ಚರ್ಚೆಪುಟ:ಟೊಮೇಟೊ

There are no discussions on this page.
(ವಿಜಯ ಕರ್ನಾಟಕ/ಏಜೆನ್ಸೀಸ್ | Jun 11, 2014-ಲಂಡನ್): ಟೊಮೆಟೊನಿಂದ ತಯಾರಿಸಿದ ಮಾತ್ರೆಯನ್ನು ದಿನಕ್ಕೊಂದು ಬಾರಿ ಸೇವಿಸಿದರೆ ರಕ್ತ ಚಲನೆ ಸಾರಗಗೊಳಿಸಿ ಹೃದಯ ಸಂಬಂಧಿ ತೊಂದರೆಗಳು ದೂರವಾಗುತ್ತವೆ ಎಂದು ಹೊಸ ಸಂಶೋಧನೆ ಹೇಳಿದೆ.

ಇನ್ನೂ ಪ್ರಾಯೋಗಿಕ ಹಂತದಲ್ಲಿರುವ ಈ ಮಾತ್ರೆಗೆ ನಾಮಕರಣವಾಗಿಲ್ಲ. ಕೇಂಬ್ರಿಡ್ಜ್ ಥೆರಾನೋಸ್ಟಿಕ್ಸ್ ಕಂಪನಿಯು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಜತೆಗೂಡಿ ಈ ಮಾತ್ರೆಯನ್ನು ಅಭಿವೃದ್ಧಿಪಡಿಸುತ್ತಿದೆ.

ಟೊಮೆಟೊದಲ್ಲಿರುವ ಲೈಕೊಪೇನ್ ಆ್ಯಂಟಿಆ್ಯಕ್ಸಿಡೆಂಟನ್ನು ಬಳಸಿ ಅಭಿವೃದ್ಧಿಪಡಿಸಲಾಗುತ್ತಿರುವ ಮಾತ್ರೆಯನ್ನು 72 ವಯಸ್ಕರ ಮೇಲೆ ನಡೆಸಲಾಗಿತ್ತು. ಹೃದಯ ಸಂಬಂಧಿ ತೊಂದರೆಗಳನ್ನು ಎದುರಿಸುತ್ತಿರುವ 36 ಜನರು ಹಾಗೂ 36 ಆರೋಗ್ಯವಂತ ವಯಸ್ಕರನ್ನು ಪ್ರಯೋಗಕ್ಕೆ ಅಳವಡಿಸಿ, ಅವರಿಬ್ಬರಿಗೂ ದಿನಾಲೂ ಒಂದು ಟೊಮೆಟೊ ಮಾತ್ರೆಯನ್ನು ಎರಡು ತಿಂಗಳು ನೀಡಲಾಗಿತ್ತು. ಬಳಿಕ ಸಂಗ್ರಹಿಸಲಾದ ಆರೋಗ್ಯ ತಪಾಸಣೆ ವರದಿಗಳನ್ನು ಅಧ್ಯಯನಗೊಳಪಡಿಸಿದಾಗ ಹೃದಯ ತೊಂದರೆ ಎದುರಿಸುತ್ತಿರುವ 36 ಜನರ ದೇಹದಲ್ಲಿ ರಕ್ತ ಚಲನೆ ಸರಾಗಗೊಂಡು ಅವರ ಆರೋಗ್ಯ ಸುಧಾರಿಸುವುದು ಕಂಡುಬಂದಿದೆ. ಆದಾಗ್ಯೂ ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆ ನಡೆಯಬೇಕಿದೆ ಎಂದು ಡಾ.ಜೋಸೆಫ್ ಚೆರಿಯಾನ್ ನೇತೃತ್ವದ ಸಂಶೋಧನಾ ತಂಡ ಹೇಳಿದೆ.

Return to "ಟೊಮೇಟೊ" page.