ಚರ್ನಿ ರೋಡ್ ರೈಲ್ವೆ ಸ್ಟೇಷನ್, ಮುಂಬೈ

'Charni Road'

'ಚರ್ನಿ ರೋಡ್,' 'ಮುಂಬಯಿ ಸಬರ್ಬನ್ ರೈಲ್ವೆ ,' ಯ 'ಪಶ್ಚಿಮ ರೈಲ್ವೆ,' ಯ ವಿಭಾಗದಲ್ಲಿದೆ. ಇದು, 'ಗಿರ್ ಗಾಮ್ ಚೌಪಾತಿ,' ಗೆ ಬಹಳ ಹತ್ತಿರ. ಇಲ್ಲಿನ ಸಮುದ್ರದ ಬೀಚ್ ನಲ್ಲಿ ನಡೆಯಲು ಪರ್ಯಟಕರಿಗಲ್ಲದೆ, ಅಲ್ಲಿ ವಾಸಿಸುವ ನಾಗರಿಕರಿಗೂ ಸಮಾಧಾನ, ಶಾಂತಿ ಸಿಗುವ ಸಮೃದ್ಧತಾಣ, ವೆಂದು ಜನರ ಅಭಿಪ್ರಾಯ. ಮುಂಬಯಿನ ಪ್ರದೇಶಗಳೆಲ್ಲಾ ಸಾಮಾನ್ಯವಾಗಿ ಜನ-ಸಮುದ್ರದಿಂದ ಗಿಜಿಗುಟ್ಟುವಂತೆ, ಇಲ್ಲೂ ಜನರ ಓಡಾಟ ಯಾವಾಗಲೂ ಇದ್ದೆ ಇರುತ್ತದೆ. ಈ ಪ್ರದೇಶದ 'ಬಿಝಿನೆಸ್,' ಗಳಲ್ಲಿ ಪ್ರಮುಖವಾದದ್ದು, ಡೈಮಂಡ್ ಮಾರಾಟ. ಅದನ್ನು ಮಾರಾಟಮಾಡುವ ಸಂಸ್ಥೆಗಳೂ ಹೆಚ್ಚು. 'ಪಂಚರತ್ನ','ಡೈಮಂಡ್ ಮಾರಾಟಮಳಿಗೆ,' ರೈಲ್ವೆ ಸ್ಟೇಷನ್ ಹತ್ತಿರವೇ ಇದೆ. (ಮರಾಠಿಭಾಷೆಯಲ್ಲಿ 'ಚರ್ನಿ,' ಎಂದರೆ ಮೇವು, ಮೇಯಿಸುವುದು, ಎಂದರ್ಥ). ದನಕರುಗಳಿಗೆ, ಕುದುರೆಗಳಿಗೆ, ಮೇವು -ಹಸಿರುಹುಲ್ಲು, ಈ ಜಾಗದಲ್ಲಿ ಹೆಚ್ಚಾಗಿಸಿಕ್ಕುತ್ತಿದ್ದ ಕಾಲದಲ್ಲಿ, ಹುಲ್ಲುಗಾವಲುಗಳಿದ್ದವೆಂದು ಸ್ಥಳೀಯ ಜನರ ಅಂಬೋಣ.

ಹತ್ತಿರದಲ್ಲಿರುವ ಪ್ರಮುಖ ಸಂಸ್ಥೆಗಳು ಬದಲಾಯಿಸಿ

ಸನ್. ೧೮೮೪ ರಲ್ಲಿ ಮುಂಬಯಿನ ಹೆಸರಾಂತ ದಾನಿಗಳಲ್ಲಿಬ್ಬರಾದ ಸರ್ ಆದಮ್ ಜಿ ಪೀರ್ ಭಾಯ್ (೧೮೪೫-೧೯೧೩) ಕೆಲವು ಆಸ್ತಿಗಳನ್ನು ನಿರ್ಮಿಸಿದರು. ಬೊಹ್ರಾ ಖಬರಿ ಸ್ತಾನ್, ಮಸೀದಿ, ಸ್ಯಾನಿಟೋರಿಯಮ್, ಮತ್ತು ಅಮನ್ ಬಾಯಿ ಚಾರಿಟಬಲ್ ಆಸ್ಪತ್ರೆ, ಮೊದಲಾದವುಗಳು. ಇದೇ ಮುಂದೆ ಸೈಫಿ ಹಾಸ್ಪಿಟಲ್ ಎಂದು ಹೆಸರಾಯಿತು. ಈ ಆಸ್ಪತ್ರೆ ಚರ್ನಿರೋಡ್ ರೈಲ್ವೆ ಸ್ಟೇಷನ್ ಎದುರಿಗೇ ಇದೆ. ಇಂತಹ ನಿರ್ಗತಿಕ ಪ್ರಯಾಣಿಕರಿಗೆ ಉಚಿತವಾಗಿ ಹಲವಾರು ಸೌಕರ್ಯಗಳನ್ನು ಒದಗಿಸುವ ಆಶೆ ಪೀರ್ ಭಾಯಿಯವರಿಗಿತ್ತು. ಅವರು ಹಲವಾರು ಬಡವರು, ವೃದ್ಧರು, ಮತ್ತು ನಿರ್ಗತಿಕರು ಮಸೀದಿಯಲ್ಲಿ ಪ್ರಾರ್ಥನೆಮಾಡಲು ಅನುಕೂಲ ಒದಗಿಸಿಕೊಟ್ಟರು. ಅವರ ಮರಣಾನಂತರ ಅವರ ಮೊಮ್ಮಗ ಅಕ್ಬರ್, ಅವರ ಮನೆಯ ಸದಸ್ಯರ ಮಾತನ್ನು ಕೇಳದೆ, ಅವರ ಸಮಸ್ತ ಆಸ್ತಿಯನ್ನು ಟ್ರಸ್ಟ್ ಆಗಿ ಪರಿವರ್ತಿಸಿದರು. ಅಕ್ಬರ್ ಯಾರಮಾತನ್ನೂ ಗಮನಕೊಡಲಿಲ್ಲ. ಅವರ ತಂದೆಗೆ ಇದ್ದ ಅಬ್ದುಲ್ ಹುಸೇನ್ ಪೀರ್ ಭಾಯ್ ೭ ಜನ ಮಕ್ಕಳಲ್ಲಿ ಒಬ್ಬರು. ಮ್ಯಾಥೆರಾನ್ ರೈಲ್ವೆಯನ್ನು ನಿರ್ಮಿಸಿದ ಖ್ಯಾತಿ ಇವರಿಗೆ ಸಲ್ಲಬೇಕು. ಎಲ್ಲಾ ವಿಚಾರಿಸಿಕೊಂಡ ಸಯದ್ನ ಟ್ರಸ್ಟಿಗಳನ್ನು ಬದಲಿಮಾಡಿದರು. ಹೊಸ ಟ್ರಸ್ಟಿಗಳು ಸಯಿದ್ನರಿಗೆ ತೆರವುಮಾಡಿಕೊಟ್ಟರು. ಚರ್ನಿ ರೋದ್ ಹಳೆಯಕಾಲದ ಕಟ್ಟಡಗಳಿಗೆ ಹೆಸರಾಗಿದೆ. ಚಾಲ್ ಗಳಿಗೆ,ಡೈಮಂಡ್ಸ್ ವ್ಯಾಪಾರದ ಹೋಲ್ ಸೇಲ್ ಮಾರ್ಕೆಟ್ ಗಳಿಗೆ ಹೆಸರಾಗಿದೆ. ಒಳ್ಳೆಯ ವ್ಯಾಪಾರ ಕೇಂದ್ರ. ಅಪೇರಹೌಸ್, ಗಾರ್ಮೆಂಟ್ಸ್ ಶಾಪ್ ಗಳು ಇರಾನಿ ರೆಸ್ಟಾರೆಂಟ್ ಗಳು, ಈ ಜಾಗದಲ್ಲಿ ಹೆಚ್ಚಾಗಿವೆ. ಹಳೆಯ ಸಂಪ್ರದಾಯದ ಮಹಾರಾಷ್ಟ್ರಿಯನ್ ಸಮುದಾಯ ಇಲ್ಲಿ ವಾಸಿಸುವ ಜಾಗವಾಗಿದೆ. ಗಿರ್ಗಾವ್ ಬಹುಮಹಡಿ ಕಟ್ಟಡಗಳೆಗೆ ಪ್ರಸಿದ್ಧಿ ಪಡೆದಿದೆ.