ಚರ್ಚೆಪುಟ:ಚೋಮನ ದುಡಿ

ಚೋಮನ ದುಡಿ ಕಾರಂತರ ಮುಖ್ಯ ಕಾದಂಬರಿಗಳಲ್ಲಿ ಒಂದು, ಈಗಾಗಲೇ ಚೋಮನ ದುಡಿ ಗೆ ಸಾಕಷ್ಟು ವಿಮರ್ಶೆಗಳು ಬಂದಿವೆ. ಆದರೆ ನನಗೆ ದುಡಿ ಕಾಣಿಸುವುದು ಹೀಗೆ ಚೋಮನ ಆ ದುಡಿ ಅವನ ದನಿ,ಧ್ವನಿ,ಮನದ ಮಿಡಿತ, ಅವನ ಅಳು, ಅವನ ನಗು, ಆಕ್ರೋಶ ಹೀಗೆ ಕಲ್ಪನೆಗೋ ಮೀರಿದ ಅರ್ಥಗಳನ್ನು ಬಿಂಬಿಸುತ್ತದೆ. ಕಾದಂಬರಿಯ ಮುಖ್ಯ ವಸ್ತುವೆ ಚೋಮ. ಅವನ ಅಸ್ತಿತ್ವ ಸ್ಥಾಪಿಸುವುದೆ ಕಾದಂಬರಿಯ ಮುಖ್ಯ ಅಂಶಗಳಲ್ಲಿ ಒಂದು.ತನ್ನ ಸಾಮಾಜಿಕ ಶ್ರೇಣಿಕೃತ ಸ್ಥಾನಮಾನದಲ್ಲೇ ತನ್ನನ್ನು ಗುರುತಿಸಿಕೊಳ್ಳುವ ಬಯಕೆ ಚೋಮನದು. ಜೊತೆಗೆ ಕೃಷಿಕನಾಗುವ ಕನಸು ಮತ್ತು ಮಕ್ಕಳ ಮೇಲಿನ ಅತಿಯಾದಂತಹ ಮೋಹ ಮತ್ತು ನಂಬಿಕೆ.ಈ ಎಲ್ಲವೂ ಭಗ್ನಗೊಂಡಾಗ ಅವನ ದುಡಿಯ ಬಡಿತ ಕೊನೆಯಾಗುತ್ತದೆ.ಅದು ಅ‌ಷ್ಟೆ ಅಲ್ಲದೆ ಒಬ್ಬ ವ್ಯಕ್ತಿಯ ಆಳದ ಅನುಭವದ ನೋವು ಎಂತದ್ದು ಎಂಬುದನ್ನು ತೋರಿಸಿಕೊಡುತ್ತದೆ.ಪ್ರತಿ ವ್ಯಕ್ತಿಯ ಮನಸ್ಸಿನಲ್ಲಿ ಒಬ್ಬ ಚೋಮ ಇರುತ್ತಾನೆ ಎಂಬುದು ನನ್ನ ಭಾವ.

Start a discussion about ಚೋಮನ ದುಡಿ

Start a discussion
Return to "ಚೋಮನ ದುಡಿ" page.