ಚಾತಕ ಪಕ್ಷಿಯು (ಚಕ್ರವಾಕ) ಪಕ್ಷಿಗಳ ಕೋಗಿಲೆ ಗಣದ ಸದಸ್ಯವಾಗಿದೆ. ಇದು ಆಫ಼್ರಿಕಾ ಮತ್ತು ಏಷ್ಯಾದಲ್ಲಿ ಕಂಡುಬರುತ್ತದೆ. ಇದು ಭಾಗಶಃ ವಲಸೆಗಾರವಾಗಿದ್ದು ಇದರ ಆಗಮನದ ಸಮಯದ ಕಾರಣ ಭಾರತದಲ್ಲಿ ಇದನ್ನು ಮುಂಗಾರು ಮಳೆಯ ಮುನ್ಸೂಚಕ ಎಂದು ಪರಿಗಣಿಸಲಾಗುತ್ತದೆ.[೧] ತಲೆಯ ಮೇಲೆ ಕೊಕ್ಕನ್ನು ಹೊಂದಿರುವ, ಬಾಯಾರಿಕೆ ತಣಿಸಲು ಮಳೆಗೆ ಕಾಯುವ ಪಕ್ಷಿ ಎಂದು ವರ್ಣಿಸಲಾದ, ಭಾರತೀಯ ಪುರಾಣ ಹಾಗೂ ಕಾವ್ಯದಲ್ಲಿ ಉಲ್ಲೇಖಿತವಾಗಿರುವ ಚಾತಕ ಪಕ್ಷಿಯೊಂದಿಗೆ ಇದನ್ನು ಸಂಬಂಧಿಸಲಾಗಿದೆ.

ವಿವರಣೆ ಬದಲಾಯಿಸಿ

ಈ ಮಧ್ಯಮ ಗಾತ್ರದ, ತೆಳ್ಳಗಿರುವ, ಕಪ್ಪು ಮತ್ತು ಬಿಳಿ ಕೋಗಿಲೆಯು ಜುಟ್ಟನ್ನು ಹೊಂದಿರುವುದರಿಂದ ವಿಶಿಷ್ಟವಾಗಿದೆ. ಕಪ್ಪು ರೆಕ್ಕೆಯ ಮೇಲಿನ ಬಿಳಿ ರೆಕ್ಕೆಪಟ್ಟಿ ಮತ್ತು ಅದರ ವಿನ್ಯಾಸವು ಹಾರಾಟದಲ್ಲಿಯೂ ಇದನ್ನು ಸುಸ್ಪಷ್ಟವಾಗಿಸುತ್ತದೆ. ಸಂತಾನೋತ್ಪತ್ತಿಯ ಋತುವಿನಲ್ಲಿ ಇವು ಬಹಳ ಶಬ್ದ ಮಾಡುತ್ತವೆ. ಇದರ ಕೂಗು "ಪಿಯು-ಪಿಯು" ಎಂಬ ಶಿಳ್ಳೆ ಸ್ವರಗಳ ಅನುರಣನಾ ಸರಣಿಯಾಗಿರುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. Khachar, Shivrajkumar (1989). "Pied Crested Cuckoo Clamator jacobinus - the harbinger of the monsoon". J. Bombay Nat. Hist. Soc. 86 (3): 448–449.
"https://kn.wikipedia.org/w/index.php?title=ಚಾತಕ&oldid=1190018" ಇಂದ ಪಡೆಯಲ್ಪಟ್ಟಿದೆ