ಚನ್ನೆ ಮಣೆ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಚನ್ನೆ ಮಣೆ ಒಂದು ಗ್ರಾಮೀಣ ಆಟ. ಎರಡು ಸಾಲುಗಳಲ್ಲಿ ತಲಾ ಏಳು ಕುಳಿಗಳನ್ನು ಹೊಂದಿರುವ ಒಂದು ಮರದ ಮಣೆಯಲ್ಲಿ ಚನ್ನೆ ಕಾಯಿಗಳನ್ನು ಉಪಯೋಗಿಸಿ ಇದನ್ನು ಆಡಲಾಗುತ್ತದೆ.[೧]
ಆಡುವ ವಿಧಾನ
ಬದಲಾಯಿಸಿಮರದಿಂದ ತಯಾರಿಸಿದ ಮಣೆಯಲ್ಲಿ ಎರಡು ಸಾಲುಗಳಲ್ಲಿ ತಲಾ ಏಳು ಕುಳಿಗಳಲ್ಲಿ ಚನ್ನೆ ಕಾಯಿ ಅಥವಾ ಹುಣಸೆ ಬೀಜಗಳನ್ನು ಉಪಯೋಗಿಸಿ ಇದನ್ನು ಆಡಲಾಗುತ್ತದೆ. ಎಲ್ಲಾ ವಯೋಮಾನದವರಿಗೂ ಇಷ್ಟವಾದ ಆಟ. ಒಂದು ಮಣೆಯಲ್ಲಿ ಇಬ್ಬರು ಆಡಬಹುದು. ಮೊದಲಿಗೆ ಪ್ರತಿ ಕುಳಿಯಲ್ಲೂ ೪ ಕಾಯಿಗಳನ್ನು ಹಾಕಬೇಕು. ಇಬ್ಬರೂ ಆಟಗಾರರೂ ಒಂದೊಂದು ಸಾಲನ್ನು ಆರಿಸಿಕೊಳ್ಳಬೇಕು. ತಮ್ಮ ಸಾಲಿಗೆ ಸೇರಿದ ಯಾವುದಾದರೊಂದು ಕುಳಿಯಿಂದ ಕಾಯಿಗಳನ್ನು ತೆಗೆದು, ಒಂದೊಂದಾಗಿ ಮುಂದಿನ ಕುಳಿಗಳಲ್ಲಿ ಹಾಕಬೇಕು. ಕೈಯಲಿದ್ದ ಕಾಯಿಗಳು ಖಾಲಿಯಾದಲ್ಲಿ ನಂತರದ ಕುಳಿಯಿಂದ ಮತ್ತೆ ಕಾಯಿಗಳನ್ನು ತೆಗೆದು, ಮುಂದಿನ ಕುಳಿಗಳಿಗೆ ಹಾಕಬೇಕು. ಒಂದೊಮ್ಮೆ ನಂತರದ ಕುಳಿ ಖಾಲಿ ಇದ್ದಾಗ, ಅದರ ಮುಂದಿನ ಕುಳಿ ಹಾಗೂ ಅದರ ಎದುರಿನ ಕುಳಿಯಲ್ಲಿರುವ ಕಾಯಿಗಳೆಲ್ಲವೂ ಆಟಗಾರನಿಗೆ ಸಿಗುತ್ತವೆ. ಹೀಗೆ ಎಲ್ಲಾ ಕಾಯಿಗಳೂ ಖಾಲಿಯಾಗುವ ತನಕ ಇಬ್ಬರೂ ಆಡಬೇಕು. ಕೊನೆಗೆ ಹೆಚ್ಚು ಕಾಯಿಗಳನ್ನು ಹೊಂದಿರುವವರು ವಿಜಯಿಗಳಾಗುತ್ತಾರೆ.