ಚಂದ್ರನಾಥಸ್ವಾಮಿ ಗುಮ್ಮೆಗುತ್ತು ಬಸದಿ, ನೂರಾಳ್‌ಬೆಟ್ಟು

ಗುಮ್ಮೆಗುತ್ತು ಬಸದಿಯ ಕಾರ್ಕಳ ತಾಲೂಕು ಈದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ನೂರಾಳ್‌ಬೆಟ್ಟು ಗ್ರಾಮದಲ್ಲಿದೆ. ಬಸದಿಯ ಹತ್ತಿರ ಪ್ರಾಥಮಿಕ ಶಾಲೆ ಇದೆ. ಇದಕ್ಕೆ ೫ ಕಿ.ಮೀ. ವ್ಯಾಪ್ತಿಯಲ್ಲಿ ಮಾಗಣೆ ಬಸದಿ ನಾರಾವಿಯ ಶ್ರೀ ಧರ್ಮನಾಥ ಸ್ವಾಮಿ ಬಸದಿಯಿದೆ. ಗುಮ್ಮೆಗುತ್ತು ಬಸದಿಗೆ ಸುಮಾರು ೭೦ ಜೈನ ಕುಟುಂಬಗಳಿವೆ. ಬಸದಿಯು ಕಾರ್ಕಳದ ದಾನಶಾಲಾ ಮಠದ ವ್ಯಾಪ್ತಿಗೊಳಪಟ್ಟಿದೆ. ಇದು ಧರ್ಮಸ್ಥಳ- ಕಾರ್ಕಳ ರಸ್ತೆಯಲ್ಲಿ ಸಿಗುವ ಈದು ಕ್ರಾಸ್‌ನಿಂದ ೫ ಕಿ.ಮೀ ದೂರದಲ್ಲಿದೆ.[]

ಇತಿಹಾಸ

ಬದಲಾಯಿಸಿ

ಬಸದಿಯನ್ನು ಸುಮಾರು ೧೫೦ ವರ್ಷಗಳ ಹಿಂದೆ ನಾರ್ಣಪ್ಪ ಮಲ್ಲರು ಊರವರ ಸಹಕಾರದಿಂದ ಕಟ್ಟಿಸಿರುತ್ತಾರೆ ಎಂದು ತಿಳಿದುಬರುತ್ತದೆ. ಅವರು ಆಸ್ತಿ ಪರಾಭಾರೆ ಮಾಡಿ ಹೋಗಿರುವುದರಿಂದ ಅವರ ಸಂತತಿಯವರು ಈಗ ಇಲ್ಲಿ ಯಾರೂ ಇಲ್ಲ. ಸುಮಾರು ೧೫೦ ವರ್ಷಗಳ ಹಿಂದೆ ಧಾರ್ಮಿಕ ಆಚರಣೆಯಾದ ಅನಂತ ನೋಂಪಿ ನಿರ್ವಹಿಸುವಾಗ ಬಂದ ಸಂಘರ್ಷದಿಂದ ಈ ಪ್ರತ್ಯೇಕ ಬಸದಿ ರಚಿಸಲ್ಪಟ್ಟಿತ್ತು. ಬಸದಿಗೆ ಮೇಗಿನ ನೆಲೆ ಇದೆ. ಯಾವುದೇ ವಿಗ್ರಹಗಳಿಲ್ಲ.

ಆರಾಧನೆ ಮತ್ತು ರಚನೆ

ಬದಲಾಯಿಸಿ

ಪಾರ್ಶ್ವನಾಥಸ್ವಾಮಿ, ಸುಪಾರ್ಶ್ವನಾಥಸ್ವಾಮಿ, ಪದ್ಮಾವತಿಯಮ್ಮ, ಜ್ವಾಲಾಮಾಲಿನಿ, ಬ್ರಹ್ಮದೇವರು, ನಾಗದೇವರು ಇದ್ದಾರೆ. ಬಸದಿಗೆ ಮಾನಸ್ತಂಭವಿಲ್ಲ. ಬಸದಿಯ ಹಿಂಬದಿಯಲ್ಲಿ ಪಾರಿಜಾತ ಗಿಡವಿದೆ. ಬಸದಿಯ ಮುಂದುಗಡೆಯ ಗೋಪುರವನ್ನು ಎಲ್ಲಾ ಧಾರ್ಮಿಕ ಕೆಲಸಗಳಿಗೆ ಉಪಯೋಗಿಸುತ್ತಾರೆ.ಅಂಗಳದ ಎಡಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ. ನಾಗರಕಲ್ಲು ಇದೆ. ಬಸದಿಯ ಪ್ರಾಕಾರ ಗೋಡೆಯನ್ನು ಕರ್ಗಲ್ಲಿನಿಂದ ಕಟ್ಟಿದ್ದಾರೆ. ಪ್ರಾರ್ಥನಾ ಮಂಟಪದಲ್ಲಿ ೪ ಕಂಬಗಳಿವೆ. ಅಲ್ಲೇ ಘಂಟೆಯನ್ನು ತೂಗು ಹಾಕಲಾಗಿದೆ. ತೀರ್ಥ ಮಂಟಪ ಇದೆ. ಗಂಧಕುಟಿಯ ತೀರ್ಥಂಕರ ಮಂಟಪದಲ್ಲಿದೆ. ಮಾತೆ ಪದ್ಮಾವತಿಯ ಮೂರ್ತಿ ಇದ್ದು. ಅಮ್ಮನವರ ಮೂರ್ತಿ ಉತ್ತರಾಭಿಮುಖವಾಗಿದ್ದು, ಕುಕ್ಕುಟ ಸರ್ಪ ಇದೆ. ಅಮ್ಮನವರ ಎದುರು ಹೂ ಹಾಕಿ ನೋಡುವ ಕ್ರಮ ಇದೆ. ಇಲ್ಲಿರುವ ಜಿನಬಿಂಬಗಳ ಮೇಲೆ ಪ್ರಾಚೀನ ಬರವಣಿಗೆ ಕಾಣುವುದಿಲ್ಲ. ಬ್ರಹ್ಮದೇವರ ಸಾನ್ನಿಧ್ಯದಲ್ಲಿ ಶಿಲಾಶಾಸನವಿದೆ.

ನಿತ್ಯ ಪೂಜೆ ನಡೆಯುತ್ತದೆ.ಪ್ರಾರ್ಥನೆ, ಹರಕೆಗಳನ್ನು ಪದ್ಮಾವತೀ ದೇವಿಯ ಸನ್ನಿಧಿಯಲ್ಲಿ ನಡೆಸಲಾಗುತ್ತದೆ. ಬಸದಿಯಲ್ಲಿ ದಿನಕ್ಕೆ ೨ ಬಾರಿ ಪೂಜೆ ನಡೆಯುತ್ತದೆ. ನವರಾತ್ರಿ ಪೂಜೆ, ಕ್ಷೀರಾಭಿಷೇಕ, ಪದ್ಮಾವತೀ ಅಮ್ಮನವರಲ್ಲಿ ವಾರ್ಷಿಕ ಮಹಾಪೂಜೆ ನಡೆಯುತ್ತದೆ. ಸರಕಾರದಿಂದ ಯಾವುದೇ ಧನಸಹಾಯವಿಲ್ಲ.

ಉಲ್ಲೇಖಗಳು

ಬದಲಾಯಿಸಿ
  1. ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂ ಶ್ರೀ ಪ್ರಿಂಟರ್ಸ್. pp. ೮೪.