ಚವ್ವೀಸ ತೀರ್ಥಂಕರರ ಬಸದಿ ವೇಣೂರು

ವೇಣೂರಿನ ಚವ್ವೀಸ ತೀರ್ಥಂಕರರ ಬಸದಿಯು ಕರ್ನಾಟಕ ಜೈನ ಬಸದಿಗಳಲ್ಲಿ ಒಂದಾಗಿದೆ.

ಇದು ಶಾಂತಿನಾಥ ಬಸದಿಯ ಬಲ ಪಕ್ಕದಲ್ಲಿದೆ.

ವಿಶೇಷತೆ

ಬದಲಾಯಿಸಿ

ಇದು ಪೂರ್ತಿಯಾಗಿ ಕಲ್ಲಿನಿಂದ ಮಾಡಲ್ಪಟ್ಟಿದ್ದು, ಮೇಲ್ಛಾವಣಿ ಸಹ ಕಲ್ಲಿನದ್ದೇ ಆಗಿದೆ. ಇದರಲ್ಲಿ 24 ತೀರ್ಥಂಕರರ ಶಿಲಾ ಮೂರ್ತಿಗಳಿವೆ. ಈ ಬಸದಿಯನ್ನು ಅಮ್ಮನವರ ಬಸದಿ ಎಂದೂ ಕರೆಯುತ್ತಾರೆ. ತೀರ್ಥಂಕರರ ಮೂರ್ತಿಗಳ ಎಡ ಬಲಗಳಲ್ಲಿ ಪದ್ಮಾವತಿ ದೇವಿ ಮತ್ತು ಸರಸ್ವತಿ ದೇವಿಯ ಮೂರ್ತಿಗಳಿರುವುದರಿಂದ ಇದಕ್ಕೆ ಅಮ್ಮನವರ ಬಸದಿ ಎಂಬ ಹೆಸರು ಬಂದಿರಬೇಕು.[]

ದೇವಾಇಯದ ರಚನೆ

ಬದಲಾಯಿಸಿ

ಈ ಬಸದಿಗೆ ಒಂದು ಪ್ರಧಾನ ದ್ವಾರವಿದ್ದು ಮುಂದಿನ ಪ್ರಾರ್ಥನಾ ಮಂಟಪಕ್ಕೆ ಎಡ ಬಲಗಳಲ್ಲಿ ಮತ್ತೆರಡು ದ್ವಾರಗಳಿವೆ. ಆದಿನಾಥ ಸ್ವಾಮಿ ಬಸದಿ ದಕ್ಷಿಣಾಭಿಮುಖವಾಗಿದ್ದಾರೆ ಈ ಬಸದಿ ಉತ್ತರಾಭಿಮುಖವಾಗಿದೆ. ಪ್ರಧಾನ ದ್ವಾರಕ್ಕೆ ಆರು ಮಟ್ಟಿಲುಗಳಿದ್ದು ಮೊದಲ ಮೆಟ್ಟಿಲ್ಲಿನಲ್ಲಿ ಕುಂಡಲಿಯ ಕೆತ್ತನೆಯನ್ನು ಕಾಣಬಹುದು. ಹಾಗೂ ದ್ವಾರದಲ್ಲಿ ವಿವಿಧ ಕಲಾಕೃತಿಯ ಕೆತ್ತನೆಗಳಿವೆ. ೧೨ ತೀರ್ಥಂಕರರಾದ ವಾಸು ಪೂಜ್ಯರ ಪ್ರತಿಮೆಯ ಮುಂಭಾಗದಲ್ಲಿ ೨೪ ತೀರ್ಥಂಕರರಿಂದ ಕೂಡಿದ ಆದಿನಾಥರ ಕಂಚಿನ ಪ್ರತಿಮೆ ಒಂದಿದೆ. ಇದರ ಎಡ ಭಾಗದಲ್ಲಿ ಗಣಧರ ಪಾದ, ಬಲ ಭಾಗದಲ್ಲಿ ಪಂಚಪರಮೇಪ್ಠಿ ಮೂರ್ತಿಗಳಿವೆ. ಈ ಬಸದಿಯೂ ಕ್ರಿ.ಶ ೧೫೩೭ ರಲ್ಲಿ ನಿರ್ಮಾಣಗೊಂಡಿತ್ತೆಂದು ಇಲ್ಲಿರುವ ಶಿಲಾ ಶಾಸನವೂ ತಿಳಿಸುತ್ತದೆ.

ಪೂಜಾ ವಿಧಾನ

ಬದಲಾಯಿಸಿ

ಪಂಚಪರಮೇಪ್ಠಿ ಮೂರ್ತಿಗಳಿಗೆ ದಿನ ಬೆಳ್ಳಗ್ಗೆ ಪೂಜೆ ಸಲ್ಲಿಸಲಾಗುತ್ತದೆ. ಇಲ್ಲಿ ಅನಂತರದ ಪೂಜೆಯೇ ಸರಸ್ವತಿ ದೇವಿಗೆ. ಸರಸ್ವತಿಯ ಮೂರ್ತಿ ಕಂಚಿನದಾಗಿದ್ದು ಹಿತ್ತಾಳೆಯ ಪ್ರಭಾವಳಿಯನ್ನು ಹೊಂದಿದೆ. ಸರಸ್ವತಿಯ ಎಡಗೈಯಲ್ಲಿ ಪುಸ್ತಕ ಹಾಗೂ ಬಲಗೈಯಲ್ಲಿ ಜಪಸರವನ್ನು ಕಾಣಬಹುದು. ದೇವಿಗೆ ಸೀರೆಯನ್ನು ಉಡಿಸಿ, ಬಳೆ ತೊಡಿಸಲಾಗುತ್ತದೆ. ತೀರ್ಥಂಕರರ ಮೂರ್ತಿಗಳ ಎಡಭಾಗದಲ್ಲಿ ಶ್ರೀ ಪದ್ಮಾವತಿ ದೇವಿಯ ಮೂರ್ತಿ ಇದೆ. ಇದು ಸಹಾ ಕಂಚಿನದ್ದಾಗಿದ್ದ ಹಿತ್ತಾಳೆಯ ಪ್ರಭಾವಳಿಯನ್ನು ಹೊಂದಿದೆ. ಪ್ರಭಾವಳಿಯ ಮೇಲೆ ಶ್ರೀ ಪಾಶ್ವನಾಥರ ಸಣ್ಣ ಬಿಂಬವನ್ನು ಕಾಣಬಹುದು. ಪದ್ಮಾವತಿ ದೇವಿ ಸೀರೆ, ಬಳೆ ಹಾಗೂ ಕರಿಮಣಿ ಸರಗಳಿಂದ ಅಲಂಕೃತಳಾಗುತ್ತಾಳೆ.

ವಿನ್ಯಾಸ

ಬದಲಾಯಿಸಿ

ಇಲ್ಲಿರುವ ಎಲ್ಲಾ ತೀರ್ಥಂಕರರ ಮೂರ್ತಿಗಳು ಸುಮಾರು ಎರಡೂವರೆ ಅಡಿ ಎತ್ತರವಿದೆ. ಪ್ರಭಾವಳಿ ಮುಕ್ಕೊಡೆ ಎಲ್ಲಾ ಸೇರಿ ಸುಮಾರು ಮೂರುವರೆಯಿಂದ ನಾಲ್ಕು ಅಡಿ ಎತ್ತರವಿದೆ. ಈ ಮೂರ್ತಿಗಳ ಪ್ರಭಾವಳಿಯು ಮೇಲೆ ಕೀರ್ತಿಮುಖ, ಮುಕ್ಕೊಡೆ ಎಡಬಲಗಳು ಮಕರ ತೋರಣ ಹಾಗೂ ಪುಪ್ಪವೃಷ್ಟಿಯ ಕೆತ್ತನೆಗಳಿಂದ ಆವರಿಸಲ್ಪಟ್ಟಿದೆ. ಇದರ ಪಕ್ಕ ಎರಡು ಕಡೆಗಳಲ್ಲಿ ಮಕರ ಹಾಗೂ ಚಾಮರಗಳ ಕೆತ್ತನೆಗಳಿವೆ. ಎಲ್ಲಾ ತೀರ್ಥಂಕರರ ಬಾಯಿಗಳಿಂದ ‘ಓಂ’ ಎಂಬ ದಿವ್ಯ ಧ್ವನಿ ಹೊರ ಹೊಮ್ಮುವಂತೆ ಕಂಡುಬರುತ್ತದೆ. ಮೂರ್ತಿಯ ಎರಡು ಪಾದಗಳ ಮಧ್ಯೆ ಬೀಜಾಕ್ಷರವನ್ನು ಕಾಣಬಹುದು. ಪ್ರತಿಯೊಂದು ತೀರ್ಥಂಕರರ ಮೂರ್ತಿಯ ಕೆಳಗೆ ಪ್ರತ್ಯೇಕವಾದ ಲಾಂಛನವಿದೆ. ಈ ೨೪ ತೀರ್ಥಂಕರರ ಮೂರ್ತಿಗಳಲ್ಲಿ ಸುಪಾಶ್ರ್ವ ಮತ್ತು ಪಾಶ್ವನಾಥ ಮೂರ್ತಿಗಳಿಗೆ ಮುಕ್ಕೊಎಡಯ ಬದಲು ಅನುಕ್ರಮವಾಗಿ ಸರ್ಪದ ೫ ಹೆಡೆ ಮತ್ತು ಏಳು ಹೆಡೆಗಳಿವೆ.

ದೇವಾಲಯದ ರಚನೆ

ಬದಲಾಯಿಸಿ

ಪ್ರತಿ ತೀರ್ಥಂಕರರ ಎಡ ಬಲ್ಗಳಲ್ಲಿ ಯಕ್ಷ ಯಕ್ಷಿಯರ ಮೂರ್ತಿಗಳನ್ನು ಕಾಣಬಹುದು. ಬಸದಿಯ ಎಡಭಾಗದಲ್ಲಿ(ಹೊರಗೆ) ಪದ್ಮಾವತಿ ದೇವಿ ಮೂರ್ತಿಯ ಹಿಂಭಾಗದಲ್ಲಿ ಪವಿತ್ರವಾದ ಲೆಕ್ಕಿ ಮರವನ್ನು ಕಾಣಬಹುದು. ಅದರ ಅಡಿಯಲ್ಲಿ ನಾಗರ ಕಲ್ಲಿದ್ದು ಅದಕ್ಕೆ ದಿನವೂ ಪೂಜೆ ಸಲ್ಲಿಸಲಾಗುತ್ತದೆ. ಈ ಬಸದಿಯ ಮೂಡನ ಗೋಡೆಗೆ ಆಣಿಸಿರುವ ಒಂದು ಬಳಪದ ಕಲ್ಲಿನಲ್ಲಿ ಮೂರನೇ ಮಧುರಕ್ಕ ದೇವಿಯ ಶಾಸನವಿದೆ.

ಉಲ್ಲೇಖಗಳು

ಬದಲಾಯಿಸಿ
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೦೧ ed.). ಉಜಿರ: ಮಂಜುಶೀ ಪ್ರಿಂಟರ್ಸ್. p. ೧೯೪.