ಚರ್ಚೆಪುಟ:ಸ್ವರ್ಣಮಂದಿರ

ಶೀರ್ಷಿಕೆ

ಬದಲಾಯಿಸಿ

"ಚಿನ್ನದ ದೇವಸ್ಥಾನ" ವಿಕಿಲೇಖನದ ತಲೆಬರಹ ಬದಲಿಸಬೇಕಲ್ಲವೇ ? ಕನ್ನಡದಲ್ಲಿ ಸಾಮಾನ್ಯವಾಗಿ ಅದಕ್ಕೆ ಏನನ್ನುತ್ತಾರೆ? "ಚಿನ್ನದ ದೇವಸ್ಥಾನ" ಎಂದಂತೂ ಅಲ್ಲ.

ಶ್ರೀ ಹರ್ಮಂದಿರ್ ಸಾಹಿಬ್, ದರ್ಬಾರ್ ಸಾಹಿಬ್, ಗೋಲ್ಡನ್ ಟೆಂಪಲ್, ಸ್ವರ್ಣಮಂದಿರ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ನಿಮ್ಮ ಸಲಹೆಯಂತೆ ಜನಬಳಕೆಯಲ್ಲಿರುವ ಸ್ವರ್ಣಮಂದಿರವನ್ನು ಮುಖ್ಯ ಶೀರ್ಷಿಕೆಯಾಗಿ ಬಳಸಬಹುದು. ಉಳಿದ ಪುಟಗಳಿಗೆ ಮರುನಿರ್ದೇಶನ ನೀಡಬಹುದು. -- ತೇಜಸ್ / ಚರ್ಚೆ/ ೧೬:೨೪, ೨೭ ಮೇ ೨೦೧೨ (UTC)

"ಹೊಂಗುಡಿ" - ಇದು ಒಳ್ಳೆ ಆಯ್ಕೆ.. ನನ್ನ ಸಲಹ ಏನೆಂದರೆ " ಹೊಂಗುಡಿ " ಆಯ್ಕೆ ಕೂಡ ಇರಲಿ ಅಂತ. ಸಣ್ಣದಾಗಿ ಚೊಕ್ಕವಾಗಿದೆ. ಹೊಂಗುಡಿ ಪದವನ್ನು ತಲೆಬರಹದಲ್ಲಿ ಇರಲಿ ಅಂತ ನನ್ನ ಬಯಕೆ. - ವಿವೇಕ್ ಶಂಕರ್

"ಹೊಂಗುಡಿ"ಅಥವಾ "ಚಿನ್ನದಗುಡಿ" ಎರಡೂ ಚೆನ್ನಾಗಿದೆ. "ಹೊಂಗುಡಿ" ಯಲ್ಲಿ ಅಚ್ಚ ಕನ್ನಡದ ಸೊಗಡಿದೆ. - ಜಯಪ್ರಕಾಶ್

ಬೆಂಗಳೂರಿನ ಲಾಲ್ ಬಾಗ್ ಅನ್ನು ಕೆಂದೋಟ ವೆಂದರೆ ಯಾರಿಗೂ ತಿಳಿಯುವುದಿಲ್ಲ. ಹಾಗೆಯೇ ಜನರಬಳಕೆಯಲ್ಲಿರುವ ಸ್ವರ್ಣಮಂದಿರ ಹೆಸರನ್ನು ಬಳಸಬೇಕೆನ್ನುವುದು ನನ್ನ ಅಭಿಪ್ರಾಯ. -- ತೇಜಸ್ / ಚರ್ಚೆ/ ೦೫:೩೧, ೧೦ ಜೂನ್ ೨೦೧೨ (UTC)
"ಕೆಂದೋಟ" ಅಂತಾ ಬಳಸಿನೋಡಿ, ಕೆಲಹೊತ್ತಿನಲ್ಲಿ ಲಾಲಬಾಗ್ ಗಿಂತ ಬೇಗ ಕನ್ನಡಿಗರ ಮನೆಮಾತಾಗುವುದು. (REDFORT ಗೆ ಕೆಂಪುಕೋಟೆ ಇಲ್ಲಿ ನೆನಪಿಗೆ ತಂದುಕೊಳ್ಳಬಹುದು). ಹೊಂಗುಡಿ/ಹೊನ್ನಿನ ಗುಡಿ/ಚಿನ್ನದ ಗುಡಿ ಏನೂ ಅಂತಾ ತಿಳಿದಿಕೊಳ್ಳಲು ಕನ್ನಡಿಗರಿಗೆ ಹೆಚ್ಚು ಹೊತ್ತು ಬೇಕಾಗಿಲ್ಲ - ಪ್ರಶಾಂತ ಸೊರಟೂರ
ಹೊಂಗುಡಿ ಕೆಲವು ಜನರ ಬಳಕೆಯಲ್ಲಿದ್ದರೆ ಸ್ವರ್ಣಮಂದಿರ ಪುಟಕ್ಕೆ ಮರುನಿರ್ದೇಶನ ಪುಟವನ್ನು ಸೃಷ್ಟಿಸಬಹುದು -- ತೇಜಸ್ / ಚರ್ಚೆ/ ೦೩:೦೬, ೧೨ ಜೂನ್ ೨೦೧೨ (UTC)
Return to "ಸ್ವರ್ಣಮಂದಿರ" page.