ಚಂದ್ರನ ಬಿಂಬಾವಸ್ಧೆಗಳು
ಹೊಳೆಯುವ ಚಂದ್ರನಿರುವ ರಾತ್ರಿಯ ಆಕಾಶ ತುಂಬಾ ಸುಂದರವಾಗಿರುತ್ತದೆ. ರಾತ್ರಿ ಆಕಾಶದಲ್ಲಿ ಚಂದ್ರನೇ ಆಕರ್ಷಣೆಯ ಕೇಂದ್ರ ಬಿಂದು. ವ್ಯಕ್ತಿಯ ಮುಖದ ಅಂದವನ್ನು ಚಂದ್ರನ ಅಂದಕ್ಕೆ ಹೋಲಿಸಿದ ಉದಾಹಣೆಗಳಿವೆ. ಚಂದ್ರನಿಗೆ ಸ್ವಪ್ರಕಾಶವಿಲ್ಲ. ತನ್ನ ಮೇಲೆ ಬೀಳುವ ಸೂರ್ಯನ ಬೆಳಕಿನ ೯೩% ನ್ನು ಹೀರಿಕೊಂಡು ಕೇವಲ ೭% ನ್ನು ಪ್ರತಿಫಲಿಸುತ್ತದೆ.
ಚಂದ್ರನ ಚಲನೆಗಳು
ಬದಲಾಯಿಸಿಭ್ರಮಣೆ
ಬದಲಾಯಿಸಿಚಂದ್ರನು ತನ್ನ ಅಕ್ಷದ ಮೇಲೆ ತಿರುಗುವ ಚಲನೆಯೇ ಭ್ರಮಣೆ. ಚಂದ್ರನು ತನ್ನ ಒಂದು ಭ್ರಮಣೆಯನ್ನು ೨೭ ದಿನ, ೭ ಗಂಟೆ, ೪೩ ನಿಮಿಷ ಮತ್ತು ೧೧.೫ ಸೆಕೆಂಡುಗಳಲ್ಲಿ ಅಥವಾ ೨೭.೩ ದಿನಗಳಲ್ಲಿ ಪೂರ್ಣಗೊಳಿಸುತ್ತಾನೆ, ಭ್ರಮಣೆಯ ವೇಗ ೧೬.೭ ಕಿ.ಮೀ/ಗಂಟೆಗೆ.
ಪರಿಭ್ರಮಣೆ
ಬದಲಾಯಿಸಿಭೂಮಿಯ ಸುತ್ತ ತಿರುವ ಚಂದ್ರನ ಚಲನೆಯೇ ಪರಿಭ್ರಮಣೆ.ಚಂದ್ರನು ಹೀಗೆ ಪರಿಭ್ರಮಿಸಲು ೨೭ ದಿನ, ೭ ಗಂಟೆ, ೪೩ ನಿಮಿಷ ಮತ್ತು ೧೧.೫ ಸೆಕೆಂಡುಗಳಲ್ಲಿ ಅಥವಾ ೨೭.೩ ದಿನಗಳನ್ನು ತೆಗೆದುಕೊಳ್ಳುತ್ತಾನೆ. ಪರಿಭ್ರಮಣೆಯ ವೇಗ ೩೭೦೦ ಕಿ.ಮೀ/ಗಂಟೆಗೆ. ಹಾಗೆಯೇ ಚಂದ್ರನ ಭ್ರಮಣೆ ಮತ್ತು ಪರಿಭ್ರಮಣೆಗಳ ಅವಧಿ ಒಂದೇ ಆಗಿರುವುದರಿಂದ ಯಾವಾಗಲೂ ಭೂಮಿಯಿಂದ ಚಂದ್ರನ ಒಂದೇ ಬದಿ ಕಾಣುತ್ತದೆ.
ಚಂದ್ರನ ಬಿಂಬಾವವಸ್ಧೆಗಳು
ಬದಲಾಯಿಸಿಪರಿಭ್ರಮಣೆಯ ಕಾರಣದಿಂದ ಚಂದ್ರನು ಭೂಮಿಯ ಸುತ್ತ ವಿವಿಧ ಸ್ಧಾನಗಳಲ್ಲಿರುತ್ತಾನೆ. ಆದ್ದರಿಂದ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳುವ ಭಾಗದ ಗೋಚರಿಕೆಯ ಪ್ರಮಾಣದಲ್ಲಿ ಏರುಪೇರಾಗುತ್ತದೆ. ಕೆಲವೊಮ್ಮೆ ಚಂದ್ರನ ಮೇಲಿನ ಬೆಳಕು ಬೀಳುವ ಭಾಗದ ಸ್ವಲ್ಪ ಭಾಗ, ಕೆಲವೊಮ್ಮೆ ಹೆಚ್ಚು ಭಾಗ ಭೂಮಿಯ ಮೇಲಿನ ವೀಕ್ಷಕನಿಗೆ ಕಾಣುತ್ತದೆ. ತಿಂಗಳೊಂದರಲ್ಲಿ ಚಂದ್ರನು ವಿವಿಧ ಆಕಾರಗಳಲ್ಲಿ ಗೋಚರಿಸುತ್ತಾನೆ. ರಾತ್ರಿಯಿಂದ ರಾತ್ರಿಗೆ ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಭಾಗದ ಗೋಚರಿಕೆಯ ಭಾಗವು ಬದಲಾಗುತ್ತಾ ಹೋಗುತ್ತದೆ. ಇದನ್ನು ಚಂದ್ರನ ಬಿಂಬಾವಸ್ಧೆಗಳು ಎನ್ನುವರು.
ಚಂದ್ರ ಭೂಮಿಯ ಸುತ್ತ ಪರಿಭ್ರಮಿಸುವಾಗ, ಸೂರ್ಯನಿಗೆ ಕೆಲವೊಮ್ಮೆ ಹತ್ತಿರವಾಗಿ, ಕೆಲಮೊಮ್ಮೆ ದೂರವಾಗಿಯೂ ಇರುತ್ತಾನೆ. ಚಂದ್ರ ಹೀಗೆ ಸೂರ್ಯನಿಗೆ ಹತ್ತಿರವಾದಾಗ ಸೂರ್ಯನಿಗೆ ಎದುರಾಗಿರುವ ಚಂದ್ರನ ಬದಿ ಭೂಮಿಗೆ ವಿರುದ್ದವಾಗಿರುತ್ತದೆ. ಆದ್ದರಿಂದ ಆ ದಿನದಲ್ಲಿ ಚಂದ್ರ ಭೂಮಿಗೆ ಕಾಣಲಾರ. ಅದೇ ಅಮಾವಾಸ್ಯೆ. ದಿನ ಕಳೆದಂತೆ ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಭಾಗದ ಗೋಚರಿಕೆ ಸ್ವಲ್ಪ ಸ್ವಲ್ಪವೇ ಹೆಚ್ಚುತ್ತಾ ಹೋಗುತ್ತದೆ. ಒಂದು ದಿನ ಚಂದ್ರನು ಪೂರ್ಣವಾಗಿ ಕಾಣುತ್ತಾನೆ. ಅದೇ ಹುಣ್ಣಿಮೆ. ಪಾಡ್ಯ, ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಟಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ಧಶಿ ಹುಣ್ಣಿಮೆ. ಹಾಗೆಯೇ ಹುಣ್ಣಿಮೆಯಿಂದ ಆರ೦ಭಿಸಿ, ಪಾಡ್ಯ, ಬಿದಿಗೆ ಹೀಗೆಯೇ ಮುಂದುವರೆದು ಚತುರ್ಧಶಿಯ ನಂತರ ಅಮವಾಸ್ಯೆಗೆ ಮುಕ್ತಾಯವಾಗುವುದು.
ಉಲ್ಲೇಖ
ಬದಲಾಯಿಸಿ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |