ಚರ್ಚೆಪುಟ:ಘಾಟ್ಕೋಪರ್

(() ೧೫:೩೮, ೨೨ ಜುಲೈ ೨೦೧೧ (UTC)) ಇದರಲ್ಲಿ ನಂಬಲರ್ಹವಲ್ಲದ ಸಂಗತಿಗಳು ಇಲ್ಲ.'ಬೊಂಬಾಯಿ' ಮೊದಲು ೭ ದ್ವೀಪಗಳ ಭೂಭಾಗವಾಗಿತ್ತು. ನಂತರ 'ಬ್ರಿಟಿಷ್ ಅಧಿಕಾರಿಗಳು' ನಿಧಾನವಾಗಿ ಮೊದಲು 'ದಕ್ಷಿಣ ಬೊಂಬಾಯಿ'ಗೆ ಸಮುದ್ರದಿಂದ ಭೂಭಾಗವನ್ನು ಆಕ್ರಮಿಸಿಕೊಂಡರು. ಆದರೆ ಅದು ಕೇವಲ ಕೆಲವು ಮೈಲಿಗಳಷ್ಟು ಮಾತ್ರ. ಆದ್ದರಿಂದ 'ಉತ್ತರ ಮುಂಬೈ'ಕಡೆ ನಗರವನ್ನು ವಿಸ್ತರಿಸುವುದು ಅನಿವಾರ್ಯವಾಯಿತು. ಇದಕ್ಕೆ ಪೂರಕವೆಂಬಂತೆ, ಆಗಿನ 'ಬೊಂಬಾಯಿನ ಗವರ್ನರ್' ಸಹಿತ ತಮ್ಮ ನಿವಾಸಸ್ಥಾನವನ್ನು 'ಪರೇಲ್ ವಲಯ'ಕ್ಕೆ ಸ್ಥಾನಾಂತರಿಸಿದರು. ಇದು ಉತ್ತರ ಧಿಶೆಯ ಕಡೆ ನಗರ ಬೆಳೆಯಲು ಒಂದು ಹೆಜ್ಜೆಯಾಯಿತು. ಇದೆಲ್ಲಾ ನಿಜ. 'ಘಾಟ್ಕೊಪರ್' ಅಂತೂ 'ಸಯಾನ್' ಗಿಂತ ಮುಂದೆ ಉತ್ತರ ದಿಕ್ಕಿನ ಕಡೆ ಇದೆ. ನಾನು ಮುಂಬೈನಲ್ಲಿ ಸುಮಾರು ೪೬ ವರ್ಷಗಳಿಂದ ಇದ್ದೇನೆ. ಘಾಟ್ಕೊಪರ್ ಉಪನಗರವನ್ನು ಹತ್ತಿರದಿಂದ ಕಂಡಿದ್ದೇನೆ.'ಬಾಂಬೆ ದ ಸಿಟಿ ವಿದಿನ್' ಎಂಬ ಇತಿಹಾಸಜ್ಞೆ 'ಶಾರದಾ ತ್ರಿವೇದಿ' ಯವರ ಸಚಿತ್ರ-ಪುಸ್ತಕವನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದೇನೆ. ಮುಂಬೈಬಗ್ಗೆ ಅಧಿಕೃತವಾಗಿ ನಿಮಗೆ ಏನಾದರೂ ಗೊತ್ತಾಗಬೇಕಾದರೆ ಖಂಡಿತ ಮೇಲೆ ತಿಳಿಸಿದ ಪುಸ್ತಕವನ್ನು ಪಠಿಸಿ.

Start a discussion about ಘಾಟ್ಕೋಪರ್

Start a discussion
Return to "ಘಾಟ್ಕೋಪರ್" page.