ಚಂದಾ ಜಯಂತ್ ಜೋಗ್ ರವರು(೭ ನವೆಂಬರ್ ೧೯೫೪) ಭಾರತದ ಖಗೋಳಶಾಸ್ತ್ರಜ್ಞೆ. [೨] ಇವರು ಪ್ರಸ್ತುತವಾಗಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಅಧ್ಯಯನವು ಗ್ಯಾಲಕ್ಟಿಕ್ ಡೈನಮಿಕ್ಸ್ [೩], ಇಂಟರ್ಯಾಕ್ಟಿಂಗ್ ಅಂಡ್ ಸ್ಟಾರ್ ಬರ್ಸ್ಟ್ ಗ್ಯಾಲಕ್ಸೀಸ್ ಮತ್ತು ಇಂಟರ್ ಸ್ಟೆಲ್ಲರ್ ಮಾಲಿಕ್ಯುಲರ್ ಕ್ಲೌಡ್ಸ್ ನಲ್ಲಿ ಪರಿಣಿತಿಯನ್ನು ಪಡೆದಿದೆ. ಗ್ಯಾಲಕ್ಟಿಕ್ ಡೈನಮಿಕ್ಸ್ ಮತ್ತು ಗ್ಯಾಲಕ್ಸೀಸ್ ಬಗ್ಗೆ ಅವರು ಸುಮಾರು ೮೫ ಲೇಖನಗಳನ್ನು ಪ್ರಕಟಿಸಿದ್ದಾರೆ.[೪]

ಚಂದಾ ಜಯಂತ್ ಜೋಗ್
ಜನನನವೆಂಬರ್ ೧೯೫೪
ವಾಸಸ್ಥಳಬೆಂಗಳೂರು
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಖಗೋಳಶಾಸ್ತ್ರ
ಸಂಸ್ಥೆಗಳುಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್[೧]
ಅಭ್ಯಸಿಸಿದ ವಿದ್ಯಾಪೀಠಸ್ಟೋನಿ ಬ್ರೂಕ್ ಯುನಿವರ್ಸಿಟಿ
ಸಂಗಾತಿಆಲೋಕ್ ಜೈನ್

ಜನನಸಂಪಾದಿಸಿ

ಚಂದಾ ರವರು ೭ ನವೆಂಬರ್ ೧೯೫೪ ರಂದು ಜನಿಸಿದರು.[೫]

ಆರಂಭಿಕ ಜೀವನಸಂಪಾದಿಸಿ

ಚಂದಾ ರವರು ತನ್ನ ಬಾಲ್ಯ ಜೀವನವನ್ನು ಮಹಾರಾಷ್ಟ್ರಕಲ್ವಾದಲ್ಲಿ ಕಳೆದರು. ಅವರ ತಂದೆ ಇಂಜಿನಿಯರ್ ಆಗಿ ಕೆಲಸ ಮಾಡಿತ್ತಿದ್ದರು.[೬]

ವೃತ್ತಿ ಜೀವನಸಂಪಾದಿಸಿ

ಸ್ಟೋನಿ ಬ್ರೂಕ್ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟೋರಲ್ ವಿದ್ಯಾಭ್ಯಾಸದ ನಂತರ ಪ್ರಿನ್ಸ್ಟನ್ ನಲ್ಲಿ ಅವರು ಪೋಸ್ಟ್ ಡಾಕ್ಟೋರಲ್ ಸಹವರ್ತಿಯಾಗಿ ಮತ್ತು ವರ್ಜೀನಿಯಾದ ಪ್ರೊಫೆಸರ್ ಆಗಿ ಕೆಲಸ ಮಾಡಿದರು. ನಂತರ ೧೯೮೭ ರಲ್ಲಿ ಭಾರತಕ್ಕೆ ಮರಳಿ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ತಮ್ಮ ಕೆಲಸವನ್ನು ಮುಂದುವರೆಸಿದರು. ನಂತರ ನಕ್ಷತ್ರ ಅನಿಲದ ಅಸ್ಥಿರತೆಗಳು ಮತ್ತು ನಕ್ಷತ್ರಪುಂಜಗಳ ಬಗ್ಗೆ ತನ್ನ ಅಭ್ಯಾಸವನ್ನು ಮುಂದುವರೆಸಿದರು.[೭]

ಪ್ರಶಸ್ತಿಗಳುಸಂಪಾದಿಸಿ

  • ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಿಂದ ಪ್ರೊ.ಎಸ್.ಕೆ.ಚಟರ್ಜಿ ಅವಾರ್ಡ್ - ೨೦೧೨.
  • ಹೋಮಿ.ಜೆ.ಬಾಬಾ ಮೆಡಲ್ , ಇಂಡಿಯನ್ ನ್ಯಾಷನಲ್ ಸೈನ್ಸ್‌ ಅಕಾಡಮಿ - ೨೦೧೭.
  • ಯುನಿವರ್ಸಿಟಿ ಆಫ್ ಬಾಂಬೆ ಪ್ರಶಸ್ತಿ - ೧೯೭೪.[೮]

ಉಲ್ಲೇಖಗಳುಸಂಪಾದಿಸಿ