ಚಾಮುಂಡರಾಯ

ವೀರ ಮಾರ್ತಾಂಡದೇವ
(ಚಾವುಂಡರಾಯ ಇಂದ ಪುನರ್ನಿರ್ದೇಶಿತ)

ಚಾವುಂಡರಾಯಸಂಪಾದಿಸಿ

ಚಾವುಂಡರಾಯ ೧೦ ನೇ ಶತಮಾನದ ವೀರಪರಂಪರೆಯನ್ನು ಅನುಸರಿಸಿ ಕವಿ ಹಾಗೂ ಕಲಿ ಎರಡೂ ಆಗಿದ್ದ ಸವ್ಯಸಾಚಿ. ತಾಯಿ ಕಾಳಲಾದೇವಿ. ಇವನಿಗೆ ನಾಗವರ್ಮನೆಂಬ ತಮ್ಮನಿದ್ದ. ಇವನ ಮಗ ಜಿನದೇವ.ಚಾಮುಂಡರಾಯನು ಪಶ್ಚಿಮ ಗಂಗರ ಆಧಿಪತ್ಯದ ಗಂಗವಾಡಿ ಸೀಮೆಯ ರಾಜ ೨ನೇ ಮಾರಸಿಂಹ (ಕ್ರಿ.ಶ ೯೬೧-೭೭) ಇವನ ಹಿರಿಯಮಗ ೪ ನೇ ರಾಚಮಲ್ಲ (ಕ್ರಿ.ಶ ೯೭೪-೭೭) ಮತ್ತು ಅವನ ತಮ್ಮ ರಕ್ಕಸಗಂಗ (ಕ್ರಿ.ಶ ೯೭೭-೮೪) ಇವರ ಸೇವೆಯಲ್ಲಿ ಸೇನಾಧಿಪತಿ, ಸಂಧಿವಿಗ್ರಹಿ, ಮಂತ್ರಿ ಪದವಿಗಳಲ್ಲಿ ಇದ್ದನೆಂದು ತಿಳಿದುಬರುತ್ತದೆ. ಕಾಳಲಾದೇವಿ ಆಸೆಯಂತೆ ಶ್ರವಣಬೆಳಗೊಳ ದಲ್ಲಿ ಗೊಮ್ಮಟ ಮೂರ್ತಿಯನ್ನು ನಿರ್ಮಿಸಿದ.ಎತ್ತರ ೫೭.೮ ಅಡಿ.

ಇತರ ಹೆಸರುಸಂಪಾದಿಸಿ

 • ಚಾವುಂಡರಾಯ
 • ಚಾಮುಂಡರಾಜ
 • ಚಾವುಂಡಯ್ಯ
 • ಚಾಮುಂಡಯ್ಯ
 • ಚಾವುಂಡ
 • ಗೊಮ್ಮಟರಾಯ

ವಂಶಸಂಪಾದಿಸಿ

ಚಾಮುಂಡರಾಯನು ತನ್ನನ್ನು ಬ್ರಹ್ಮಕ್ಷತ್ರಿಯ ವಂಶಜನೆಂದು ಕರೆದು ಕೊಂಡಿದ್ದಾನೆ. ಬಾಹುಬಲಿಚರಿತೆಯಲ್ಲಿ ಹೇಳಿರುವ "ಬ್ರಹ್ಮ-ಕ್ಷತ್ರಿಯ-ವೈಶ್ಯ-ಶುಕ್ತಿ ನುಮಣಿಃ" ಎಂಬ ಮಾತಿನ ಆಧಾರದಿಂದ ಆತನ ಪೂರ್ವಜರು ಮೊದಲಿಗೆ ಬ್ರಾಹ್ಮಣ ಮತ್ತು ವೈಶ್ಯರಾಗಿದ್ದು ಆನಂತರ ಕ್ಷತ್ರಿಯ ವೃತ್ತಿಯನ್ನು ಧಾರಣೆ ಮಾಡಿದವರಾಗಿರಬೇಕೆಂದು

ಗುರುಗಳುಸಂಪಾದಿಸಿ

ಚಾಮುಂಡರಾಯನಿಗೆ ಇಬ್ಬರು ಗುರುಗಳು.

1. ಅಜಿತಸೇನಾಚಾರ್ಯ

2. ನೇಮಿಚಂದ್ರ ಸಿದ್ದಾಂತರು

ಕೃತಿಗಳುಸಂಪಾದಿಸಿ

 • ಚಾರಿತ್ರಾಸಾರ
 • ಚಾಮುಂಡರಾಯ ಪುರಾಣ (ಕ್ರಿ.ಶ ೯೭೮)
 • ಗೊಮ್ಮಟಸಾರಕ್ಕೆ ವೀರಮಾರ್ತಾಂಡ-ಎಂಬ ವೃತ್ತಿ

ಕೊಡುಗೆಸಂಪಾದಿಸಿ

 • ಚಾವುಂಡರಾಯ ಶ್ರವಣಬೆಳಗೊಳದಲ್ಲಿ ಗೊಮ್ಮಟನ ಬೃಹದಾಕಾರದ ವಿಗ್ರಹವನ್ನು ಕ್ರಿ.ಶ.೯೭೩ರಲ್ಲಿ ಕೆತ್ತಿಸಿ ಪ್ರತಿಷ್ಥಾಪನೆ ಮಾಡಿಸಿದನು.
 • ಅನೇಕ ಬಸದಿಗಳು

ಆಕರ ಗ್ರಂಥಸಂಪಾದಿಸಿ

 1. ಕನ್ನಡ ಆದಿತೀರ್ಥಂಕರ ಚರಿತೆಗಳು - ಡಾ|| ಸರಸ್ವತಿ ವಿಜಯಕುಮಾರ್
 1. ಬಾಹುಬಲಿಚರಿತೆ