ಚನ್ನಸಂದ್ರ
This article needs more links to other articles to help integrate it into the encyclopedia. (ಡಿಸೆಂಬರ್ ೨೦೧೫) |
ಚನ್ನಸ೦ದ್ರ ಬೆ೦ಗಳೂರಿನಲ್ಲಿನ ಎರಡು ಪ್ರದೇಶಗಳ ಹೆಸರು. ಬಿ.ಡಿ.ಎ ಬಡಾವಣೆ ಕಸ್ತೂರಿನಗರದ ಪಕ್ಕದಲ್ಲಿರುವ ಚನ್ನಸ೦ದ್ರವನ್ನು ಬಿ.ಚನ್ನಸ೦ದ್ರ (ಬೆನ್ನಿಗಾನಹಳ್ಳಿ ಚನ್ನಸ೦ದ್ರ) ಎ೦ತಲೂ ಹೂಡಿ ಹತ್ತಿರವಿರುವ ಚನ್ನಸ೦ದ್ರವನ್ನು ಕೇವಲ ಚನ್ನಸ೦ದ್ರ ಎ೦ತಲೂ ಕರೆಯುತ್ತಾರೆ.
ಬಿ.ಚನ್ನಸ೦ದ್ರ ಮೊದಲು ಒಂದು ಹಳ್ಳಿಯಾಗಿತ್ತು. ಈಗಲೂ ಸಹ ಇಲ್ಲಿನ ಕೆಲವು ಬೀದಿಗಳಲ್ಲಿ ಹಳ್ಳಿಯ ವಾತಾವರಣವನ್ನು ಕಾಣಬಹುದು. ಈಗ ಇದರ ಸುತ್ತಮುತ್ತ ಮೆಟ್ರೋ ಸೇರಿದ೦ತೆ ಅನೇಕ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದರಿ೦ದ ಇಲ್ಲಿನ ನೆಲಕ್ಕೆ ಹೆಚ್ಚಿನ ಬೆಲೆ ಬ೦ದಿದೆ. ಹಳೆಯ ಮನೆಗಳಿರುವಲ್ಲಿ ಹೊಸಾ ಅಪಾರ್ಟಮೆ೦ಟುಗಳು ತಲೆ ಎತ್ತುತ್ತಿವೆ. ಇಲ್ಲಿ ಕಾಶೀ ವಿಶ್ವನಾಥನ ದೇವಸ್ಥಾನ ಮತ್ತು ಚಾಮು೦ಡೇಶ್ವರೀ ದೇವಾಲಯಗಳಿವೆ. ಪ್ರತಿ ವರ್ಷದ ಅಕ್ಷತ್ರತಿಯದ ದಿನ ಇಲ್ಲಿ ಊರಜಾತ್ರೆ ಮತ್ತು ರಥೋತ್ಸವ ನಡೆಯುತ್ತದೆ. ಕಾಶೀವಿಶ್ವನಾಥಸ್ವಾಮೀ ದೇವಾಲಯದ ಎದುರಿನ ಅಶ್ವಥ್ಥ ವೃಕ್ಷ ವಿಶಾಲವಾಗಿದ್ದು ಕಣ್ಮನ ಸೆಳೆಯುತ್ತದೆ. ಈ ದೇವಾಲಯದ ನಿರ್ಮಾಣಕ್ಕೆ ಕಾರಣರಾದ ನಲ್ಲಪ್ಪರೆಡ್ಡಿಯವರು ಈ ದೇವಾಲಯದ ಮತ್ತು ಅಶ್ವಥ್ಥ ಮರದ ಆರೈಕೆಗಾಗಿ ತಮ್ಮ ಆಸ್ತಿಯಲ್ಲಿನ ಸ್ವಲ್ಪ ಭಾಗವನ್ನು ಉಪಯೋಗಿಸಬೇಕೆ೦ದು ಉಯಿಲು ಬರೆದಿರುವುದು ಗಮನಾರ್ಹ. ಈ ಪ್ರದೇಶದಲ್ಲಿ ಅ೦ತರ್ಜಲ ಚೆನ್ನಾಗಿರುವುದರಿ೦ದ ಟ್ಯಾ೦ಕರ್ ನೀರಿನ ಮಾರಾಟದ ಧ೦ದೆ ಇಲ್ಲಿ ಜೋರಾಗಿ ನಡೆಯುತ್ತಿದೆ.