ಚರ್ಚೆಪುಟ:ಧರ್ಮ (ಭಾರತೀಯ ಪರಿಕಲ್ಪನೆ)

(ಚರ್ಚೆಪುಟ:ಧರ್ಮ ಇಂದ ಪುನರ್ನಿರ್ದೇಶಿತ)

ಕನ್ನಡ ಬಾಂಧವರಿಗೆ ನಮಸ್ಕಾರಗಳು.

ಧರ್ಮ ಎಂದರೆ ಆಂಗ್ಲ ಭಾಷೆಯ 'ರೆಲಿಜಿಯನ್' ಹೇಗೆ ಆಗುತ್ತದೆ?. ಹಿಂದೂ 'ಮತ', ಕ್ರೈಸ್ತ 'ಮತ', ಜೈನ 'ಮತ' ಎಂದು ಆಗಬೇಕಲ್ಲವೇ? ಧರ್ಮ ಶಬ್ದದ ಅರ್ಥ 'ಮತ'ವನ್ನು ಮೀರಿದಂತಹುದಲ್ಲವೆ? ಯಾಕೆಂದರೆ ಧರ್ಮವು ಸತ್ಯ, ನ್ಯಾಯಕ್ಕೆ ಸಂಬಂಧಿಸಿದ್ದು.

ಆದ್ದರಿಂದ ಈ ಲೇಖನದಲ್ಲಿ ಹಿಂದೂ 'ಧರ್ಮ', ಕ್ರೈಸ್ತ 'ಧರ್ಮ', ಜೈನ 'ಧರ್ಮ' ವನ್ನು ಹಿಂದೂ 'ಮತ', ಕ್ರೈಸ್ತ 'ಮತ', ಜೈನ 'ಮತ' ವನ್ನಾಗಿ ಬದಲಾಯಿಸಬೇಕಾಗಿ ವಿನಂತಿ. ಉತ್ತರ :

ರಾಯರೇ , ನಿಮ್ಮ ಹೆಸರು , ನಿಮ್ಮ ಐ.ಡಿ. ಹಾಕಿ-ಕೊನೆಯಲ್ಲಿ ; ಯಾರು ಪ್ರಶ್ನೆ ಕೇಳಿದರೆಂಬುದು ಮುಖ್ಯ.ಅನಾಮಿಕರೊಂದಿಗೆ ಚರ್ಚೆ ಮಾಡುವುದು ಅರ್ಥವಿಲ್ಲದ್ದು.

ಧರ್ಮ ಪದವು ಮತ ಎಂಬ ಅರ್ಥದಲ್ಲಿಯೂ ಉಪಯೋಗದಲ್ಲಿದೆ. ಆದರೆ 'ಮತ' ಸರಿ ; ಆದರೆ 'ಹಿಂದೂ ಮತ' ಎಂಬುದಿಲ್ಲ. ಭಾರತೀಯರ ಒಟ್ಟಾರೆ ನಡವಳಿಕೆ ಸಂಸ್ಕೃತಿಗೆ ಹಿಂದೂ ಧರ್ಮ ಎನ್ನುತ್ತಾರೆ - ಇದು ಸುಪ್ರೀಮ್ ಕೋರ್ಟಿನ ತೀರ್ಪೂ ಆಗಿದೆ. ವೈದಿಕ ಧರ್ಮ,- ಹಿಂದೂ ಧರ್ಮದಲ್ಲಿ ಒಂದೇ ಬಗೆಯ ನೆಡವಳಿಕೆ ,ಪೂಜಾ ಪದ್ಧತಿ ಇಲ್ಲ. 'ವ್ಯುತ್ಪತ್ತಿಶಾಸ್ತ್ರ' ತಲೆ ಬರೆಹದ ನಂತರ , ಅದಕ್ಕಾಗಿ 'ಧರ್ಮ' ಪದದ ರೂಢಿಯಲ್ಲಿರು ವ್ಯಾಖ್ಯಾನವನ್ನು ಅಂಕಣದಲ್ಲಿ ನಾನು ಹಾಕಿದ್ದೇನೆ ;ಓದಿ ಪ್ರತಿಕ್ರಿಯಿಸಿ. ಧನ್ಯವಾದಘಳು.

Bschandrasgr ೧೧:೩೧, ೧ ಏಪ್ರಿಲ್ ೨೦೧೪ (UTC);ಬಿ.ಎಸ್ ಚಂದ್ರಶೇಖರ

ಪ್ರತಿಕ್ರಿಯೆ

ಬದಲಾಯಿಸಿ

|| ಧರ್ಮೋ ರಕ್ಷತಿ ರಕ್ಷಿತಃ || DHARMO RAKSHATI RAKSHITAHA ||

ಬದಲಾಯಿಸಿ

🙏🕉️🙏 || ಧರ್ಮೋ ರಕ್ಷತಿ ರಕ್ಷಿತಃ ||🙏🕉️🙏 || DHARMO RAKSHATI RAKSHITAHA ||

ಅಂದರೆ ನಾವು ಧರ್ಮವನ್ನು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ . ಇದು ಸಾಕ್ಷಾತ್ ಭಗವಂತನ ವಾಣಿಯಾಗಿದೆ..!!! ಧರ್ಮವು ಸಾಮಾಜಿಕ ಅಗತ್ಯಗಳಲ್ಲೊಂದು. ಸಮಾಜವನ್ನು ಸುಸ್ಥಿತಿಯಲ್ಲಿಡುವ ಈ ಧರ್ಮವು ವ್ಯಕ್ತಿ ಮತ್ತು ಸಮಾಜವನ್ನು ಎತ್ತಿ ಹಿಡಿಯುವ ಗುಣವುಳ್ಳದ್ದಾಗಿದೆ.

ಧರ್ಮದಿಂದ ಮನುಷ್ಯನಿಗೆ ಸಿರಿ-ಸಂಪತ್ತು, ಸುಖ-ಶಾಂತಿ ಮತ್ತು ಸಕಲ ಗೌರವಗಳು ದೊರೆಯುತ್ತದೆ ಹಾಗೂ ಮುಕ್ತಿಯನ್ನು ಪಡೆಯಲು ಧರ್ಮವೊಂದೇ ಮಾರ್ಗವಾಗಿದೆ..!!!

ಮನುಷ್ಯನ ಅಂತಿಮ ಗುರಿಯಾದ ಮೋಕ್ಷ ಸಾಧನೆಯೂ ಕೂಡ ಧರ್ಮದಿಂದಲೇ ಆಗುವುದು ಹಾಗೂ ಅರ್ಥ, ಕಾಮ ಮತ್ತು ಮೋಕ್ಷಗಳ ಸಂಪಾದನೆ ಕೂಡ ಧರ್ಮಮಾರ್ಗದಲ್ಲಿಯೇ ಆಗುವುದು.

ದಯವೇ ಧರ್ಮದ ಮೂಲ ಅಥವಾ ಅಹಿಂಸಾ ಪರಮೋ ಧರ್ಮಗಳು ಇತ್ಯಾದಿ ವಾಕ್ಯಗಳಿಂದ ಧರ್ಮವನ್ನು ವ್ಯಾಖ್ಯಾನಿಸಲಾಗಿದೆ. ಸುಖ, ಶಾಂತಿ, ಪರಸ್ಪರ ಪ್ರೀತಿ ವಿಶ್ವಾಸಗಳನ್ನು ಹೆಚ್ಚಿಸಿ ಸಹಬಾಳ್ವೆಯನ್ನು ಬೋಧಿಸುವುದೇ ಧರ್ಮವಾಗಿದೆ. ಹೀಗೆ ಧರ್ಮವು ಸದಾ ಮಾನವ ಬದುಕಿಗೆ ದಾರಿದೀಪವಾಗಿದೆ.

●ಇಂತಹ ಅನೇಕ ಮಾನವೀಯ ಮೌಲ್ಯಗಳಿಂದ ಕೂಡಿದ ಧರ್ಮವನ್ನು ಮೀರಿ ಯಾರೂ ನಡೆಯಬಾರದು. ಒಂದು ವೇಳೆ, ಅಧರ್ಮದಿಂದ ನಡೆದರೆ, ನಮ್ಮ ಜೀವಿತ ಅವಧಿಯಲ್ಲಿಯೇ, ಕಷ್ಟ -ನಷ್ಟಗಳು, ಅವಮಾನ, ಅಶಾಂತಿ, ಅವಮಾನ, ಹಾಗೂ ಮರಣದ ನಂತರ ನರಕವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ..!!!!●

ನಾವುಗಳು, ಸದಾ ಧರ್ಮವನ್ನು ಪಾಲಿಸಿದರೆ ಧರ್ಮವು ನಮ್ಮನ್ನು ನಿಶ್ಚಿತವಾಗಿ ಸಂರಕ್ಷಿಸುತ್ತದೆ. ಹಾಗಾಗಿ, ||ಧರ್ಮೋ ರಕ್ಷತಿ ರಕ್ಷಿತಃ || ಎಂಬುದು ಸಾಕ್ಷಾತ್ ಭಗವಂತನ ವಾಣಿಯಾಗಿದೆ..!!!🙏🕉️🙏

Dr TR Chandrashekar

               ಡಾ. ಟಿ ಆರ್ ಚಂದ್ರಶೇಖರ್
                              BE; MIE; MA; PhD Dr TR Chandrashekar (ಚರ್ಚೆ) ೧೯:೩೯, ೨೩ ಸೆಪ್ಟೆಂಬರ್ ೨೦೨೧ (UTC)
Return to "ಧರ್ಮ (ಭಾರತೀಯ ಪರಿಕಲ್ಪನೆ)" page.