ಸರಿಪಡಿಸಿ ಬದಲಾಯಿಸಿ

ಅವ್ಯವಸ್ಥೆ ಮತ್ತು ಪುನರುಕ್ತಿ ಮತ್ತು ಅನವಶ್ಯ ವಿವರಗಳಿವೆ. ಕೆಲವನ್ನು ಕೆಳಗೆ ಪಠ್ಯದಿಂದ ತೆಗೆದು ಹಾಕಿದೆ. ಮೋರಿಗಾವ್ ಜಿಲ್ಲೆ

 ಡಿಸ್ಪುವರ ದಿಂದ ೭೮ ಕಿಮಿ ದೂರವಿರುವ ಈ ಜಿಲ್ಲೆಯಲ್ಲಿ ವಿಶೇಷಗಳೇನೂ ಇಲ್ಲ.ಇಲ್ಲಿ ಕಚಶಿಲಾ,ದಿಯೋಸಾಲ್,ಸೀತಾಜಖಲಾ ಮತ್ತು ಶಿವ ಕುಂಡ ಮುಂತಾದ ದೇವಾಲಯಗಳಿವೆ. ಇವು ತಮ್ಮ ಪುರಾತನ ಐತಿಹ್ಯಕ್ಕಾಗಿ ಪ್ರಸಿದ್ದವಾಗಿವೆ.
 ಪಬಿತೋರಾ ಅಭಯಾರಣ್ಯ
 ಹಿಂದೆ ಆಳಿದ ಮಯೋಂಗ್ ಅರಸ ಅಕಾಲಿಕ ಮರಣಕ್ಕೊಳಗಾದ ತನ್ನ ಮಗಳ ಸ್ಮರಾಣಾರ್ಥ ಇಲ್ಲಿ ಅರಣ್ಯವನ್ನು ನಿರ್ಮಿಸಿದ.೧೯೭೧ ರಲ್ಲಿ ಈ ಅರಣ್ಯವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಯ್ತು. ರಾಷ್ಟ್ರೀಯ ಹೆದ್ದಾರಿ-೩೭ ರಿಂದ ೧೭ ಕಿಮಿ ದೂರವಿರುವ ಇಲ್ಲಿ ಕಾಡೆಮ್ಮೆಗಳು,ಕಾಡು ಹಂದಿಗಳು ಮತ್ತು ಒಂಟಿ ಕೊಂಬಿನ ಘೇಂಡಾಮೃಗಗಳು ವಾಸಿಸುತ್ತವೆ.
 ನಾಗಾಂವ್ ಜಿಲ್ಲೆ
 ಮಧ್ಯ ಅಸ್ಸಾಂ‍ನಲ್ಲಿರುವ ಈ ಜಿಲ್ಲೆ ಅಸ್ಸಾಂ ರಾಜ್ಯದ ಭತ್ತದ ಬೋಗುಣಿ ಎಂದು ಹೆಸರಾಗಿದೆ.ಇಲ್ಲಿ ಹತ್ತಾರು ಪುರಾತನ ದೇವಾಲಯಗಳಿವೆ.
 ಬಾರ್ಡೋವಾ
 ಮಹಾಪುರುಷ ಶ್ರೀ ಮಾತ ಶಂಕರದೇವನ ಜನ್ಮಸ್ಥಳ.ಇದು ನಾಗಾಂವ್ ನಿಂದ ೧೮ ಕಿಮಿ ದೂರವಿದೆ.ಇಲ್ಲಿ ನರೋವಾ ಮತ್ತು ಸಲಗುರಿ ಸತ್ರಗಳಿವೆ. ಈ ಸತ್ರಗಳಲ್ಲಿ ಶಂಕರದೇವನ ಜನ್ಮದಿನ ಮತ್ತು ಪುಣ್ಯತಿಥಿಗಳನ್ನು ಭಕ್ತಿ ಮತ್ತು ಶ್ರದ್ಧೆಗಳಿಂದ ಆಚರಿಸಲಾಗುತ್ತದೆ.
 ಲೊಖೋವಾ ಅಭಯಾರಣ್ಯ
 ೭೦ ಚದರ ಕಿಮಿ ವಿಸ್ತಾರ ಇರುವ ಇಲ್ಲಿ ಘೇಂಡಾಮೃಗಗಳು,ಕಾಡೆಮ್ಮೆ ,ಚಿರತೆಗಳು ,ಜಿಂಕೆಗಳು ವಾಸಮಾಡುತ್ತವೆ.
 ಇಲ್ಲಿನ ರಂತಾಲಿ ಮತ್ತು ಜಮುನಾ ಮುಖಗಳಲ್ಲಿ ಸಾಂಪ್ರದಾಯಿಕ ಒಡವೆ,ಲೋಹದ ಮತ್ತು ಮಣ್ಣಿನ ವಸ್ತುಗಳನ್ನು ತಯಾರಿಸಲಾಗುತ್ತದೆ.ಮಹಾಭೈರವ ದೇವಾಲಯ ಮತ್ತು ಚಂಪಾವತಿ ಕುಂಡ ಪ್ರವಾಸಿ ಸ್ಥಳಗಳು.ನಾಗಾಂವ್ನಮಲ್ಲಿ ಮೈಲ್ಸ್ ಬ್ರೋನ್ಸನ್ ಎಂಬ ಕ್ರೈಸ್ತ ಮಿಶನರಿ ಸ್ಥಾಪಿಸಿದ ವಿದ್ಯಾಸಂಸ್ಥೆಗಳು ಸಾಕಷ್ಟಿವೆ.ರಾಹ ದಲ್ಲಿ ಮೀನುಗಾರಿಕಾ ಕಾಲೇಜಿದೆ.
 ಡರಾಂಗ್ ಜಿಲ್ಲೆ
 ಮಧ್ಯ ಅಸ್ಸಾಂ‍ನಲ್ಲಿರುವ ಈ ಜಿಲ್ಲೆಯಲ್ಲಿದೇವಾಲಯಗಳು ಮತ್ತು ರಾಷ್ಟ್ರಿಯ ಪಾರ್ಕುಗಳು ಇವೆ.ಗೌಹಾಟಿಯಿಂದ ೭೭ ಕಿಮಿ ಮತ್ತು ತೇಜ್ಪುಬರದಿಂದ ೧೧೦ ಕಿಮಿ ದೂರವಿದೆ.ಡರಾಂಗ್ಗೆಮ ಹತ್ತಿರದ ವಿಮಾನ ನಿಲ್ದಾಣ ಗೌಹಾಟಿ. ಡರಾಂಗ್‍ ಎಂದರೆ ಬೋಡೋ ಭಾಷೆಯಲ್ಲಿ ದೇವರ ಆಟದ ಮೈದಾನ ಎಂದು.ಇಲ್ಲಿ ಕಾಡುಗಳು ಅದೇ ಭಾವನೆ ಉಂಟುಮಾಡುತ್ತವೆ.ಜಿಲ್ಲಾ ಕೇಂದ್ರ ಮಂಗಲ್ದಾನಯ್.
ದೇವಾಲಯಗಳು ಮತ್ತು ಪ್ರವಾಸಿ ವಿಶೇಷಗಳು
 ಕಾಮಾಕ್ಯ ಮಾತೆಯ ಮಂದಿರವಿದೆ.ಬಮನ್ ಕಾಳಿ ಮಂದಿರ ಮತ್ತು ಎರಡು ಪುರಾತನ ಮಸೀದಿಗಳಿವೆ.ಗಾಂಧಿ ಸ್ಮೃತಿ ಪಾರ್ಕ್, ಪತರೂ ಘಾಟ್ ಮತ್ತು ಹುತಾತ್ಮರ ಮಿನಾರ್ ನೋಡತಕ್ಕ ಸ್ಠಳಗಳು.ಇಲ್ಲಿನ ತಮೇಶ್ವರ ದೇವಾಲಯ ಸುಮಾರು ಹನ್ನೆರಡನೇ ಶತಮಾನದ್ದು. ಬಹಳಹಿಂದೆ ಇಲ್ಲಿ ನರಬಲಿ ನಡೆಯುತ್ತಿತ್ತೆಂದು ಹೇಳಲಾಗುತ್ತದೆ.
 ಓರಾಂಗ್ ರಾಷ್ಟ್ರೀಯ ಪಾರ್ಕ್ ಗೌಹಾತಿಯಿಂದ ೭೦ ಕಿಮಿ ಇದ್ದು ಈ ಪಾರ್ಕನ್ನು ಮಿನಿ ಕಾಜಿರಂಗ ಎಂದು ಕರೆಯಲಾಗುತ್ತದೆ.ಬರಾಂಡಿ ಅಭಯಾರಣ್ಯ ಕೂಡಾ ಇದ್ದು ಇಲ್ಲಿ ಅನೇಕ ಪಕ್ಷಿ ಮತ್ತು ಪ್ರಾಣಿಗಳನ್ನು ನೋಡಬಹುದು.ಬಾತಬೀಲ್ ಮತ್ತು ಪುಕುರಿಯಾ ಬೀಲ್ ಕೆರೆಗಳು ಸಹಾ ಅನೇಕಾ ಪಕ್ಷಿಗಳಿಗೆ ಆಶ್ರಯ ತಾಣವಾಗಿವೆ. ಮತ್ತೊಂದು ಅಭಯಾರಣ್ಯ ಸೊನೈ-ರುಪ್ಪೈ ಅಭಯಾರಣ್ಯ ಕೂಡ ಈ ಜಿಲ್ಲೆಯಲ್ಲಿದೆ.
 
  • ಈ ಜಿಲ್ಲೆ ಸ್ಥಳೀಯರಾದ ಬೋಡೋಗಳ ಬಾಗುರುಂಬ ನೃತ್ಯ,ಖೇರೈ ನೃತ್ಯ, ಬಾರ್ದೋಸಿಖಲಾ ನೃತ್ಯ,ರಣಚಂಡಿ ನೃತ್ಯ,ಖುಕಚೆ ನೃತ್ಯ ಮತ್ತು ಸಮಜಾರ್ ನೃತ್ಯಗಳಿಗೆ ಪ್ರಸಿದ್ದವಾಗಿದೆ.ಈ ನೃತ್ಯಗಳು ತಮ್ಮ ಆಂಗಿಕ ಅಭಿನಯ, ಮಾತು, ಪಾದಗಳ ಚಲನೆಗೆ ಪ್ರಸಿದ್ದವಾಗಿದೆ.
ಲಖೀಂಪುರ ಜಿಲ್ಲೆ
  • ಜಿಲ್ಲಾ ಕೇಂದ್ರ ಲಖಿಂಪುರ ಗೌಹಾಟಿಯಿಂದ ೩೯೬ ಕಿಮಿ ದೂರವಿದೆ.ಈ ಜಿಲ್ಲೆಯ ಜನಸಂಖ್ಯೆ ೭.೫೧ ಲಕ್ಷ(೨೦೦೧). ಇಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ. ಸ್ಥಳೀಯರು ಭತ್ತವನ್ನು ಲಖಿಮಿ ಎಂದು ಕರೆಯುತ್ತಾರೆ, ಪುರ ಎಂದರೆ ಪೂರ್ಣ ಎಂದರ್ಥ.ಈ ಜಿಲ್ಲೆಯನ್ನು ಆಡಳಿತದ ಅನುಕೂಲಕ್ಕಾಗಿ ಉತ್ತರ ಲಖಿಂಪುರ ಮತ್ತು ದಾಖುವಾಖಾನ ಎಂಬ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.ಇಲ್ಲಿನ ಸಣ್ಣ ಕಾಡುಗಳಲ್ಲಿ ಮೌಖನ್ ಮತ್ತು ಮೌಪಿಯ ಎಂಬ ಎರಡು ವಿಶೇಷ ಜಾತಿಯ ಪಕ್ಷಿಗಳು ವಾಸಿಸುತ್ತವೆ.
  • ಲಖಿಂಪುರದಲ್ಲಿ ಶ್ರೀಶ್ರೀ ಬಾಸುದೇವ ಥಾನ ಮತ್ತು ನರುವಾ ಸತ್ರಗಳು ನೋಡುವಂತಹವು.ನರುವಾ ಸತ್ರವನ್ನು ಶ್ರೀ ಮಾತ ಶಂಕರದೇವನ ಮೊಮ್ಮಗ ದಾಮೋದರ ಆತಾ ಸ್ಥಾಪಿಸಿದನು.ಇಲ್ಲಿ ವಿಶೇಷ ಸಂದರ್ಭಗಳಲ್ಲಿ ಸತ್ರ ಗೀತೆಗಳು ಮತ್ತು ಸತ್ರ ನೃತ್ಯಗಳಿಂದ ಭಗವನ್ ಸ್ಮರಣೆ ಮಾಡಲಾಗುತ್ತದೆ.
ಸೋನಿತ್ಪುರ ಜಿಲ್ಲೆ
 ಸೋನಿತ್ಪು ರ ಜಿಲ್ಲೆ ಎಂದು ಕರೆಯಲಾದರೂ ಇಲ್ಲಿನ ಜಿಲ್ಲಾ ಕೇಂದ್ರ ತೇಜ್‌ಪುರ.ಗೌಹಾಟಿಯಿಂದ ೧೮೧ ಕಿಮಿ ದೂರವಿದೆ.ತೇಜ್‌ಪುರ ಅಸ್ಸಾಂ‍ನ ಒಂದು ದೊಡ್ಡನಗರ.ಸೌಂದರ್ಯದ ನೆಲೆವೀಡಾದ ಇಲ್ಲಿ ಪಾರ್ಕುಗಳು,ಪುರಾತನ ಸ್ಮಾರಕಗಳು ಮತ್ತು ದೇವಾಲಯಗಳು ಸಾಕಷ್ಟಿವೆ.ಇಲ್ಲಿ ಸೋನಿತ್ಪುಲರ ಮತ್ತು ನಾಗಾಂವ್ ಜಿಲ್ಲೆಗಳನ್ನುಸಂಪರ್ಕಿಸಲು ಬ್ರಹ್ಮಪುತ್ರಾ ನದಿಯಮೇಲೆ ಸುಮಾರು ೩ ಕಿಮಿ ಉದ್ದದ ಸೇತುವೆಯನ್ನು ನಿರ್ಮಿಸಲಾಗಿದೆ. ಈ ಅದ್ಭುತ ಸೇತುವೆ ಕಂಡಾಗ ಉತ್ತರ ಕನ್ನಡ ಜಿಲ್ಲೆಗಳಲ್ಲಿ ನದಿದಾಟಲು ಜನ ಪಡುವ ಕಷ್ಟಗಳು ಕಣ್ಣಮುಂದೆ ಬರುತ್ತವೆ.ಈ ಜಿಲ್ಲೆಯ ಉತ್ತರಕ್ಕೆ ಅರುಣಾಚಲ ಪ್ರದೇಶದ ಗಡಿ ಇದೆ.ಪ್ರಸಿದ್ದ ಚೀನಾ ಯುದ್ದದದಲ್ಲಿ ಭಾರತದ ರಾಜಕೀಯ ನಿರ್ಧಾರಗಳಿಂದ ಸಾವಿರಾರು ಸೈನಿಕರ ಪ್ರಾಣ ಕಳೆದ ತವಾಂಗ್,ಬೊಮ್ಡಿಿಲಾ ತಲುಪಲು ಇಲ್ಲಿಂದಲೆ ತೆರಳಬೇಕು.ಆಗ ’ಹಿಮಾಲಯನ್ ಬ್ಲಂಡರ್’ ನೆನಪಾಗುತ್ತದೆ.ಈ ಜಿಲ್ಲೆಯಲ್ಲಿ ಸಾಕಷ್ಟು ಕೆರೆಗಳಿವೆ.ಇಲ್ಲಿನ ಕ್ರೂರಪಾದ ದೇವಾಲಯದಲ್ಲಿ ಪಾದದ ಗುರುತೊಂದು ಇದ್ದು ಇದು ಶಿವ ರುದ್ರ ನರ್ತನದಲ್ಲಿದ್ದಾಗ ಆದ ಶಿವನ ಪಾದದ ಗುರುತು ಎಂದು ಹೇಳಲಾಗುತ್ತದೆ.
 ಅಗ್ನಿಘರ್ ಸ್ಮಾರಕ
 ಇದು ಪ್ರೇಮಿಗಳ ಸ್ಮಾರಕ. ಸಲೀಮ್ ಮತ್ತು ಅನಾರ್ಕಲಿಯ ಕಥೆಯನ್ನು ನೆನಪಿಸುತ್ತದೆ.ಅರಸ ಬಾಣನ ಮಗಳಾದ ಉಷೆಯನ್ನು ಯಾದವ ಶ್ರೀ ಕೃಷನ ಮೊಮ್ಮಗ ಅನಿರುದ್ಧ ಪ್ರೇಮಿಸಿದಾಗ ಅದನ್ನು ಸಹಿಸದ ಅರಸ ಬಾಣ ಆಕೆಯನ್ನು ಒತ್ತಾಯದಿಂದ ಈ ಬೆಟ್ಟಕ್ಕೆ ಕರೆತಂದು ಆಕೆಯನ್ನು ಒಂದೆಡೆ ಕುಂಡದಲ್ಲಿ ಕೂರಿಸಿ ಸುತ್ತ ಬೆಂಕಿ ಹಚ್ಚಿದನೆಂದು ಹೇಳಲಾಗುತ್ತದೆ.ಅದರ ಕುರುಹಾಗಿ ಇಂದೂ ಸಹ ಅಲ್ಲಿ ಮಣ್ಣಿನ ಕುಂಡದಾಕಾರ ಇದೆ ಅದರ ಸುತ್ತ ಪ್ರೇಮಿಗಳ ಪ್ರತಿಮೆಗಳನ್ನು ನಿರ್ಮಿಸಲಾಗಿದೆ.ಇದು ನೋಡತಕ್ಕ ಸ್ಥಳ.ಇಲ್ಲಿ ರಾಷ್ಟೀಯ ಹೆದ್ದಾರಿ-೫೨ ಹಾದುಹೋಗುತ್ತದೆ.
 ಬಿಸ್ವನಾಥ್ ಘಾಟ್
 ಇದನ್ನು ಗುಪ್ತಕಾಶಿ ಎಂದು ಕರೆಯಲಾಗಿದೆ.ಈ ಪ್ರದೇಶ ತೇಜ್‌ಪುರದಿಂದ ೮೦ ಕಿಮಿದೂರವಿದೆ.ಇಲ್ಲಿ ಅನೇಕ ದೇವಾಲಯಗಳಿವೆ.ಈ ದೇವಾಲಯಗಳು ಬೇಸಗೆಯಲ್ಲಿ ನದಿ ನೀರಿನಿಂದ ಮುಳುಗಿ ಹೋಗುತ್ತವೆ. ಚಳಿಗಾಲದಲ್ಲಿ ಮಂಜು ಗಟ್ಟಿಯಾದಾಗ ಇವುಗಳ ಪೂಜೆ ನಡೆಯುತ್ತದೆ.ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದು ಬಿಸ್ವನಾಥ್ ಘಾಟ್ ಬಳಿಯ ಹೋಟೆಲುಗಳು ಮತ್ತು ತೇಜ್‌ಪುರ ಅವರನ್ನು ನಿಭಾಯಿಸುತ್ತವೆ.
 ಸಿಂಗ್ರಿ ದೇವಾಲಯ
 ಇದು ಬ್ರಹ್ಮಪುತ್ರಾ ನದಿಯ ತಟದಲ್ಲಿದೆ.ಈ ದೇವಾಲಯವನ್ನು ಕಾಳಿಕಾ ಪುರಾಣದಲ್ಲಿ ಶ್ರಿಂಗ್‌ಟಕ್ ಎಂದು ಹೆಸರಿಸಲಾಗಿದೆ.ಇಲ್ಲಿ ಶಿವಲಿಂಗವೊಂದಿದ್ದು ಅದು ನೀರಿನಲ್ಲಿ ಮುಳುಗಿದೆ ಹಾಗಾಗಿ ಅದನ್ನು ಗುಪ್ತೇಶ್ವರ ಎಂದು ಕರೆಯಲಾಗಿದೆ.ಇಲ್ಲಿ ಶಿವರಾತ್ರಿಯ ಸಂದರ್ಭದಲ್ಲಿ ಭಕ್ತಾದಿಗಳ ಜಾತ್ರೆ ನೆರೆಯುತ್ತದೆ.
 ನಾಗಶಂಕರ
 ತೇಜ್‌ಪುರದ ಪೂರ್ವಕ್ಕಿರುವ ಈ ದೇವಾಲಯವನ್ನು ಕ್ರಿ.ಶ.೪ ನೇ ಶತಮಾನದಲ್ಲಿನಾಗಖ ವಂಶದ ಅರಸ ನರಶಂಕರ ನಿರ್ಮಿಸಿದ ಎನ್ನಲಾಗಿದೆ.ದೇವಾಲಯದ ಬಳಿ ಕೊಳವೊಂದಿದ್ದು ಅಲ್ಲಿ ಮೃದು ಚಿಪ್ಪಿನ ಆಮೆಗಳು ಮತ್ತು ಮರಗಳಲ್ಲಿ ಸುಂದರ ಗಿಳಿಗಳು ವಾಸಿಸುತ್ತವೆ.
 ನಮೇರಿ ರಾಷ್ಟ್ರೀಯ ಉದ್ಯಾನವನ
 ತೇಜ್‌ಪುರದಿಂದ ೪೦ ಕಿಮಿ ದೂರವಿದೆ.ಈ ಪ್ರದೇಶ ೨೧೨ ಚದರ ಕಿಮಿ ವಿಸ್ತಾರವಾಗಿದೆ.ಇಲ್ಲಿ ಹುಲಿ,ಆನೆಗಳುವಾಸಿಸುತ್ತವೆ.ಇಲ್ಲಿನ ನದಿ ಜಯ ಬರಾಲಿಯಲ್ಲಿ ವಿಶೇಷ ಜಾತಿಯ ಮೀನುಗಳು ವಾಸಮಾಡುತ್ತವೆ.ವೈಟ್ ವಾಟರ್ ರಾಫ಼್ಟಿಂಗ್ ಆನೆಸವಾರಿ ಮತ್ತು ಔಷದೀಯ ಸಸ್ಯಗಳ ವೀಕ್ಷಣೆಗೆ ಅವಕಾಶವಿದೆ.ಇಲ್ಲಿ ಸಾಕಷ್ಟು ಸತ್ರಗಳು ಇವೆ. ಈ ಉದ್ಯಾನವನದಲ್ಲಿ ಎಕೋ-ಕ್ಯಾಂಪ್‌ಗಳನ್ನು ಏರ್ಪಡಿಸಲಾಗುತ್ತದೆ.ಕಾಜಿರಂಗ ವನ್ಯಧಾಮ ಪಕ್ಕದಲ್ಲೆ ಇದೆ.ಇಲ್ಲಿ ಮತ್ತೊಂದೆಡೆ ಬುರಾ ಚುಪಾರಿ ಮತ್ತು ಸೋನೈ-ರುಪೈ ಪಕ್ಷಿಧಾಮಗಳಿವೆ.
 ಕಾರ್ಬಿ ಆಂಗ್ಲಾಂತಗ್ ಜಿಲ್ಲೆ
 ದಕ್ಷಿಣ ಅಸ್ಸಾಂ‍ನಲ್ಲಿರುವ ಈ ಜಿಲ್ಲೆ ತನ್ನ ಅದ್ಭುತ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿದೆ.ಇಳಿಜಾರು ಬೆಟ್ಟಗಳು,ದಟ್ಟಕಾಡುಗಳು,ಹರಿಯುವ ಜಲಪಾತಗಳು ಇಲ್ಲಿವೆ.ಇಲ್ಲಿ ಅಮರಾಂಗ್, ಖಾಂದುಲಿ,ಉಮ್ವಾಂೆಗ್ ಮತ್ತುಕೊಹೋರ ಪ್ರವಾಸಿ ಕೇಂದ್ರಗಳು.ಈ ಪ್ರವಾಸಗಳನ್ನು ಏರ್ಪಡಿಸಿಕೊಳ್ಳಲು ಅಕ್ಟೋಬರ್‌ನಿಂದ ಮಾರ್ಚ್ ಸೂಕ್ತಕಾಲ.ತಾರಾಲಾಂಗ್ಸೋದ ಸಾಂಸ್ಕೃತಿಕ ಕೇಂದ್ರ ಇದೆ.
 ಟ್ರೆಕ್ಕಿಂಗ್
 ೧೬೦೦ ಮೀಟರು ಎತ್ತರವಿರುವ ಇಲ್ಲಿನ ಬೆಟ್ಟಗಳಲ್ಲಿ ಟ್ರೆಕ್ಕಿಂಗ್ ಏರ್ಪಡಿಸಲಾಗುತ್ತದೆ.ಹಾದಿಯಲ್ಲಿ ಕಾಣುವ ಸುಂದರ ಜಲಪಾತಗಳು,ಕಾಡು ಪ್ರಾಣಿಗಳು,ಬೊಗಳುವ ಜಿಂಕೆಗಳು,ಹಂದಿಗಳು,ಕೋತಿಗಳು ಮತ್ತು ನಾನಾ ಜಾತಿಯ ಪಕ್ಷಿಗಳು ಸುಂದರ ಅನುಭವ ನೀಡುತ್ತವೆ. ಇದೆ ಅಲ್ಲದೆ ಇಲ್ಲಿ ಪ್ಯಾರಾ ಗ್ಲೈಡಿಂಗ್,ರಿವರ್ ರಾಫ಼್ಟಿಂಗ್ ಮತ್ತು ಟ್ರೆಕ್ಕಿಂಗ್ಗಸಳನ್ನು ಏರ್ಪಡಿಸಲು ನುರಿತ ಪ್ರೊಫ಼ೆಶನಲ್ ಸಂಸ್ಥೆಗಳೇ ಇವೆ.ಈ ಕಾರ್ಯಕ್ರಮಗಳನ್ನು ನವೆಂಬರ್ ತಿಂಗಳ ನಂತರ ಏರ್ಪಡಿಸಲಾಗುತ್ತದೆ.ಫ಼ೆಬ್ರವರಿಯಲ್ಲಿ ಸಾಂಸ್ಕೃತಿಕ ಹಾಗು ಜಾನಪದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಈ ಜಿಲ್ಲೆಯಲ್ಲಿ ಇರುವ ಸಿಂಹಾಸನ ಬೆಟ್ಟದ ಮೇಲೆ ಎರಡನೇ ವಿಶ್ವಯುದ್ಧ ಸಂದರ್ಭದಲ್ಲಿ ನಿರ್ಮಿಸಲಾದ ಒಂದು ಏರ್ ಸ್ಟ್ರಿಪ್ ಇದೆ.ಇದು ಇಂದಿಗೂ ಸಹ ಸುಸ್ಥಿತಿಯಲ್ಲಿದೆ.ಈಗ ಇದನ್ನು ಪ್ಯಾರಾ ಗ್ಲೈಡಿಂಗ್ಗಾಳಗಿ ಉಪಯೋಗಿಸಿಕೊಳ್ಳಲಾಗುತ್ತಿದೆ. ಇಲ್ಲಿ ಬೊಟಾನಿಕಲ್ ಗಾರ್ಡನ್ ಇದೆ. ಆರ್ಬೊರೇಟಂ ಎಂಬ ಪಿಕ್ನಿ್ಕ್ ಸ್ಥಳ ಇದ್ದು ಅಬಿವೃದ್ದಿ ಪಡಿಸಲಾಗಿದೆ.
 ತಾರಾಲಾಂಗ್ನಗಲ್ಲಿ ಸಾಂಸ್ಕೃತಿಕ ಕೇಂದ್ರ ಇದೆ.ಇಲ್ಲಿ ಆಂಫ಼ಿಥಿಯೇಟರ್ ಮತ್ತು ಓಪನ್ ಅಡಿಟೊರಿಯಮ್ ಇದೆ.ಇಲ್ಲಿ ಪ್ರತೀ ವರ್ಷ ಫ಼ೆಬ್ರವರಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.
 ಉತ್ತರ ಕಾಚಾರ್ ಬೆಟ್ಟಗಳ ಜಿಲ್ಲೆ
 ಈ ಜಿಲ್ಲೆ ದಕ್ಷಿಣ ಅಸ್ಸಾಂ‍ನಲ್ಲಿದೆ.ಬೊರಾಲಿ ಬೆಟ್ಟ ಶ್ರೇಣಿಗಳನ್ನು ಮತ್ತು ತುಮ್ಜಂೇಗ್ ಬೆಟ್ಟಗಳನ್ನು ಹೊಂದಿದ ಈ ಪ್ರದೇಶವನ್ನು ಪಶ್ಚಿಮ ಭಾರತದ ಸ್ವಿಟ್ಜರ್ಲ್ಯಾಂಡ್ ಎಂದೂ ಮ್ಯಾಜಿಕ್ ಐಲ್ಯಾಂಡ್ ಎಂದೂ,ಹಸಿರು ಸ್ವರ್ಗ ,ದೇವರ ಚಿತ್ರ ಪಟ ಎಂದೆಲ್ಲಾ ಕರೆಯಲಾಗುತ್ತದೆ.ಅಷ್ಟು ಸುಂದರ ಪ್ರಾಕೃತಿಕ ಸೌಂದರ್ಯವನ್ನು ಈ ಜಿಲ್ಲೆ ಹೊಂದಿದೆ.ಹಾಫ಼್ಲಾಂಗ್ ಜಿಲ್ಲಾ ಕೇಂದ್ರ.ಗೌಹಾಟಿಯಿಂದ ಇಲ್ಲಿಗೆ ೩೪೫ ಕಿಮಿ ದೂರವಿದೆ.
 ಹಾಫ಼್ಲಾಂಗ್
 ಅಸ್ಸಮ್ನಂ ಪ್ರಕೃತಿ ಸೌಂದರ್ಯದ ನೆಲೆವೀಡು ಇದು.ಇಲ್ಲಿ ಪ್ರಕೃತಿ ದೇವಿ ತನ್ನೆಲ್ಲ ಚೆಲುವನ್ನು ಆರಾಧಕರಿಗಾಗಿ ತೆರೆದಿಟ್ಟಿದ್ದಾಳೆ.ಕಣ್ಣು ಹಾಯಿಸಿದಲ್ಲೆಲ್ಲಾ ಕಾಣುವ ಹಸಿರು ಭೂಮಿ ಆಕಾಶಗಳನ್ನು ಒಂದುಮಾಡುತ್ತದೆ.ಈ ಪ್ರದೇಶದಲ್ಲಿ ಹೆಚ್ಚಾಗಿ ಕಿತ್ತಳೆ ಬೆಳೆಯಲಾಗುತ್ತದೆ. ಇಲ್ಲಿನ ಬೊರಾಲಿ ಬೆಟ್ಟಗಳಲ್ಲಿ ಟ್ರೆಕ್ಕಿಂಗ್ ಏರ್ಪಡಿಸಲಾಗುತ್ತದೆ.ವಿಶೇಷ ಸಂದರ್ಭಗಳಲ್ಲಿ ಸಾಂಪ್ರದಾಯಿಕ ಮತ್ತು ಆದಿವಾಸಿ ನೃತ್ಯಗಳನ್ನು ಏರ್ಪಡಿಸಲಾಗುತ್ತದೆ.ಉಮರಾಂಗ್ ಸೋ ಬಿಸಿನೀರ ಬುಗ್ಗೆ ಮತ್ತು ಪಾನಿಮೂರ್ ಜಲಪಾತ ಸುಂದರವಾಗಿವೆ.ಇಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳಲು ಸಾಕಷ್ಟು ಅನುಕೂಲಗಳಿವೆ.
 ಜಟಿಂಗಾ
 ಹಾಫ಼್ಲಾಂಗ್ನಿಂವದ ೯ ಕಿಮಿ ದೂರವಿರುವ ಈ ಪ್ರದೇಶ ತನ್ನ ನಿಗೂಢತೆಗೆ ಹೆಸರುವಾಸಿಯಾಗಿದೆ.ಆಗಸ್ಟ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಮಾತ್ರ ಕಾಣಸಿಗುವ ಈ ಪ್ರಕೃತಿ ವೈಚಿತ್ರವನ್ನು ಕಾಣಲು ದೇಶ-ವಿದೇಶಗಳಿಂದ ನೂರಾರು ಪ್ರವಾಸಿಗಳು ಮತ್ತು ವಿಜ್ನಾನಿಗಳು ಬರುತ್ತಾರೆ.ಇಲ್ಲಿ ಬೆಳಗಿನ ವೇಳೆ ಇದ್ದಕ್ಕಿದ್ದಂತೆ ಹಾರಿ ಬರುವ ಪಕ್ಷಿಗಳ ಗುಂಪು ಇಲ್ಲಿನ ಬೆಟ್ಟಗಳ ನಡುವೆ ಕಣಿವೆಯಲ್ಲಿ ಮೇಲೆ ಹಾರುತ್ತಾ ಇದ್ದಕ್ಕಿದ್ದಂತೆ ಹಾರುವುದನ್ನು ಮರೆತಹಾಗೆ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತವೆ.ಈ ಹರಾಕಿರಿಗೆ ಈ ವರೆಗೆ ಕಾರಣ ತಿಳಿದಿಲ್ಲ. ಇತರ ಪ್ರದೇಶಗಳಿಂದ ವಲಸೆ ಬಂದ ಪಕ್ಷಿಗಳು ಇದಕ್ಕೆ ಹೊರತಾಗಿಲ್ಲ.ಈ ವಿಸ್ಮಯವನ್ನು ನೋಡಲು ಒಂದು ವೀಕ್ಷಣಾ ಗೋಪುರವನ್ನು ಸ್ಥಾಪಿಸಲಾಗಿದೆ.ಪಕ್ಷಿ ಶಾಸ್ತ್ರಜ್ನರು ಇಲ್ಲಿ ಸದಾ ತುಂಬಿರುತ್ತಾರೆ.
 ಈ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ.ಪಕ್ಷಿಗಳು ಕಣಿವೆಯಿಂದ ಬರುವ ಬೆಳಗಿನ ಸೂರ್ಯನ ಬೆಳಕಿನ ಪ್ರಭಾವಕ್ಕೆ ಒಳಗಾಗಿ ಕಣ್ಣು ಕಾಣದೆ ಕೆಳಗೆ ಬಿದ್ದು ಸಾಯುತ್ತವೆಂದು ಹೇಳಲಾಯ್ತು.ಇದನ್ನು ಪರಿಶೀಲಿಸಲು ಇತರೆಡೆಯಿಂದ ಸುಮಾರು ಒಂದೂವರೆ ಕಿಮಿ ಉದ್ದ ಮತ್ತು ೨೦೦ ಮೀಟರು ಅಗಲದ ಕೃತಕ ಬೆಳಕನ್ನು ಹಾಯಿಸಲಾಯ್ತು.ಆದರೂ ಈ ವಿಚಿತ್ರ ಮುಂದುವರೆದಿತ್ತು.ಪಕ್ಷಿಗಳನ್ನು ಇತರೆಡೆಗೆ ಆಕರ್ಷಿಸುವ ಯತ್ನವೂ ಸಫ಼ಲವಾಗಲಿಲ್ಲ.ಮತ್ತೊಂದು ವಾದದಂತೆ ಈ ಪಕ್ಷಿಗಳು ಸ್ವಂತ ಇಚ್ಚೆಯಿಂದ ಸಾಯುವುದಿಲ್ಲ ಮಂಜು ಮುಸುಕಿದಾಗ ದಾರಿ ಕಾಣದೆ,ಹಾರಾಟ ಸಾಧ್ಯವಾಗದೆ ಮರ,ಕಲ್ಲುಗಳಿಗೆ ಡಿಕ್ಕಿ ಹೊಡೆದು ಸಾಯುತ್ತವೆ.ಆದರೆ ಇದಕ್ಕೂ ನಿರ್ದಿಷ್ಟ ಕಾರಣ ಮತ್ತು ಆಧಾರ ಇಲ್ಲ.
 ಇಲ್ಲಿಗೆ ಸುಮಾರು ೪೪ ವಿಧಗಳ ಪಕ್ಷಿಗಳು ಅದರಲ್ಲೂ ಸ್ಥಳಿಯ ಪಕ್ಷಿಗಳೇ ಹೆಚ್ಚಾಗಿ ಬರುತ್ತವೆ. ಇವು ಸೂರ್ಯ ಉದಯಿಸುವ ದಿಕ್ಕಿನೆಡೆಯಿಂದ ಬರುವ ಪ್ರಖರ ಬೆಳಕಿನ ಕಡೆ ಹಾರುತ್ತಾ ನಿಶ್ಯಕ್ತವಾಗಿ ಕುಸಿದು ಬಿದ್ದು ಸಾಯುತ್ತವೆ.ಇಂತಹಾ ಘಟನೆ ಈ ಪಕ್ಷಿಗಳು ಮೊಟ್ಟೆ ಇಡುವ ಕಾಲದಲ್ಲೇ ಸಂಭವಿಸುತ್ತವೆ.ಇದು ಬಹುತೇಕ ಕಾಕತಾಳಿಯವಿರಬಹುದು ಅಥವಾ ಅವು ತಮ್ಮ ಸಂಖ್ಯೆಯನ್ನು ಕಡಮೆ ಮಾಡಿಕೊಳ್ಳುವ ಸಹಜ ವಿಧಾನವಿರಬಹುದು.
 ಈ ವಿಚಿತ್ರವನ್ನು ಕಂಡು ಅಭ್ಯಸಿಸಿದ ಪ್ರಖ್ಯಾತ ಪಕ್ಷಿ ಶಾಸ್ತ್ರಜ್ನ ಡಾ.ಸಲಿಂ ಆಲಿಯವರು ಮತ್ತು ಡಾ.ಎಸ್.ಸೇನ್ಗು್ಪ್ತಾ ರವರೂ ಸಹ ಕರಾರುವಾಕ್ಕಾಗಿ ವಿವರಿಸಲು ಸಾಧ್ಯವಾಗಲಿಲ್ಲ.ಹಾಗಾಗಿ ಈ ವೈಚಿತ್ರ್ಯ ಇಂದಿಗೂ ರಹಸ್ಯವಾಗೇ ಉಳಿದಿದೆ.
 ಕಾಚಾರ್ ಜಿಲ್ಲೆ
 ಇದು ಅಸ್ಸಾಮಿನ ಪ್ರಮುಖ ಜಿಲ್ಲೆ.ಇಲ್ಲಿ ಮಿಜೋರಾಂ‍ನ ಗಡಿ ಇದೆ.ಇಲ್ಲಿ ಆಳ್ವಿಕೆ ನಡೆಸುತ್ತಿದ್ದ ಕಚಾರ್ ವಂಶಸ್ಥರಿಂದ ಕಾಚರ್ ಎಂಬ ಹೆಸರು ಬಂದಿದೆ ಎನ್ನಲಾಗಿದೆ.ಇವರ ನಂತರ ಸ್ಥಳೀಯ ಅರಸರು ಈ ಪ್ರದೇಶವನ್ನು ಆಳಿದರು.ತದನಂತರ ಬ್ರಿಟೀಶರ ವಶಕ್ಕೆ ಈ ಪ್ರದೇಶ ಬಂದಿತು.
 ಸಿಲ್ಚಾಸರ್ ಈ ಜಿಲ್ಲೆಯ ಮುಖ್ಯ ಪ್ರದೇಶ.ಇದು ಈ ರಾಜ್ಯದ ಮುಖ್ಯ ವ್ಯಾಪಾರ ಸ್ಥಳವೂ ಹೌದು.ಇಲ್ಲಿ ಒಂದು ವೈದ್ಯಕೀಯ ಕಾಲೇಜು ಮತ್ತು ರೀಜನಲ್ ಎಂಜಿನೀರಿಂಗ್ ಕಾಲೇಜು ಇವೆ.ಟೀವಿ ಮತ್ತು ರೇಡಿಯೋ ಕೇಂದ್ರಗಳು ಇವೆ.ಪ್ರವಾಸಿ ಸ್ಥಳಗಳು ಯಾವುವೂ ಇಲ್ಲಿ ಇಲ್ಲ.
 ಕರೀಂಗಂಜ್ ಜಿಲ್ಲೆ
 ಅಸ್ಸಾಂನ ಪ್ರಮುಖ ವ್ಯಾಪಾರ ಸ್ಥಳ. ಕುಶಿರ್ ನದಿ ಪಕ್ಕದಲ್ಲೆ ಹರಿಯುತ್ತದೆ.ಗೌಹಾಟಿಯಿಂದ ೩೩೨ ಕಿಮಿ ದೂರವಿದೆ.ಬದಿಯಲ್ಲೇ ಬಾಂಗ್ಲಾ ದೇಶದ ಗಡಿ. ಇದರಿಂದ ಬಾಂಗ್ಲಾ ಅರಸರ ಆಳ್ವಿಕೆಯಲ್ಲಿ ಸ್ವಲ್ಪ ಕಾಲವಿತ್ತು.ಇಲ್ಲಿನ ಜನಸಂಖ್ಯೆ ೧೦.೦೩ ಲಕ್ಷ.
 ಇಲ್ಲಿ ಕುಶಿಯಾರ,ಲೋಂಗಾಯ್,ಸಿಂಗ್ಲ ಮತ್ತು ಬರಾಕ್ ಮುಖ್ಯ ನದಿಗಳು.ಇಲ್ಲಿ ಪ್ರವಾಸಿ ಕೇಂದ್ರಗಳು ಯಾವುವೂ ಇಲ್ಲ.
 ಹೈಲಾಕಂಡಿ ಜಿಲ್ಲೆ
 ಇದೊಂದು ಪುರಾತನ ಜಿಲ್ಲೆ. ಹೈಲಾಕಂಡಿ ಎಂದರೆ ಬೋಡೊ ಕಚಾರಿ ಭಾಷೆಯಲ್ಲಿ ಉಳುವ ಜಮೀನು ಎಂದು. ಇಲ್ಲಿ ಶೇ.೫೦ ಪ್ರದೇಶ ರಕ್ಷಿತಾರಣ್ಯವಿದೆ.ಒಂದು ಭಾಗದಲ್ಲಿ ಮಿಜೋರಾಂ ರಾಜ್ಯದ ಗಡಿ ಇದೆ.ಇಲ್ಲಿ ೫.೪೨ ಲಕ್ಷ ಜನಸಂಖ್ಯೆ ಇದೆ(೨೦೦೧). ಇಲ್ಲಿ ಸುಮಾರು ೪೦೦ ಹಳ್ಳಿಗಳಿವೆ.ಭತ್ತ ಪ್ರಮುಖ ಬೆಳೆ.ಸಾಕ್ಷರತಾ ಪ್ರಮಾಣ ಶೇ.೫೯ ಇದೆ. ಲಕ್ಷಾಂತರ ಕೂಲಿ ಕಾರ್ಮಿಕರು ಇಲ್ಲಿನ ಟೀ ತೋಟಗಳಲ್ಲಿ ಕೆಲಸ ಮಾಡುತ್ತಾ ತಮ್ಮ ಜೀವನೋಪಾಯ ಕಂಡು ಕೊಂಡಿದ್ದಾರೆ. ಇಲ್ಲಿನ ಜನ ಸಾಂದ್ರತೆ ಪ್ರತಿ ಚದರ ಕಿಮಿಗೆ ೪೫೦ ಇದೆ. ಇಲ್ಲಿ ಮಾತನಾಡುವ ಭಾಷೆ ಬೆಂಗಾಲಿ. ಈ ಜಿಲ್ಲೆಯಲ್ಲಿ ಪ್ರವಾಸಿ ಕೇಂದ್ರಗಳು ಯಾವುವೂ ಇಲ್ಲ.
ಬಕ್ಸಾ ಜಿಲ್ಲೆ 
ಒಂದು ಸಾಮಾನ್ಯ ಜಿಲ್ಲೆ.ಮುಶಾಲ್ ಪುರ ಜಿಲ್ಲಾ ಕೇಂದ್ರ.ಬದಿಯಲ್ಲೇ ಭೂತನ್ ಗಡಿ ಇದೆ.ಇಲ್ಲಿ ನೋಡುವಂತಹ ಸ್ಥಳಗಳು ಮಾನಸ್ ರಕ್ಷಿತಾರಣ್ಯ (೪೫ ಕಿಮಿ),ಕೋಕಿಲಾಬಾರಿ (೭೦ ಕಿಮಿ),ಮಯಿನ ಪುಕುರಿ (೬೫ ಕಿಮಿ),ಭಾಗಮತಿ(೯೦ಕಿಮಿ).ಇಲ್ಲಿ ಒಟ್ಟು ೮.೬೨ ಲಕ್ಷ ಜನಸಂಖ್ಯೆ ಇದೆ.
 ಚಿರಾಂಗ್ ಜಿಲ್ಲೆ
 ಇಲ್ಲಿ ಶೇ.೮೦ ರಷ್ಟು ಆದಿವಾಸಿ ಬೋಡೋಗಳು ವಾಸಮಾಡುತ್ತಾರೆ.ಉಳಿದ ಶೇ.೨೦ ಮುಸ್ಲಿಮರು.ಜಿಲ್ಲಾ ಕೇಂದ್ರ ಕಾಜಲ್ಗಾೆವ್. ಇಲ್ಲಿನ ಜನಸಂಖ್ಯೆ ೪.೫೪ ಲಕ್ಷ (೨೦೦೧).ಈ ಜಿಲ್ಲೆಯಲ್ಲಿ ಪ್ರವಾಸಿ ಕೇಂದ್ರಗಳಾವುವು ಇಲ್ಲ.
 ಉದಲ್ಗುವರಿ ಜಿಲ್ಲೆ
ಇಲ್ಲಿನ ಜನಸಂಖ್ಯೆ ೭.೫೬ ಲಕ್ಷ.ಈ ಜಿಲ್ಲೆಯಲ್ಲಿ ಸಹ ಪ್ರವಾಸಿ ಕೇಂದ್ರಗಳು ಯಾವುವೂ ಇಲ್ಲ.
ಅಸ್ಸಾಮ್ ರಾಜ್ಯದಲ್ಲಿ ಹಿಂದೂಗಳೆ ಹೆಚ್ಚು ಜನ ಇರುವುದರಿಂದ ಇಲ್ಲಿ ಎಲ್ಲೆಡೆ ದೇವಾಲಯಗಳೆ ಕಾಣಬರುತ್ತವೆ,ಅದರಲ್ಲೂ ಶಿವ ದೇವಾಲಯಗಳೆ ಹೆಚ್ಚು.ಶಿವ ಮತ್ತು ಶಿವೆಯರನ್ನು ಹೊರತುಪಡಿಸಿದರೆ ಪ್ರಕೃತಿ ದೇವಿಯದೇ ಆರ್ಭಟ.ಆದರೂ ಈ ರಾಜ್ಯ ಕಡೆಗಣಿಸುವಂತಹದ್ದಲ್ಲಾ.ದೇಶದ ವೈವಿಧ್ಯತೆಗೆ ತನ್ನದೇ ಆದ ಕೊಡುಗೆ ನೀಡುತ್ತ ಬಂದಿದೆ.
 ಕಾಮಾಕ್ಯ ದೇವಾಲಯ
 ಗೌಹಾಟಿ ನಗರದ ಬಳಿ ಇರುವ ಕಾಮಾಕ್ಯ ದೇವಾಲಯ ಶಕ್ತಿ ದೇವತೆಯ ದೇವಾಲಯ.ದೇಶದ ೫೧ ಶಕ್ತಿ ದೇವತೆಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಇದು ಎಲ್ಲಾ ವರ್ಗದ ಜನರನ್ನು ಆಕರ್ಷಿಸುತ್ತಿದೆ.ಈ ಪುರಾತನ ದೇವಾಲಯದ ಮೂಲ ನಕ್ಷೆ ೧೫೬೫ ರಲ್ಲಿ ಕೋಚ್ ವಂಶದ ಅರಸರಿಂದ ತಯಾರಿಸಲ್ಪಟ್ಟಿತು.ದುಂಡಾದ ಇಟ್ಟಿಗೆ ಗೋಪುರವನ್ನು ಹೊಂದಿರುವ ಇದು ಪ್ರಾಕಾರದ ಗೋಡೆಯ ಸುತ್ತಾ ಕಲ್ಲಿನ ಕೆತ್ತನೆಗಳನ್ನು ಹೊಂದಿದೆ.ದೇವಾನು ದೇವತೆಗಳಾದ ಗಣೇಶ,ನಾರಾಯಣ ಮತ್ತಿತರ ಶಿಲ್ಪಗಳನ್ನು ಕೆತ್ತಲಾಗಿದೆ. ಈ ದೇವಾಲಯ ಪಶ್ಚಿಮ ಭಾಗ ,ಮಧ್ಯ ಭಾಗ ಮತ್ತು ಗರ್ಭಗುಡಿಯನ್ನು ಹೊಂದಿದೆ.ಪೂಜಾಸ್ಥಳ ಗರ್ಭ ಗುಡಿಯಲ್ಲಿದೆ.ಇಲ್ಲಿ ಭಕ್ತರು ಪಂಡಿತರ ಸಹಾಯದಿಂದ ತಾವೇ ಕೈಯಾರೆ ಪೂಜೆ ಮಾಡ ಬಹುದು. ಕಲೆಯ ದೃಷ್ಟಿಯಿಂದ ಸಾಮಾನ್ಯವಾದ ಇದು ತನ್ನ ಐತಿಹ್ಯ ಮತ್ತು ಪೌರಾಣಿಕ ಹಿನ್ನೆಲೆಯಿಂದ ಪ್ರಸಿದ್ಧವಾಗಿದೆ.
 ಭಕ್ತಾದಿಗಳು ಪ್ರತಿದಿನ ಬೆಳಗ್ಗೆ ಮೇಕೆಗಳು,ಕೋಳಿಗಳನ್ನು ತಂದು ತಾಯಿಗೆ ಬಲಿ ನೀಡುತ್ತಾರೆ.ಈ ದೇವಿ ಶಿವನ ಪತ್ನಿಯಾದ ಗಿರಿಜೆ ಎಂದೂ ಆಕೆಯನ್ನು ತಮ್ಮ ಮನೋಭಿಲಾಷೆಗಳನ್ನು ತೀರಿಸುವ ಕಾರಣ ಕಾಮಾಕ್ಯಾ ತಾಯಿ ಎಂದೂ ಕರೆಯುತ್ತಾರೆ.ಇಲ್ಲಿ ವಾಮಾಚಾರದ ಬಲಿ ಪೂಜೆ ಮತ್ತು ದಕ್ಷಿಣಾಚಾರದ ಪೂಜೆಗಳು ನಡೆಯುತ್ತವೆ.
 ಇಲ್ಲಿನ ಐತಿಹ್ಯದಂತೆ ಪಾರ್ವತಿ ದಕ್ಷ ಬ್ರಹ್ಮನ ಮಗಳು ತನ್ನ ತಂದೆ ಏರ್ಪಡಿಸಿದ ಯಜ್ನಕ್ಕೆ ಆಹ್ವಾನವಿಲ್ಲದಿದ್ದರೂ ಶಿವನ ಮಾತನ್ನು ಧಿಕ್ಕರಿಸಿ ಹೋಗುತ್ತಾಳೆ.ಅಲ್ಲಿ ಶಿವ ನಿಂದನೆಯನ್ನು ಕೇಳಲಾಗದೆ ಯಜ್ನಕುಂಡಕ್ಕೆ ಬಿದ್ದು ಸಾಯುತ್ತಾಳೆ. ಇದನ್ನು ಸಹಿಸದ ಶಿವ ಅಲ್ಲಿಗೆ ಬಂದು ರುದ್ರ ನರ್ತನದಲ್ಲಿ ತೊಡಗುತ್ತಾನೆ.ಇದರಿಂದ ಭೂಮಿ ಅಲ್ಲೋಲ ಕಲ್ಲೋಲವಾಗುತ್ತದೆ.ಸರ್ವನಾಶ ತಪ್ಪಿಸಲು ಮಹಾ ವಿಷ್ಣು ಪಾರ್ವತಿಯ ದೇಹವನ್ನು ನಾನಾ ಭಾಗಗಳಾಗಿ ಕತ್ತರಿಸಿ ದೂರ ದೂರ ಬಿಸಾಡುತ್ತಾನೆ.ಹೀಗೆ ಬಿಸಾಡಿದ ಭಾಗಗಳಲ್ಲಿ ಪಾರ್ವತಿ ದೇವಿಯ ಜನನಾಂಗ ಇಲ್ಲಿಗೆ ಬಂದು ಬಿದ್ದು ಕಲ್ಲಾಯ್ತು ಎಂದು ಹೇಳುತ್ತಾರೆ. ಹೀಗೆ ಬಂದು ಬಿದ್ದ ಈ ಸ್ಥಳ ಇಂದಿಗು ಜೀವಂತ ಕ್ಷೇತ್ರವಾಗಿದೆ.ಅದನ್ನು ನಿರೂಪಿಸಲು ಅಲ್ಲಿ ನೆಲದ ಮೇಲೆ ಯೋನಿ ಆಕಾರದ ಕಲ್ಲಿನ ಬಿರುಕೊಂದರಿಂದ ಸದಾಕಾಲ ಹರಿಯುವ ನೀರಿನ ಬುಗ್ಗೆ ಇದೆ.ಇದು ಸ್ತ್ರೀ ಯೋನಿಯನ್ನು ಪ್ರತಿನಿಧಿಸುತ್ತದೆ.ಇದರಲ್ಲಿ ಬೇಸಗೆಯಲ್ಲಿ ರೆಡ್ ಆಕ್ಸೈಡ್ನಿಂಾದ ಕೂಡಿದ ಕಡು ಕೆಂಪು ನೀರು ಹರಿಯುತ್ತದೆ.ಇದನ್ನು ಕಾಮಾಕ್ಯ ದೇವಿ ಬಹಿಷ್ಟೆಯಾದಾಗ ಹರಿವ ರಕ್ತ ಎಂದು ಹೇಳುತ್ತಾರೆ. ಹಾಗಾಗಿ ಈ ದೇವಾಲಯ ’ಬಹಿಷ್ಠೆಯಾಗುವ ಭಗವತಿಯ ದೇವಾಲಯ’ ಎಂದು ಹೆಸರಾಗಿದೆ.ಪ್ರತೀ ವರ್ಷ ಮಾನ್ಸೂನ್ ಕಾಲದಲ್ಲಿ ಅಂಬುಬಾಸಿ ಮೇಳ ಎಂಬ ಜಾತ್ರೆಯನ್ನು ಇಲ್ಲಿ ಅಚರಿಸಲಾಗುತ್ತಿದ್ದು ಈ ಸಮಯವನ್ನು ಕಾಮಾಕ್ಯಾ ದೇವಿಯು ರಜಸ್ವಲೆಯಾಗುವ ಸಮಯ ಎಂದು ಮೂರುದಿನಗಳ ಕಾಲ ದೇವಾಲಯವನ್ನು ಮುಚ್ಚಲಾಗುತ್ತದೆ.ನಾಲ್ಕನೇ ದಿನ ಮತ್ತೆ ಪೂಜೆಗಳು ಆರಂಭವಾಗುತ್ತವೆ.
 ಇನ್ನೊಂದು ಐತಿಹ್ಯದಂತೆ ಕಾಳಿಕಾ ಪುರಾಣದಲ್ಲಿ ಬರುವ ಸತಿ ಶಿವನೊಂದಿಗೆ ಅನುರಕ್ತಳಾಗಿ ತನ್ನ ಆಸೆಗಳನ್ನು ತೀರಿಸಿಕೊಳ್ಳಲು ನೃತ್ಯ ಮಾಡುತ್ತ ಮೃತಳಾಗುತ್ತಾಳೆ.ನಂತರ ಶಿವ ಆಕೆಯ ಮೃತ ದೇಹದೊಂದಿಗೆ ನರ್ತಿಸುವಾಗ ಆಕೆಯ ಯೋನಿ ಕಳಚಿ ಈ ಸ್ಥಳದಲ್ಲಿ ಬಿತ್ತೆನ್ನಲಾಗುತ್ತದೆ.
 ಮತ್ತೊಂದು ಐತಿಹ್ಯದಂತೆ ನರಕಾಸುರ ಕಾಮಾಕ್ಯ ದೇವಿಯಲ್ಲಿ ಅನುರಕ್ತನಾಗಿ ತನ್ನನ್ನು ವಿವಾಹವಾಗುವಂತೆ ಪೀಡಿಸುತ್ತಾನೆ.ಅದಕ್ಕೆ ಆಕೆ ನರಕಾಸುರ ಒಂದೇ ರಾತ್ರಿಯಲ್ಲಿ ತನಗಾಗಿ ಕೋಳಿ ಕೂಗುವ ಮೊದಲು ದೇವಾಲಯವೊಂದನ್ನು ನಿರ್ಮಿಸುವ ಸವಾಲು ಒಡ್ಡುತ್ತಾಳೆ.ಒಪ್ಪಿದ ನರಕಾಸುರ ದೇವಾಲಯ ನಿರ್ಮಿಸಲು ತೊಡಗಿದಾಗ ಅದನ್ನು ತಪ್ಪಿಸಲು ದೇವಿ ಕೋಳಿಯೊಂದನ್ನು ಸೃಷ್ಟಿಸಿ ಅದು ಕೂಗುವಂತೆ ಮಾಡುತ್ತಾಳೆ. ತನ್ನ ಆಸೆ ಈಡೇರದೇ ಹೋದುದರಿಂದ ಸಿಟ್ಟಿಗೆದ್ದ ನರಕಾಸುರ ಆ ಕೋಳಿಯನ್ನು ಕೊಲ್ಲುತ್ತಾನೆ.ಹೀಗಾಗಿ ಇದು ಅದೇ ಅರ್ಧವಾದ ದೇವಾಲಯ ಎಂದೂ,ಅದಕ್ಕಾಗಿ ಕೋಳಿಗಳನ್ನು ಬಲಿ ಕೊಡಲಾಗುತ್ತದೆ ಎಂದು ಹೇಳುತ್ತಾರೆ.
ಐತಿಹ್ಯಗಳೇನೇ ಇದ್ದರು ಆಗಾಗ ಬಣ್ಣದಲ್ಲಿ ಹರಿಯುವ ನೀರು ಅದಕ್ಕೆ ತಳುಕು ಹಾಕಿದ ಕಥೆ ಸ್ವಾರಸ್ಯವಾದದ್ದು.ಭಕ್ತರು ಇಲ್ಲಿಗೆ ಬಂದು ಪೂಜಿಸಿ ತಮ್ಮ ಆಸೆಗಳು ಈಡೇರಿದ ತೃಪ್ತಿ ಹೊಂದುತ್ತಾರೆ. ನವರಾತ್ರಿಯಲ್ಲಿ ಇಲ್ಲಿ ದುರ್ಗಾಪೂಜೆ ಮತ್ತು ಉತ್ಸವಗಳು ವಿಜೃಂಭಣೆಯಿಂದ ಜರುಗುತ್ತವೆ. 
 ಅಸ್ಸಾಮ್ ಟೀ
 ಅಸ್ಸಾಮಿನ ಪ್ರಮುಖ ವಾಣಿಜ್ಯ ಬೆಳೆ ಟೀ.ಭಾರತ ದೇಶದ ಒಟ್ಟು ಟೀ ಉತ್ಪಾದನೆಯಲ್ಲಿ ಶೇ.೫೫ ಹಾಗು ವಿಶ್ವದ ಉತ್ಪಾದನೆಯಲ್ಲಿ ಶೇ.೨೦ ಅಸ್ಸಾಮ್ನ ಪಾಲು. ಒಂದು ನಿರ್ದಿಷ್ಟ ರೂಪ ಇಲ್ಲದಿದ್ದ ಈ ಉದ್ಯಮಕ್ಕೆ ವ್ಯಾಪಾರಿ ಟಚ್ ಕೊಟ್ಟವರು ಬ್ರಿಟೀಷರು. ಇಲ್ಲಿನ ಟೀ ತೋಟಗಳ ಮಾಲೀಕತ್ವಕ್ಕಾಗಿ ಬ್ರಿಟೀಷರು ಬರ್ಮಾದೊಂದಿಗೆ ಮಾಡಿದ ಯುದ್ಧ ಇಂಡೋ-ಬರ್ಮ ಯುದ್ಧ ಎಂದೇ ಹೆಸರಾಗಿದೆ(೧೮೨೪-೧೮೨೬).ಇಲ್ಲಿನ ವಿಶಿಷ್ಟ ಟೀ ರುಚಿಗೆ ಮಾರು ಹೋದ ಅವರು ಇಲ್ಲಿ ಟೀ ತೋಟಗಳನ್ನು ಕೊಂಡು ಇಲ್ಲಿಗೆ ಕಾಲಿಟ್ಟರು.ಇಲ್ಲಿನ ಮೂಲ ಟೀ’ಕೆಮೆಲಿಯಾ ಸೈನಸಿಸ್’ಜಾತಿಯನ್ನು ಅಭಿವೃದ್ಧಿಗೊಳಿಸಿದರು.ಇದರೊಂದಿಗೆ ಚೀನಾದ ಟೀ ಸಹ ಸೇರಿತು. ಸ್ವಾತಂತ್ರಾ ನಂತರ ಬ್ರಿಟೀಷರ ನಿರ್ಗಮನದೊಂದಿಗೆ ಟೀ ತೋಟಗಳ ಆಡಳಿತ ದೊಡ್ಡ ದೊಡ್ಡ ಕಂಪನಿಗಳ ಕೈ ಸೇರಿತು. ಸ್ಥಳೀಯ ಜನತೆ ತಮ್ಮ ಬದುಕಿಗಾಗಿ ಅನಿವಾರ್ಯವಾಗಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಬೇಕಾಯಿತು.
 ಅಸ್ಸಾಂ ಟೀ ರುಚಿ ವಿಶ್ವ ಪ್ರಸಿದ್ದ.ಅದರ ಸುವಾಸನೆ ಮತ್ತು ನೈಜ ಬಣ್ಣ ಬೇರೆಯಾವ ಟೀಗೂ ಇಲ್ಲ.ಈ ಟೀ ೨೦೦೯ ರ ಫ಼ೆಬ್ರವರಿಯಲ್ಲಿ ನಡೆದ ಒಂದು ಮಾರಾಟದಲ್ಲಿ ಪ್ರತಿ ಕೇಜಿಗೆ ರೂ.೪೩೨೦-೦೦ ಗೆ ಮಾರಾಟವಾಗಿ ದಾಖಲೆ ಸ್ಥಾಪಿಸಿದೆ.ಆಸಕ್ತಿ ಇದ್ದರೆ ಪ್ರಯತ್ನಿಸಿ.ನಾವು ಅಸ್ಸಾಮಿನ ಟೀ ಎಂದು ಕುಡಿಯುವ ಟೀ ಅಸ್ಸಾಮಿನ ಕೆಳದರ್ಜೆಯದ್ದು.
 ಇಲ್ಲಿ ೧೬೦೦ ಕ್ಕೂ ಹೆಚ್ಚು ಟೀ ಉತ್ಪಾದಕರು,ಎರಡು ಸಾವಿರಕ್ಕೂ ಹೆಚ್ಚು ಟೀ ರಫ಼್ತುದಾರರು ಹಾಗೂ ೯ ಟೀ ಹರಾಜು ಸ್ಥಳಗಳು ಇವೆ.ಟೀ ಉದ್ಯಮವು ತನ್ನ ಅನುಕೂಲಕ್ಕಾಗಿ ಭಾರತ ಟೀ ಸಂಘಗಳ ಅಸ್ಸಾಂ ಘಟಕ (ಅಬಿಟಾ- ದಿ ಅಸ್ಸಾಂ ಬ್ರಾಂಚ್ ಆಫ಼್ ದಿ ಇಂಡಿಯಾ ಟೀ ಅಸೋಸಿಯೇಶನ್) ಎಂಬ ಸಂಸ್ಥೆಯನ್ನು ಸ್ಥಾಪಿಸಿಕೊಂಡಿದೆ.ಇದರ ಅಡಿಯಲ್ಲಿ ಸುಮಾರು ೨೫೦ ಕ್ಕೂ ಹೆಚ್ಚು ಟೀ ತೋಟಗಳು ಸದಸ್ಯತ್ವ ಪಡೆದಿವೆ.
Return to "ಅಸ್ಸಾಂ" page.