ಚರ್ಚೆಪುಟ:ಮಲ್ಲಿಕಾರ್ಜುನ ಬಂಡೆ

     ಆಳಂದ ತಾಲುಕಿನ ಖಜೂರಿನಲ್ಲಿ ಜನಿಸಿದರು. ಜೊತೆಗೆ  ಬಡತನವೆ ಅವರ ಬೆನ್ನಿಗೆ ಬಿದ್ದಿತ್ತು. ಹುಟ್ಟಿದ ಆರೇಳು ವರ್ಷಕ್ಕೆ ಬಂಡೆ ತಾಯಿ ಕಲಾವತಿ ತೀರಿ ಹೋದರು. ಹೀಗಾಗಿ ಮಲ್ಲಿಕಾರ್ಜುನ ಅವರಿಗೆ ತಾಯಿ ಪ್ರೀತಿ ಸಿಗಲಿಲ್ಲ. ತಾಯಿ ಪ್ರೀತಿ ಸಿಗದೆ ಹೋದರು ತಂದೆ ಪ್ರೀತಿಯಲ್ಲಿ ಮಿಂದೆಂದ್ದರು. ಆದರೆ,ಈ ಭಾಗ್ಯ ಅವರ ಇಬ್ಬರು ಮಕ್ಕಳಾದ ಶಿವಾನಿ ಮತ್ತು ಸಾಯಿದರ್ಶನಿಗೆ ಸಿಗಲಿಲ್ಲ.

ಅವರಿಬ್ಬರಿಗೂ ಬುದ್ದಿ ಬರುವ ಹೊತ್ತಿಗೆ ತಂದೆ ತೀರಿಕೊಂಡಿದ್ದು ತಂದೆ ಪ್ರೀತಿಯಿಂದ ಮಕ್ಕಳು ವಂಚಿತರಾಗಿದ್ದಾರೆ. ಇದು ವಿಧಿಯಾಟವೇ ಅಲ್ಲದೆ ಮತ್ತೇನು? ಎಂದು ಆತನ ಸ್ನೇಹಿತರು,ಒಡನಾಡಿಗಳು ನೋವಿನಿಂದ ಗೋಳಿಟ್ಟರು. ಜೀವನದಲ್ಲಿ ಎನಾದರು ಸಾಧಿಸಬೇಕು ಎಂಬ ಅದಮ್ಯ ಉತ್ಸಾಹ, ಭಂಡ ಧೈರ್ಯ ಅವನಲ್ಲಿತ್ತು. ವಿದ್ಯಾರ್ಥಿ ಜೀವನದ ಸಂಪೂರ್ಣ ಅರಿವಿದ್ದ ಬಂಡೆ ಲೈಬ್ರರಿ ಮುಚ್ಛುವವರೆಗೆ ಓದುತ್ತಿದ್ದ .ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಎತ್ತಿದ ಕೈ. ಮೇಳಕುಂದಿ ಗುರುಗಳೇ ನಮಗೆಲ್ಲ ರೋಲ್ ಮಾಡಲ್. ಜೀವಕ್ಕೆ ಜೀವ ಕೊಡುವ ಸ್ನೇಹಿತ. ಧೈರ್ಯಂ ಸರ್ವತ್ರ ಸಾಧನಂ ಎಂದು ತಿಳಿದುಕೊಂಡಿದ್ದ ಈ ಉತ್ಸಾಹಿಗೆ ತನ್ನ ಭಂಡ ಧೈರ್ಯವೇ ಮುಳುವಾಗುತ್ತೆ ಅಂತ ಅನಿಸಿರಲಿಲ್ಲ.

ಮಲ್ಲಿಕಾರ್ಜುನ ಬಂಡೆ ಕಾಲೇಜುಗಳಲ್ಲಿ ನಡೆಯುತ್ತಿದ್ದ ಮೂಕಾಭಿನಯ, ಚರ್ಚಾ ಸ್ಪರ್ದೆ,ನಾಟಕ ಸೇರಿದಂತೆ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಎತ್ತಿದ ಕೈ.ಈ ಕಾರ್ಯಕ್ರಮಗಳು ಮತ್ತು ಆಗ ಪ್ರಾಂಶುಪಾಲರಾಗಿದ್ದ ಎಸ್.ಜಿ.ಮೇಳಕುಂದಿ ಅವರ ನಡೆ ಬಂಡೆ ಅವರಲ್ಲಿ ನಾಯಕತ್ವ ಗುಣಗಳು ಬೆಳೆಯಲು ಸಹಕಾರಿಯಾಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಸ್ನೇಹಿತರು. ೧೯೯೨ ಆಗ ದೇಶದಲ್ಲಿ ರಾಮಜನ್ಮಭೂಮಿ ಗಲಾಟೆ. ಈ ಸಂದರ್ಭದಲ್ಲಿ ಗುಲ್ಬರ್ಗ ವಿವಿಯ ಯುವಜನೋತ್ಸವದಲ್ಲಿ ಏಕತೆ ಸಂದೇಶ ಸಾರುವ ನಾಟಕವನ್ನು ಎಸ್.ಬಿ.ಕಾಲೇಜಿನಿಂದ ಪ್ರದರ್ಶಿಸಲಾಗಿತ್ತು. ಬಂಡೆ ಸರ್ದಾರ್ಜೀ ಪಾತ್ರದಲ್ಲಿ ಮಿಂಚಿದ್ದರು. ಚರ್ಚಾ ವಿಶಯಗಳಲ್ಲಿ ಯಾವಾಗಲು ಅವರದ್ದೇ ಪಾರಮ್ಯ, ಎಂದು ಸ್ಮರಿಸುತ್ತಾರೆ ಸ್ನೇಹಿತ ಉಪನ್ಯಾಸಕ ಶರಣಗೌಡ.ವಿವಿದೆಡೆ ನಡೆಯುವ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಚರ್ಚಾ,ಪ್ರಬಂಧ ಸ್ಪರ್ದೆಗಳಲ್ಲಿ ಮಾತ್ರ ಮಿಂಚುತ್ತಿದ್ದ ಎಸ್.ಬಿ.ಕಾಲೇಜು, ನಮ್ಮ ತಂಡದಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಮಿಂಚುವಂತಾಯಿತು. ಅದು ಇಂದಿಗೂ ಮುಂದುವರೆದಿದೆ. ಇದಕ್ಕೆ ಬಂಡೆ ನೇತೃತ್ವದ ನಮ್ಮ ಸ್ನೇಹಿತರ ಗುಂಪು ಕಾರಣ, ಎಂದು ಗೆಳೆಯರು ತಮ್ಮ ಅನಿಸಿಕೆಗಳನ್ನು ಬಿಚ್ಚಿಟ್ಟರು.

ಜನವರಿ ೮ ರಂದು ನಡೆದದ್ದೇನು?

    ಭೂಗತ ಪಾತಕಿ ಮುನ್ನ ಅವನ ಮನೆಯಲ್ಲಿ ಅಡಗಿ ಕುಳಿತಿದ್ದಾನೆ ಎಂಬ ಮಾಹಿತಿ ಆದರಿಸಿ ಬಂದಿಸಲು ಅಧಿಕಾರಿಗಳ ತಂಡ ತೆರಳಿತ್ತು. ಈ ವೇಳೆ ಮುನ್ನ ಜೊತೆ ಗುಂಡಿನ ಕಾರ್ಯಾಚರಣೆ ನಡೆದಿತ್ತು. ಆರೋಪಿ ಹಾರಿಸಿದ ಗುಂಡು ಗುಲ್ಬರ್ಗಾ ರೌಡಿ ನಿಗ್ರಹ ದಳ ಉಸ್ತುವಾರಿಯಾಗಿದ್ದ ಸ್ತೇಶನ್ ಬಜಾರ್ ಠಾಣೆಯ ಮಲ್ಲಿಕಾರ್ಜುನ ಬಂಡೆ ತಲೆಗೆ ಹೊಕ್ಕಿತ್ತು. ಇನ್ನೊಬ್ಬ ಪಿ.ಎಸ್.ಐ ಮುರುಳಿ,ಗೂಪಾಲ,ಉದ್ದಂಡಪ್ಪ ಮೊದಲಾದವರಿಗೆ ಗಾಯಗಳಾಗಿದ್ದವು. ಗುಂಡೇಟಿನಿಂದ ಗಾಯಗೊಂಡ ಬಂಡೆಯವರಿಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಯೆಶೋದ ಆಸ್ಪ್ತ್ರೆಗೆ ರವಾನಿಸಲಾಗಿತ್ತು. ನರರೋಗ ಶಸ್ತ್ರ ಚಿಕಿತ್ಸಾ ತಗ್ನ ಡಾ.ರಂಗನಾದಂ ನೇತ್ರುತ್ವದ ತಂಡ ಚಿಕಿತ್ಸೆ ನೀಡುತ್ತಿತ್ತು. ಎರಡು ದಿನಗಳಿಂದ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಅಲ್ಲದೆ ಮೆದುಳು ನಿಶ್ಕ್ರಿಯವಾಗಿತ್ತು. ಎರಡೂ ಕಿಡ್ನಿಗಳು ವಿಫಲಗೊಂಡಿದ್ದವು. ಹೀಗಾಗಿ ಡಯಾಲಿಸಿಸ್ ಮಾಡಲಾಗಿತ್ತು. ಆದರೋ ಫಲ ನೀಡಲಿಲ್ಲ.   
   ಬುಧವಾರದ ಬೆಳವಣಿಗೆಗಳು:
  *   ಬೆಳಗಿನಜಾವ 1 ಗಂಟೆಗೆ ಸಾವಿನ ಸುದ್ದಿ ಹಿರೀಯ ಅಧಿಕಾರಿಗಳಿಗೆ ರವಾನೆ.
  *   ಬೆಳಗ್ಗೆಯಿಂದಲೆ ಗುಲ್ಬರ್ಗದಲ್ಲಿ ಪ್ರತಿಭಟನೆ ಶುರು, ಶವಾ ತರಲು ಒತ್ತಾಯ.
  *   9:10 ಹೈದರಾಬಾದ್ ಗಾಂದಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಶೆ 
  *   9:15 ಗುಲ್ಬರ್ಗಾದ ಹಲವೆಡೆ ಕಲ್ಲು ತೂರಾಟ, ಆಟೋಗಳು ಜಖಂ
  *  10:05 ಗಂಟೆಗೆ ಹೈದಾರಾಬಾದ್ ನಿಂದ ಪಾರ್ಥೀವ ಶರೀರ ನೀರವಾಗಿ ಖಜೂರಿಗೆ ರವಾನಿಸಿ, ಸಂಜೆ ಅಂತ್ಯ ಕ್ರಿಯೆಗೆ ನಿರ್ದಾರ        
  *   10:30 ತೀವ್ರಗೊಂಡ ಪ್ರತಿಭಟನೆ, ಗುಲ್ಬರ್ಗಕ್ಕೆ ಶವ ತರಲು ಆಗ್ರಹ
  *   12:05 ಗೃಹ ಸಚಿವರು ಹೇಳಿಕೆ ನೀಡಿ ಜ. ರಂದು ಅಂತ್ಯ ಕ್ರಿಯೆ ನಡೆಸಲು ನಿರ್ಧಾರ ಪ್ರಕಟ 
  *   01:15 ಗಂಟೆಗೆ ಗುಲ್ಬರ್ಗದಲ್ಲಿ ನಿಷೇದಾಗ್ನಿ ಜಾರಿ 
  *   01:30 ಹೈದರಾಬಾದ್ ಆಸ್ಪತ್ರೆಗೆ ಖರ್ಗೆ ಬೇಟಿ
  *   ಶವ ತಮಗೆ ಕೊಡಲು ಒತ್ತಾಯಿಸಿ ಗೋಳು ತೋಡಿಕೊಂಡ ಪತ್ನಿ ಮಧು
  *   02:10 ಕೆ.ಜೆ.ಜಾರ್ಜ್ಗೆ,ಖರ್ಗೆ ಕರೆಮಾಡಿ ಶವ ರವಾನೆ ಸಲಹೆ
  *   02:30 ಶವಕ್ಕಾಗಿ ಖಜೂರಿ ಬಳಿ ಬಸ್ಗೆ ಬೆಂಕಿ ಹತ್ತಿಸಿ ಪ್ರತಿಭಟನೆ
  *   03:15 ಹೊತ್ತಿಗೆ ಮತ್ತೆ ಶವ ಗುಲ್ಬರ್ಗಕ್ಕೆ ಸಾಗಿಸುವ ನಿರ್ದಾರ 
  *   05:15ಕ್ಕೆ ಹೈದರಾಬಾದ್ ನಿಂದ ಶವ ಗುಲ್ಬರ್ಗಕ್ಕೆ ರವಾನೆ.
     ಅಂದು ನಡೆದ ಗುಂಡಿನ ದಾಳಿಯಲ್ಲಿ ತನ್ನ ಸಹಪಾಠಿಗಳ ಪ್ರಾಣ ಉಳಿಸಿ ಕೊನೆಗೆ 'ಕರ್ನಾಟಕದ ಸಿಂಗಂ' ಎಂದು ಕರೆಸಿಕೊಂದ ಮಲ್ಲಿಕಾರ್ಜುನ ಕರಬಸಪ್ಪ ಬಂಡೆ ರೌಡಿಗಳಿಗೆ ನಿಜಕ್ಕೂ ಸಿಂಹ ಸ್ವಪ್ನ ವಾಗಿದ್ದರು.
Return to "ಮಲ್ಲಿಕಾರ್ಜುನ ಬಂಡೆ" page.