ಚರ್ಚೆಪುಟ:ಹುಮಾಯೂನ್‌

ಭಾಷೆಯ ಬಳಕೆ ಸರಿಯಿಲ್ಲ. ಉದಾ: ಬಾಬರ್‌ನ ತನ್ನ ಇಬ್ಬರು ಮಕ್ಕಳಿಗೆ ಅವನ ಸಾಮ್ರಾಜ್ಯದ ರಾಜ್ಯಗಳನ್ನು ಹಂಚುವ ನಿರ್ಧಾರವು ಭಾರತದಲ್ಲಿ ಅಸಾಮಾನ್ಯವಾಗಿತ್ತು ಎಂದಿದೆ, ಅದು ಬಾಬರ್‌ನ ತನ್ನ ಇಬ್ಬರು ಮಕ್ಕಳಿಗೆ ಅವನ ಸಾಮ್ರಾಜ್ಯದ ರಾಜ್ಯಗಳನ್ನು ಹಂಚುವ ನಿರ್ಧಾರವು ಭಾರತದಲ್ಲಿ ಅಪರೂಪವಾಗಿತ್ತು/ ಭಾರತದ ಮಟ್ಟಿಗೆ ಅಂತಹ ನಿರ್ದಾರವು ರೂಢಿಯಲ್ಲಿರಲಿಲ್ಲ ಎಂದಾಗಬೇಕು ಅಲ್ಲವೆ.

ಆನಂತರ ಸ್ವಲ್ಪದರಲ್ಲೇ ಹುಮಾಯೂನ್‌ ಅವನ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸಲು ಸಮರ್ಥನಾದನು. ಆ ಮೂಲಕ ಅವನ ಮಗ ಅಕ್ಬರ್‌‌ಗೆ ಭಾರಿ ಆಸ್ತಿಯನ್ನು ಬಿಟ್ಟುಹೋದನು - ಎಂದಿದೆ. ಅನಂತರ ಅಲ್ಪಕಾಲದಲ್ಲಿಯೆ ಹುಮಾಯೂನ್ ಅವನ ಸಾಮ್ರಾಜ್ಯವನ್ನು ವಿಸ್ತರಿಸಿ, ತನ್ನ ಮಗನಾದ ಅಕ್ಬರನಿಗೆ ಸಾಕಷ್ಟು ಪ್ರಮಾಣದ ಪರಂಪರೆಯನ್ನು ಕೂಡಿಟ್ಟನು ಎಂದಾಗ ಬೇಕಲ್ಲವೆ.

Start a discussion about ಹುಮಾಯೂನ್‌

Start a discussion
Return to "ಹುಮಾಯೂನ್‌" page.