ಚಕ್ಕೋತ

ಸಸ್ಯದ ಜಾತಿಗಳು, ಪೊಮೆಲೊ

ಇದು ದೇವನಹಳ್ಳಿಯ ಹೆಸರುವಾಸಿ ಹಣ್ಣು. ದಕ್ಷಿಣ ಪೂರ್ವ ಏಷಿಯಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ[೧]. ದೊಡ್ದ ಹಣ್ಣುಗಳು ಬಾಚಣೆಗೆಯಂತಹ ದೊಡ್ದ ತೊಳೆಗಳನ್ನು ಒಳಗೊಂಡಿರುತ್ತದೆ.[೨] ಇದು ಒಗರು ಮತ್ತು ಸ್ವಲ್ಪ ಕಹಿಮಿಶ್ರಿತ ಹುಳಿಯ ರುಚಿ ಹೊಂದಿರುವುದರಿಂದ ಇದನ್ನು ಆಸ್ವಾದಿಸುವವರು ಕೆಲವರು ಮಾತ್ರ. ಆದುದರಿಂದ ಇದು ಪ್ರಪಂಚದಲ್ಲಿ ಜನಪ್ರಿಯ ಹಣ್ಣುಗಳ ಸಾಲಿಗೆ ಸೇರಿಲ್ಲ. ಈ ಹಣ್ಣಿನಲ್ಲಿ 'ಎ' 'ಬಿ' ಮತ್ತು 'ಸಿ' ಜೀವಸತ್ವಗಳು ಹೇರಳವಾಗಿವೆ.ಈ ಹಣ್ಣಿನ ಹೊರಸಿಪ್ಪೆ ತೆಗೆದು ತೊಳೆಗಳನ್ನು ಹಾಗೆಯೇ ಬಿಡಿಸಿ ತಿನ್ನುತ್ತಾರೆ.

ಚಕ್ಕೋತ

ಮಣ್ಣು ಮತ್ತು ಹವಾಗುಣಸಂಪಾದಿಸಿ

ಇದಕ್ಕೆ ಇಂತಹುದೇ ಮಣ್ಣು ಮತ್ತು ಹವಾಗುಣ ಬೇಕೆಂಬ ವಿಶಿಷ್ಟತೆ ಇಲ್ಲ. ಕಿತ್ತಳೆಯನ್ನು ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿ ಇದು ಬೆಳೆದೀತು. ಶುಷ್ಕ ಮತ್ತು ಹೆಚ್ಚು ಉಷ್ಣತೆಯ ವಾತಾವರಣವಿರುವ ಪ್ರದೇಶಗಳು ಇದಕ್ಕೆ ಬಹು ಸೂಕ್ತ. ಹೆಚ್ಚು ಮಳೆ ಬಂದರೂ ಅಡ್ದಿ ಇಲ್ಲ.

ತಳಿಗಳುಸಂಪಾದಿಸಿ

ಇದರಲ್ಲಿ ಪ್ರದೇಶದಿಂದ ಪ್ರದೇಶಗಳಿಗೆ ಅನುಗುಣವಾಗಿ ಅನೇಕ ವಿಧಗಳು ಕಂಡು ಬಂದರೂ ನಿಶ್ಚಿತ ಮತ್ತು ವರ್ಣಿಸಿದ ವಿಧಗಳು ಇಲ್ಲ.

ಬೀಜ ಮತ್ತು ಬಿತ್ತನೆಸಂಪಾದಿಸಿ

ಇದು ನಿಂಬೆ ಜಾತಿಯಲ್ಲಿ ಕಂಡುಬರುವ ಏಕಭ್ರೂಣೀಯ ಸಸ್ಯ. ಇದನ್ನು ಜಟಿಕಟ್ಟಿ, ಜಾಂಬೂರಿ ಮುಂತಾದ ಆಧಾರಸಸಿಗಳ ಮೇಲೆ ಕಸಿಕಟ್ಟಿ ಕಸಿಗಿಡಗಳನ್ನು ಪಡೆದುಕೊಳ್ಳಲಾಗುತ್ತದೆ. ಕಿತ್ತಳೆಯಲ್ಲಿ ವಿವರಿಸಿದಂತೆ ಗುರಾಣಿಕಸಿ ವಿಧಾನವನ್ನು ಹೆಚ್ಚಾಗಿ ಬೆಳೆಸಲಾಗುತ್ತದೆ.ಇದನ್ನು ನಾಟಿ ಮಾಡುವ ಅಂತರ ಪ್ರದೇಶದಿಂದ ಪ್ರದೇಶಕ್ಕೆ ಬದಲಾದರು ಸಾಮಾನ್ಯವಾಗಿ ೫-೬ಮೀ. ಅಂತರದ ಸಾಲುಗಳಲ್ಲಿ ೫-೬ಮೀ.ಗೊಂದರಂತೆ ನಾಟಿ ಮಾಡಲಾಗುತ್ತದೆ.

ಕೊಯ್ಲು ಮತ್ತು ಇಳುವರಿಸಂಪಾದಿಸಿ

ಇದು ದಕ್ಷಿಣ ಭಾರತದಲ್ಲಿ ನವೆಂಬರ್‍ನಲ್ಲಿ ಕೊಯ್ಲಿಗೆ ಬರುತ್ತದೆ. ಕಾಯಿಗಳು ಕೊಯ್ಲಿಗೆ ಬಂದಾಗ ಕಡುಹಸಿರಿನಿಂದ ತಿಳಿಹಸಿರು ಬಣ್ಣಕ್ಕೆ ತಿರುಗುತ್ತವೆ. ಚೆನ್ನಾಗಿ ಬೆಳೆದ ಪ್ರತಿಯೊಂದು ಸಸಿಯಿಂದ ಸುಮಾರು ೧೦೦-೨೦೦ ಹಣ್ಣುಗಳನ್ನು ಪಡೆಯಬಹುದು.

ಉಲ್ಲೇಖಸಂಪಾದಿಸಿ

  1. https://hort.purdue.edu/newcrop/morton/pummelo.html
  2. ಜನಪ್ರಿಯ ಹಣ್ಣುಗಳು, ಡಾ||ಪಿ.ನಾರಾಯನಣ ಸ್ವಾಮಿ , ನವಕರ್ನಾಟಕ ಪ್ರಕಾಶನ, ೨೦೦೩, ೭೫
"https://kn.wikipedia.org/w/index.php?title=ಚಕ್ಕೋತ&oldid=727762" ಇಂದ ಪಡೆಯಲ್ಪಟ್ಟಿದೆ