ಚಾಪೆಯು (ಮಂದಲಿಗೆ) ಹೆಣೆದ ಜೊಂಡಿನಿಂದ ತಯಾರಿಸಲಾದ, ನೆಲದ ಮೇಲೆ ಕುಳಿತುಕೊಳ್ಳುವ ಸಾಧನ. ಇದನ್ನು ಕಂಬೋಡಿಯಾ, ಭಾರತ ಮತ್ತು ಥೈಲಂಡ್‍ಗಳ ಬಹುತೇಕ ಭಾಗಗಳಲ್ಲಿ ಕೈಯಿಂದ ತಯಾರಿಸಲಾಗುತ್ತದೆ.

ಜೊಂಡು ಹುಲ್ಲು, ತಾಳೆ ಎಲೆಗಳ ಪಟ್ಟಿಗಳು, ಅಥವಾ ಸುಲಭವಾಗಿ ಲಭ್ಯವಿರುವ ಯಾವುದೇ ಇತರ ಸ್ಥಳೀಯ ಸಸ್ಯಗಳನ್ನು ಹೆಣೆದು ಚಾಪೆಗಳನ್ನು ಉತ್ಪಾದಿಸಲಾಗುತ್ತದೆ. ಹೆಣಿಗೆಯ ಈ ಪ್ರಕ್ರಿಯೆಯಿಂದ ತಯಾರಿಸಲಾದ ಮೆತುವಾದ ಚಾಪೆಗಳನ್ನು ಥೈಲಂಡ್‍ನ ಮನೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಈಗ ಈ ಚಾಪೆಗಳನ್ನು ಬಳಸಿ ಖರೀದಿ ಚೀಲಗಳು, ಸ್ಥಳ ಚಾಪೆಗಳು, ಮತ್ತು ಅಲಂಕಾರಿಕ ಗೋಡೆ ತೂಗುವಸ್ತುಗಳನ್ನು ಕೂಡ ತಯಾರಿಸಲಾಗುತ್ತಿದೆ.

ಥೈಲಂಡ್‍ನ ಒಂದು ಬಗೆಯ ಜನಪ್ರಿಯ ಚಾಪೆಯನ್ನು ದಕ್ಷಿಣದ ಜವುಗು ಪ್ರದೇಶಗಳಲ್ಲಿ ಬೆಳೆಯುವ ಕಾಚುಡ್ ಎಂದು ಕರೆಯಲ್ಪಡುವ ಒಂದು ಬಗೆಯ ಜೊಂಡಿನಿಂದ ತಯಾರಿಸಲಾಗುತ್ತದೆ. ಜೊಂಡನ್ನು ಕೊಯ್ಲು ಮಾಡಿದ ಮೇಲೆ ಅದನ್ನು ಕೆಸರಿನಲ್ಲಿ ನೆನೆಸಲಾಗುತ್ತದೆ. ಇದರಿಂದ ಅದು ಗಟ್ಟಿಮುಟ್ಟಾಗುತ್ತದೆ ಮತ್ತು ಪಡಸಾಗುವುದಿಲ್ಲ. ನಂತರ ಅದನ್ನು ಸ್ವಲ್ಪ ಸಮಯ ಬಿಸಿಲಿನಲ್ಲಿ ಒಣಗಿಸಿ ಚಪ್ಪಟೆಯಾಗುವಂತೆ ಬಡಿಯಲಾಗುತ್ತದೆ. ನಂತರ ಇವಕ್ಕೆ ಬಣ್ಣ ಹಚ್ಚಿ ವಿವಿಧ ಗಾತ್ರಗಳು ಮತ್ತು ವಿನ್ಯಾಸಗಳ ಚಾಪೆಗಳಾಗಿ ಹೆಣೆಯಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  • The National Identity Office, Office of the Prime Minister, Royal Thai Government (1998)
"https://kn.wikipedia.org/w/index.php?title=ಚಾಪೆ&oldid=914340" ಇಂದ ಪಡೆಯಲ್ಪಟ್ಟಿದೆ