ಘಾಟಿಯಾನ ದ್ವಿವರ್ಣ

ಘಾಟಿಯಾನ ದ್ವಿವರ್ಣ ಎಂಬುದು ಸಿಹಿನೀರಿನ ಏಡಿ ಪ್ರಭೇದದ ಹೆಸರು. ಇವು ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಪತ್ತೆಯಾಗಿದ್ದಾಗಿವೆ. ೨೦೨೨ರ ಆಗಸ್ಟ್ ೧೫ರಂದು ಇದರ ಪತ್ತೆಯನ್ನು ಘೋಷಿಸಲಾಯಿತು.[] ಈ ಏಡಿಯ ದೇಹವು ಎರಡು ಬಣ್ಣಗಳನ್ನು ಹೊಂದಿರುವುದರಿಂದ ದ್ವಿ (ಎರಡು) ವರ್ಣ(ಬಣ್ಣ) ಎಂಬ ಹೆಸರನ್ನು ಇಡಲಾಗಿದೆ. ಈ ಏಡಿಯ ಮೈ ಬಿಳಿಬಣ್ಣದ್ದಾಗಿದ್ದು ಇದರ ಕಾಲುಗಳು ನೇರಳೆ ಬಣ್ಣದಲ್ಲಿರುತ್ತವೆ. ಪಶ್ಚಿಮಘಟ್ಟದ ಏಡಿ ಪ್ರಭೇದಗಳಲ್ಲಿ ಇದು ೭೫ನೆಯದ್ದಾಗಿದೆ.[]

ಘಾಟಿಯಾನ ದ್ವಿವರ್ಣ ಏಡಿ

ವಾಸಸ್ಥಳ ಮತ್ತು ಆಹಾರ

ಬದಲಾಯಿಸಿ

ಈ ಏಡಿಗಳು ಸಿಹಿನೀರಿನಲ್ಲಿ ಬಂಡೆಗಳ ಬಿರುಕುಗಳಲ್ಲಿ ವಾಸಿಸುತ್ತವೆ. ಅವು ಸಣ್ಣ ಹುಳುಗಳು ಮತ್ತು ಪಾಚಿಗಳನ್ನು ತಿನ್ನುತ್ತವೆ. ಇವು ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಮುಸ್ಸಂಜೆ ಮತ್ತು ಮುಂಜಾವದಲ್ಲಿ ಹೆಚ್ಚು ಚಟುವಟಿಕೆಯನ್ನು ತೋರಿಸುತ್ತವೆ.[][]

ಪತ್ತೆ ಮತ್ತು ಅಧ್ಯಯನ

ಬದಲಾಯಿಸಿ

ಈ ಏಡಿಯನ್ನು ಮೊಟ್ಟಮೊದಲನೆಯದಾಗಿ ನಿಸರ್ಗ ಉತ್ಸಾಹಿ ಗೋಪಾಲಕೃಷ್ಣ ಹೆಗಡೆ, ಅರಣ್ಯ ಇಲಾಖೆ ಸಿಬ್ಬಂದಿ ಪರಶುರಾಮ ಪ್ರಭು ಭಜಂತ್ರಿಯವರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಬಾರೆ ಎಂಬ ಊರಿನಲ್ಲಿ ಪತ್ತೆ ಹಚ್ಚಿದರು.[] ಅನಂತರ ಇದರ ಪ್ರಭೇದ ವರ್ಗೀಕರಣ ಅಧ್ಯಯನವನ್ನು ಜೂಆಲಜಿಕಲ್ ಸರ್ವೆ ಆಫ್ ಇಂಡಿಯಾದ ಡಾ. ಸಮೀರ್ ಕುಮಾರ್ ಪತಿ ಮತ್ತು ಠಾಕರೆ ವೈಲ್ಡ್ ಲೈಫ್ ಫೌಂಡೇಶನ್ ತೇಜಸ್ ಠಾಕರೆಯವರು ಕರ್ನಾಟಕ ಅರಣ್ಯ ಇಲಾಖೆಯೊಂದಿಗೆ ಸೇರಿ ಮಾಡಿದರು.[] Brazilian Crustacean Society (BCS) ಪ್ರಕಟಿಸುವ ಅಂತಾರಾಷ್ಟ್ರೀಯ ಜರ್ನಲ್ Nauplius ನಲ್ಲಿ ಇದರ ಬಗ್ಗೆ ಸಂಶೋಧನಾ ಲೇಖನವನ್ನು ಪ್ರಕಟಿಸಲಾಯಿತು.[]

ಉಲ್ಲೇಖಗಳು

ಬದಲಾಯಿಸಿ


ಹೊರಕೊಂಡಿಗಳು

ಬದಲಾಯಿಸಿ