ಗ್ರ್ಯಾಂಡ್‍ಪೇರಂಟ್

ಅಜ್ಜ ಅಜ್ಜಿ ಒಬ್ಬ ವ್ಯಕ್ತಿಯ ತಂದೆ ಅಥವಾ ತಾಯಿಯ ಹೆತ್ತವರು - ತಂದೆ ಅಥವಾ ತಾಯಿ ಕಡೆಯ ಸಂಬಂಧದವರು. ಆಧುನಿಕ ಮಾನವಕುಲದ ಇತಿಹಾಸದಲ್ಲಿ, ಸುಮಾರು ೩೦,೦೦೦ ವರ್ಷಗಳಷ್ಟು ಹಿಂದೆ, ಅಜ್ಜ ಅಥವಾ ಅಜ್ಜಿಯಾಗಿ ಜೀವಿಸಿದ ಆಧುನಿಕ ಮಾನವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿತು. ಆಯುಷ್ಯದಲ್ಲಿ ಈ ಹೆಚ್ಚಳಕ್ಕೆ ಪ್ರಚೋದನೆ ಏನೆಂದು ನಿರ್ದಿಷ್ಟವಾಗಿ ತಿಳಿದಿಲ್ಲ, ಆದರೆ ಮೂರು ತಲೆಮಾರುಗಳು ಒಟ್ಟಿಗೆ ಜೀವಿಸಿದ್ದುದರ ಒಂದು ಪ್ರಮುಖ ಪರಿಣಾಮ ಕಳೆದುಹೋಗಬಲ್ಲ ಮಾಹಿತಿಯ ಸಂರಕ್ಷಣೆ ಎಂದು ಸಾಮಾನ್ಯವಾಗಿ ನಂಬಲಾಗಿದೆ; ಬರಗಾಲದ ಸಮಯದಲ್ಲಿ ಎಲ್ಲಿ ನೀರು ಹುಡುಕುವುದು ಎನ್ನುವುದು ಈ ಪ್ರಮುಖ ಮಾಹಿತಿಯ ಒಂದು ಉದಾಹರಣೆಯಾಗಿದ್ದಿರಬಹುದು.[][]

ಅಜ್ಜನ ಜೊತೆ ಮೊಮ್ಮಗ

ಹೆತ್ತವರು ತಮ್ಮ ಮಕ್ಕಳಿಗೆ ಸಾಕಷ್ಟು ಪಾಲನೆ ಒದಗಿಸಲು ಇಷ್ಟಪಡದ ಅಥವಾ ಸಾಧ್ಯವಾಗದ (ಉದಾ. ಹೆತ್ತವರ ಸಾವು) ಸಂದರ್ಭಗಳಲ್ಲಿ, ಅಜ್ಜ ಅಜ್ಜಿಯರು ಹಲವುವೇಳೆ ಪ್ರಾಥಮಿಕ ಪೋಷಕರ ಪಾತ್ರವಹಿಸುತ್ತಾರೆ. ಇದು ನಿಜವಿಲ್ಲದ ಸಂದರ್ಭದಲ್ಲಿ ಕೂಡ, ವಿಶೇಷವಾಗಿ ಸಾಂಪ್ರದಾಯಿಕ ಸಂಸ್ಕೃತಿಗಳಲ್ಲಿ, ಅಜ್ಜ ಅಜ್ಜಿಯರು ಹಲವುವೇಳೆ ಮಕ್ಕಳ ಪೋಷಣೆ, ಪಾಲನೆ ಮತ್ತು ಆರೈಕೆಯ ಸಂಬಂಧದಲ್ಲಿ ನೇರ ಮತ್ತು ಸ್ಪಷ್ಟ ಪಾತ್ರ ಹೊಂದಿರುತ್ತಾರೆ. ಅಜ್ಜ ಅಜ್ಜಿಯರು ಎರಡನೆ ದರ್ಜೆಯ ಸಂಬಂಧಿಕರು ಮತ್ತು ಶೇಕಡ ೨೫ ರಷ್ಟು ಆನುವಂಶಿಕ ಮೇಲು ವ್ಯಾಪನವನ್ನು ಹಂಚಿಕೊಳ್ಳುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. Wong, Kate. "The Mysterious Downfall of the Neandertals". Scientific American. Retrieved 2013-03-24.
  2. Caspari, R. (2012). "The Evolution of Grandparents". Scientific American. 22: 38. doi:10.1038/scientificamericanhuman1112-38.