ಚಂದ್ರಾನ್ವೇಷಣೆ
ಚಂದ್ರ ಭೂಮಿಗೆ ಅತಿ ಹತ್ತಿರವಿರುವ ಆಕಾಶಕಾಯ.ಈ ಎರಡು ಆಕಾಶಕಾಯಗಳ ನದದುವಿನ ಸರಾಸರಿ ಸುಮಾರು ಮೂರು ಲಕ್ಷ ಎಂಭತ್ತನಾಲ್ಕು ಸಾವಿರ ಕಿಲೋಮೀಟರ್ಗಳಷ್ಟಿದೆ.ಖಗೋಳಶಾಸ್ತ್ರ ಕ್ಷೇತ್ರದಲ್ಲಿ ಕಂಡುಬರುವ ದೂರಗಳ ದೃಷ್ಟಿಯಿಂದ ಇದು ಅತ್ಯಂತ ಕಡಿಮೆ ಎನ್ನಬಹುದು. ಚಂದ್ರ ಭೂಮಿಯ ಏಕೈಕ ನಿಸರ್ಗದತ್ತ ಉಪಗೃಹವೂ ಆಗಿದೆ.ಆದರೆ ಸಾವಿರಾರು ಕೃತಕ ಭೂ ಉಪಗ್ರಹಗಳು ಇಂದು ಭೂಮಿಯನ್ನು ಸುತ್ತುತ್ತಿವೆ. ಇಲ್ಲಿ ಇನ್ನೂ ಒಂದು ಕುತೂಹಲಕಾರಿ ಅಂಶವೆಂದರೆ ಕೃತಕ ಭೂ ಉಪಗ್ರಹಗಳು ಭೂಮಿಯನ್ನು ಸುತ್ತಲು ೧೯೫೭ರಿಂದೀಚೆಗೆ ಪ್ರಾರಂಭಿಸಿವೆಯಷ್ಟೆ.ಆದರೆ ಚಂದ್ರನೆಂಬ ದೊಡ್ಡ ಆಕಾಶಕಾಯ ಭೂಮಿಯನ್ನು ಕಳೆದ ಸುಮಾರು ನಾನ್ನೂರಲ್ವತ್ತು ಕೋತಿ ವರ್ಷಗಳಿಂದ ಸುತ್ತುತ್ತಿದೆ ಎಂದು ವಿಜ್ನಾನಿಗಳು ನುಡಿಯುತ್ತಾರೆ. ಗಂಟೆಗೆ ಸುಮಾರು ಮೂರೂವರೆ ಸಾವಿರ ಕಿಲೋಮೀಟರ್ಗಳಷ್ಟು ವೇಗದಲ್ಲಿ ಚಲಿಸುವ ಚಂದ್ರ ಭೂಮಿಯನ್ನು ಒಮ್ಮೆ ಸುತ್ತಲು ಅದು ಅಷ್ಟೇ ಕಾಲವನ್ನು ತೆಗೆದುಕೊಳ್ಳುತ್ತದೆ.ಅಂದರೆ ಚಂದ್ರನ ಮೇಲೆ ನಿಂತವರಿಗೆ ಅಲ್ಲಿನ ಒಂದು ದಿನ ಹಾಗೂ ಒಂದು ವರ್ಷ ಈ ಎರಡೂ ಸಮವಾಗಿರುತ್ತದೆ. ಇದು ಪರಿಣಾಮ ಬಹಳ ಕುತೂಹಲಕಾರಿಯಾಗಿದೆ.ಇದರಿಂದಾಗಿ ಚಂದ್ರನ ಒಮ್ದು ಪಾರ್ಶ್ವ ಭುಮಿಗೆ ಬಹುಮಟ್ಟಗೆ ಕಾಣುವುದೇ ಇಲ್ಲ.ಆ ಪಾರ್ಶ್ವವನ್ನು ಕಾಣುವ ಅವಕಾಶ ಮಾನವನಿಗೆ ಮೊದಲ ಬಾರಿ ದೊರೆತದ್ದು ೧೯೫೯ ರ ಅಕ್ಟೋಬರ್ ನಲ್ಲಿ.
ಕ್ರಿ.ಶ೧೬೦೯ರಲ್ಲಿ ದೂರದರ್ಶಕದ ಮೂಲಕ ಗೆಲಿಲಿಯೋ ಚಂದ್ರನನ್ನು ಕ್ರಮಬದ್ದವಾಗಿ ವೀಕ್ಷಿಸಿದನು.೧೯೫೪ರ ೪ರಂದು ಸೋವಿಯತ್ ಒಕ್ಕೂಟವು ಸ್ಪುಟ್ನಿಕ್-೧ ಎಂಬ ಹೆಸರಿನ ಲೋಹದ ಗೋಳವನ್ನು ಅಂತರಿಕ್ಷಕ್ಕೆ ಉಡಾಯಿಸಿತು.ಭೂಮಿಯ ಮೊದಲ ಕೃತಕ ಉಪಗೃಹವಾದ ಸ್ಪುಟ್ನಿಚ್-೧ ರ ಉಡಾವಣೆಯೊಂದಿಗೆ ಅಂತರಿಕ್ಷಯುಗವು ಆರಂಭವಾಯಿತು.೧೯೬೦ರಲ್ಲಿ ಅಮೇರಿಕ ಹಾಗೂ ಸೋವಿಯತ್ ರಷ್ಯಾಗಳ ನಡುವೆ