ಚರ್ಚೆಪುಟ:ದಿ ಜಂಗಲ್ ಬುಕ್ (೨೦೧೬ ಚಲನಚಿತ್ರ)

ಜಂಗಲ್ ಬುಕ್ (೨೦೧೬) ಚಲನಚಿತ್ರದ ಕತೆಯು ಈ ಪುಟದಲ್ಲಿ ಬರೆದ ಕತೆಗಿಂತ ಭಿನ್ನವಾಗಿದೆ. ಇಲ್ಲಿ ಮೂಲ ಕತೆಯ ಸಾರಾಂಶ ಬರೆಯಲಾಗಿದೆಯೇ ಹೊರತು ೨೦೧೬ರ ಚಲನಚಿತ್ರದ್ದಲ್ಲ. ಹಾಗಾಗಿ ಈ ಮಾಹಿತಿ ತೆಗೆದು ಜಂಗಲ್ ಬುಕ್ ಪುಟದಲ್ಲಿ ಹಾಕಿ ಅದರಲ್ಲಿ ಆ ಮೂಲ ಪುಸ್ತಕದ ವಿವರ ಬರೆಯಬಹುದು. ಈ ಪುಟದ ಹೆಡ್ಡಿಂಗಲ್ಲಿ ಚಲನ ಮತು ಚಿತ್ರ ಪದಗಳ ನಡುವೆ ಅಂತರ ಬೇಕಿಲ್ಲ ಅನ್ನಿಸುತ್ತದೆ. --Vikas Hegde (ಚರ್ಚೆ) ೦೮:೪೨, ೨೮ ಏಪ್ರಿಲ್ ೨೦೧೬ (UTC)

[suMkadavar ೧೧:೧೫, ೪ ಮೇ ೨೦೧೬ (UTC)] ಬದಲಾಯಿಸಿದ್ದೇನೆ. ಧನ್ಯವಾದಗಳು.

ಚಲನಚಿತ್ರ ಪುಟದ ಮಾದರಿ

ಬದಲಾಯಿಸಿ

ಚಲನಚಿತ್ರದ ಪುಟವನ್ನು ಹೇಗೆ ರಚಿಸಬೇಕು ಅದು ಯಾವ ಫಾರ್ಮ್ಯಾಟ್‍ನಲ್ಲಿರಬೇಕು ಎಂದು ಇದೇ ಸಿನೆಮಾದ ಇಂಗ್ಲೀಷ್ ವಿಕಿ ಪುಟ ನೋಡಿ ತಿಳಿದುಕೊಳ್ಳಬಹುದು. ಮೊದಲು ಜಂಗಲ್ ಬುಕ್ ಜಂಗಲ್ ಬುಕ್ (೨೦೧೬ ಚಲನಚಿತ್ರ) ಅಂದರೆ ಏನು, ಅದರ ನಿರ್ದೇಶಕ ನಿರ್ಮಾಣ ಸಂಸ್ಥೆಗಳ ಬಗ್ಗೆ, ಮೂಲ ಕತೆಯ ಆಧಾರದ ಬಗ್ಗೆ ಚುಟುಕಾಗಿ ಹೇಳಲಾಗುತ್ತದೆ. ಅದರಿಂದ ಪುಟದ ವಿಷಯದ ಬಗ್ಗೆ ಮೊದಲ ಓದಿಗೆ ತಿಳಿಯುತ್ತದೆ. ಅನಂತರ ಸಿನೆಮಾದ 'ಕಥಾಹಂದರ' ಹೇಳಲಾಗುತ್ತದೆ. ಪೂರ್ತಿ ಕತೆಯನ್ನು ವಿವರವಾಗಿ ಮಕ್ಕಳಿಗೆ ಹೇಳಿದಂತೆ ಬರೆಯುವುದಿಲ್ಲ. ಕಥಾಹಂದರವನ್ನು ಮತ್ತೆ ಮುಖ್ಯ ಶೀರ್ಷಿಕೆಗಳನ್ನು ಕೊಟ್ಟು ಚಿತ್ರಕತೆಯ ದೃಶ್ಯಗಳಂತೆ ವಿಭಾಗ ಮಾಡಿ ಬರೆಯುವ ಅಗತ್ಯವಂತೂ ಇಲ್ಲ. ಆಮೇಲೆ ಪಾತ್ರವರ್ಗ, ಸಿನೆಮಾದ ತಯಾರಿಕೆ, ವಿಶೇಷತೆಗಳು, ಅಳವಡಿಸಿದ ತಂತ್ರಜ್ಜಾನ, ಪ್ರಶಸ್ತಿಗಳು ಇತ್ಯಾದಿ ವಿವರ ಬರೆಯಲಾಗುತ್ತದೆ. ಬಾಹ್ಯ ಸಂಪರ್ಕಗಳು ವಿಭಾಗದಲ್ಲಿ ಮತ್ತೆ ಇಂಗ್ಲೀಶ್ ವಿಕಿ ಪುಟವನ್ನು ಕೊಡುವ ಅಗತ್ಯವಿಲ್ಲ. ಈ ಚಲನಚಿತ್ರದ ಬಗ್ಗೆ ಬೇರೆ ವೆಬ್ ಸೈಟ್ ಗಳ ಕೊಂಡಿ ಹಾಕಬೇಕು. ಕನ್ನಡ ವಿಕಿಯ ಗುಣಮಟ್ಟಕ್ಕೆ ಇವೆಲ್ಲಾ ಅಗತ್ಯ. ಸುಮ್ಮನೇ ಸಿಕ್ಕ ವಿಷಯಗಳನ್ನೆಲ್ಲಾ ತುಂಬಿದರೆ ಅರ್ಥವಿಲ್ಲ.--Vikas Hegde (ಚರ್ಚೆ) ೧೦:೪೧, ೬ ಮೇ ೨೦೧೬ (UTC) {suMkadavar ೦೪:೩೨, ೭ ಮೇ ೨೦೧೬ (UTC)}

ಸಂತೋಷ. ಒಮ್ಮೆ ಈ ಲೇಖನ ನಿಮ್ಮ ರೀತಿಯಲ್ಲಿ ಬರೆದು ತಿಳಿಸಿ. ಅನುಸರಿಸಲು ಸುಲಭ. ಧನ್ಯವಾದಗಳು. ನನಗೆ ಪ್ರಿಯವಾದ ಚಲನಚಿತ್ರದ ಬಗ್ಗೆ ಬರೆಯುವ ಆಸೆಯಾಯಿತು. ಬರೆದೆ.
ಇದೇ ಸಿನೆಮಾದ ಇಂಗ್ಲೀಷ್ ವಿಕಿ ಪುಟ ನೋಡಿ ತಿಳಿದುಕೊಳ್ಳಬಹುದು. ಅನುಸರಿಸಲೂಬಹುದು. ನೀವು ಈ ಪುಟ ರಚಿಸಿದ್ದು ಬಹಳ ಸಂತೋಷ ಮತ್ತು ಧನ್ಯವಾದಗಳು. ಅದರ ಜೊತೆ ಸ್ವಲ್ಪ ವಿಶ್ವಕೋಶ ಶೈಲಿಯ ಬಗ್ಗೆಯೂ ಗಮನವಹಿಸಿದರೆ ನಿಮ್ಮ ನಿಸ್ವಾರ್ಥ ಸೇವೆ, ಕಾಣಿಕೆಗಳು ಇನ್ನೂ ಹೆಚ್ಚಿನ ಗುಣಮಟ್ಟದ್ದಾಗಿತ್ತವೆ ಎಂಬ ಒಂದು ಸದಾಶಯವಷ್ಟೆ. --Vikas Hegde (ಚರ್ಚೆ) ೧೪:೫೭, ೭ ಮೇ ೨೦೧೬ (UTC)
Return to "ದಿ ಜಂಗಲ್ ಬುಕ್ (೨೦೧೬ ಚಲನಚಿತ್ರ)" page.