ಚಂದ್ರನಾಥ ಸ್ವಾಮಿಯ ಎಡಬಸದಿ ಹಿರಿಯಂಗಡಿ
ಚಂದ್ರನಾಥ ಸ್ವಾಮಿಯ ಎಡ ಬಸದಿ, ಹಿರಿಯಂಗಡಿ ಶ‍್ರೀ ಚಂದ್ರನಾಥ ಸ್ವಾಮಿಯ ಎಡ ಬಸದಿ, ಹಿರಿಯಂಗಡಿ ಕರ್ನಾಟಕದ ಬಸದಿಗಳಲ್ಲಿ ಒಂದು. ಈ ಬಸದಿಯು ಕಾರ್ಕಳದ ಪ್ರಸಿದ್ಧ ಹಿರಿಯಂಗಡಿ ಶ್ರೀ ನೇಮಿನಾಥ ಬಸದಿಯಎಡ ಬದಿಯಲ್ಲಿ ಈ ಚಂದ್ರನಾಥ ಸ್ವಾಮಿ ಬಸದಿ ಇದೆ. ಈ ಬಸದಿಯ ಎದುರಿನಲ್ಲಿ ಭದ್ರ ಮಂಟಪ ಎಂಬ ಒಂದು ವಿಶೇಷ ಮಂಟಪ ಇದೆ. ಇದನ್ನು ಆಡಳಿತ ಮುಕ್ತೇಸರರು ಮತ್ತು ಜೈನಧರ್ಮ ಜೀರ್ಣೋದ್ದಾರ ಸಂಘದವರು ನಡೆಸುತ್ತಾರೆ. ಶ್ರೀ ನಾಗಕುಮಾರ ಇಂದ್ರರು ಈ ಬಸದಿಯ ಪೂಜಾದಿಗಳನ್ನು ನೇರವೇರಿಸುತ್ತಾರೆ.
ಇತಿಹಾಸ
ಬದಲಾಯಿಸಿಈ ಸುಮಾರು ಎಂಟುನೂರು ವರ್ಷಗಳ ಇತಿಹಾಸವಿದೆ. ಹಾಗೂ ಒಂದೆರಡು ವರ್ಷಗಳ ಹಿಂದೆ ಜೀರ್ಣೋದ್ದಾರಗೊಂಡಿದೆ. ಆದರೆ ಇದರ ನಿರ್ಮಾಣದ ಬಗ್ಗೆ ನಿಖರ ಮಾಹಿತಿ ಇಲ್ಲ. ಇಲ್ಲಿ ಹಿಂದೊಮ್ಮೆ ಮೂರ್ತಿ ಕಳವಾಗಿತ್ತು, ಆದರೆ ಅದು ನಂಬಿಕೆಯಂತೆ ಕ್ಷೇತ್ರಪಾಲ ಮತ್ತು ಭೂತಕ್ಕೆ ಹರಕೆ ಹೇಳಿಕೊಂಡಿದ್ದರಿಂದ ಜೀರ್ಣೋದ್ದಾರಕ್ಕಿಂತ ಒಂದು ತಿಂಗಳು ಮೊದಲು ಮೂರ್ತಿ ಪುನಃ ಬಂದಿದೆ. ಬಳಿಯ ಮಾನಸ್ತಂಭವು ಒಂಭತ್ತು ಬಸದಿಗಳಿಗೆ ಒಟ್ಟಾಗಿ ಒಂದೇ ಇದೆ. ಬಸದಿಯ ಆವರಣದಲ್ಲಿ ದಾಸವಾಳ ಹೂವಿನ ಗಿಡವಿದೆ. ಇಲ್ಲಿಗೆ ಆಚಾರ್ಯರಾದ ವಿಶ್ವನಂದಿ ಮುನಿಗಳು, ಶ್ರೀ ವಿಮಲಸಾಗರ ಮುನಿಗಳು ಶ್ರೀ ತರುಣಸಾಗರ ಮುನಿಗಳು ಹಿಂದೆ ಬೇಟಿ ನೀಡಿದ್ದರು. ಬಸದಿಯಲ್ಲಿ ಮುನಿವಾಸದಕೋಣೆಇದ್ದುಅದನ್ನು ಈಗ ಭಕ್ತಾಧಿಗಳಿಗೆ ವಿಶ್ರಾಂತಿಗಾಗಿ ಬಳಸುತ್ತಾರೆ.[೧]
ವಿನ್ಯಾಸ
ಬದಲಾಯಿಸಿಬಸದಿಯ ಗೋಡೆಗಳ ಮುಂದೆದ್ವಾರ ಪಾಲಕರ ಚಿತ್ರ ಕಂಡುಬರುದಿಲ್ಲ. ಒಳಗೆ ವಿಶೇಷವಾಗಿ ಶಾಸನ ದೇವತೆಗಳಾದ ಶಾಮಯಕ್ಷ ಹಾಗೂ ಜ್ವಾಲಾ ಮಾಲಿನಿ ಯಕ್ಷಿಯನ್ನು ಪೂಜಿಸಲಾಗುತ್ತದೆ. ಆದರೆ ಇಲ್ಲಿ ಗಣಧರಪಾದ ಶ್ರುತ ಬ್ರಹ್ಮದೇವರು ಯಾವುದೂ ಕಂಡುಬರುವುದಿಲ್ಲ ಈ ಬಸದಿಯಲ್ಲಿ ಶ್ರೀ ಚಂದ್ರನಾಥ ಸ್ವಾಮಿಯ ಸುಂದರವಾದ ಪಂಚಲೋಹದ ವಿಗ್ರಹವು ಸುಮಾರು ೩.೫ ಎತ್ತರವಿದ್ದು. ಪದ್ಮ ಪೀಠದ ಮೇಲೆ ಬಹು ಸುಂದರವಾಗಿ ವಿರಾಜಮಾನವಾಗಿದೆ. ಮೂರ್ತಿಯಿಂದ ಸ್ವಲ್ಪ ಎದುರುಗಡೆ ಹಲವಾರು ಜೀನ ಬಿಂಬಗಳನ್ನು ಇಡಲಾಗಿದೆ. ಪ್ರಾರ್ಥಾನ ಮಂಟಪವು ಚಿಕ್ಕದಾಗಿದ್ದು, ಅದಕ್ಕೆ ಕಬ್ಬಿಣದ ಬಾಗಿಲನ್ನು ಹೆಚ್ಚಿನ ಸುರಕ್ಷತೆಗೊಸ್ಕರ ಇತ್ತಿಚೇಗೆ ಜೋಡಿಸಲಾಗಿದೆ. ಇಲ್ಲಿರುವ ಕಂಬಗಳ ಮೇಲಾಗಲಿ ಗೋಡೆಗಳ ಮೇಲಾಗಲಿ ಯಾವುದೇ ಕೆತ್ತನೆಗಳಿಲ್ಲ. ಹೊರಗಿನ ಜಗಲಿಗೆ ಬರುತ್ತಿರುವಂತೆ ಬಾಗಿಲಿನ ಎರಡು ಬದಿಗೆ ಇರುವಂತಹದ್ವಾರ ಬಂಧದ, ಮೇಲೆ ಕಲಶಗಳನ್ನು ತೋರಿಸಲಾಗಿದೆ. ಕಲಶಕ್ಕಿಂತ ಮೇಲಿನ ಭಾಗದಲ್ಲಿ ಎಲೆಯ ಮತ್ತು ಹೂವಿನ ಆಕೃತಿಗಳಿವೆ. ಎಲ್ಲಕ್ಕಿಂತ ಮೇಲಿನ ಮಧ್ಯಭಾಗದಲ್ಲಿ ಪದ್ಮಾಸನದಲ್ಲಿ ಕುಳಿತಿಕೊಂಡಿರುವ ತೀರ್ಥಶಂಕರ ಬಿಂಬವಿದೆ. ಬದಿಗಳಲ್ಲಿ ಚಾಮರಗಳು ಕಂಡುಬರುತ್ತವೆ. ಬಿಂಬದತಲೆಯ ಮೇಲ್ಭಾಭಾಗದಲ್ಲಿ ಮುಕ್ಕೋಡೆ ಇದೆ. ಅದಕ್ಕಿಂತ ಮೇಲೆ ಇರುವಂತಹ ಕಲ್ಲಿನ ತೊಲೆಯಲ್ಲಿ ರೇಖಾಕಾರದ ಹಲವಾರು ಚಿತ್ರಗಳಿವೆ. ಇನ್ನೂ ಮೇಲ್ಬಾಗದಲ್ಲಿ ಕಲ್ಲನ್ನು ಹಾಸಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಜಗಲಿಯ ಹೊರ ಭಾಗದಲ್ಲಿರುವ ಎರಡು ಕಂಬಗಳು ಅಲಂಕಾರಗೊಂಡು ವಿಜಯನಗರದ ಶಿಲ್ಪ ಶೈಲಿಗೆ ಒಳ್ಳೆಯ ಉದಾಹರಣೆಯಾಗಿದೆ. ಎಡ ಬದಿಯಕಂಬದ ಒಳ ಭಾಗದಲ್ಲಿ ರೆಕ್ಕರ ಇರುವಂತಹ ಕುದುರೆಯ ಆಕೃತಿಯನ್ನು ಕಾಣಬಹುದು. ದಕ್ಷಿಣಭಾಗಕ್ಕೆ, ನಿಂತುಕೊಂಡತಹ ಜಿನಬಿಂಬವಿದೆ. ಇದರ ಸುತ್ತಲೂ ಒಂದು ಸುಂದರವಾದ ಮಂಟಪವಿದೆ. ಅದಕ್ಕಿಂತ ಮೇಲೆ ಅದೇ ರೀತಿ ಯಜಿನಬಿಂಬದ ಕೆತ್ತನೆಯಿದೆ. ಪೂರ್ವ ಭಾಗದ ಮೈಮೇಲೆ ಯಾವುದೇ ಕೆತ್ತನೆ ಇಲ್ಲ, ಬದಲಾಗಿ ಅಲಂಕಾರಿಕ ಪಟ್ಟಿಗಳಿವೆ. ಎದುರು ಭಾಗದಲ್ಲಿ ವೀರಾವೇಶದದಿಂದ ಕುಳಿತುಕೊಂಡ ನರಸಿಂಹನ ಆಕೃತಿಯಿದೆ. ಮೇಲ್ಗಡೆಯಲ್ಲಿ ಕಾಳಿಂಗಮರ್ಧನ ಕೃಷ್ಣನ ಆಕೃತಿಯಿದೆ. ಹಾಗೇಯೇ ಇನ್ನೂ ಮೇಲೆ ಹೋದಂತೆ ಕಂಬವು ದುಂಡಗೆಯ ರಚನೆಯನ್ನು ಹೊಂದಿದೆ. ಮೇಲೆ ಬೋದುಗೆ ಇದೆ. ಬೋದುಗೆಯಲ್ಲಿಯೂ ಇನ್ನೂ ಎಡಕಂದಲ್ಲಿ ಒಳ ಮೈಗೆ ಕಲಶದ ಆಕೃತಿಯಿದ್ದು ಮೇಲ್ಗಡೆಯಲ್ಲಿ ಪುನಃ ಒಂದು ಸಿಂಹದ ಆಕೃತಿ ಇದೆ. ಅದರ ಮೇಲೆ ಕೀರ್ತಿ ಮುಖವಿದೆ. ಮೇಲೆ ಹೋದಂತೆ ವೃತ್ತಾಕಾರವನ್ನು ಹೊಂದಿದೆ. ಒಂದು ಕಡೆ ಅಶ್ವತ್ಥ ಎಲೆಗಳ ಮತ್ತು ಹೂಗಳ ರಚನೆ ಇದೆ. ಈ ಕಂಬದ ಎದುರು ಭಾಗಕ್ಕೆ ಹಂಸದ ಚಿತ್ರವಿದೆ. ಅದರಿಂದ ಮೇಲ್ಗಡೆ ನರಸಿಂಹನ ಆಕೃತಿ ಇದೆ. ಅದರ ಮೇಲೆ ಎರಡುಕಡೆ ಮುಖ ಮಾಡಿರುವ ಸಿಂಹದ ಆಕೃತಿಗಳಿವೆ. ಪಶ್ಚಿಮ ಭಾಗದ ಮೈಮೇಲೆ ಯಾವುದೇ ಆಕೃತಿಗಳಿಲ್ಲ. ದಕ್ಷಿಣ ಭಾಗದಲ್ಲಿ ಕುದುರೆಯನ್ನು ಹೋಲುವ ಆನೆಯ ಸೊಂಡಿಲಿನಂತಹ ಕಾಲ್ಪನಿಕ ಅಥವಾ ಪೌರಾಣಿಕ ಮೃಗದ ಕೆತ್ತನೆ ಇದೆ. ಮೇಲೆ ಹೋದಂತೆ ಕಂಬವು ದುಂಡಗೆಯ ಅಲಂಕಾರಿಕ ರಚನೆಯನ್ನು ಹೊಂದಿದೆ ಪ್ರಾರ್ಥನಾ ಮಂಟಪದಿಂದ ಹೊರಗೆ ಹೋಗುವಲ್ಲಿ ಮರದ ಬಾಗಿಲನ್ನು ಜೋಡಿಸಲಾಗಿದೆ. ಇತ್ತೀಚೆಗೆ ಸಿಸಿ ಕ್ಯಾಮಾರವನ್ನು ಅಳವಡಿಸಲಾಗಿದೆ. ಅದಕ್ಕಿಂತ ಮೇಲ್ಭಾಗಲ್ಲಿ ಸುಂದರವಾದ ಬೋದಿಗೆ ಇದೆ. ಅಡ್ಡಕಲ್ಲಿನ ಮಧ್ಯದಲ್ಲಿ ಅಧೋಮುಖಕ ಮಲದ ಆಕೃತಿಯನ್ನು ಕೆತ್ತಲಾಗಿದೆ. ಇದು ಇಲ್ಲಿ ಕಲಾಕಾರದ ಒಂದು ಸಂಕ್ಷಿಪ್ತ ಚಿತ್ರಣ. ಈ ಬಸದಿಯ ಮೇಲ್ಛಾಚವಣಿಯನ್ನು ಮರದ ಪಕ್ಕಾಸುಗಳನ್ನು ಅಳವಡಿಸಿ ಹಂಚಿನ ಮಾಡಿನಿಂದ ನಿರ್ಮಿಸಲಾಗಿದೆ. ಸ್ಥಳೀಯ ಶ್ರೀ ಮಠದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕರು ಕೊಡುವ ಸಹಾಯವೇ ಈ ಬಸದಿಯ ಆದಾಯ. ಸರಕಾರದ ಸಹಾಯವನ್ನು ಇದುವರೆಗೆ ಕೇಳಲಿಲ್ಲ. ಬಸದಿಗೆ ಪ್ರತ್ಯೇಕವಾದ ಕಾರ್ಯಲಯಗಳಾಗಲೀ ಅನ್ನಛತ್ರವಾಗಲೀ ಇಲ್ಲ. ಮುಂದೆ ಮಾಡುವ ಯೋಜನೆಯೂ ಇಲ್ಲ. ಬಸದಿಯ ನೀರಿನ ವ್ಯವಸ್ಥೆಗಾಗಿ ಬಾವಿ ಇದೆ, ನಳ್ಳಿಯ ವ್ಯವಸ್ಥೆ ಇಲ್ಲ. ಈ ಬಸದಿಯ ಆವರಣಗೋಡೆಯನ್ನು ಮುರಕಲ್ಲಿನಿಂದ ನಿರ್ಮಿಸಲಾಗಿದೆ.
ವಿಧಿ ವಿಧಾನ
ಬದಲಾಯಿಸಿಸ್ವಾಮಿಗೆ ಪೂಜೆಯನ್ನು ದಿನಕ್ಕೆ ಒಂದು ಬಾರಿ ಮಾಡಲಾಗುತ್ತದೆ. ರಥೋತ್ಸವ, ವಾರ್ಷಿಕೋತ್ಸವ ಇತ್ಯಾದಿ ವಿಶೇಷ ಆಚರಣೆಗಳನ್ನು ಮಾಡಲಾಗುದಿಲ್ಲ. ಸ್ವಾಮಿಗೆ ಜಲಾಭಿಷೇಕ, ಕ್ಷೀರಾಭಿಷೇಕ, ಪಂಚಮೃತಾಭಿಷೇಕಗಳನ್ನು ಮಾಡಲಾಗುತ್ತದೆ. ಅಭಿಷೇಕದ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದ್ದು, ನೈರ್ಮಲ್ಯಕ್ಕೆ ವಿಶೇಷ ಪ್ರಾಧ್ಯಾನ್ಯತೆ ಕೊಡಲಾಗಿದೆ.
ಉಲ್ಲೇಖಗಳು
ಬದಲಾಯಿಸಿ- ↑ ಶೆಣೈ, ಉಮಾನಥ.ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೫ ed.). ಮಂಜುಶ್ರೀ ಪ್ರಿಂಟರ್ಸ್. p. ೩೪-೩೫.