ಚಪ್ಪಾಳೆ
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಚಪ್ಪಾಳೆಯು (ಕೈಪರೆ) ಎರಡು ಚಪ್ಪಟೆ ಮೇಲ್ಮೈಗಳನ್ನು ಪರಸ್ಪರ ತಟ್ಟಿ ಮಾಡಲಾದ ಸಂಘರ್ಷಿ ಶಬ್ದ, ಉದಾಹರಣೆಗೆ ಮಾನವರು ಅಥವಾ ಪ್ರಾಣಿಗಳು ತಮ್ಮ ಶರೀರದ ಭಾಗಗಳನ್ನು ತಟ್ಟಿ ಮಾಡಲಾದ ಶಬ್ದ. ಮೆಚ್ಚುಗೆಯನ್ನು ವ್ಯಕ್ತಪಡಿಸಲು ಮಾನವರು ತಮ್ಮ ಅಂಗೈಗಳಿಂದ ಚಪ್ಪಾಳೆ ಹೊಡೆಯುತ್ತಾರೆ, ಹಲವುವೇಳೆ ವೇಗವಾಗಿ ಮತ್ತು ಪುನರಾವರ್ತಿತವಾಗಿ. ಮಾನವರು ಸಂಗೀತ, ನೃತ್ಯ, ಮಂತ್ರಪಠನ, ಕೈಯಾಟಗಳು, ಮತ್ತು ಚಪ್ಪಾಳೆ ಆಟಗಳಲ್ಲಿ, ಶಬ್ದಗಳಿಗೆ ಜೊತೆಯಾಗಲು ಶರೀರ ಬಡಿತದ ರೂಪವಾಗಿ ತಾಳದಲ್ಲಿ ಕೂಡ ಚಪ್ಪಾಳೆ ಹೊಡೆಯುತ್ತಾರೆ. ಚಪ್ಪಾಳೆಯನ್ನು ಸಂಗೀತದ ಅನೇಕ ರೂಪಗಳಲ್ಲಿ ಬಳಸಲಾಗುತ್ತದೆ. ಒಂದು ಉದಾಹರಣೆಯೆಂದರೆ ಸುವಾರ್ತೆ ಸಂಗೀತದಲ್ಲಿ. ಎರಡು ಸ್ಪ್ಯಾನಿಷ್ ಸಂಗೀತ ಪ್ರಕಾರಗಳಾದ ಫ಼್ಲಮೆಂಕೊ ಮತ್ತು ಸೆವಿಲಾನಸ್ನಲ್ಲಿ, ಚಪ್ಪಾಳೆ ಹೊಡೆಯುವುದನ್ನು ಪಾಮಸ್ ಎಂದು ಕರೆಯಲಾಗುತ್ತದೆ ಮತ್ತು ಇದು ಹಲವುವೇಳೆ ತಾಳವನ್ನು ನೀಡುತ್ತದೆ ಮತ್ತು ಹಾಡುಗಳ ಅವಿಭಾಜ್ಯ ಅಂಗವಾಗಿದೆ.