೋಗುವದಾರಿಯಲ್ಲಿ ಇರುವ ಸೆಂಟ್ರಲ್ ರೈಲ್ವೆಯ ಒಂದು ಪ್ರುಟ್ಟ ರೈಲ್ವೆನಿಲ್ದಾಣ. ಹಿಂದೆ ಬ್ರಿಟಿಷರು ಇದನ್ನು 'ಚಿಂಚ್ ಪುಗ್ಲಿ' ಅಥವಾ 'ಚಿಂಚ್ ಪೂಘ್ಲಿ' [] ಎಂದು ಕರೆಯುತ್ತಿದ್ದರು.

ಪುರಾತನ ಶಾಲೆ

ಬದಲಾಯಿಸಿ

ಸುಮಾರು ೯೦ ವರ್ಷಗಳ ಹಿಂದಿನ 'ವೇಲ್ಜಿ ಲಖನ್ ಶಿ ನಪ್ಪೂ ಹೈಸ್ಕೂಲ್' ಒಂದು ಶಾಲೆಯಿದೆ. ಈಗ ಇದೇ ಶಾಲೆಯಲ್ಲಿ, ೩-೫ ಸಾವಿರ ವಿದ್ಯಾರ್ಥಿಗಳು ಗುಜರಾಥಿ ಮತ್ತು ಇಂಗ್ಲೀಷ್ ಮಾಧ್ಯಮಗಳಲ್ಲಿ ಓದುತ್ತಿದ್ದಾರೆ.'ಕಸ್ತುರ್ ಬಾ ಗಾಂಧಿ ಮುನಿಸಿಪಲ್ ಹೈಸ್ಕೂಲ್' ನ್ನು 'ಬೃಹನ್ ಮುಂಬಯಿ ಮುನಿಸಿಪಲ್ ಕಾರ್ಪೊರೇಷನ್' ನಡೆಸುತ್ತಿದೆ. ಸಾಂಕ್ರಾಮಿಕ ರೋಗಗಳನ್ನು ಗುಣಪಡಿಸುವುದರಲ್ಲಿ ಇದು ಎತ್ತಿದ ಕೈ.

'ಚಿಂಚ್ ಪೊಕ್ಲಿಯ,' 'ಚಿಂತಾಮಣಿ ಗಣಪತಿ'

ಬದಲಾಯಿಸಿ

'ಚಿಂಚ್ ಪೊಕ್ಲಿ ರೈಲ್ವೆ-ನಿಲ್ದಾಣ'ದ ಬಳಿಯಲ್ಲಿಯೇ ಅತಿ-ಪುರಾತನ ಹಾಗೂ ಸುಪ್ರಸಿದ್ಧ ಗಣಪತಿ ಇದೆ.[] ಗಣೇಶನ ಹಬ್ಬದ ಸಮಯದಲ್ಲಿ, ಈ ಸ್ಥಳದಲ್ಲಿ ಕೂಡಿಸಿ ಅರ್ಚಿಸುವ ಗಣಪತಿ, 'ಅತಿ ಪ್ರಸಿದ್ಧ ಗಣಪತಿ'ಯೆಂದು ಹೆಸರುಗಳಿಸಿದೆ. ಈ ಗಣಪತಿಯನ್ನು, ಚಿಂಚ್ ಪೊಕ್ಲಿ ಚಿಂತಾಮಣಿ ಅಥವಾ ಚ-ಚಿಂತಾಮಣಿ ಎನ್ನುತ್ತಾರೆ. 'ಚಿಂಚ್ ಪೊಕ್ಲಿ' ಯಲ್ಲಿ ಅನೇಕ ದೇವಾಲಯಗಳಿವೆ. ಹಿಂದು ದೇವಸ್ಥಾಗಳಿವೆ. ಜೈನ್ ದೇವಸ್ಥಾನಗಳು, ಜೈನ್ ಸ್ಥಾನಕ್ ಗಳು ಮತ್ತು ಮಸೀದಿಗಳು, ಇವೆ. ಜೈನ್ ಧರ್ಮದ ಸ್ಥಾನಕ್,ಡಿ.ಎಲ್.ಜೈನ್ ಚಾಲ್ ಹತ್ತಿರವಿದೆ.ಅತಿ ಹಳೆಯ ಮನೆಯಂತಿರುವ ಈ ಮಂದಿರದ 'ಪ್ರಾರ್ಥನಾ ಹಾಲ್', ಮುಂಬಯಿನಲ್ಲೇ ಅತಿ ದೊಡ್ಡದೆಂದು ಹೆಸರುವಾಸಿಯಾಗಿದೆ. ಕಲ್ಯಾನ್ ದಾಸ್ ವಾಡಿಯಲ್ಲಿ ಸಾಯಿಬಾಬ ಮಂದಿರವಿದೆ. ರೈಲ್ವೆ ಸೇತುವೆಯ ಕೆಳಗೆ ಹನುಮಾನ್ ದೇವಾಲಯ, 'ಬಾವಲಾ ಕಾಂಪೌಂಡ್' ಒಳಗೆ, ದತ್ತಮಂದಿರವಿದೆ. ಚಿಂಚ್ ಪೊಕ್ಲಿಯ ಪಶ್ಚಿಮದಲ್ಲಿ, 'ಸಂತೋಷಿಮಾತಾ ದೇವಸ್ಥಾನ' ವಿದೆ.

ಉಲ್ಲೇಖಗಳು

ಬದಲಾಯಿಸಿ
  1. http://mumbaichamahaganpati.blogspot.in/2013/08/chinchpokli-cha-chintamani.html
  2. "ಆರ್ಕೈವ್ ನಕಲು". Archived from the original on 2010-07-10. Retrieved 2010-06-17.


<References >/