ಗ್ರಂಥಾಲಯ ವಿಜ್ಞಾನ

ಇತಿಹಾಸ

ಬದಲಾಯಿಸಿ

ಗ್ರಂಥಾಲಯಗಳಲ್ಲಿನ ವಿವಿಧ ಗ್ರಂಥಗಳ ಪಾಲನ, ಸಂಗ್ರಹಣೆ, ಯುಕ್ತ ವಿತರಣೆ ; ಗ್ರಂಥಗಳಿಗೆ ಮತ್ತು ಇತರ ಜ್ಞಾನ ಸಾಧನೆಗಳಿಗೆ ಸಂಬಂಧಿಸಿದಂತೆ ಬೇರೆಬೇರೆ ಸೂಚಿಗಳ ತಯಾರಿಕೆ, ಗ್ರಂಥಾಲಯದ ಹಣಕಾಸಿನ ವ್ಯವಹಾರದ ಸಮರ್ಪಕ ನಿರ್ವಹಣೆ, ಯಂತ್ರ ಹಾಗೂ ಆಧುನಿಕ ತಂತ್ರಗಳಿಂದ ಗ್ರಂಥಾಲಯ ವ್ಯವಸ್ಥೆಯನ್ನು ನವೀಕರಿಸುವ ಕೆಲಸ-ಮುಂತಾದ ಎಲ್ಲ ವಿಷಯಗಳನ್ನೂ ಒಳಗೊಂಡ ಗ್ರಂಥಾಲಯ ಶಾಸ್ತ್ರವನ್ನು ಈ ಹೆಸರಿನಿಂದ ಕರೆಯಲಾಗಿದೆ. (ಲೈಬ್ರರಿ ಸೈನ್ಸ್). ಇದು ಒಂದು ಶಾಸ್ತ್ರವಾಗಿ ರೂಪುಗೊಂಡು ಬೆಳೆದದ್ದು ಇಪ್ಪತ್ತನೆಯ ಶತಮಾನದಲ್ಲಿ. ಅಮೇರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಮೊದಲಾದ ಮುಂದುವರಿದ ರಾಷ್ಟ್ರಗಳಲ್ಲಿ ಇದು ಬಹುಬೇಗ, ಬಹು ಚೆನ್ನಾಗಿ ಅಭಿವೃದ್ಧಿ ಹೊಂದಿತು. ಈ ವಿಷಯದಲ್ಲಿ ಗ್ರಂಥಾಲಯ ಸಿಬ್ಬಂದಿ ವರ್ಗಕ್ಕೆ ತರಬೇತಿ ಕೊಡಲು ಅನೇಕಾನೇಕ ಶಿಕ್ಷಣಶಾಲೆಗಳು ಹುಟ್ಟಿಕೊಂಡವು. ಅಭಿವೃದ್ದಿ ಹೊಂದುತ್ತಿರುವ ಇತರ ರಾಷ್ಟ್ರಗಳಲ್ಲಿ ಇಂಥ ಪ್ರಯತ್ನ ನಡೆದದು ಸ್ವಲ್ಪ ತಡವಾಗಿಯೇ. ಆದರೂ ಭಾರತ, ಆಫ್ರಿಕ, ಲ್ಯಾಟಿನ್ ಅಮೇರಿಕ, ಮೊದಲಾದ ರಾಷ್ಟ್ರಗಳಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಗ್ರಂಥಾಲಯ ವಿಜ್ಞಾನಕ್ಕೆ ಶಾಶ್ವತವಾದ ನೆಲೆ ಮತ್ತು ಬೆಲೆ ಬಂದಿರುವುದು ಮುಖ್ಯವಾಗಿ ವಿಶ್ವಸಂಸ್ಥೆಯ ಅಂಗವಾದ ಯುನೆಸ್ಕೋದ ಸಹಾಯ ಹಾಗೂ ಪ್ರೋತ್ಸಾಹದಿಂದ, ಅಲ್ಲದೆ ಅಂತರರಾಷ್ಟ್ರೀಯ ಗ್ರಂಥಾಲಯಗಳ ಸಂಯುಕ್ತ ಮಹಾಸಂಘ. ಅಮೆರಿಕದ ಗ್ರಂಥಾಲಯ ಸಂಘ. ಭಾರತ ಗ್ರಂಥಾಲಯ ಸಂಘ, ಪ್ರಲೇಖನಕ್ಕೆ ಸಂಬಂಧಪಟ್ಟ ಅನೇಕ ಸಂಘಗಳು-ಈ ಮೊದಲಾದ ಸಂಸ್ಥೆಗಳು ಗ್ರಂಥಾಲಯಗಳ ಅಭಿವೃದ್ಧಿಯ ಬಗ್ಗೆ ಹೇಗೋ ಹಾಗೆ ಗ್ರಂಥಾಲಯ ಶಿಕ್ಷಣದ ಬಗ್ಗೆಯೂ ಹೆಚ್ಚಿನ ಕೆಲಸ ಮಾಡಿವೆ, ಮಾಡುತ್ತಿವೆ.

ಪ್ರಸ್ತುತ ಲೇಖನದಲ್ಲಿ ಗ್ರಂಥಾಲಯ

ಬದಲಾಯಿಸಿ

ವಿಜ್ಞಾನ ಹಾಗೂ ಶಿಕ್ಷಣ ಪದ್ಧತಿಗಳು ಬೆಳೆದು ಬಂದ ರೀತಿಯನ್ನು ಸಿಂಹಾವಲೋಕನ ಕ್ರಮದಿಂದ ಇಲ್ಲಿ ರೂಪಿಸಲಾಗಿದೆ. ಮಿಕ್ಕಂತೆ ಗ್ರಂಥಾಲಯಗಳ ಉಗಮ ಹಾಗೂ ಬೆಳೆವಣಿಗೆ, ಗ್ರಂಥಾಲಯ ಪ್ರಕಾರಗಳು, ಪ್ರಮುಖ ಗ್ರಂಥಾಲಯ ಸಂಘಗಳು, ಪ್ರಸಿದ್ಧ ಗ್ರಂಥವಿಜ್ಞಾನಿಗಳು ಮೊದಲಾದ ವಿಷಯಗಳ ವಿವರಗಳು ಗ್ರಂಥಾಲಯ ಎಂಬ ಬೃಹದ್ ಲೇಖನದಲ್ಲಿ ಬಂದಿವೆ.

ಪ್ರಾಚೀನ ಭಾರತದಲ್ಲಾಗಲಿ ಗ್ರೀಸ್, ರೋಮ್ ಹಾಗೂ ಮಧ್ಯ ಯುಗೀನ ಯುರೋಪಿನಲ್ಲಾಗಲಿ ಪ್ರಸಿದ್ಧ ಗ್ರಂಥಾಲಯಗಳು ಇದ್ದುವೆನ್ನಲು ಆಧಾರಗಳು ಇವೆಯಾದರೂ ಅವುಗಳ ವ್ಯವಸ್ಥೆ ಹೇಗಿತ್ತು. ಗ್ರಂಥವಿಂಗಡಣೆ ಹೇಗಿದ್ದವು, ಆಗಿದ್ದ ಸೂಚಿಗಳು ಹೇಗಿದ್ದವು ಎಂಬ ಬಗ್ಗೆ ವಿವರಗಳು ಹೆಚ್ಚಾಗಿ ಉಳಿದು ಬಂದಿಲ್ಲ. ಆದರೆ ಅನೇಕ ಗ್ರಂಥಾಲಯಗಳಲ್ಲಿ ಒಳ್ಳೆಯ ವ್ಯವಸ್ಥೆ ಇತ್ತು ಎಂದು ತಿಳಿಯಲು ಅಲ್ಪಸ್ವಲ್ಪ ಆಧಾರ ದೊರೆಯುತ್ತದೆ. ಇದರ ಪ್ರಸ್ತಾಪ ಗ್ರಂಥಾಲಯ ಎಂಬ ಲೇಖನದ ಭಾಗ-1 ರಲ್ಲಿ ಬಂದಿದೆ.

ಮುದ್ರಣ ಯಂತ್ರದ ಆವಿರ್ಭಾವದಿಂದಾಗಿ (15ನೆಯ ಶತಮಾನ) ಪ್ರಪಂಚದ ನಾನಾ ಭಾಗಗಳಿಗೆ ವಿದ್ಯಾಭ್ಯಾಸ ಹರಡಿ ಜನ ಹೆಚ್ಚುಹೆಚ್ಚಾಗಿ ಓದುಬರೆಹವನ್ನು ಕಲಿಯಲು ತೊಡಗಿದಾಗ ಗ್ರಂಥಾಲಯಗಳು ಬೆಳೆದುವಲ್ಲದೆ ಅವನ್ನು ಶಾಸ್ತ್ರೀಯವಾಗಿ ವ್ಯವಸ್ಥಿತಗೊಳಿಸಲು ಗ್ರಂಥಾಲಯ ಸಿಬ್ಬಂದಿಗೆ ಆ ಬಗ್ಗೆ ಶಿಕ್ಷಣ ಕೊಡಲು ಪ್ರಯತ್ನಗಳು ಪ್ರಾರಂಭವಾದುವು. ಈ ಕೆಲಸ ಭಾರತದಲ್ಲಿ ಹೇಗೆ ಮೊದಲಾಯಿತೆಂಬುದನ್ನು ನೋಡಬಹುದು.

ವಿಲಿಯಮ್ ಅಲಸನ್ ಬೋರ್‍ಡೆನ್ ಬರೋಡ ಸಂಸ್ಥಾನದಲ್ಲಿ ಒಂದು ಉಚಿತ ಸಾರ್ವಜನಿಕ ವಾಚನಾಲಯವನ್ನು ವ್ಯವಸ್ಥೆಗೊಳಿಸಿದಾಗ (1911) ಮೊತ್ತಮೊದಲಿಗೆ ಗ್ರಂಥಪಾಲ ಶಿಕ್ಷಣ ಕಾರ್ಯ ಪ್ರಾರಂಭವಾಯಿತೆನ್ನಬಹುದು. ಬೋರ್‍ಡೆನ್ ಇಂಥ ಶಿಕ್ಷಣವನ್ನು ಪ್ರಾರಂಭಿಸಲು ರಾಜ್ಯಸರ್ಕಾರದಿಂದ 1911ರ ಮಾರ್ಚಿಯಲ್ಲಿ ಅನುಮತಿ ಪಡೆದ. ಮುಂಬಯಿ ವಿಶ್ವವಿದ್ಯಾಲಯದ 6 ಜನ ಪದವೀಧರರನ್ನು, 6 ಜನ ಸ್ನಾತಕಪೂರ್ವ ಪದವೀಧರರನ್ನು ತಲಾ ರೂ. 25 ವಿದ್ಯಾರ್ಥಿವೇತನವನ್ನು ಕೊಟ್ಟು ವ್ಯಾಸಂಗಕ್ಕೆ ಸೇರಿಸಿಕೊಳ್ಳುವುದು ಎಂದು ತೀರ್ಮಾನಿಸಲಾಯಿತು. ತರಬೇತಿಯ ಜೊತೆಗೆ ಹೆಚ್ಚಿನ ವಿದ್ಯಾರ್ಹತೆ ಪಡೆದಿರುವವರನ್ನು ಮೇಲ್ತರಗತಿಯ ಗ್ರಂಥಪಾಲರೆಂದು ಪರಿಗಣಿಸಿ ರೂ. 60 ರಿಂದ ರೂ. 100ರ ವರಗೆ ಮತ್ತು ಕಡಿಮೆ ವಿದ್ಯಾರ್ಹತೆ ಪಡೆದವರನ್ನು ಕೆಳದರ್ಜೆಯ ಗ್ರಂಥಪಾಲಕರೆಂದು ಪರಿಗಣಿಸಿ ರೂ. 30 ರಿಂದ ರೂ. 50ರ ವರಗೆ ಸಂಬಳ ಕೊಡಬೇಕೆಂದೂ ತೀರ್ಮಾನವಾಯಿತು. ಈ ಶಿಕ್ಷಣಕ್ಕೆ ಬ್ರಿಟಿಷ್ ಇಂಡಿಯಾದ ಗ್ರಂಥಪಾಲರಿಗೆ ಸಹ ಪ್ರವೇಶವಿತ್ತಾದರೂ ಶಿಕ್ಷಣಕ್ಕಾಗಿ ಬಂದವರು ಹೆಚ್ಚಾಗಿ ದೇಶೀಯ ಸಂಸ್ಥಾನಗಳವರೇ. ಬ್ರಿಟಿಷ್ ಇಂಡಿಯದಿಂದ ಬಂದವ ಒಬ್ಬನೇ. ಈ ಶಿಕ್ಷಣ 1924ರಿಂದ ಆಚೆಗೂ ಮುಂದುವರಿಯಿತೆಂದು ಹೇಳಲು ಯಾವ ಆಧಾರವೂ ಇಲ್ಲ.

ಈ ಶಿಕ್ಷಣಶಾಲೆಯಲ್ಲಿ ಮುಖ್ಯವಾಗಿ ಗ್ರಂಥಾಲಯದ ನಾನಾ ದಾಖಲೆಗಳನ್ನು ದುಂಡಾದ ಅಕ್ಷರಗಳಲ್ಲಿ ಬರೆದಿಡುವುದು, ಪುಸ್ತಕದ ಆಕಾರವನ್ನು ಅಳತೆ ಮಾಡುವುದು, ಹೊಸ ಪುಸ್ತಕಗಳು ಬಂದ ತತ್‍ಕ್ಷಣ ಪುಟಗಳು ಸರಿಯಾಗಿವೆಯೇ ಎಂದು ನೋಡುವುದು, ಕಾಗದವನ್ನು ಪರೀಕ್ಷಿಸುವುದು, ಪುಸ್ತಕಗಳನ್ನು ರಿಪೇರಿ ಮಾಡುವುದು ಮತ್ತು ಅವುಗಳಿಗೆ ರಟ್ಟುಕಟ್ಟುವುದು, ಸೂಚೀಕಾರ್ಡುಗಳನ್ನು ಬರೆಯುವುದು, ಪುಸ್ತಕದಲ್ಲಿರುವ ಅಪೂರ್ವ ಚಿತ್ರಪಟಗಳ ಬಗ್ಗೆ ತೆಗೆದುಕೊಳ್ಳಬೇಕಾದ ಎಚ್ಚರಿಕೆ, ಪುಸ್ತಕಗಳಿಗೆ ಕ್ರಮಾಂಕ ಮತ್ತು ಸೂಚೀಕರಣ ಚಿಹ್ನೆಗಳ ಅಳವಡಿಕೆ, ಪುಸ್ತಕ ವಿತರಣೆ, ಪ್ರತಿದಿನದ ಕೆಲಸದ ದಾಖಲೆಯ ಪುಸ್ತಕಗಳನ್ನು ನೋಡಿಕೊಳ್ಳುವುದು-ಮುಂತಾದವನ್ನು ಹೇಳಿಕೊಡುತ್ತಿದ್ದರು. ಹೆಚ್ಚಿನ ವೇಳೆ ಈ ಕಾರ್ಯದಲ್ಲೇ ಕಳೆದುಹೋಗುತ್ತಿದ್ದುದರಿಂದ ಪುಸ್ತಕಗಳ ವರ್ಗೀಕರಣ ಮತ್ತು ಸೂಚೀಕರಣಗಳ ಬಗ್ಗೆ ತಿಳಿಯಲು ಹೆಚ್ಚು ಸಮಯ ಇರುತ್ತಿರಲಿಲ್ಲ.

ಬರೋಡಾದಲ್ಲಿ 2 ವರ್ಷದ ಗ್ರಂಥಾಲಯ ವಿಜ್ಙಾನದ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರಯತ್ನ ನಡೆದರೂ (1912) ಅದು ಊರ್ಜಿತವಾಗಲಿಲ್ಲ.

ಲಾಹೋರಿನ ಪಂಜಾಬ್ ವಿಶ್ವವಿದ್ಯಾಲಯದ ಗ್ರಂಥಾಲಯ ವಿಜ್ಞಾನದಲ್ಲಿ ಶಿಕ್ಷಣ ನೀಡುವುದರಲ್ಲಿ ಮತ್ತೊಂದು ಪ್ರಯತ್ನ ಮಾಡಿತು. ವಿಶ್ವವಿದ್ಯಾಲಯದ ಗ್ರಂಥಾಲಯ ಸ್ಥಾಪಿತವಾದ್ದು 1908ರಲ್ಲಿ. ಈ ಗ್ರಂಥಾಲಯವನ್ನು ಆಧುನಿಕ ರೀತಿಯಲ್ಲಿ ವ್ಯವಸ್ಥೆಗೊಳಿಸಲು ವಿಶ್ವವಿದ್ಯಾಲಯದ ಆಹ್ವಾನದ ಮೇರೆ ಬಂದ (1915) ಅಮೇರಿಕನ್ ತಜ್ಞ ಅಷ್‍ಡಾನ್ ಡಿಕನ್‍ಸನ್ ಗ್ರಂಥಾಲಯ ವಿಜ್ಞಾನವನ್ನು ಕಲಿಸಲು ತರಗತಿಯನ್ನು ಪ್ರಾರಂಭಿಸಿದ. ಭಾರತದ ವಿಶ್ವವಿದ್ಯಾಲಯಗಳಲ್ಲಿ ಇದೇ ಮೊತ್ತ ಮೊದಲ ಗ್ರಂಥಾಲಯ ಶಿಕ್ಷಣ ತರಬೇತಿ ಕೇಂದ್ರ. ಇದಕ್ಕಾಗಿ ಪಂಜಾಬ್ ವಿಶ್ವವಿದ್ಯಾಲಯ ಹೊಸ ರೀತಿಯ ಪಠ್ಯವಿಷಯಗಳ ಪಟ್ಟಿಯೊಂದನ್ನು ತಯಾರಿಸಿತು. 1 ವರ್ಗೀಕರಣ, 2 ಸೂಚೀಕರಣ, 3 ಗ್ರಂಥವಿತರಣೆ, ಮತ್ತು ಪುಸ್ತಕಗಳ ಕೊಳ್ಳುವಿಕೆ, 4 ಗ್ರಂಥಾಲಯ ಆಡಳಿತ, 5 ಮೌಖಿಕ ಪರೀಕ್ಷೆ-ಇವು ಮುಖ್ಯ ಪಠ್ಯ ವಿಷಯಗಳಾಗಿದ್ದವು. ಮೊದಲ ವರ್ಷದಲ್ಲಿ ವಿಶ್ವವಿದ್ಯಾಲಯದ ಗ್ರಂಥಾಲಯದಿಂದ ಮತ್ತು ಸ್ಥಳೀಯ ಕಾಲೇಜಿನಿಂದ ಆಯ್ದ 30ಜನ ವಿದ್ಯಾರ್ಥಿಗಳು ಇದ್ದರು.

1921ರಲ್ಲಿ ಡಿಕನ್‍ಸನ್ನನ ಶಿಷ್ಯ ಹಾಗೂ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಗ್ರಂಥಪಾಲರಾಗಿದ್ದ ಲಾಲಾ ಲಬ್ಬೂರಾಮ್ ಎಂಬುವವರು ಪಠ್ಯವಿಷಯಗಳನ್ನು 25 ಜನರಿಂದ 75 ಉಪನ್ಯಾಸ ಘಂಟೆಗಳಿಗೆ ವಿಸ್ತರಿಸಿದರು. ಈ ಕ್ರಮಬದ್ಧವಾದ ಶಿಕ್ಷಣದೊಂದಿಗೆ, ಗ್ರಂಥಾಲಯ ವೃತ್ತಿಗೆ ಉಪಯುಕ್ತವಾಗುವ ಇತರ ವಿಷಯ ಬಗ್ಗೆ ಉಪನ್ಯಾಸ ಕೊಡಲು ಗ್ರಂಥಾಲಯದವರಲ್ಲದೆ ಇತರ ವಿಷಯ ವಿಭಾಗದ ಸಂಶೋಧಕರನ್ನೂ ನೇಮಿಸಿಕೊಳ್ಳುತ್ತಿದ್ದರು. 1 ಪಾಶ್ಚಾತ್ಯಭಾಷೆಗಳು, 2 ಭಾರತದ ನಾನಾಭಾಷೆಗಳ ಸಮೀಕ್ಷೆ, 3 ಪುಸ್ತಕಗಳ ಆಯ್ಕೆ, 4 ಇಂಗ್ಲೆಂಡ್ ಮತ್ತು ಭಾರತದ ಗ್ರಂಥಸ್ವಾಮ್ಯದ ಕಾನೂನು, 5 ಭಾರತದ ಪ್ರಾಂತೀಯ ಚರಿತ್ರೆಯ ಮೂಲ ಗ್ರಂಥಗಳು, 6 ಸಾಹಿತ್ಯ ಚರಿತ್ರೆ, 7 ಪ್ರಾಚ್ಯಗ್ರಂಥಸೂಚಿಗಳು, 8 ಗ್ರಂಥಾಲಯದ ಕಟ್ಟಡ, ಅವುಗಳ ವಿನ್ಯಾಸ ಮತ್ತು ಉಪಕರಣಗಳು, 9 ಭಾರತೀಯರು ಬರೆದ ಇಂಗ್ಲಿಷ್ ಸಾಹಿತ್ಯ ಮತ್ತು 10 ಗ್ರಂಥಗಳನ್ನು ಜೋಡಿಸುವ ಕ್ರಮ, ಮುಕ್ತದ್ವಾರ ಪದ್ಧತಿ, ವಿಶಿಷ್ಟ ಗ್ರಂಥಾಲಯಗಳ ಕಾರ್ಯವಿಧಾನ-ಇವುಗಳ ಬಗ್ಗೆ ಪಾಠಗಳನ್ನು ಹೇಳಿಕೊಡುತ್ತಿದ್ದರು. 1928ರಿಂದ ವಿಶ್ವವಿದ್ಯಾಲಯದ ಪದವೀಧರರನ್ನು ಮಾತ್ರ ಈ ಶಿಕ್ಷಣಕ್ಕೆ ಸೇರಿಸಿಕೊಳ್ಳಲಾಯಿತು. 1930ರಲ್ಲಿ ಜರ್ಮನ್ ಅಥವಾ ಫ್ರೆಂಚ್ ಭಾಷೆಗಳ ಕಲಿಕೆ ಕಡ್ಡಾಯವಾಯಿತು. ಡಿಕೆನ್‍ಸನ್ನನ ಪಂಜಾಬ್ ಗ್ರಂಥಾಲಯ ಪ್ರವೇಶ ಎಂಬ ಕಿರುಹೊತ್ತಗೆಯನ್ನು ಪಂಜಾಬ್ ವಿಶ್ವವಿದ್ಯಾಲಯ ಪ್ರಕಟಿಸಿತು. ಇದು ಭಾರತದಲ್ಲೇ ಗ್ರಂಥಾಲಯದ ಶಿಕ್ಷಣದ ಬಗ್ಗೆ ಬಂದ ಮೊತ್ತಮೊದಲನೆಯ ಪುಸ್ತಕ. ಈ ಪುಸ್ತಕ 1939ರ ವರೆಗೂ ಈ ಶಿಕ್ಷಣಕ್ಕೆ ಆಧಾರ ಗ್ರಂಥವಾಗಿತ್ತು.

1920ರಲ್ಲಿ ವಿಜಯವಾಡದ ರಾಮಮೋಹನ ಗ್ರಂಥಾಲಯದಲ್ಲಿ ಆಂಧ್ರ ಪ್ರದೇಶ ಗ್ರಂಥಾಲಯ ಸಂಘ ಒಂದು ಗ್ರಂಥಾಲಯ ಶಿಕ್ಷಣ ಶಾಲೆಯನ್ನು ತೆರೆಯಿತು. ಇಲ್ಲಿನ ಶಿಕ್ಷಣ ಅವಧಿ ಒಂದು ತಿಂಗಳಾಗಿದ್ದು ಪ್ರವೇಶ ಕೋರುವ ಅಭ್ಯರ್ಥಿಗಳಿಗೆ ನಿರ್ದಿಷ್ಟ ವಿದ್ಯಾರ್ಹತೆಗಳನ್ನು ವಿಧಿಸಿರಲಿಲ್ಲ. ಪಠ್ಯವಿಷಯಗಳೂ ನೇರ ಗ್ರಂಥಾಲಯ ವಿಜ್ಞಾನಕ್ಕೆ ಸಂಬಂಧಿಸಿದವಾಗಿರಲಿಲ್ಲ. 1934ರಲ್ಲಿ ಪಠ್ಯ ಪಟ್ಟಿಯನ್ನು ಉದ್ದೇಶಕ್ಕನುಗುಣವಾಗಿ ಪರಿಷ್ಕರಿಸಲಾಯಿತು.

ಮದ್ರಾಸ್ ವಿಶ್ವವಿದ್ಯಾಲಯದ ಗ್ರಂಥಪಾಲರಾಗಿ ನೇಮಕಗೊಂಡ (1924) ಎಸ್.ಆರ್. ರಂಗನಾಥನ್ ಅವರು ತಮ್ಮ ಗ್ರಂಥಾಲಯದ ಪಂಚಸೂತ್ರಗಳು ಮತ್ತು ಕೋಲನ್ ವರ್ಗೀಕರಣ ವಿಧಾನಗಳಿಂದಾಗಿ ಗ್ರಂಥಾಲಯ ಹಾಗೂ ಗ್ರಂಥಾಲಯ ವಿಜ್ಞಾನಗಳಿಗೆ ಹೊಸ ತಿರುವನ್ನು ಕೊಟ್ಟರಲ್ಲದೆ ಶಿಕ್ಷಣದ ಸಮಸ್ಯೆಗಳನ್ನು ಬಿಡಿಸುವಲ್ಲಿ ಮುಂದಾದರು. ಅವರ ಸಲಹೆಯಂತೆ ಮದ್ರಾಸ್ ಗ್ರಂಥಾಲಯ ಸಂಘದ ಆಶ್ರಯದಲ್ಲಿ ಗ್ರಂಥಾಲಯ ವಿಜ್ಞಾನದಲ್ಲಿ ಸರ್ಟಿಫಿಕೇಟ್ ತರಗತಿಗಳು 1929ರಲ್ಲಿ ಪ್ರಾರಂಭವಾದವು. ಮೊದಲ 3 ವರ್ಷಗಳಲ್ಲಿ ಅಲ್ಲಿಗೆ ಕಲಿಯಲು ಬಂದವರಲ್ಲಿ ಹೆಚ್ಚಿನವರು ಶಾಲೆಕಾಲೇಜುಗಳ ಉಪಾಧ್ಯಾಯರು ಮತ್ತು ಸ್ಥಳೀಯ ಸಂಸ್ಥೆಗಳ ಸದಸ್ಯರು. ಪಠ್ಯವಿಷಯದಲ್ಲಿ ಗ್ರಂಥಾಲಯ ವಿಜ್ಞಾನದ ತತ್ತ್ವಭೋಧನೆ ಗಿಂತ ಆಧುನಿಕ ಗ್ರಂಥಾಲಯದ ಕಾರ್ಯಪವ್ರವೃತ್ತಿಯ ಪರಿಚಯಕ್ಕೇ ಹೆಚ್ಚು ಗಮನವನ್ನು ಕೊಡಲಾಗುತ್ತಿತ್ತು. ಇಲ್ಲಿ ಉಪನ್ಯಾಸಗಳನ್ನು ಕೊಡುವಾಗಲೇ ರಂಗನಾಥನ್ ತಾವೇ ರೂಪಿಸಿದ ಗ್ರಂಥಾಲಯ ಪಂಚಸೂತ್ರಗಳನ್ನು ಘೋಷಿಸಿದರು. 1931ರಲ್ಲಿ ಅವನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಾಯಿತು.

1932ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಈ ತರಗತಿಯನ್ನು ನಡೆಸುವ ಜವಬ್ದಾರಿ ತೆಗೆದುಕೊಂಡಿತಲ್ಲದೆ 1937ರಲ್ಲಿ ಅದನ್ನು ಒಂದು ವರ್ಷದ ಗ್ರಂಥಾಲಯ ಶಿಕ್ಷಣದ ಡಿಪ್ಲೋಮ ಶಿಕ್ಷಣವನ್ನಾಗಿ ಪರಿವರ್ತಿಸಿತು.

1918ರಲ್ಲಿ ಅಖಿಲ ಭಾರತ ಗ್ರಂಥಾಲಯ ಸಮ್ಮೇಳನದ ಫಲವಾಗಿ ಕೆಲವು ಪ್ರಾಂತ್ಯ ಗ್ರಂಥಾಲಯ ಸಂಘಗಳು ಹುಟ್ಟಿದ. ಆಂಧ್ರದಲ್ಲಿ (1924), ಬಂಗಾಳದಲ್ಲಿ (1927), ಮದ್ರಾಸಿನಲ್ಲಿ (1928), ಪಂಜಾಬಿನಲ್ಲಿ (1929) ಒಂದೊಂದು ಸಂಘ ಅಸ್ತಿತ್ವಕ್ಕೆ ಬಂತು. ಇಷ್ಟಾದರೂ ಪ್ರಾಂತೀಯ ಗ್ರಂಥಾಲಯ ಸಂಸ್ಥೆಗಳ ಚಟುವಟಕೆಗಳನ್ನು ಒಂದುಗೂಡಿಸಲು ಗ್ರಂಥಾಲಯ ಉದ್ಯಮಕ್ಕೆ ಒಗ್ಗಟ್ಟಿನಿಂದ ಬೆಂಬಲ ನೀಡಲು ಅಖಿಲ ಭಾರತೀಯ ಸಂಘವೊಂದರ ಅಗತ್ಯ ಇದ್ದೇ ಇತ್ತು. 1933ರ ಸೆಪ್ಟೆಂಬರ್‍ನಲ್ಲಿ ನಡೆದ ಅಖಿಲ ಭಾರತ ಗ್ರಂಥಾಲಯ ಸಮ್ಮೇಳನದಲ್ಲಿ ಈಗಿನ ಭಾರತೀಯ ಗ್ರಂಥಾಲಯ ಸಂಸ್ಥೆ ಹುಟ್ಟಿತು. ಭಾರತದಲ್ಲಿ ಗ್ರಂಥಾಲಯ ಚಳುವಳಿಯನ್ನು ವ್ಯಾಪಕ ರೀತಿಯಲ್ಲಿ ವಿಸ್ತರಿಸುವುದು, ಗ್ರಂಥಪಾಲರ ತರಬೇತಿ ಶಾಲೆಗಳನ್ನು, ಮಟ್ಟವನ್ನು ಹೆಚ್ಚಿಸುವುದು, ಗ್ರಂಥಪಾಲರ ಸ್ಥಾನಮಾನಗಳನ್ನು ಉತ್ತಮಗೊಳಿಸುವುದು-ಈ ಸಂಸ್ಥೆಯ ಉದ್ದೇಶವಾಗಿತ್ತು. ಇಷ್ಟಾದರೂ ಗ್ರಂಥಾಲಯ ಶಿಕ್ಷಣದಲ್ಲಿ ಸಾಕಷ್ಟು ಪ್ರಗತಿ ಆಗಲಿಲ್ಲ. ಕಲ್ಕತ್ತದ ಇಂಪೀರಿಯಲ್ ಗ್ರಂಥಾಲಯದ ಗ್ರಂಥಪಾಲರಾದ ಕೆ. ಎಂ. ಅಸದುಲ್ಲ ಅವರು 1934ರ ಮಾರ್ಚ್ ತಿಂಗಳಲ್ಲಿ ನಡೆದ ಕಲ್ಕತ್ತ ಗ್ರಂಥಾಲಯ ಸಮ್ಮೇಳನದಲ್ಲಿ ಅಧ್ಯಕ್ಷ ಭಾಷಣದಲ್ಲಿ, ಗ್ರಂಥಾಲಯ ಶಿಕ್ಷಣವನ್ನು ಉತ್ತಮಪಡಿಸಲು ಕರೆಯಿತ್ತದಲ್ಲದೆ ಸುವ್ಯವಸ್ಥಿತವಾದ ಬಂಗಾಳ ಗ್ರಂಥಾಲಯ ಸಂಘ ಗ್ರಂಥಪಾಲರ ತರಬೇತಿಯನ್ನು ತನ್ನ ಮೊದಲನೆಯ ಕಾರ್ಯಕ್ರಮವಾಗಿ ಇಟ್ಟುಕೊಳ್ಳಬೇಕೆಂದು ಸೂಚಿಸಿದರು.

ಅಸದುಲ್ಲರ ಪ್ರಯತ್ನ ಫಲಿಸಿತು. ಭಾರತ ಸರ್ಕಾರದ ಬೆಂಬಲದಿಂದ ಇಂಪೀರಿಯಲ್ ಗ್ರಂಥಾಲಯ 1935ರಲ್ಲಿ ಗ್ರಂಥಾಲಯ ಶಿಕ್ಷಣದ ತರಗತಿಯನ್ನು ಪ್ರಾರಂಭಿಸಿತು. ಈ ತರಗತಿಗಳು ಎರಡು ವರ್ಷಕ್ಕೆ ಒಮ್ಮೆ ನಡೆಯುತ್ತಿದ್ದವು. ಪ್ರತಿಯೊಂದು ತರಗತಿಗೂ ಇಪ್ಪತ್ತು ವಿದ್ಯಾರ್ಥಿಗಳನ್ನು ತೆಗೆದುಕೊಳ್ಳುತ್ತಿದ್ದರು. ಈ ಶಿಕ್ಷಣಕ್ಕೆ ಸೇರಲು ಕನಿಷ್ಠ ವಿದ್ಯಾರ್ಹತೆ ವಿಶ್ವವಿದ್ಯಾಲಯದ ಪದವಿಯೆಂದಿದ್ದರೂ ಕೆಲಸ ಮಾಡುತ್ತಿರುವವರಿಗೆ ಧಾರಾಳ ಅವಕಾಶವಿತ್ತು. ವರ್ಗೀಕರಣ ಸೂಚೀಕರಣ, ಪುಸ್ತಕಗಳ ಆಯ್ಕೆ, ಪರಾಮರ್ಶನ ಕಾರ್ಯ, ದಿನವಹಿ ಕೆಲಸ ನಿರ್ವಹಣೆ ಮತ್ತು ಗ್ರಂಥಾಲಯ ವ್ಯವಸ್ಥೆ, ಗ್ರಂಥಸೂಚಿ, ಲೇಖನಕಲೆ- ಮುಂತಾದವುಗಳ ಶಿಕ್ಷಣ ನೀಡಲಾಗುತ್ತಿತ್ತು. 1945ರ ವರಗೂ ಈ ವ್ಯವಸ್ಥೆ ಮುಂದುವರಿದು ಹಠಾತ್ತನೆ ನಿಂತು ಹೋಯಿತು. ಬಂಗಾಳದಲ್ಲಿ ಕುಮಾರ ಮನೀಂದ್ರ ದೇವರಾಯ್ ಮಹಾಶಯ ಅವರು ಸ್ಥಾಪಿಸಿದ ಬಂಗಾಳ ಗ್ರಂಥಾಲಯ ಸಂಘ ಬನಸ್‍ಬೆರಿಯಾದಲ್ಲಿ ಒಂದು ಗ್ರಂಥಾಲಯ ಶಿಕ್ಷಣ ಶಾಲೆಯನ್ನು ಸ್ಥಾಪಿಸಿ (1936) ಒಂದು ಸರ್ಟಿಫಿಕೇಟ್ ಶಿಕ್ಷಣವನ್ನು ಪ್ರಾರಂಭಿಸಿತು. (1937). ಮದ್ರಾಸಿನ ಮೇಲ್ಪಂಕ್ತಿಯನ್ನುನುಸರಿಸಿ ಆಂಧ್ರ ವಿಶ್ವವಿದ್ಯಾಲಯ ಸಹ ಒಂದು ಸರ್ಟಿಫಿಕೇಟ್ ಶಿಕ್ಷಣವನ್ನು ಪ್ರಾರಂಭಿಸಿತು (1935).

ಮದ್ರಾಸ್ ವಿಶ್ವವಿದ್ಯಾಲಯದ

ಬದಲಾಯಿಸಿ

1941ರ ವರೆಗೂ ಮದ್ರಾಸ್ ವಿಶ್ವವಿದ್ಯಾಲಯದ ಮಾತ್ರ ಸ್ನಾತಕೋತ್ತರ ಡಿಪ್ಲೊಮಾ ತರಗತಿಯನ್ನು ನಡೆಸುತ್ತಿತ್ತು. ಆಂಧ್ರ ವಿಶ್ವವಿದ್ಯಾಲಯದ ಈ ತರಗತಿಯನ್ನು 1935ರಲ್ಲಿ ಪ್ರಾರಂಭಿಸದರೂ ಕ್ರಮೇಣ 1947ರ ಹೊತ್ತಿಗೆ ಅದನ್ನು ಕೈ ಬಿಟ್ಟಿತು. ಡಿಪ್ಲೊಮ ಶಿಕ್ಷಣವನ್ನು ಆರಂಭಿಸಿದ ಇತರ ವಿಶ್ವವಿದ್ಯಾಲಯಗಳೆಂದರೆ ಬನಾರಸ್(1941) , ಮುಂಬಯಿ(1943) ಮತ್ತು ಕಲ್ಕತ್ತ (1945). ಕೆಲವು ವಿಶ್ವವಿದ್ಯಾಲಯಗಳು ಸಂಜೆ ತರಗತಿಗಳನ್ನು ಪ್ರಾರಂಭಿಸಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಗುಮಾಸ್ತರಿಗೂ ವಿದ್ಯಾವಂತ ನಿರುದ್ಯೋಗಿಗಳಿಗೂ ಗ್ರಂಥಾಲಯಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟವು. ಇಷ್ಟಾದರೂ ತರಬೇತಿ ಹೊಂದಿದ ಗ್ರಂಥಪಾಲರ ಅಭಾವ ಪರಿಹಾರವಾಗುವಂತಿರಲಿಲ್ಲ. ಅಂದಿಗೆ ಜರೂರಾಗಿ ಆಗಬೇಕಾದ ಕೆಲಸ ಒಂದಿತ್ತು-ಇರುವ ಗ್ರಂಥಾಲಯ ಶಿಕ್ಷಣ ಸಂಸ್ಥೆಗಳಲ್ಲಿ ಏಕರೂಪತೆ ಬರಬೇಕಿತ್ತು.

ಜಯಪುರದಲ್ಲಿ 1944ರ ಏಪ್ರಿಲ್‍ನಲ್ಲಿ ಸಮಾವೇಶಗೊಂಡ ಅಖಿಲ ಭಾರತ ಗ್ರಂಥಾಲಯ ಸಮ್ಮೇಳನ ಶಿಕ್ಷಣ ಕ್ರ್ರಮ, ಅವಧಿ, ಪಠ್ಯವಿಷಯ-ಮೊದಲಾದುವುಗಳಲ್ಲಿ ಏಕರೂಪತೆಯನ್ನು ತರಬೇಕೆಂದು ಸಲಹೆ ಮಾಡಿತು.

1947ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಮಾರಿಸ್ ಗ್ವಯರ್ ಅವರು ರಂಗನಾಥನ್ ಅವರನ್ನು ಬರಮಾಡಿಕೊಂಡು ಅವರ ನೇತೃತ್ವದಲ್ಲಿ ತಮ್ಮ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ಶಿಕ್ಷಣ ವಿಭಾಗವನ್ನು ತೆರೆದರು. ಗ್ರಂಥಾಲಯ ಶಿಕ್ಷಣದಲ್ಲಿ ಡಿಗ್ರಿ ತರಗತಿಯನ್ನು ಪ್ರಾರಂಭಿಸುವಲ್ಲಿ ದೆಹಲಿ ವಿಶ್ವವಿದ್ಯಾಲಯ ಮೊದಲನೆಯದಾಯಿತು. ಕ್ರಮೇಣ ಈ ವಿಭಾಗದಲ್ಲಿ ಪಿ.ಎಚ್.ಡಿ. ಪದವಿಗೆ ಓದುವ ಅವಕಾಶವನ್ನೂ ಒದಗಿಸಲಾಯಿತು. ಇದಕ್ಕಿಂತ ಮೊದಲು ಅಮೆರಿಕದಲ್ಲಿ ಮಾತ್ರ ಇಂಥ ಸೌಲಭ್ಯವಿತ್ತು. ರಂಗನಾಥನ್ ಅವರಿಂದ ರೂಪುಗೊಂಡ ಗ್ರಂಥಾಲಯ ವಿಜ್ಞಾನ ಶಿಕ್ಷಣ ಮೂರು ಹಂತಗಳಲ್ಲಿತ್ತು. 1 ಡಿಪ್ಲೋಮ ನೀಡುವ ಒಂದು ವರ್ಷದ ಸ್ನಾತಕೋತ್ತರ ಶಿಕ್ಷಣ, 2 ಮಾಸ್ಟರ್ ಪದವಿ ನೀಡುವ ಒಂದು ವರ್ಷದ ಸ್ನಾತಕೋತ್ತರ 3 ಪಿ.ಎಚ್.ಡಿ. ಪ್ರಶಸ್ತಿ ನೀಡುವ ಎರಡು ಅಥವಾ ಮೂರು ವರ್ಷಗಳ ಶಿಕ್ಷಣ. ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ಸಲುವಾಗಿ ಪ್ರವೇಶ ಕುಶಾಗ್ರಮತಿಗಳಿಗೆ ಮಾತ್ರ ಸೀಮಿತವಾಗಿತ್ತು. 1948ರಲ್ಲಿ ಡಿಪ್ಲೋಮ ಪಡೆದವರು ಕೇವಲ ನಾಲ್ಕು ಮಂದಿ ಮಾತ್ರ.

ತರಬೇತಿ ಪಡೆದ ಗ್ರಂಥಪಾಲರ ಅಭಾವವನ್ನು ಕಂಡುಕೊಂಡು ಭಾರತ ಸರ್ಕಾರದ ಸಚಿವಾಲಯ ಗ್ರಂಥಾಲಯ ವಿಜ್ಞಾನ ಸಂಸ್ಥೆಯೊಂದನ್ನು ರಚಿಸುವಂತೆ ದೆಹಲಿ ವಿಶ್ವವಿದ್ಯಾಲಯವನ್ನು ಕೇಳಿಕೊಂಡಿತಾಗಿ ಅದೇ ವರ್ಷ ಆ ಹೆಸರಿನ ಒಂದು ಸಂಸ್ಥೆ ಜನ್ಮತಾಳಿತು (1958).

ಭಾರತದಲ್ಲಿ ಈಗ ನಾಲ್ಕು ಹಂತಗಳಲ್ಲಿ ಗ್ರಂಥಾಲಯ ವಿಜ್ಞಾನದಲ್ಲಿ ತರಬೇತಿ ಕೊಡಲಾಗುತ್ತಿದೆ. ಂ ಸರ್ಟಿಫಿಕೇಟ್ ತರಗತಿ, ಃ ಡಿಪ್ಲೊಮ ಅಥವಾ ಪದವಿ, ಅ ಮಾಸ್ಟರ್ ಪದವಿ ಮತ್ತು ಆ ಡಾಕ್ಟೊರೇಟ್ ಪದವಿ.

ಸರ್ಟಿಫಕೇಟ್ ತರಗತಿ : ಇದರ ಮುಖ್ಯ ಉದ್ದೇಶಗಳು ಇವು : 1 ಗ್ರಂಥಾಲಯ ವಿಜ್ಞಾನದಲ್ಲಿ ಸ್ಥೂಲವಾದ ತಿಳುವಳಿಕೆಯನ್ನೀಯುವುದು. 2 ಗ್ರಂಥಾಲಯದ ದೈನಂದಿನ ಕ್ರಿಯೆಗಳಲ್ಲಿ ತರಬೇತಿ ನೀಡುವುದು. 3 ಪದವಿಪೂರ್ವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ವಿಜ್ಞಾನದಲ್ಲಿ ತರಬೇತಿ ನೀಡಿಗ್ರಂಥಾಲಯಗಳಲ್ಲಿ ಸೇವಾವಕಾಶ ಕಲ್ಪಿಸುವುದು. 4 ಶಾಲಾ ಗ್ರಂಥಾಲಯಗಳ ಗ್ರಂಥಪಾಲರಿಗೆ ತರಬೇತಿ ನೀಡುವುದು. ಗ್ರಂಥಾಲಯಗಳಲ್ಲಿ ಅಷ್ಟೇನೂ ಕ್ಲಿಷ್ಟವಲ್ಲದ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗುವಂತೆ ಎಸ್.ಎಸ್.ಎಲ್.ಸಿ. ಅಥವಾ ಮ್ಯಾಟ್ರಿಕ್ ಪರೀಕ್ಷೆ ಮುಗಿಸಿದವರಿಗಾಗಿ ಮೂರು ಅಥವಾ ನಾಲ್ಕು ತಿಂಗಳ ಅವಧಿಯ ಶಿಕ್ಷಣ ನೀಡುವ ಸರ್ಟಿಫಿಕೇಟ್ ತರಗತಿಗಳನ್ನು ಅಲೀಗಢ, ಆಂಧ್ರ, ಮದ್ರಾಸ್, ಉಸ್ಮಾನಿಂiÀi ಮತ್ತು ರಾಜಸ್ಥಾನ್ ವಿಶ್ವವಿದ್ಯಾಲಯಗಳು ಪ್ರಾರಂಭಿಸಿದವು. ಈಗ ಮದ್ರಾಸ್ ಮತ್ತು ರಾಜಸ್ಥಾನ್ ವಿಶ್ವವಿದ್ಯಾಲಯಗಳು ಮಾತ್ರ ಈ ತರಗತಿಗಳನ್ನು ನಡೆಸಿಕೊಂಡು ಬರುತ್ತಿವೆ. ಈ ತರಗತಿಗಳನ್ನು ಈಗ ಗ್ರಂಥಾಲಯ ವಿಜ್ಞಾನ ಸಂಸ್ಥೆಗಳು (ಮುಖ್ಯವಾಗಿ ಹೈದ್ರಾಬಾದ್ ಮತ್ತು ವಿಜಯವಾಡ) ಕೆಲವು ರಾಜ್ಯ ಸರ್ಕಾರಗಳು ಮತ್ತು ಗ್ರಂಥಾಲಯ ಸಂಘಗಳು ನಡೆಸುತ್ತಿವೆ. ಪಠ್ಯವಿಷಯಗಳು ಮುಖ್ಯವಾಗಿ ನಾಲ್ಕು. 1. ವರ್ಗೀಕರಣಶಾಸ್ತ್ರ (ತತ್ತ್ವ ಹಾಗೂ ಅಭ್ಯಾಸ), 2. ಸೂಚೀಕರಣಶಾಸ್ತ್ರ (ತತ್ತ್ವ ಹಾಗೂ ಅಭ್ಯಾಸ), 3 ಗ್ರಂಥಾಲಯಗಳ ಆಡಳಿತ ವಿಧಾನ ಮತ್ತು ಮೇಲ್ವಿಚಾರಣೆ ಮತ್ತು 4 ಗ್ರಂಥಸೂಚಿ ಮತ್ತು ಪರಾಮರ್ಶನ ಸೇವೆ. ಕೆಲವೊಂದು ಶಾಲೆಗಳಲ್ಲಿ ಗ್ರಂಥಾಲಯಗಳ ದೈನಂದಿನ ಕೆಲಸಗಳು ಹಾಗೂ ವಾಸ್ತವಿಕ ವಿಷಯಗಳ ಕುರಿತು ವಿಶೇಷ ತರಬೇತಿ ನೀಡುತ್ತವೆ. ಈ ಹಂತದ ಶಿಕ್ಷಣ ಮುಖ್ಯವಾಗಿ ಗ್ರಂಥಾಲಯಗಳ ತುರ್ತು ಅಗತ್ಯಗಳನ್ನು ಗಮನಿಸಿ ಅದಕ್ಕೆ ಪೂರಕವಾಗುವ ರೀತಿಯಲ್ಲಿ ನಡೆಸಲ್ಪಡುತ್ತಿದೆಯಷ್ಟೆ.

ಃ. ಡಿಪ್ಲೊಮಾ ಅಥವಾ ಪದವಿ ಶಿಕ್ಷಣ: ಭಾರತದಲ್ಲಿ ಯಾವ ವಿದ್ಯಾಲಯಗಳು ವಿವಿದ ಹಂತಗಳಲ್ಲಿ ಗ್ರಂಥಾಲಯ ವಿಜ್ಞಾನ ಶಿಕ್ಷಣವನ್ನೀಯುತ್ತಿವೆಯೆಂಬುದನ್ನು ಮುಂದೆ ಪರಿಶಿಷ್ಟದಲ್ಲಿ ಕೊಟ್ಟಿದೆ. ಬಿಹಾರ್ ಜಮ್ಮು ಮತ್ತು ಕಾಶ್ಮೀರ, ಒರಿಸ್ಸ ರಾಜ್ಯಗಳ ವಿನಾ ಬೇರೆ ಎಲ್ಲ ರಾಜ್ಯಗಳೂ ಈ ಹಂತದ ಶಿಕ್ಷಣವನ್ನೀಯುತ್ತವೆ. ಲಖ್‍ನೌ ವಿಶ್ವವಿದ್ಯಾಲಯ ನಮೂದಿಸಿರುವ ಶಿಕ್ಷಣ ಆ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಇಸಬೆಲ್ಲ ತೋಬರ್ನ್ ಕಾಲೇಜಿನ ಮೂಲಕ ನೀಡಲ್ಪಡುತ್ತಿದೆ. ಉಳಿದೆಲ್ಲ ಶಾಲೆಗಳು ವಿಶ್ವವಿದ್ಯಾಲಯಗಳ ನೇರ ಆಡಳಿತಕ್ಕೊಳಪಟ್ಟಿವೆ.

ಅಲೀಗಢ, ಗೌಹಾತಿ, ಕೇರಳ, ಲಖನೌ, ಮೈಸೂರು ಮತ್ತು ರಾಜಸ್ಥಾನ್ ವಿಶ್ವವಿದ್ಯಾಲಯಗಳ ಹೊರತು ಮಿಕ್ಕ ವಿಶ್ವವಿದ್ಯಾಲಯಗಳು ಪ್ರಥಮತಃ ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಡಿಪ್ಲೊಮ ತರಗತಿಗಳನ್ನು ಪ್ರಾರಂಭಿಸಿ ಕ್ರಮೇಣ ಸ್ನಾತಕೋತ್ತರ ಪದವಿ ಶಿಕ್ಷಣ ಕೊಡತೊಡಗಿವೆ. ಕಲ್ಕತ್ತ ವಿಶ್ವವಿದ್ಯಾಲಯ ಇತ್ತೀಚಿನ ವರೆಗೆ (1969) ಡಿಪ್ಲೊಮ ನೀಡುತ್ತಿದ್ದು ಈಗ ಡಿಗ್ರಿಗೆ ಬದಲಾಯಿಸಿ ಕೊಂಡಿದೆ. ಭಾರತ ಸರ್ಕಾರದ ವಿಶ್ವವಿದ್ಯಾಲಯ ಧನಸಹಾಯ ಆಯೋಗ ನೇಮಿಸಿದ ಸಮೀಕ್ಷಣ ಸಮಿತಿ ವಿಶ್ವವಿದ್ಯಾಲಯಗಳು ಗ್ರಂಥಾಲಯ ವಿಜ್ಞಾನದಲ್ಲಿ ಡಿಪ್ಲೊಮ ಶಿಕ್ಷಣ ನೀಡಬೇಕೆಂದು ಶಿಫಾರಸುಮಾಡಿದೆ. ಪರಿಶಿಷ್ಟದಲ್ಲಿ ಕಾಣಿಸಿರುವ ಎಲ್ಲ ವಿಶ್ವವಿದ್ಯಾಲಯಗಳೂ ಈಗ ಸ್ನಾತಕೋತ್ತರ ಪದವಿ ಶಿಕ್ಷಣವನ್ನೀಯುತ್ತಿವೆ.

ಶಿಕ್ಷಣಕ್ಕೆ ಪ್ರವೇಶ ಬಯಸುವ ಪ್ರತಿಯೊಬ್ಬನೂ ಕನಿಷ್ಟ ಪಕ್ಷ ಯಾವುದಾದರೊಂದು ವಿಷಯದಲ್ಲಿ ಬ್ಯಾಚುಲರ್ ಪದವಿ ಗಳಿಸಿರಲೇಬೇಕೆಂದು ಎಲ್ಲ ವಿಶ್ವವಿದ್ಯಾಲಯಗಳೂ ನಿಯಮಿಸಿವೆ. ಹೀಗಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ಅರ್ಹತೆಯುಳ್ಳ ವಿದ್ಯಾರ್ಥಿಗಳು ಪ್ರವೇಶ ಕೋರಿ ಅರ್ಜಿ ಸಲ್ಲಿಸುತ್ತಿರುವದರಿಂದ ಅಂಥ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ. ಕೆಲವೆಡೆ ಅಭ್ಯರ್ಥಿಗಳು ಕನಿಷ್ಟ ಪದವಿ ಪರೀಕ್ಷೆಯಲ್ಲಿ ದ್ವಿತೀಯ ದರ್ಜೆಯಲ್ಲಿ ತೆರ್ಗಡೆಯಾಗಿರಬೇಕೆಂಬನಿಯಮವಿದೆ. ಇನ್ನು ಕೆಲವು ವಿಶ್ವವಿದ್ಯಾಲಯಗಳಲ್ಲಿ ಕನಿಷ್ಠ ಪಕ್ಷ ಕೆಲವು ವರ್ಷ ಗ್ರಂಥಾಲಯಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕೆಂಬ ನಿಯಮವಿದೆ. ಕರ್ನಾಟಕ ವಿಶ್ವವಿದ್ಯಾಲಯ ಗ್ರಂಥಾಲಯ ವಿಜ್ಞಾನದಲ್ಲಿ ಪ್ರವೇಶ ಬಯಸುವ ವಿದ್ಯಾಥಿಗಳ ಸಾಮಾನ್ಯ e್ಞÁನವನ್ನು ತಿಳಿಯಲು ಪರೀಕ್ಷೆ ನಡೆಸುತ್ತದೆ. ಮದ್ರಾಸ್ ವಿಶ್ವವಿದ್ಯಾಲಯ ಅಭ್ಯರ್ಥಿ ಕನಿಷ್ಠ ನಾಲ್ಕು ತಿಂಗಳ ಮಟ್ಟಿಗಾದರೂ ಗ್ರಂಥಾಲಯದಲ್ಲಿ ಶಿಕ್ಷಣಪೂರ್ವ ತರಬೇತಿಯನ್ನು ಪಡೆದಿರಬೇಕೆಂದು ನಿಗದಿ ಮಾಡಿದೆ. ಕೆಲವೊಂದು ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಮೊದಲು ಸಂದರ್ಶನ ಆರಿಸುತ್ತವೆ. ಕೆಲವು ಸಂಸ್ಥೆಗಳು ಗ್ರಂಥಾಲಯ ಶಿಕ್ಷಣ ಪಡೆಯಲು ತಮ್ಮಲ್ಲೆ ಒಬ್ಬರನ್ನು ನಿಯೋಗಿಸಿದರೆ ಅಂಥವರಿಗೆ ಪ್ರವೇಶ ನೀಡುವಾಗ ಹೆಚ್ಚಿನ ವಿದ್ಯಾರ್ಹತೆಗಳ ಬಗ್ಗೆ ಒತ್ತಾಯ ಹೇರುವುದಿಲ್ಲ. ಆದಷ್ಟೂ ಮಟ್ಟಿಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನೇ ಸೇರಿಸಿಕೊಳ್ಳಲು ಪ್ರಯತ್ನ ನಡೆಯುತ್ತಿದೆ. ತರಬೇತಿ ಪಡೆದವರಿಗೆ ಉಚಿತವಾದ ಸ್ಥಾನ, ವೇತನಗಳು ಇನ್ನೂ ದೊರೆಯುತ್ತಿಲ್ಲವಾಗಿ ಭಾರತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು ಗ್ರಂಥಾಲಯ ವಿಜ್ಞಾನದಲ್ಲಿ ತರಬೇತಿ ಹೊಂದಲು ಮುಂದೆ ಬರುತ್ತಿಲ್ಲ.

ಗ್ರಂಥಾಲಯದಲ್ಲಿ ಶಿಕ್ಷಣಕ್ರಮ ಯಶಸ್ವಿಯಾಗಬೇಕಾದರೆ ಅದರ ಬೋಧನ ವಿಷಯಗಳು ದೇಶ, ಕಾಲ, ಪರಿಸ್ಥಿತಿಯ ಆವಶ್ಯಕತೆಗಳಿಗನುಗುಣವಾಗಿ ಯೋಜಿಸಲ್ಪಡಬೇಕು; ಉದ್ದೇಶ ಹಾಗೂ ಭಾವನೆಗಳು ಶಿಕ್ಷಣಕ್ರಮದಲ್ಲಿ ಫಲಕಾರಿಯಾಗಿ ಮೂಡಿ ಬರಬೇಕು. ವಿಶ್ವವಿದ್ಯಾಲಯ ಧನ ಆಯೋಗ ನೇಮಿಸಿದ ಸಮೀಕ್ಷಣ ಸಮಿತಿ ಗ್ರಂಥಾಲಯ ವಿಜ್ಞಾನದಲ್ಲಿ ಪದವಿ ಶಿಕ್ಷಣದ ಮುಖ್ಯ ಉದ್ದೇಶಗಳನ್ನು ಈ ಕೆಳಗಿನಂತೆ ವಿವರಿಸಿದೆ.

1. ಗ್ರಂಥಾಲಯ ವಿಜ್ಞಾನದ ಮೂಲಭೂತ ತತ್ತ್ವಗಳ ಸಮಗ್ರ ತಿಳುವಳಿಕೆಯನ್ನು ವಿದ್ಯಾರ್ಥಿಗೆ ಕೊಡುವುದು. 2. ಬದಲಾಗುತ್ತಿರುವ ಸಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಯಲ್ಲಿ ಗ್ರಂಥಾಲಯಗಳ ಕಾರ್ಯವ್ಯಾಪ್ತಿ ಮತ್ತು ಉದ್ದೇಶಗಳ ಬಗ್ಗೆ ಸರಿಯಾದ ತಿಳುವಳಿಕೆಯುಂಟಾಗುವಂತೆ ಮಾಡುವುದು. 3. ಗ್ರಂಥಾಲಯಗಳ ಆಡಳಿತ ವ್ಯವಸ್ಥೆ ಗ್ರಂಥಪಾಲನ ವೃತ್ತಿಕುಶಲತೆಗಳಲ್ಲಿ ವಿದ್ಯಾರ್ಥಿಗೆ ಸಾಕಷ್ಟು ಪರಿe್ಞÁನ ಮತ್ತು ತರಬೇತಿಯನ್ನೀಯುವುದು.

ಪಠ್ಯವಿಷಯಗಳಾಗಿ ಈ ಕೆಳಗಿನ ವಿಷಯಗಳನ್ನು ಗೊತ್ತುಮಾಡಲಾಗಿದೆ.

ವಿಶ್ವವಿದ್ಯಾಲಯಗಳು ಆಯಾ ಪ್ರಾದೇಶಿಕ ಅಗತ್ಯಗಳು ಮತ್ತು ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ಪಠ್ಯವಿಷಯಗಳಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನಾಗಲಿ ಹೊಂದಾಣಿಕೆಯನ್ನಾಗಲಿ ಮಾಡಿಕೊಳ್ಳಲು ಅವಕಾಶವಿದೆ.

1. ಗ್ರಂಥಾಲಯ ಸಂಘಟನೆ, 2. ಗ್ರಂಥಾಲಯ ಆಡಳಿತ ವ್ಯವಸ್ಥೆ, 3. ಗ್ರಂಥಗಳ ಬಾಹ್ಯರಚನೆ ಮತ್ತು ಆಯ್ಕೆ, 4. ಪ್ರಲೇಖನ ಮತ್ತು ಪರಾಮರ್ಶನ ಸೇವೆ, 5. ಗ್ರಂಥ ವರ್ಗೀಕರಣ-ತತ್ತ್ವ ಮತ್ತು ಅಭ್ಯಾಸ, 6. ಗ್ರಂಥಸೂಚಿ-ತತ್ತ್ವ ಮತ್ತು ಅಭ್ಯಾಸ, 7. ಪ್ರಯೋಗ ವಿಷಯಗಳ ದಾಖಲೆ.

ಈ ಕೆಲವು ವಿಶ್ವವಿದ್ಯಾಲಯಗಳು ಮತ್ತು ಪಠ್ಯಕ್ರಮಗಳಿಗೆ ಕೆಲವು ಹೊಸ ವಿಷಯಗಳನ್ನು ಸೇರಿಕೊಂಡಿವೆ.

1. ಮಕ್ಕಳ ಗ್ರಂಥಾಲಯಗಳು, ವಿದ್ಯಾಸಂಸ್ಥೆಗಳ ಗ್ರಂಥಾಲಯಗಳು, ಸಾರ್ವಜನಿಕ ಗ್ರಂಥಾಲಯಗಳು, ವಿಶಿಷ್ಟ ಗ್ರಂಥಾಲಯಗಳು-ಇವುಗಳಲ್ಲಿ ಒಂದನ್ನು ಐಚ್ಛಿಕ ವಿಷಯವಾಗಿ ಆಯ್ದುಕೊಳ್ಳಲು ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಅವಕಾಶವಿದೆ.

2. ಉಸ್ಮಾನಿಯ ವಿಶ್ವವಿದ್ಯಾಲಯ ಗ್ರಂಥಗಳ ಸರ್ವೆಕ್ಷಣೆ ಹಾಗೂ e್ಞÁನವಿಕಾಸ ಎಂಬ ವಿಷಯವನ್ನು ಪಠ್ಯಕ್ರಮಕ್ಕೆ ಸೇರಿಕೊಂಡಿದೆ.

3. ಮುಂಬಯಿ, ಕರ್ನಾಟಕ, ಪುಣೆ, ಶಿವಾಜಿ ಮತ್ತು ಎಸ್.ಎನ್.ಡಿ.ಟಿ. ವಿಶ್ವವಿದ್ಯಾಲಯಗಳು ಸಾಮಾನ್ಯe್ಞÁನ ಎಂಬ ಪ್ರತ್ಯೇಕವಾದೊಂದು ಪ್ರಶ್ನೆಪತ್ರಿಕೆಯನ್ನು ವಿಧಿಸಿವೆ. ಮುಂಬಯಿ ವಿಶ್ವವಿದ್ಯಾಲಯ ಭಾರತದ ಸಾಂಸ್ಕøತಿಕ ಚರಿತ್ರೆ ಎಂಬ ವಿಷಯವನ್ನು ಸೇರಿಸಿಕೊಂಡಿವೆ.

4. ಪಂಜಾಬ್ ವಿಶ್ವವಿದ್ಯಾಲಯ 900 ಅಂಕಗಳಲ್ಲಿ 100 ಅಂಕಗಳನ್ನು ಯಾವುದಾದರೊಂದು ನಿಯೋಜಿತ ವಿಷಯದ ಮೇಲೆ ಬರೆದ ಪ್ರಬಂಧಕ್ಕಾಗಿ ಮೀಸಲಿರಿಸಿದೆ.

5. ಭಾರತದಲ್ಲಿ ಗ್ರಂಥಾಲಯಗಳ ಬೆಳವಣಿಗೆ-ಎಂಬ ವಿಷಯ ಆಂಧ್ರ ವಿಶ್ವ ವಿದ್ಯಾಲಯ ಪಠ್ಯದಲ್ಲಿ ಸೇರಿದೆ. ಸಾಮಾನ್ಯe್ಞÁನ ಮತ್ತು ಸಾಂಸ್ಕøತಿಕ ಚರಿತ್ರೆ ಮೊದಲಾದ ವಿಷಯಗಳನ್ನು ಪಠ್ಯ ವಿಷಯವನ್ನಾಗಿಟ್ಟುಕೊಳ್ಳುವುದರಿಂದ ಶಿಕ್ಷಣಕ್ಕೆ ವಿಶಾಲ ತಳಹದಿಯನ್ನು ನಿರ್ಮಿಸಿದಂತಾಗುತ್ತದೆ. ಮಾತ್ರವಲ್ಲದೆ ಗ್ರಂಥಾಲಯ ವಿಜ್ಞಾನದ ಸಮಗ್ರತೆಗೆ ಪ್ರಭಾವ ಬೀರಬಲ್ಲ ವಿಷಯಗಳೊಂದಿಗೆ ಸುಲಭವಾಗಿ ಹೊಂದಿಕೊಳ್ಳಲು ಅನುಕೂಲವಾಗುತ್ತದೆ. ಗ್ರಂಥಪಾಲನೆ ಒಂದು ವೈe್ಞÁನಿಕ ವಿಷಯ, ವೃತ್ತಿ ತಂತ್ರ ಮಾತ್ರವಲ್ಲವೆಂದು ಪಾಂಡಿತ್ಯಗಳಿಕೆ ಇದರ ಉದ್ದೇಶ ಎಂದು ಹೇಳಲಾಗುತ್ತಿದೆ. ಈ ಉದ್ದೇಶ ಸಫಲವಾಗಲು ಇಂಥ ವಿಶಾಲಪಠ್ಯಕ್ರಮ ಅಗತ್ಯ.

ಅ ಮಾಸ್ಟರ್ ಪದವಿ ಶಿಕ್ಷಣ : ಭಾರತದಲ್ಲಿ ಮೊತ್ತಮೊದಲಿಗೆ ಮಾಸ್ಟರ್ ಪದವಿ ಶಿಕ್ಷಣವನ್ನು ಪ್ರಾರಂಭಿಸಿದ (1949) ಕೀರ್ತಿ ದೆಹಲಿ ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ. ಈ ಶಿಕ್ಷಣದ ರೂಪರೇಖೆ, ಉದ್ದೇಶ, ಪಠ್ಯಕ್ರಮವನ್ನು ಸ್ವತಃ ರಂಗನಾಥನ್ ಅವರೇ ಯೋಜಿಸಿದ್ದಾರೆ. ಅದರ ಉದ್ದೇಶಗಳು ಹೀಗೆವೆ:

(1) ವಿದ್ಯಾರ್ಥಿಗಳಿಗೆ e್ಞÁನಪ್ರಪಂಚ, ಅದರ ವ್ಯವಸ್ಥೆ ಮತ್ತು ಬೆಳವಣಿಗೆ, ಸಂಶೋಧನೆಗಳನ್ನು ಸಂಘಟಿಸುವ ಬಗೆ ಹಾಗೂ ಸಂಶೋಧನ ವಿಧಾನಗಳು-ಇವನ್ನು ಪರಿಚಯಿಸುವುದು. (2) ಓದುವ ಹಾಗೂ ಸಂಬಂಧಪಟ್ಟ ಇತರ ವಸ್ತುರೂಪಗಳು ಮತ್ತು ಪ್ರಲೇಖನ ಪಟ್ಟಿಗಳ ವಿಷಯವಾಗಿ ಇಲ್ಲವೆ ವಿವಿಧ ಜಾತಿಯ ಗ್ರಂಥಾಲಯಗಳ ಬಗ್ಗೆ ವಿಶಿಷ್ಟ ಪರಿಣತಿಯನ್ನೊದಗಿಸುವುದು. (3) (ಅ) ಪ್ರಲೇಖನ ವಿಧಾನದಲ್ಲಿ ಗ್ರಂಥಾಲಯಗಳ ನವೀನ ತಂತ್ರಗಳು ಹಾಗೂ (ಆ) ಕೆಲವು ಜಾತಿಯ ಗ್ರಂಥಾಲಯಗಳ ಕಾರ್ಯನಿರ್ವಹಣೆ ಮತ್ತು ಆಡಳಿತ ಕ್ರಮಗಳ ಬಗ್ಗೆ ಪ್ರಾವೀಣ್ಯ ಬರುವಂತೆ ಮಾಡುವುದು. ಪಠ್ಯಕ್ರಮ ಹೀಗಿದೆ: ಪ್ರಾರಂಭದಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಈ ಪಠ್ಯಕ್ರಮವಿತ್ತು. (1) e್ಞÁನ ಪ್ರಪಂಚ ; ರಚನೆ ಮತ್ತು ವೆಳವಣಿಗೆ (2) ಪ್ರಬುದ್ಧ ಮಟ್ಟದಲ್ಲಿ ಗ್ರಂಥ ವರ್ಗೀಕರಣ (ತತ್ತ್ವ ಮತ್ತು ಅಭ್ಯಾಸ). (3) ಪ್ರಬುದ್ಧ ಮಟ್ಟದಲ್ಲಿ ಗ್ರಂಥಸೂಚೀಕರಣ (ತತ್ತ್ವ ಮತ್ತು ಅಭ್ಯಾಸ). (4) ಐಚ್ಛಿಕ ವಿಷಯಗಳು I: (ಆ) ಸಾರ್ವಜನಿಕ ಗ್ರಂಥಾಲಯ ಪದ್ಧತಿ, (ಆ) ಶೈಕ್ಷಣಿಕ ಗ್ರಂಥಾಲಯ ಪದ್ಧತಿ, (ಇ) ಸಂಶೋಧನಾತ್ಮಕ ಮತ್ತು ತಾಂತ್ರಿಕ ಗ್ರಂಥಾಲಯ ಪದ್ಧತಿ, (ಈ) ಪ್ರಲೇಖನ ಶಾಸ್ತ್ರ. (5) ಐಚ್ಛಿಕ ವಿಷಯಗಳು II : (ಅ) ಮಾನವಿಕ ವಿಜ್ಞಾನಗಳು ಹಾಗೂ ಗ್ರಂಥಸೂಚಿ. (ಆ) ಪ್ರಕೃತಿ ವಿಜ್ಞಾನಗಳು ಹಾಗೂ ಗ್ರಂಥಸೂಚಿ. (ಇ) ಸಾಮಾಜಿಕ ವಿಜ್ಞಾನಗಳು ಹಾಗೂ ಗ್ರಂಥಸೂಚಿ. (6) 4 ಇಲ್ಲವೆ 5 ನೆಯ ಪತ್ರಿಕೆಯಲ್ಲಿ ಐಚ್ಛಿಕವಾಗಿ ತೆಗೆದುಕೊಂಡ ವಿಷಯದ ವ್ಯಾಪ್ತಿಯಲ್ಲಿ ಬರುವ ಯಾವುದಾದರೊಂದು ವಸ್ತುವಿನ ಬಗ್ಗೆ (ವಿಭಾಗದ ಒಪ್ಪಿಗೆ ಪಡೆದು) ಸಲ್ಲಿಸುವ ಪ್ರಾಜೆಕ್ಟ್ ವರದಿ. ಗ್ರಂಥಾಲಯ ವಿಜ್ಞಾನದ ಎಲ್ಲ ಸ್ತರಗಳಲ್ಲಿ ನಡೆಯುತ್ತಿರುವ ಸಂಶೋಧನೆ ಹಾಗೂ ವಿಶ್ಲೇಷಣೆಗಳ ಫಲವಾಗಿ ಈ ವಿಜ್ಞಾನ ಅನೇಕ ಹೊಸ ಆವಿಷ್ಕಾರಗಳನ್ನು ಪಡೆದು ತಾಂತ್ರಿಕ ಹಾಗೂ ವೈe್ಞÁನಿಕ ರಂಗಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ಸಹಕಾರಿಯಾಗಿದೆ. ಪ್ರಲೇಖನ ಹಾಗೂ ಮಾಹಿತಿ ವಿಜ್ಞಾನಗಳಲ್ಲಿ ಇಂದು ವಿಶ್ವದಾದ್ಯಂತ ಮುಖ್ಯವಾಗಿ ಅಮೆರಿಕ, ಇಂಗ್ಲೆಂಡ್, ರಷ್ಯ, ಜಪಾನ್, ಆಸ್ಟ್ರೇಲಿಯಗಳಲ್ಲಿ ಶೋಧನೆಗಳು ಅವಿರತವಾಗಿ ನಡೆದು ಆ ಬಗ್ಗೆ ಸಾಹಿತ್ಯ ನಿರ್ಮಾಣವಾಗುತ್ತಿದೆ. ಗ್ರಂಥಾಲಯ ಶಿಕ್ಷಣ ವಿಭಾಗ ಈ ಬದಲಾವಣೆಗಳನ್ನು ಹಾಗೂ ಸಂಶೋಧನೆಗಳನ್ನು ಕಾಲಕಾಲಕ್ಕೆ ತನ್ನ ಪಠ್ಯವಿಷಯಗಳಲ್ಲಿ ಸೇರಿಸಿಕೊಳ್ಳುತ್ತಿರಬೇಕು. ಭಾರತದಲ್ಲಿನ ಗ್ರಂಥಾಲಯಗಳು ಈ ಬಗ್ಗೆ ಗಮನ ಹರಿಸುತ್ತಿವೆ. ಗ್ರಂಥಾಲಯ ವಿಜ್ಞಾನಗಳಲ್ಲಿ ಪ್ರಲೇಖನ ಮತ್ತು ಮಾಹಿತಿ ವಿಜ್ಞಾನಗಳ ಬಗ್ಗೆ ಹೆಚ್ಚು ಹೆಚ್ಚು ತಿಳುವಳಿಕೆ ನೀಡುವ ಆವಶ್ಯಕತೆ ಕಂಡು ಬರುತ್ತಿದೆ. ಈ ದಿಸೆಯಲ್ಲಿ ದೆಹಲಿ ವಿಶ್ವವಿದ್ಯಾಲಯ ಹೊಸ ಹೆಜ್ಜೆಯನ್ನಿಟ್ಟಿದೆ. ಮೇಲಿನ ವಿಷಯಗಳನ್ನು ಮನಗಂಡು 1972 ರ ವಿದ್ಯಾವರ್ಷದಿಂದ ಅದು ತನ್ನ ಪಠ್ಯಕ್ರಮವನ್ನು ಪರಿಷ್ಕರಿಸಿದೆಯಲ್ಲದೆ ಶಿಕ್ಷಣಾವಧಿ ಪೂರ್ತಿಗೊಂಡು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಮಾಸ್ಟರ್ ಪದವಿ ನೀಡುತ್ತಿದೆ.

ಪರಿಷ್ಕøತ ಪಠ್ಯವಿಷಯದಲ್ಲಿ ಮುಖ್ಯವಾಗಿ ಗ್ರಂಥಾಲಯ ವ್ಯವಸ್ಥಾ ವಿಶ್ಲೇಷಣೆ ಮತ್ತು ಸಂಖ್ಯಾಸಂಗ್ರಹಣ ವಿಧಾನ, ಗ್ರಂಥಾಲಯ ಮಾಹಿತಿ ವಿಜ್ಞಾನಗಳ ಪ್ರಚಲಿತ ಸಮಸ್ಯೆಗಳು, ಮಾಹಿತಿ ಸಂಗ್ರಹಣ ಮತ್ತು ಪರಿಶೋಧನ ಪದ್ಧತಿ, ಲೇಖನ ಪ್ರತೀಕರಣ (ರಿಪ್ರೋಗ್ರಫಿ) ಮತ್ತು ಐಚ್ಛಿಕ ವಿಷಯಗಳಾಗಿ ವೈದ್ಯಕೀಯ, ಕೃಷಿ ಮತ್ತು ಯಂತ್ರವಿಜ್ಞಾನಗಳ ಗ್ರಂಥಾಲಯ ಪದ್ಧತಿಗಳು, ಅವುಗಳ ಸಾಹಿತ್ಯ ಹಾಗೂ ಗ್ರಂಥಸೂಚಿಗಳು-ಮುಂತಾದ ನೂತನ ವಿಷಯಗಳು ಸೇರಿವೆ. ಇವಲ್ಲದೆ ವಿದ್ಯಾರ್ಥಿ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನಗಳಲ್ಲಿನ ಪ್ರಚಲಿತ ಸಮಸ್ಯೆಗಳನ್ನು ಆಧ್ಯಯನ ಮಾಡಿ ವರದಿ ಸಲ್ಲಿಸಬೇಕಾಗುತ್ತದೆ. ದೆಹಲಿಯ ವಿಶ್ವವಿದ್ಯಾಲಯದ ಮಾದರಿಯಲ್ಲಿಯೇ ಬನಾರಸ್ (1963) ಪಂಜಾಬ್ (1970), ಮೈಸೂರು (1971), ಕರ್ನಾಟಕ (1971), ಅಲೀಗಢ (1971), ವಿಕ್ರಮ್ (1971) ವಿಶ್ವವಿದ್ಯಾಲಯಗಳು ಮಾಸ್ಟರ್ ಪದವಿ ಶಿಕ್ಷಣವನ್ನೀಯಲು ಪ್ರಾರಂಭಿಸಿವೆ. ಗ್ರಂಥಾಲಯಗಳಲ್ಲಿ ವಿಶೇಷತಃ ವಿಶ್ವವಿದ್ಯಾಲಯಗಳಲ್ಲಿ ಹಲವಾರು ವರ್ಷಗಳ ಸೇವಾನುಭವವಿದ್ದ ಗ್ರಂಥಪಾಲರಿಗೆ ಹೆಚ್ಚಿನ ವಿದ್ಯಾರ್ಹತೆಯನ್ನು ಕಲ್ಪಿಸಿ, ಪ್ರಚಲಿತ ವಿಷಯಗಳ ಬಗ್ಗೆ ಪರಿe್ಞÁನವೀಯುವ ಸಲುವಾಗಿ ಮುಂಬಯಿ ವಿಶ್ವವಿದ್ಯಾಲಯ 1967 ರಿಂದ ಮಾಸ್ಟರ್ ಪದವಿಯಲ್ಲಿ ತೆರಪಿನ ಶಿಕ್ಷಣವನ್ನೀಯುತ್ತಿದೆ. ಪ್ರಕೃತ, ಭಾರತದಲ್ಲಿ ಎಂಟು ವಿಶ್ವವಿದ್ಯಾಲಯಗಳು ಗ್ರಂಥಾಲಯ ವಿಜ್ಞಾನದಲ್ಲಿ ಮಾಸ್ಟರ್ ಪದವಿ ಶಿಕ್ಷಣ ನೀಡುತ್ತಿವೆ.

ಮೇಲೆ ಹೇಳಿದ ಎಲ್ಲ ವಿಶ್ವವಿದ್ಯಾಲಯಗಳು ತಮ್ಮ ಶಿಕ್ಷಣ ಕ್ರಮ, ಪಠ್ಯವಿಷಯಗಳು, ಪ್ರವೇಶ ನೀಡಿಕೆ ಮುಂತಾದವುಗಳಲ್ಲಿ ದೆಹಲಿ ವಿಶ್ವವಿದ್ಯಾಲಯದ ಮಾದರಿಯನ್ನೇ ಹೆಚ್ಚು ಕಡಿಮೆ ಅನುಸರಿಸಿದೆ. ಇವು ಗ್ರಂಥಾಲಯ ವಿಜ್ಞಾನದಲ್ಲಿ ವಿಶೇಷತಃ ಪ್ರಲೇಖನ ಶಾಸ್ತ್ರದಲ್ಲಿ ಉನ್ನತ ಮಟ್ಟದ ಶಿಕ್ಷಣವನ್ನೀಯುತ್ತಿವೆ. ದೆಹಲಿ ವಿಶ್ವವಿದ್ಯಾಯಾಲಯದ ಗ್ರಂಥಾಲಯ ವಿಜ್ಞಾನ ಭಾಗವನ್ನು ಯುನೆಸ್ಕೊ ತನ್ನ ಯೋಜನೆಗಳ ಒಂದು ಅಂಗವನ್ನಾಗಿ ಅಂಗೀಕರಿಸಿದೆ.

ಪ್ರವೇಶಾರ್ಹತೆ : ವಿದ್ಯಾರ್ಥಿ ಕನಿಷ್ಠ ಪಕ್ಷ ಗ್ರಂಥಾಲಯ ವಿಜ್ಞಾನದಲ್ಲಿ ಬ್ಯಾಚಲರ್ ಇಲ್ಲವೆ ಡಿಪ್ಲೊಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪರೀಕ್ಷೆಯಲ್ಲಿ ಕನಿಷ್ಠ ಸೇಕಡ 60 ಅಂಕಗಳನ್ನು ಗಳಿಸಬೇಕೆಂಬ ನಿಯಮವಿದೆ. ಬನಾರಸಿನಲ್ಲೂ ಇದೇ ನಿಯಮಗಳಿವೆಯಲ್ಲದೆ, ಪರಾಮರ್ಶನ ಸೇವೆಯಲ್ಲಿ ಪ್ರವೇಶಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಸಂದರ್ಶಿಸುತ್ತದೆ. ಮೈಸೂರು ವಿಶ್ವವಿದ್ಯಾಲಯವೂ ಅಭ್ಯರ್ಥಿಗಳ ಸಂದರ್ಶನ ನಡೆಸಿ ಯೋಗ್ಯರಾದ ಆರು ಮಂದಿಯನ್ನು ಆರಿಸುತ್ತದೆ. ಯಾವುದಾದರೂ ವಿಶ್ವವಿದ್ಯಾಲಯಗಳಿಂದ ಉನ್ನತ ವ್ಯಾಸಂಗಕ್ಕಾಗಿ ನಿಯೋಗಿಸಲ್ಪಟ್ಟ ಅಭ್ಯರ್ಥಿಗಳಿಗೆ ಕೆಲವೆಡೆ ಪ್ರವೇಶಾವಕಾಶವಿದೆ.

ಆ ಡಾಕ್ಟೊರೇಟ್ ಪದವಿ : ದೆಹಲಿ ವಿಶ್ವವಿದ್ಯಾಲಯ ಈ ಶಿಕ್ಷಣವನ್ನು ಪ್ರಥಮತಃ 1948 ರಲ್ಲಿ ಪ್ರಾರಂಭಿಸಿತು. ಸಂಶೋಧನ ವಿಧಾನಗಳಲ್ಲಿ ತರಬೇತಿ ನೀಡುವುದು ಇದರ ಮುಖ್ಯ ಉದ್ದೇಶ. ಎಂ. ಲಿಬ್. ಪದವೀಧರರಾಗಿದ್ದು ಈ ವಿಭಾಗ ನಡೆಸುವ ಮೌಖಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವವರಿಗೆ ಪ್ರವೇಶಾವಕಾಶ ಉಂಟು. ಶಿಕ್ಷಣಾವಧಿಯಲ್ಲಿ ವಿದ್ಯಾರ್ಥಿ ದೆಹಲಿಯಲ್ಲಿಯೇ ಇರಬೇಕಾಗುತ್ತದೆ. ಸಂಶೋಧನ ಪ್ರಬಂಧ ಮೂರು ಮಂದಿ ಪರೀಕ್ಷಕರಿಂಧ ಪರಿಶೋಧಿಸಲ್ಪಡುತ್ತದೆ. 1972 ರಿಂದ ಪಂಜಾಬ್ ವಿಶ್ವವಿದ್ಯಾಲಯ ಇಂಥ ಪ್ರೌಢ ವ್ಯಾಸಂಗಕ್ಕೆ ಅನುವು ಮಾಡಿಕೊಟ್ಟಿದೆ.

ಭಾರತೀಯ ಗ್ರಂಥಾಲಯ ವಿಜ್ಞಾನ ಶಿಕ್ಷಕರ ಸಂಘ : 1969 ರಲ್ಲಿ ಡಿಸೆಂಬರ್ 19 ರಂದು ಬೆಂಗಳೂರಿನ ಪ್ರಲೇಖನ ಸಂಶೋಧನೆ ಮತ್ತು ತರಬೇತಿ ಕೇಂದ್ರದಲ್ಲಿ ವಾರ್ಷಿಕ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಲು ಸಮಾವೇಶಗೊಂಡಿದ್ದ ಗ್ರಂಥಾಲಯ ವಿಜ್ಞಾನ ಶಿಕ್ಷಕರು ಈ ಸಂಸ್ಥೆಯನ್ನು ಸ್ಥಾಪಿಸಿದರು. ಗ್ರಂಥಾಲಯ ವಿಜ್ಞಾನದಲ್ಲಿ ವಿವಿಧ ಹಂತಗಳಲ್ಲಿ ಶಿಕ್ಷಣಕ್ರಮ, ಅಧ್ಯಾಪಕರ ಸಮಸ್ಯೆ, ಶಿಕ್ಷಣೋಪಕರಣಗಳು, ಸಂಶೋಧನೆ ಮೊದಲಾದ ವಿಷಯಗಳಲ್ಲಿ ಈ ಸಂಘ ಪ್ರತಿವರ್ಷ ವಿಚಾರಸಂಕಿರಣವನ್ನು ಏರ್ಪಡಿಸುತ್ತದೆ. 1970 ರ ಡಿಸೆಂಬರ್ ತಿಂಗಳಲ್ಲಿ ಗ್ರಂಥಾಲಯ ವಿಜ್ಞಾನದ ಅಧ್ಯಾಪನ ವಿಧಾನಗಳನ್ನು ಕುರಿತು ವಾರ್ಷಿಕ ವಿಚಾರಸಂಕಿರಣ ನಡೆಯಿತು. 1972 ರ ಡಿಸೆಂಬರ್ ತಿಂಗಳಿನಲ್ಲಿ ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಶಿಕ್ಷಣದ ಮೌಲ್ಯಮಾಪನ ಎಂಬ ವಿಚಾರದಲ್ಲಿ ಮೂರು ದಿನಗಳ ವಿಚಾರಸಂಕಿರಣ ನಡೆಯಿತು. ಮುಂದಿನ ವರ್ಷಗಳಲ್ಲಿ ಈ ಸಂಸ್ಥೆ ಇನ್ನಷ್ಟು ಪ್ರವರ್ಧಮಾನಕ್ಕೆ ಬಂದು ಗ್ರಂಥಾಲಯ ವಿಜ್ಞಾನ ಶಿಕ್ಷಣ ಕ್ರಮದಲ್ಲಿ ಉಪಯುಕ್ತ ಸುಧಾರಣೆಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಬಹುದು.

ಪ್ರಲೇಖನಶಾಸ್ತ್ರದಲ್ಲಿ ವಿಶೇಷ ಶಿಕ್ಷಣ ನೀಡುವ ಸಂಸ್ಥೆಗಳು : ಭಾರತದಲ್ಲಿ ಪ್ರಲೇಖನಶಾಸ್ತ್ರದಲ್ಲಿ ವಿಶೇಷ ಶಿಕ್ಷಣ ನೀಡುವ ಸಂಸ್ಥೆಗಳು ಎರಡು (1) ಭಾರತ ರಾಷ್ಟ್ರೀಯ ವಿಜ್ಞಾನ ಪ್ರಲೇಖನ ಕೇಂದ್ರ, ಹೊಸ ದೆಹಲಿ ಮತ್ತು (2) ಪ್ರಲೇಖನ ಸಂಶೋಧನ ಮತ್ತು ತರಬೇತಿ ಕೇಂದ್ರ, ಬೆಂಗಳೂರು. ಈ ಎರಡು ಕೇಂದ್ರಗಳೂ ಪ್ರಲೇಖನ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುತ್ತಿವೆ.

1. ದೆಹಲಿಯ ಭಾರತ ರಾಷ್ಟ್ರೀಯ ವಿಜ್ಞಾನ ಪ್ರಲೇಖನ ಕೇಂದ್ರ 1952 ರಲ್ಲಿ ಯುನೆಸ್ಕೊದ ನೆರವಿನಿಂದ ಪ್ರಾರಂಭಗೊಂಡು ಭಾರತ ಸರ್ಕಾರದ ವೈe್ಞÁನಿಕ ಮತ್ತು ಕೈಗಾರಿಕಾ ಸಂಶೋಧನ ಮಂಡಳಿಯ ಒಂದು ಅಂಗವಾಗಿ ಕಾರ್ಯಾರಂಭ ಮಾಡಿತು. ತನ್ನಿತರ ಉದ್ದೇಶದೊಂದಿಗೆ ಪ್ರಲೇಖನ ಶಾಸ್ತ್ರದಲ್ಲಿ ತರಬೇತಿ ನೀಡುವ ಕಾರ್ಯಕ್ರಮವನ್ನಿದು ರೂಪಿಸಿಕೊಂಡಿದೆ. 1961 ರಲ್ಲಿ ಈ ಸಂಸ್ಥೆ ಪ್ರಲೇಖನ ಕಾರ್ಯದಲ್ಲಿ ಹೊಸದಾಗಿ ಸೇರಿದವರಿಗೆ ತರಬೇತಿ ನೀಡಿತು. 1963ರಲ್ಲಿ ಏಷ್ಯದ ಕೆಲವು ಪ್ರಲೇಖನ ಕುಶಲಿಗಳು ಇಲ್ಲಿ ಶಿಕ್ಷಣ ಪಡೆದರು. 1964ರಿಂದ ಪ್ರಲೇಖನ ಮತ್ತು ಲೇಖನ ಪ್ರತಿ ಕರಣ ವಿಷಯಗಳಲ್ಲಿ ಹನ್ನೆರಡು ತಿಂಗಳ ಪೂರ್ಣಾವಧಿ ಸ್ನಾತಕೋತ್ತರ ಶಿಕ್ಷಣ ವ್ಯವಸ್ಥೆ ಏರ್ಪಟ್ಟಿದೆ. ಪ್ರತಿವರ್ಷ ಹದಿನೈದಕ್ಕೆ ಮೀರದಂತೆ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಉಂಟು. ಅಭ್ಯರ್ಥಿಗಳು ಕನಿಷ್ಠ ಪಕ್ಷ ಯಾವುದಾದರೊಂದು ವಿಷಯದಲ್ಲಿ ಎರಡನೆಯ ದರ್ಜೆಯಲ್ಲಿ ಮಾಸ್ಟರ್ ಪದವಿ ಪಡೆದವರಾಗಿರಬೇಕು. ಕೆಲವು ವರ್ಷ ರಾಷ್ಟ್ರೀಯ ಸಂಶೋಧನೆ ಸಂಸ್ಥೆಗಳಲ್ಲಾಗಲೀ ಪ್ರಯೋಗಶಾಲೆಗಳಲ್ಲಾಗಲೀ ತೃಪ್ತಿಕರವಾಗಿ ಸೇವೆ ನೀಡಿದವರಿಗೆ ನೇರ ಪ್ರವೇಶಾವಕಾಶವಿದೆ.

ಈ ಶಿಕ್ಷಣಾವಧಿಯಲ್ಲಿ ಮುಖ್ಯವಾಗಿ ಗ್ರಂಥಾಲಯ ವಿಜ್ಞಾನದ ಮೂಲತತ್ತ್ವಗಳು, ವಿಶಿಷ್ಟ ಗ್ರಂಥಾಲಯ ಸೇವಾಕ್ರಮ, ವರ್ಗೀಕರಣ, ಸೂಚೀಕರಣ, ಪರಾಮರ್ಶನಸೇವೆ, ಗ್ರಂಥಸೂಚಿ, ಆಡಳಿತ ನಿರ್ವಹಣೆ, ಸಂಘಟನೆ-ಮೊದಲಾದವುಗಳಲ್ಲಿ ತಿಳುವಳಿಕೆ ಹಾಗೂ ಅಭ್ಯಾಸವನ್ನೀಯಲಾಗುತ್ತದೆ. ಮಾತ್ರವಲ್ಲದೆ e್ಞÁನಪ್ರಪಂಚ, ಅದರ ಬೆಳವಣಿಗೆ, ಪ್ರಲೇಖನ ವಿಜ್ಞಾನ, ಭಾಷಾಂತರ ಕ್ರಮಗಳು, ರೇಖನ ಪ್ರತಿಕರಣ, ಮಾಹಿತಿ ಸಂಗ್ರಹಣೆ ಹಾಗೂ ಪರಿಶೋಧನೆ ಮೊದಲಾದ ತಂತ್ರಗಳಲ್ಲಿ ವಿಶೇಷ ಪರಿಣತಿಯನ್ನೊದಗಿಸಲಾಗುತ್ತದೆ. ಜೊತೆಗೆ ಯಾವುದಾದರೊಂದು ವಿಷಯದ ಮೇಲೆ ವಿದ್ಯಾರ್ಥಿ ತನ್ನ ಪ್ರಾಜೆಕ್ಟ್ ವರದಿಯನ್ನು ಒಪ್ಪಿಸಬೇಕಾಗುತ್ತದೆ.

ಪ್ರಪಂಚದ ನಾನಾ ಭಾಷೆಗಳಲ್ಲಿ ವೈe್ಞÁನಿಕ ಗ್ರಂಥಗಳು, ಲೇಖನಗಳು, ಸಂಶೋಧನ ಪ್ರಬಂಧಗಳು ನಿರಂತರವಾಗಿ ಪ್ರಕಟವಾಗುತ್ತಿರುವ ಕಾಲದಲ್ಲಿ ಯಾವ ಭಾಷೆಯನ್ನೂ ಕಡಿಮೆಯೆಂದು ಪರಿಗಣಿಸಬಾರದು. ಸಂಶೋಧನ ಕಾರ್ಯಗಳಿಗೆ ಭಾಷೆ ತೊಡಕಾಗಿ ನಿಲ್ಲಬಾರದು. ಇದನ್ನ ಮನಗಂಡ ಈ ಸಂಸ್ಥೆ ರಷ್ಯನ್ ಭಾಷೆಯಲ್ಲಿ ಭಾಷಾಂತರ ಶಿಕ್ಷಣವನ್ನು ಒದಗಿಸುತ್ತದೆ. 2. ಬೆಂಗಳೂರಿನ ಪ್ರಲೇಖನ ಸಂಶೋಧನ ಮತ್ತು ತರಬೇತಿ ಕೇಂದ್ರ : 1962 ರ ಜನವರಿಯಲ್ಲಿ ಪ್ರಾರಂಭವಾದ ಈ ಸಂಸ್ಥೆ ಎಸ್.ಆರ್. ರಂಗನಾಥನ್ ಅವರ ನಿರ್ದೇಶನದಲ್ಲಿ ತನ್ನ ಕೆಲಸವನ್ನಾರಂಭಿಸಿತು.

ಪ್ರಲೇಖನ ವಿಷಯಗಳಲ್ಲಿ ಸಂಶೋಧನೆ ನಡೆಸುವುದು, ಪ್ರಲೇಖನ ಕುಶಲಿಗಳನ್ನು ತಯಾರುಮಾಡುವುದು, ಪ್ರಲೇಖನ ವಿಷಯಕವಾದ ಸಮಸ್ಯೆಗಳನ್ನು ಬಿಡಿಸುವುದು-ಈ ಸಂಸ್ಥೆಯ ಮುಖ್ಯ ಉದ್ದೇಶಗಳು.

ಈ ತರಬೇತಿಯ ಅವಧಿ 20 ತಿಂಗಳು. ಮೊದಲ 12 ತಿಂಗಳ ವಿಧಿಬದ್ದ ಶಿಕ್ಷಣಾವಧಿಯಲ್ಲಿ ವಿದ್ಯಾಥಿಗಳು ಪೂರ್ಣಕಾಲ ಕೇಂದ್ರದಲ್ಲೇ ಇರಬೇಕಾಗುತ್ತದೆ. ಈ ಅವಧಿ ಮುಗಿದು ಎಂಟು ತಿಂಗಳೊಳಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರಬಂಧ ರಚಿಸಿ ಒಪ್ಪಿಸಬೇಕಾಗುತ್ತದೆ. ಈ ತರಬೇತಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಪ್ರತಿವರ್ಷ ಸಾಮಾನ್ಯವಾಗಿ ಎಂಟಕ್ಕೆ ಮೀರಿರುವುದಿಲ್ಲ. ಈ ತರಬೇತಿಗೆ ಅಭ್ಯರ್ಥಿಯಾಗಲಿಚ್ಛೆಯುಳ್ಳವರು ಸಾಮಾನ್ಯವಾಗಿ ಈ ಕೆಳಗಿನ ಯಾವುದಾದರೊಂದು ಕನಿಷ್ಠ ವಿದ್ಯಾರ್ಹತೆಯನ್ನು ಪಡೆದಿರಬೇಕು.

1. ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಡಿಪ್ಲೊಮ ಅಥವಾ ಡಿಗ್ರಿ ಪಡೆದಿರಬೇಕು. ಅಥವಾ ತತ್ಸಮಾನವೆಂದು ಪರಿಗಣಿಸಲ್ಪಟ್ಟ ವಿದ್ಯಾರ್ಹತೆ ಹೊಂದಿರಬೇಕು.

2. ಯಾವುದಾದರೂ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಯಂತ್ರಶಾಸ್ತ್ರ, ತಾಂತ್ರಿಕ ವಿಜ್ಞಾನ, ಕೃಷಿ ವಿಜ್ಞಾನ, ವೈದ್ಯಶಾಸ್ತ್ರ ಇವುಗಳಲ್ಲಿ ಯಾವುದಾದರೂ ಒಂದರಲ್ಲಿ ಸ್ನಾತಕೋತ್ತರ ಡಿಪ್ಲೊಮ ಪಡೆದಿದ್ದು ಕನಿಷ್ಠ ಪಕ್ಷ ಎರಡು ವರ್ಷಗಳ ಕಾಲ ಯಾವುದಾದರೊಂದು ವಿಶಿಷ್ಟ ಗ್ರಂಥಾಲಯ ಅಥವಾ ಪ್ರಲೇಖನ ಕೇಂದ್ರದಲ್ಲಿ ಕೆಲಸ ಮಾಡಿದ ಅನುಭವವಿರಬೇಕು. ಈ ಕೇಂದ್ರದ ಪಠ್ಯವಿಷಯವನ್ನು ರಂಗನಾಥನ್ ಅವರೇ ಅಳವಡಿಸಿದ್ದಾರೆ. ಮುಖ್ಯವಾಗಿ ಅವರು 1948 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಗ್ರಂಥಾಲಯ ವಿಜ್ಞಾನದ ಮಾಸ್ಟರ್ ಪದವಿ ತರಗತಿಗೆ ತಯಾರಿಸಿದ ಪಠ್ಯಕ್ರಮದ ಆಧಾರದ ಮೇಲೆಯೇ ಇದು ರಚಿತವಾಗಿದೆ. ಮುಖ್ಯವಾಗಿ ಪ್ರಲೇಖನ ಸೇವೆಯಲ್ಲಿ ಆಗುತ್ತಿರುವ ಗಮನಾರ್ಹ ಪ್ರಗತಿ ಮತ್ತು ಪ್ರಲೇಖನ ಕುಶಲಿಗಳ ಪರಸ್ಪರ ಚಿಂತನ ಮಂಥನಗಳಿಂದಾದ ಅನುಭವಗಳನ್ನು ಅನುಸರಿಸಿ ಪಠ್ಯ ವಿಷಯದಲ್ಲಿ ಆಗಾಗ್ಗೆ ಏರ್ಪಾಡುಗಳಾಗುತ್ತಿರುತ್ತವೆ. ಅಸೋಸಿಯೇಟ್, ಅಸೋಸಿಯೇಟ್ ಫೆಲೊಷಿಪ್, ಫೆಲೊಷಿಪ್ ಎಂಬ ಮೂರು ಪದವಿಗಳನ್ನು ಈ ಸಂಸ್ಥೆ ನೀಡುತ್ತಿದೆ. ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ನೀಡುವ ಈ ಅಸೋಸಿಯೇಟ್ ಪದವಿಯನ್ನು (ಗ್ರಂಥಾಲಯಗಳಲ್ಲಿ ಹುದ್ದೆಗಳಿಗೆ ನೇಮಕ ಮಾಡುವ ವಿಷಯದಲ್ಲಿ) ಭಾರತದ ಇತರ ವಿಶ್ವವಿದ್ಯಾಲಯಗಳು ನೀಡುವ ಮಾಸ್ಟರ್ ಪದವಿಗೆ ಸಮವೆಂದು ಪರಿಗಣಿಸಿತು. (1968) (ನೋಡಿ- ಗ್ರಂಥಾಲಯ)

ಭಾರತದಲ್ಲಿ ವಿವಿಧ ಹಂತಗಳಲ್ಲಿ ಗ್ರಂಥಾಲಯ ಶಿಕ್ಷಣ ನೀಡುತ್ತಿರುವ ವಿಶ್ವವಿದ್ಯಾಲಯಗಳು ಕ್ರಮ ಸಂಖ್ಯೆ ಶಿಕ್ಷಣ ಸಂಸ್ಥೆಯ ಹೆಸರು ಶಿಕ್ಷಣದ ವಿವರಗಳು ವರ್ಷ

1 2 3 4

1 ಅಲಿಘಡ್ ಮುಸ್ಲಿಂ ವಿಶ್ವ ವಿದ್ಯಾಲಯ ಸರ್ಟಿಫಿಕೇಟ್ ಕೋರ್ಸ್ ಬ್ಯಾಚುಲರ್ ಕೋರ್ಸ್ ಮಾಸ್ಟರ್ ಕೋರ್ಸ್ 1951 1958 1971

2 ಆಂಧ್ರ ವಿಶ್ವವಿದ್ಯಾಲಯ ಡಿಪ್ಲೊಮ ಕೋರ್ಸ್ ಬ್ಯಾಚಲರ್ ಕೋರ್ಸ್ 1935-37 1947-68

3 ಅಣ್ಣಾಮಲೈ ವಿಶ್ವವಿದ್ಯಾಲಯ ಸರ್ಟಿಫಿಕೇಟ್ ಕೋರ್ಸ್ 1962-66

4 ಬನಾರಸ್ ವಿಶ್ವವಿದ್ಯಾಲಯ ಸರ್ಟಿಫಿಕೇಟ್ ಕೋರ್ಸ್ ಡಿಪ್ಲೊಮ ಕೋರ್ಸ್ ಬ್ಯಾಚಲರ್ ಕೋರ್ಸ್ ಮಾಸ್ಟರ್ ಕೋರ್ಸ್ 1941 1941-63 1963 1965-68

5 ಬರೋಡ ವಿಶ್ವವಿದ್ಯಾಲಯ ಡಿಪ್ಲೊಮ ಕೋರ್ಸ್ ಬ್ಯಾಚಲರ್ ಕೋರ್ಸ್ 1956-64 1962

6 ಭಾಗಲ್ಪುರ ವಿಶ್ವವಿದ್ಯಾಲಯ ಬ್ಯಾಚಲರ್ ಕೋರ್ಸ್ 1970

7 ಮುಂಬಯಿ ವಿಶ್ವವಿದ್ಯಾಲಯ ಡಿಪ್ಲೊಮ ಕೋರ್ಸ್ ಬ್ಯಾಚುಲರ್ ಕೋರ್ಸ್ ಮಾಸ್ಟರ್ ಕೋರ್ಸ್ 1943-64 1964 1967

8 ಬದ್ರ್ವಾನ್ ವಿಶ್ವವಿದ್ಯಾಲಯ ಬ್ಯಾಚುಲರ್ ಕೋರ್ಸ್ 1965

9 ಕಲ್ಕತ್ತ ವಿಶ್ವವಿದ್ಯಾಲಯ ಡಿಪ್ಲೊಮ ಕೋರ್ಸ್ ಬ್ಯಾಚುಲರ್ ಕೋರ್ಸ್ 1945-69 1969

10 ದೆಹಲಿ ವಿಶ್ವವಿದ್ಯಾಲಯ ಡಿಪ್ಲೊಮ ಕೋರ್ಸ್ ಬ್ಯಾಚುಲರ್ ಕೋರ್ಸ್ ಮಾಸ್ಟರ್ ಕೋರ್ಸ್ 1947-65 1965 1949

11 ಗೌಹತಿ ವಿಶ್ವವಿದ್ಯಾಲಯ ಬ್ಯಾಚುಲರ್ ಕೋರ್ಸ್ 1966

12 ಗುಜರಾತ್ ವಿಶ್ವವಿದ್ಯಾಲಯ ಬ್ಯಾಚುಲರ್ ಕೋರ್ಸ್ 1966

13 ಜಾಧವಪುರ ವಿಶ್ವವಿದ್ಯಾಲಯ ಬ್ಯಾಚುಲರ್ ಕೋರ್ಸ್ 1965

14 ಜಮ್ಮು ವಿಶ್ವವಿದ್ಯಾಲಯ ಸರ್ಟಿಫಿಕೇಟ್ ಕೋರ್ಸ್ 1971

15 ಜಿವಾಜಿ ವಿಶ್ವವಿದ್ಯಾಲಯ ಬ್ಯಾಚುಲರ್ ಕೋರ್ಸ್ 1964

16 ಕರ್ನಾಟಕ ವಿಶ್ವವಿದ್ಯಾಲಯ ಡಿಪ್ಲೊಮ ಕೋರ್ಸ್ ಬ್ಯಾಚುಲರ್ ಕೋರ್ಸ್ ಮಾಸ್ಟರ್ ಕೋರ್ಸ್ 1962-65 1965 1971

17 ಕಾಶ್ಮೀರ್ ವಿಶ್ವವಿದ್ಯಾಲಯ ಬ್ಯಾಚುಲರ್ ಕೋರ್ಸ್ 1971

18 ಕೇರಳ ವಿಶ್ವವಿದ್ಯಾಲಯ ಬ್ಯಾಚುಲರ್ ಕೋರ್ಸ್ 1961

19 ಕುರುಕ್ಷೇತ್ರ ವಿಶ್ವವಿದ್ಯಾಲಯ ಬ್ಯಾಚುಲರ್ ಕೋರ್ಸ್ 1969

20 ಲಖ್‍ನೌ ವಿಶ್ವವಿದ್ಯಾಲಯ (ಇಸಬೆಲ್ಲಾ ಥೋಬರ್ನ್ ಕಾಲೇಜು) ಬ್ಯಾಚುಲರ್ ಕೋರ್ಸ್ 1962

21 ಮದ್ರಾಸ್ ವಿಶ್ವವಿದ್ಯಾಲಯ ಸರ್ಟಿಫಿಕೇಟ್ ಕೋರ್ಸ್

ಡಿಪ್ಲೊಮ ಕೋರ್ಸ್ ಬ್ಯಾಚಲರ್ ಕೋರ್ಸ್ 1931-37,49

1937-60 1960

22 ಮರಾಠವಾಡ ವಿಶ್ವವಿದ್ಯಾಲಯ ಬ್ಯಾಚಲರ್ ಕೋರ್ಸ್ 1967

23 ಮೈಸೂರು ವಿಶ್ವವಿದ್ಯಾಲಯ ಬ್ಯಾಚಲರ್ ಕೋರ್ಸ್ ಮಾಸ್ಟರ್ ಕೋರ್ಸ್ 1965 1971

24 ನಾಗಪುರ ವಿಶ್ವವಿದ್ಯಾಲಯ ಜೂನಿಯರ್ ಡಿಪ್ಲೊಮ ಕೋರ್ಸ್ ಡಿಪ್ಲೊಮ ಕೋರ್ಸ್ ಬ್ಯಾಚಲರ್ ಕೋರ್ಸ್ 1965-68 1956-66 1966

25 ಉಸ್ಮಾನಿಯ ವಿಶ್ವವಿದ್ಯಾಲಯ ಡಿಪ್ಲೊಮ ಕೋರ್ಸ್ ಬ್ಯಾಚಲರ್ ಕೋರ್ಸ್ 1959-65 1965

26 ಪಂಜಾಬ್ ವಿಶ್ವವಿದ್ಯಾಲಯ ಡಿಪ್ಲೊಮ ಕೋರ್ಸ್ ಬ್ಯಾಚಲರ್ ಕೋರ್ಸ್ ಮಾಸ್ಟರ್ ಕೋರ್ಸ್

1960-68 1968 1970

27 ಪುಣೆ ವಿಶ್ವವಿದ್ಯಾಲಯ ಡಿಪ್ಲೊಮ ಕೋರ್ಸ್ ಬ್ಯಾಚಲರ್ ಕೋರ್ಸ್

1964-68 1968


28 ಪಂಜಾಬಿ ವಿಶ್ವವಿದ್ಯಾಲಯ ಬ್ಯಾಚಲರ್ ಕೋರ್ಸ್ 1968

29 ರಾಜಸ್ಥಾನ್ ವಿಶ್ವವಿದ್ಯಾಲಯ ಸರ್ಟಿಫಿಕೇಟ್ ಕೋರ್ಸ್ ಬ್ಯಾಚಲರ್ ಕೋರ್ಸ್ 1961 1961

30 ರವಿಶಂಕರ್ ವಿಶ್ವವಿದ್ಯಾಲಯ ಬ್ಯಾಚಲರ್ ಕೋರ್ಸ್ 1971

31 ಅವಧೇಶ್ ಪ್ರತಾಪ್ ವಿಶ್ವವಿದ್ಯಾಲಯ (ಥ್ಯಾಕರಾರ್ ರಮ್ಮತ್‍ಸಿಂಗ್ ಕಾಲೇಜು-ರೇವಾ) ಬ್ಯಾಚಲರ್ ಕೋರ್ಸ್ 1968

32 ಸೌಗರ್ ವಿಶ್ವವಿದ್ಯಾಲಯ ಬ್ಯಾಚಲರ್ ಕೋರ್ಸ್ 1970

33 ಆರ್ಮಿ ಎಜುಕೇಷನಲ್ ಕೋರ್ ಕಾಲೇಜು, ಪಚ್‍ಮಾರಿ ಡಿಪ್ಲೊಮ ಕೋರ್ಸ್ 1962 1970

34 ಎಸ್.ಎಸ್.ಡಿ.ಟಿ ವಿಶ್ವವಿದ್ಯಾಲಯ ಮುಂಬಯಿ (ಶ್ರೀ ಬನ್‍ಸ್ರಾಜ್ ಪ್ರಾಗ್ಜಿ ಥ್ಯಾಕರ್ಸ್ ಸ್ಕೂಲ್ ಆಫ್ ಲೈಬ್ರರಿ ಸೈನ್ಸ್) ಡಿಪ್ಲೊಮ ಕೋರ್ಸ್ ಬ್ಯಾಚಲರ್ ಕೋರ್ಸ್ 1961-64 1964

35 ಶಿವಾಜಿ ವಿಶ್ವವಿದ್ಯಾಲಯ ಡಿಪ್ಲೊಮ ಕೋರ್ಸ್ ಬ್ಯಾಚಲರ್ ಕೋರ್ಸ್ 1965-68 1968


36 ವಾರಣಾಸಿಯ ಸಂಸ್ಕøತ ವಿಶ್ವವಿದ್ಯಾಲಯ ಬ್ಯಾಚಲರ್ ಕೋರ್ಸ್ 1967

37 ವಿಕ್ರಮ್ ವಿಶ್ವವಿದ್ಯಾಲಯ ಸರ್ಟಿಫಿಕೇಟ್ ಕೋರ್ಸ್ ಡಿಪ್ಲೊಮ ಕೋರ್ಸ್ ಬ್ಯಾಚಲರ್ ಕೋರ್ಸ್ ಮಾಸ್ಟರ್ ಕೋರ್ಸ್ 1961-69 1957-63 1963 1971


ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ : ಗ್ರಂಥಾಲಯ ಶಿಕ್ಷಣ ವಿಭಾಗವನ್ನು ವಿಶ್ವವಿದ್ಯಾಲಯಕ್ಕೆ ಸೇರಿಸಬೇಕು ಹಾಗೂ ಗ್ರಂಥಾಲಯ ವಿಜ್ಞಾನದಲ್ಲಿ ಅಳವಾದ ಅಧ್ಯಯನ ಮತ್ತು ಸಂಶೋಧನೆಗಳಿಗೆ ಪ್ರೋತ್ಸಾಹ ನೀಡಬೇಕು-ಎಂಬ ವಿಲಿಯಂ ಸನ್ನರ ವರದಿಯಲ್ಲಿನ ಎರಡು ಪ್ರಮುಖ ಸಲಹೆಗಳು ವಿದ್ಯಾಸಂಸ್ಥೆಗಳಲ್ಲಿನ ಗ್ರಂಥ ಪಾಲನವೃತ್ತಿಯ ಮುನ್ನಡೆಗೆ ಅಸ್ತಿಭಾರದಂತಿವೆ. 1924 ರಲ್ಲಿ ಸ್ಥಾಪನೆಗೊಂಡ ಗ್ರಂಥಾಲಯ ವೃತ್ತಿ ಶಿಕ್ಷಣ ಮಂಡಳಿ ಮತ್ತು 1928 ರಲ್ಲಿ ಸ್ಥಾಪನೆಗೊಂಡ ಚಿಕಾಗೊ ವಿಶ್ವವಿದ್ಯಾಲಯದ ಸ್ನಾತಕೋತ್ತರ ಗ್ರಂಥಾಲಯ ವಿಜ್ಞಾನ ಶಾಲೆ-ಇವು ವಿಲಿಯಂ ಸನ್ನರ ವರದಿಯ ಅನುಷ್ಠಾನಕ್ಕೆ ಇಟ್ಟ ಪ್ರಮುಖ ಹೆಜ್ಜೆಗಳಾಗಿವೆ. 1946 ರಲ್ಲಿ ಏಕಕಾಲಕ್ಕೆ ಎರಡು ಗ್ರಂಥಗಳು ಪ್ರಕಟವಾದವು. ಅವೆರಡೂ ವಿಲಿಯಂಸನ್ನರ ವರದಿಯಂತೆಯೇ ಪ್ರಾಧಾನ್ಯ ಪಡೆದಿದ್ದು ಆಗಬಹುದಾದ ವ್ಯಾಪಕ ಬದಲಾವಣೆಗಳಿಗೆ ಮುನ್‍ಸೂಚನೆಗಳಾದವು. ಅವುಗಳೆಂದರೆ-ಡಂಟನ್ನನ ಎಜುಕೇಷನ್ ಫಾರ್ ಲೈಬ್ರೇರಿಯ್‍ಷಿಪ್, ಕ್ರಿಟಿಸಿಸಂ ಡಿಪ್ಲೊಮಾಸ್ ಅಂಡ್ ಪ್ರಪೋಸಲ್ಸ್) ಮತ್ತು ಹ್ವೀಲರರ ಪ್ರಾಗ್ರೆಸ್ ಅಂಡ್ ಪ್ರಾಬ್ಲಂಸ್ ಇನ್ ಎಜುಕೇಷನ್ ಫಾರ್ ಲೈಬ್ರೇರಿಯನ್‍ಷಿಪ್, ಇವೆರಡೂ ಉದ್ಗ್ರಂಥಗಳು ಗ್ರಂಥಾಲಯ ವೃತ್ತಿ ಶಿಕ್ಷಣದ ಮೂಲಭೂತ ಸಮಸ್ಯೆಗಳನ್ನು ಗುರುತಿಸಿ ಮುಂದೆ ಆಗಬೇಕಾದ ಮಹತ್ತರ ಬದಲಾವಣೆಗಳ ಕುರಿತು ವಿವೇಚನೆ ನಡೆಸಿವೆ. ಕಳೆದ ಕಾಲುಶತಮಾನದಿಂದ ವೀಕ್ಷಕರು ಮಾಡಿರುವ ಖಚಿತವಾದ ಟೀಕೆಗಳು ವಿದ್ಯಾ ಸಂಸ್ಥೆಗಳ ಗ್ರಂಥಪಾಲನ ವೃತ್ತಿಯ ದೃಷ್ಟಿಯಿಂದ ಪ್ರಾಮುಖ್ಯ ಪಡೆದಿವೆ. ಮುಖ್ಯವಾಗಿ ಬಂದ ವಿಮರ್ಶೆಗಳು ಹೀಗಿವೆ. 1 ಗ್ರಂಥಾಲಯ ವಿಜ್ಞಾನ ಶಿಕ್ಷಣದಲ್ಲಿ ಬೌದ್ಧಿಕತೆ ಹಾಗೂ ವೃತ್ತಿಪರ ವಿಷಯಗಳಿಗೆ ಸಾಕಷ್ಟು ಗಮನ ನೀಡದಿರುವುದು. 2 ನಿರ್ದಿಷ್ಟ ವಿಷಯ ಕ್ಷೇತ್ರಗಳಲ್ಲಿ ಪ್ರತಿಭಾ ಸಂಪನ್ನರಾದ ಗ್ರಂಥಪಾಲರನ್ನು ರೂಪಿಸುವುದರಲ್ಲೂ ದಕ್ಷ ಹಾಗೂ ಸಮರ್ಥ ಆಡಳಿತಗಾರರನ್ನು ಸೃಷ್ಟಿಸುವುದರಲ್ಲೂ ವಿಫಲರಾಗಿರುವುದು. 3 ಗ್ರಂಥಾಲಯ ಶಿಕ್ಷಣದ ಒಂದು ವರ್ಷದ ಅವಧಿಯಲ್ಲಿ ಬ್ಯಾಚಲರ್ ಪದವಿ ನೀಡುವ ಬದಲು ಮಾಸ್ಟರ್ ಪದವಿ ನೀಡಬೇಕೆಂಬ ಇನ್ನೊಂದು ಸಲಹೆ. ಏಕೆಂದರೆ ವಿದ್ಯಾರ್ಥಿಗಳು ನಾಲ್ಕು ವರ್ಷ ಕಾಲ ಓದಿ ಯಾವುದಾದರೊಂದು ವಿಷಯದಲ್ಲಿ ಡಿಗ್ರಿ ಪಡೆದ ಮೇಲೆ ಮತ್ತೆ ಗ್ರಂಥಾಲಯ ವಿಜ್ಞಾನದಲ್ಲಿ ಒಂದು ವರ್ಷದ ಕಲಿಕೆ ಪೂರ್ಣಗೊಂಡ ಮೇಲೆ ಬ್ಯಾಚಲರ್ ಪದವಿ ನೀಡುವುದು ಉಚಿತವಾಗಲಾರದು. ಇದೇ ಕಾಲಕ್ಕೆ ಎಲ್ಲ ಗ್ರಂಥಾಲಯ ವಿಜ್ಞಾನ ಶಾಲೆಗಳು ಅವುಗಳ ಪಠ್ಯಕ್ರಮ ಹಾಗೂ ಪದವಿ ಶಿಕ್ಷಣ ಕ್ರಮವನ್ನು ಮರುಪರಿಶೀಲಿಸಲು ತೊಡಗಿದವು. ವಿಶಾಲವಾದ ವಿಷಯ ಕ್ಷೇತ್ರಗಳಲ್ಲಿ ಅಂದರೆ ಮಾನವಿಕ, ವಿಜ್ಞಾನ, ತಾಂತ್ರಿಕ ವಿಜ್ಞಾನ ಮತ್ತು ಸಾಮಾಜಕ ವಿಜ್ಞಾನಗಳ ಗ್ರಂಥಸೂಚಿ ರಚನೆಯಲ್ಲಿ ವಿಶಿಷ್ಟ ಶಿಕ್ಷಣ ಕೊಡಲು ಪ್ರಯತ್ನ ಮಾಡಲಾಯಿತು. ಈ ರೀತಿ ಪಠ್ಯಕ್ರಮಗಳನ್ನು ಸುಧಾರಿಸಿದ ಗ್ರಂಥಾಲಯ ವಿಜ್ಞಾನ ಶಾಲೆಗಳ ಪೈಕಿ ಎಲ್ಲವೂ ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಲಿಲ್ಲ. ಗ್ರಂಥಾಲಯ ವಿಜ್ಞಾನ ಶಾಲೆಗಳಿಂದ ನೀಡುತ್ತಿರುವ ಪದವಿ ವಿಷಯದಲ್ಲಿ ಮಾತ್ರ ಮುಖ್ಯ ಬದಲಾವಣೆಗಳಾದವು. ಗ್ರಂಥಾಲಯ ವಿಜ್ಞಾನದಲ್ಲಿ ಬ್ಯಾಚುಲರ್ ಪದವಿ ನೀಡುವ ಕ್ರಮವನ್ನು ಕೈಬಿಟ್ಟು ಒಂದು ವರ್ಷದ ಸ್ನಾತಕೋತ್ತರ ಅಧ್ಯಯನದ ಕೊನೆಗೆ ಮಾಸ್ಟರ್ ಪದವಿ ನೀಡುವ ಸಂಪ್ರದಾಯವನ್ನು ಕೈಗೊಳ್ಳಲಾಯಿತು. ಗ್ರಂಥಾಲಯ ವಿಜ್ಞಾನದಲ್ಲಿ ಪಿ.ಎಚ್.ಡಿ. ಪದವಿಯನ್ನು ನೀಡಲು ಚಿಕಾಗೊ ಶಾಲೆಯ ಜೊತೆಗೆ ಇನ್ನೂ ಮೂರು ಗ್ರಂಥಾಲಯ ವಿಜ್ಞಾನ ಶಾಲೆಗಳು ಮುಂದೆ ಬಂದುವು. ಶೈಕ್ಷಣಿಕ ಗ್ರಂಥಪಾಲನೆಯಲ್ಲಿ ಕೊಲಂಬಿಯ, ಇಲ್ಲಿನಾಯ್ ಮತ್ತು ಮಿಚಿಗನ್ ವಿಶ್ವವಿದ್ಯಾಲಯಗಳು ಮಾತ್ರ ಡಾಕ್ಟೊರೇಟ್ ಪದವಿ ನೀಡಲು ನಿರ್ಧರಿಸಿದುವು. ಈ ಕ್ರಮ ಎರಡು ದಶಕಗಳವರೆಗೆ ಮುಂದುವರಿಯಿತು. 1951ರ ಮೊದಲ ಭಾಗದಲ್ಲಿ ಕೊಲಂಬಿಯ ವಿಶ್ವವಿದ್ಯಾಲಯ ತನ್ನ ನಿಲುವನ್ನು ವಿಸ್ತರಿಸಿ ಮೂರು ವಿಧವಾದ ಡಾಕ್ಟೊರೇಟ್ ಪದವಿ ಶಿಕ್ಷಣ ಪದವಿ ಶಿಕ್ಷಣ ನೀಡುವ ತನ್ನ ನಿರ್ಧಾರವನ್ನು ಪ್ರಕಟಿಸಿತು. 1. ಗ್ರಂಥಾಲಯ ವಿಜ್ಞಾನವನ್ನೇ ಪ್ರಮುಖ ವಿಷಯವನ್ನಾಗಿರಿಸಿಕೊಂಡು ಬರೆದ ಸಂಶೋಧನ ಪ್ರಬಂಧಕ್ಕೆ ಡಾಕ್ಟರ್ ಆಫ್ ಲೈಬ್ರರಿ ಸೈನ್ಸ್ ಪದವಿ ನೀಡಿಕೆ. ಈ ಯೋಜನೆ ಸಂಪೂರ್ಣವಾಗಿ ಗ್ರಂಥಾಲಯ ವಿಜ್ಞಾನ ಶಿಕ್ಷಣ ವಿಭಾಗದ ಹೊಣೆ. 2. ಯಾವನೇ ವಿದ್ಯಾರ್ಥಿ ತನ್ನ ವ್ಯಾಸಂಗ ಸಮಯವನ್ನು ಗ್ರಂಥಪಾಲನ ವೃತ್ತಿಗೆ ಸಂಬಂಧಿಸಿದ ವಿಷಯಗಳ ಮೇಲೂ ಅಷ್ಟೇ ಮುಖ್ಯವಾಗಿ ಅವನಿಗೆ ಪ್ರಿಯವಾದ ಇನ್ನಾವುದಾದರೂ ವಿಷಯದ ಅಭ್ಯಾಸದಲ್ಲೂ ಕಳೆದ ಇವೆರಡರ e್ಞÁನಗಳಿಂದ ಸಂಶೋಧನ ಪ್ರಬಂಧವನ್ನು ಬರೆಯಲು ಸಮರ್ಥನಾದರೆ ಅಂಥವನಿಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿ ನೀಡಿಕೆ. ಈ ಯೋಜನೆ ಗ್ರಂಥ ವಿಜ್ಞಾನ ಮತ್ತು ವಿದ್ಯಾರ್ಥಿ ಆರಿಸಿಕೊಂಡ ನಿರ್ದಿಷ್ಟ ವಿಷಯದ ಅಧ್ಯಾಪಕ ವರ್ಗ ಸೇರಿರುವ ಸಮಿತಿಯ ನಿರ್ವಹಣೆಯಲ್ಲಿರುತ್ತದೆ. ಈ ಸಮಿತಿ ಗೊತ್ತುಪಡಿಸಿದ ಪರೀಕ್ಷಾಧಿಕಾರಿಗಳು ಫಲಿತಾಂಶವನ್ನು ನಿರ್ಧರಿಸುತ್ತಾರೆ. 3. ಯಾವನೇ ವಿದ್ಯಾರ್ಥಿ ಗ್ರಂಥಾಲಯ ವಿಜ್ಞಾನವಲ್ಲದೇ ಬೇರೊಂದು ವಿಷಯವನ್ನು ಕಲಿತು ಮುಖ್ಯವಾಗಿ ಆ ವಿಷಯದಲ್ಲೇ ಸಂಶೋಧನ ಪ್ರಬಂಧವನ್ನು ರಚಿಸಲು ನಿರ್ಧರಿಸಿ ತನ್ನ ಸಂಶೋಧನ ಕೆಲಸದ ಒಂದು ಅಂಗವಾಗಿ ಗ್ರಂಥಾಲಯ ಶಿಕ್ಷಣವನ್ನು ಪಡೆದು ಪ್ರಬಂಧವನ್ನು ಬರೆದರೆ ಡಾಕ್ಟರ್ ಆಫ್ ಫಿಲಾಸಫಿ ಪದವಿ ನೀಡಿಕೆ. ಗ್ರಂಥಾಲಯ ಶಿಕ್ಷಣದಲ್ಲಿ ಸಂಶೋಧನೆ: ಗ್ರಂಥಾಲಯ ಶಿಕ್ಷಣದಲ್ಲಿ ಸಂಶೋಧನೆಗಳು ನಡೆದಿದ್ದು ಇತ್ತೀಚಿನ ವರ್ಷಗಳಲ್ಲಿ. ಅದೂ ಎರಡನೆಯ ಮಹಾಯುದ್ಧದಿಂದೀಚೆಗೆ. ಆ ಮೊದಲು ಪ್ರಕಟವಾದ ಗ್ರಂಥಗಳು ಮತ್ತು ನಿಯತಕಾಲಿಕೆ ಲೇಖನಗಳು ಬಹುಮಟ್ಟಿಗೆ ಗ್ರಂಥಾಲಯ ಕಾರ್ಯ ಸ್ವರೂಪದ ವಿವರಣೆ, ಗ್ರಂಥ ಸೂಚಿಗಳ ರಚನೆ ಮತ್ತು ಗ್ರಂಥಪಾಲರ ವೈಯಕ್ತಿಕ ಅನುಭವಗಳನ್ನೊಳಗೊಂಡಿರುತ್ತಿದ್ದುವು. ಸಂಶೋಧನ ಸ್ವರೂಪದ ಮಾಹಿತಿಗಳು ಇವುಗಳಲ್ಲಿ ವಿರಳವಾಗಿದ್ದುವೆಂದೇ ಹೇಳಬೇಕು. ಇಂಥ ಸಾಹಿತ್ಯವನ್ನು ಯಾವ ರೀತಿಯ ಮೌಲ್ಯ ಮಾಪನೆಗಾಗಲೀ ತೌಲನಿಕ ವಿಶ್ಲೇಷಣೆಗಾಗಲೀ ಒಳಪಡಿಸುವುದು ಪ್ರಯೋಜನಕಾರಿಯಾಗಿರಲಿಲ್ಲ. ಕಳೆದ ದಶಕದ ಪೂರ್ವಾರ್ಧದಲ್ಲಿ ಈ ವಾತಾವರಣ ಉತ್ತಮಗೊಂಡಿತು. ಗ್ರಂಥಾಲಯ ಮತ್ತು ಪ್ರಲೇಖನ ಕೇಂದ್ರಗಳ ಪ್ರಸ್ತುತ ಪರಿಸ್ಥಿತಿಯಲ್ಲಿ ಸುಧಾರಣೆಯಾಗದ ಹೊರತು ಓದುಗರ ಅವಶ್ಯಕತೆಗಳನ್ನು ಪೂರೈಸುವುದು ದುಸ್ಸಾಧ್ಯವೆಂಬುದು ಮನದಟ್ಟಾಯಿತು. ಈ ಸುಧಾರಣೆಗಳಿಗೆ ಆಳವಾದ ಸಂಶೋಧನೆ ಮತ್ತು ವ್ಯಾಪಕವಾದ ಸಮೀಕ್ಷೆಗಳ ಗಟ್ಟಿ ತಳಹದಿ ಅಗತ್ಯವಾಯಿತು. ಗ್ರಂಥಾಲಯದ ಹಲವಾರು ಕ್ಷೇತ್ರಗಳಲ್ಲಿ ಅದರಲ್ಲೂ ಮಾಹಿತಿ ಸಂಗ್ರಹಣೆ ಮತ್ತು ವಿತರಣೆಯಲ್ಲಿ ಈ ಸುಧಾರಣೆಗಳು ಆಗಬೇಕಾಯಿತು. ನವೀನ ಸಂಪರ್ಕಸಾಧನಗಳು ಲಭ್ಯವಿರುವಾಗ ಗ್ರಂಥಾಲಯ ಸೇವಾ ವಿಧಾನಗಳಲ್ಲಿ ಮಾರ್ಪಾಟುಗಳು ಅನಿವಾರ್ಯವಾದುವು. ಇಂಥ ಒಂದು ವಿಶಿಷ್ಟ ಸನ್ನಿವೇಶದಲ್ಲಿ ಗ್ರಂಥಾಲಯ ಶಿಕ್ಷಣ ಮತ್ತು ಸೇವೆಯಲ್ಲಿ ಹೊಸ ಹೊಸ ವಿಧಾನ ಮತ್ತು ಸಂಶೋಧನೆಗಳಿಗೆ ಸಾಕಷ್ಟು ಅವಕಾಶವಿದೆ. ಅಷ್ಟೇ ಅಲ್ಲದೆ, ಈ ಸನ್ನಿವೇಶ ಹೊಸ ಸವಾಲನ್ನು ತಂದೊಡ್ಡಿದೆ. ಇಂಗ್ಲೆಂಡ್ ಮತ್ತು ಅಮೆರಿಕದ ಅನೇಕ ಗ್ರಂಥಾಲಯ ಶಿಕ್ಷಣ ಸಂಸ್ಥೆಗಳು ಈ ಸವಾಲನ್ನು ಬಹುಮಟ್ಟಿಗೆ ಎದುರಿಸಿವೆ. ಸಂಶೋಧನೆ ಎನಿಸಿಕೊಳ್ಳುವ ಯಾವ ಒಂದು ಯೋಜನೆಯೇ ಇರಲಿ ಯಾವ ರಾಷ್ಟ್ರದಲ್ಲಿಯೇ ಆಗಲಿ ಅದು ಬಹು ಕ್ಲಿಷ್ಟವಾದದ್ದು. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿಯಂತೂ ಇದು ಬಹು ಜಟಿಲವಾದದ್ದು. ಈ ದೇಶಗಳಲ್ಲಿ ಅಸಂಖ್ಯಾತ ಸಮಸ್ಯೆಗಳು ಇದ್ದು ಅವನ್ನು ಬಿಡಿಸುವಾಗ ಹಲವಾರು ತೊಡಕುಗಳು ಕಂಡುಬರುತ್ತವೆ. ಗ್ರಂಥಾಲಯ ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕುವಾಗ ಗ್ರಂಥಾಲಯಗಳ ಮಾನ್ಯತೆಯ ಪ್ರಶ್ನೆ ವ್ಯಾಪಕವಾಗಿರುವ ನಿರಕ್ಷರತೆ, ಗ್ರಂಥಾಲಯಗಳ ಬೆಳವಣಿಗೆಯಲ್ಲಿ ಯೋಜನೆಯಿಲ್ಲದಿರುವುದು, ಇಂಥ ಯೋಜನೆಗಳನ್ನು ತಯಾರಿಸುವಾಗ ಬೇಕಾಗುವ ಸಮಂಜಸ ಅಂಕಿಸಂಖ್ಯೆಗಳ ಅಭಾವ, ಕಟ್ಟಡ, ಗ್ರಂಥಸಂರಕ್ಷಣೆ ಮೊದಲಾದವುಗಳಿಗೆ ಬೇಕಾದ ತಾಂತ್ರಿಕ e್ಞÁನದ ಅಭಾವ-ಇವೇ ಮೊದಲಾದ ಸಮಸ್ಯೆಗಳು ಎದುರಾಗುತ್ತವೆ. ಗ್ರಂಥಾಲಯ ವಿಷಯಗಳನ್ನು ಕುರಿತ ಸಂಶೋಧನೆಗಳು ಮುಂದುವರಿಯುತ್ತಿರುವ ದೇಶಗಳಲ್ಲಿಯೇ ಆಗಲಿ ಮುಂದುವರಿದ ದೇಶಗಳಲ್ಲಿಯೇ ಆಗಲಿ-ಒಂದು ಸರ್ವ ಸಾಮಾನ್ಯ ವಿಷಯವನ್ನು ಅಲಕ್ಷಿಸಲಿಕ್ಕಾಗದು. ಗ್ರಂಥಾಲಯ ವಿಜ್ಞಾನಕ್ಕೂ ಉಳಿದ ಹಲವಾರು ಶಾಸ್ತ್ರಾದಿವಿಷಯಗಳಿಗೂ ನಿಕಟವಾದ ಸಂಬಂಧವಿದೆ. ಗ್ರಂಥಾಲಯ ವಿಷಯದಲ್ಲಿರುವ ಪರಿಣತಿಯೊಂದಿಗೆ ಸಂಶೋಧಕ ಬೇರೆ ವಿಷಯಗಳಲ್ಲೂ ವಿಶಿಷ್ಟ e್ಞÁನ ಮತ್ತು ಪರಿಣತಿ ಪಡೆದಿರಬೇಕಾಗುತ್ತದೆ. ಈಚೆಗೆ ಪ್ರಲೇಖನ, ಸ್ವಯಂತ್ರೀಕರಣ, ಯಂತ್ರೀಕೃತ ಸೂಚೀಕರಣ ವ್ಯವಸ್ಥೆ ಮೊದಲಾದವು ಬಳಕೆಗೆ ಬರುತ್ತಿವೆಯಾಗಿ ಗ್ರಂಥಾಲಯ ವಿಜ್ಞಾನದಲ್ಲಿ ತೀವ್ರವಾಗಿ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿವೆ. ಗ್ರೇಟ್ ಬ್ರಿಟನ್ನಿನಲ್ಲಿ : 1880 ರಷ್ಟು ಹಿಂದೆ, ಬ್ರಿಟನ್ನಿನ ಗ್ರಂಥಾಲಯ ಸಂಘ, ಅದು ಸ್ಥಾಪನೆಯಾದ ಮೂರು ವರ್ಷಗಳಲ್ಲಿಯೇ ಗ್ರಂಥಾಲಯ ಶಿಕ್ಷಣವನ್ನು ಕುರಿತು ಚಿಂತಿಸತೊಡಗಿತು. ಗ್ರಂಥಾಲಯ ವಿಜ್ಞಾನದಲ್ಲಿ 1885ರಲ್ಲಿ ಲಂಡನ್ ಮತ್ತು ನಾಟಿಂಗ್‍ಹ್ಯಾಮ್‍ಗಳಲ್ಲಿ ಪರೀಕ್ಷೆಗಳು ನಡೆದುವು. ಬ್ರಿಟನ್ನಿನ ಮೊದಲ ಗ್ರಂಥಾಲಯ ಶಿಕ್ಷಣ ಕೇಂದ್ರ ಲಂಡನ್ ವಿಶ್ವವಿದ್ಯಾಲಯದ ಆಶ್ರಯದಲ್ಲಿ 1919ರಲ್ಲಿ ಪ್ರಾರಂಭವಾಯಿತು. ಆಗಿನ ಬ್ರಿಟಿಷ್ ಶಿಕ್ಷಣ ಪದ್ಧತಿಯಂತೆ ಗ್ರಂಥಾಲಯ ಶಿಕ್ಷಣ ಪದ್ಧತಿಯಲ್ಲಿಯೂ ಪರೀಕ್ಷೆಗಳ ಮೇಲೆ ಹೆಚ್ಚಿನ ಹತೋಟಿಯನ್ನು ಗ್ರಂಥಾಲಯ ಸಂಘವೇ ಹೊಂದಿತ್ತು. ತರಬೇತಿಯಲ್ಲಿ ಅಭ್ಯರ್ಥಿಗಳಿಗೆ ಬೇಕಾಗಿದ್ದ ಸಾಧನ ಸಲಕರಣೆಗಳ ಹಾಗೂ ಇತರ ಸವಲತ್ತುಗಳ ಕಡೆಗೆ ಅಷ್ಟೊಂದು ಗಮನ ಕೊಟ್ಟಿರಲಿಲ್ಲ. ಕೆಲಸದಲ್ಲಿರುವವರಿಗೆ (ಉದ್ಯೋಗಸ್ಥರಿಗೆ) ಆಯಾಯ ವೃತ್ತಿಗಳಲ್ಲಿ ತರಬೇತಿ ನೀಡುವ ವಿಧಾನ ಬ್ರಿಟನ್ನಿನಲ್ಲಿ ಆಳವಾಗಿ ನೆಲೆಯೂರಿ ನಿಂತಿದೆ. ಈ ಪದ್ಧತಿಗೆ 1898 ರ ರಾಯಲ್ ಚಾರ್ಟರಿನ ರಕ್ಷಣೆಯೂ ಇದೆ. ಈ ಶಾಸನ ಬ್ರಿಟನ್ನಿನ ಗ್ರಂಥಾಲಯ ಸಂಘವನ್ನು ವೃತ್ತಿಸಂಘವೆಂದು ಪರಿಗಣಿಸಿ ಮಾನ್ಯ ಮಾಡಿದೆ. ಶಾಸನದ ಮೂರನೆಯ ಮತ್ತು ಹತ್ತನೆಯ ನಿಬಂಧನೆಗಳು ಗ್ರಂಥಾಲಯ ವೃತ್ತಿಯ ಸುಧಾರಣೆ, ವೃತ್ತಿಯಲ್ಲಿ ಬೇಕಾಗುವ ಅರ್ಹತೆ, ಪರೀಕ್ಷೆಗಳ ಮೇಲೆ ನಿಯಂತ್ರಣ ಮತ್ತು ಪ್ರಶಸ್ತಿ ಪತ್ರಗಳ ವಿತರಣೆ-ಇವುಗಳ ಬಗ್ಗೆ ಗ್ರಂಥಾಲಯ ಸಂಘಕ್ಕೆ ಇರುವ ಜವಾಬ್ದಾರಿಯನ್ನು ಒತ್ತಿ ಹೇಳುತ್ತವೆ. ಗ್ರಂಥಾಲಯ ಶಿಕ್ಷಣ ಕ್ಷೇತ್ರದಲ್ಲಿ ಗ್ರಂಥಾಲಯ ಸಂಘವನ್ನು ಬಿಟ್ಟರೆ ಬೇರಾವ ಸಂಘಕ್ಕಾಗಲೀ ಶಿಕ್ಷಣ ಸಂಸ್ಥೆಗಾಗಲೀ ಇಷ್ಟೊಂದು ಅಧಿಕಾರವಿರುವುದಿಲ್ಲ. ಬ್ರಿಟನ್ನಿನ ದೊಡ್ಡ ದೊಡ್ಡ ನಗರಗಳಲ್ಲಿ ಗ್ರಂಥಾಲಯ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿ ಆ ಮೂಲಕ ವೃತ್ತಿನಿರತ ಗ್ರಂಥಪಾಲರಿಗೆ ಗ್ರಂಥಾಲಯ ಸಂಘ ನಡೆಸುವ ಪರೀಕ್ಷೆಗೆ ಕೂಡುವ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಹಲವಾರು ಪ್ರಯತ್ನಗಳು ಕಳೆದ ಶತಕದ ಕೊನೆಯಲ್ಲಿ ನಡೆದುವು. ಇಂಥವುಗಳಲ್ಲಿ ಲಂಡನ್(1998) ಮತ್ತು ಮ್ಯಾಂಚೆಸ್ಟರ್ (1899) ಮುಖ್ಯವಾದುವುಗಳು. ಮೊದಲು ಐವತ್ತು ವರ್ಷಗಳಲ್ಲಿ ತೆರಪಿನ ಶಿಕ್ಷಣವನ್ನು ನೀಡುವ ಕೆಲಸವನ್ನು ಹಲವಾರು ವಾಣಿಜ್ಯ ಹಾಗೂ ತಾಂತ್ರಿಕ ಕಾಲೇಜುಗಳು ಮುಂದುವರಿಸಿಕೊಂಡು ಬಂದುವು. ಸೆಪ್ಟೆಂಬರ್‍ನಿಂದ ಜೂನ್ ವರೆಗೆ ವಾರಕ್ಕೆ ಒಂದು, ಎರಡು ತರಗತಿಗಳನ್ನು ಸ್ಥಳೀಯ ಶಿಕ್ಷಣ ಸಂಸ್ಥೆಗಳು ನಡೆಸುತ್ತಿದ್ದ ಉದಾಹರಣೆಗಳು ಕಾಣಸಿಗುತ್ತವೆ. ಈ ರೀತಿಯ ವಾರಿಕ ತರಬೇತಿ ಕೇಂದ್ರಗಳು ಬ್ರಿಟನ್ನಿನಾದ್ಯಂತ ಹರಡಿದ್ದು, ಬಹು ಮುಖ್ಯ ವೃತ್ತಿ ಶಿಕ್ಷಣ ಕೇಂದ್ರಗಳಾಗಿದ್ದುವು. ಈ ಅವಧಿಯಲ್ಲಿ ವಿಶ್ವವಿದ್ಯಾಲಯಗಳು ಈ ಬಗ್ಗೆ ಮೌನವಾಗೇ ಇದ್ದುವು. 1919ರಲ್ಲಿ ಲಂಡನ್ ವಿಶ್ವವಿದ್ಯಾಲಯ ಗ್ರಂಥಾಲಯ ಶಿಕ್ಷಣ ಕೇಂದ್ರವನ್ನು ಸ್ಥಾಪಿಸುವುದರಲ್ಲಿ ಮೊದಲನೆಯದಾಯಿತು. ಗ್ರಂಥಾಲಯ ಶಿಕ್ಷಣದಲ್ಲಿ ಡಿಪ್ಲೊಮ ಪದವಿಯನ್ನು ನೀಡುವುದರಲ್ಲಿ ಲಂಡನ್ ವಿಶ್ವವಿದ್ಯಾಲಯವೇ ಮೊದಲನೆಯದು. ಎರಡನೆಯದಾಗಿ ಈ ವಿಶ್ವವಿದ್ಯಾಲಯದ ಗ್ರಂಥಾಲಯ ವಿಜ್ಞಾನ ಪದವೀಧರರಿಗೆ ಬ್ರಿಟಿಷ್ ಗ್ರಂಥಾಲಯದಲ್ಲಿ ಕೆಲವು ವಿಶೇಷ ಸವಲತ್ತು ಮತ್ತು ವಿನಾಯಿತಿಗಳನ್ನು ನೀಡಲಾಯಿತು. ಬ್ರಿಟನ್ನಿನ ಗ್ರಂಥಪಾಲನ ವೃತ್ತಿಯ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಗ್ರಂಥಾಲಯ ಶಿಕ್ಷಣ ಕೇಂದ್ರ ಒಬ್ಬ ಪ್ರತ್ಯೇಕ ಹಾಗೂ ಪೂರ್ಣಾವಧಿಯ ನಿರ್ದೇಶಕನ ಆಡಳಿತಕ್ಕೆ ಒಳಪಟ್ಟದ್ದು ಬಹು ಮುಖ್ಯವಾದ ಅಂಶ. ಬ್ರಿಟಿಷ್ ಗ್ರಂಥಾಲಯ ಪದ್ಧತಿಯಲ್ಲಿನ ಮುಖ್ಯ ಅಂಶ ಇದು : ಸ್ಥಾಪಿತವಾಗುವ ಪ್ರತಿ ಗ್ರಂಥಾಲಯ ಶಿಕ್ಷಣ ಸಂಸ್ಥೆಗೂ ಬ್ರಿಟಿಷ್ ಗ್ರಂಥಾಲಯ ಸಂಘದ ಪರವಾನಿಗೆ ಅಗತ್ಯವಾದರೂ ಸ್ಥಾಪನೆಯಾದ ಅನಂತರ ಆ ಶಿಕ್ಷಣ ಸಂಸ್ಥೆ ಗ್ರಂಥಾಲಯ ಸಂಘದ ಯಾವ ನಿಯಂತ್ರಣಕ್ಕೂ ಒಳಪಡದೆ ಮುಂದುವರಿಯಬಹುದು. ಬ್ರಿಟನ್ನಿನ ಉನ್ನತ ಶಿಕ್ಷಣ ಪದ್ಧತಿ ಅಮೆರಿಕ ಮತ್ತು ಆಸ್ಟ್ರೇಲಿಯದ ಶಿಕ್ಷಣ ವಿಧಾನಕ್ಕಿಂತ ತೀರ ಭಿನ್ನವಾಗಿದೆ. ಹೇಗೆಂದರೆ-ಬ್ರಿಟನ್ನಿನಲ್ಲಿ ಗ್ರಂಥಾಲಯ ಶಾಸ್ತ್ರದ ಉನ್ನತ ಶಿಕ್ಷಣ ವಿಶ್ವವಿದ್ಯಾಲಯಗಳ ಸಾಂಪ್ರದಾಯಿಕ ಹಿಡಿತದಿಂದ ದೂರವಿರಲು ಪ್ರಯತ್ನಿಸಿದೆ. ಗ್ರಂಥಪಾಲರ ಆವಶ್ಯಕತೆಗಳು ಬ್ರಿಟನ್ನಿನಲ್ಲಿ ಬಹುಮಟ್ಟಿಗೆ ಉನ್ನತ ಶಿಕ್ಷಣ ಸಂಸ್ಥೆಗಳ ಮತ್ತು ವಿಶಿಷ್ಟ ಗ್ರಂಥಾಲಯ ಸಂಸ್ಥೆಗಳಿಗಿಂತ ಸಾರ್ವಜನಿಕ ಗ್ರಂಥಾಲಯಗಳಲ್ಲೇ ಇರುವುದನ್ನು ಕಾಣಬಹುದು. ಯುದ್ಧೋತ್ತರ ಬೆಳವಣಿಗೆಗಳು ಹೆಚ್ಚು ಹೆಚ್ಚಾಗಿ ಸಾರ್ವಜನಿಕ ಗ್ರಂಥಾಲಯಗಳ ಸಿಬ್ಬಂದಿಯ ತರಬೇತಿ ಮತ್ತು ಪೂರೈಕೆಯ ಕಡೆಗೇ ವಾಲುತ್ತದೆ. ಹೀಗಾಗಿ ಗ್ರಂಥಾಲಯಗಳಲ್ಲಿರುವ ವೈವಿಧ್ಯಗಳಿಗನುಸಾರವಾಗಿ ವಿವಿಧ ಬಗೆಯ ಮತ್ತು ವಿವಿಧ ಮಟ್ಟಗಳ ಗ್ರಂಥಾಲಯವಿಜ್ಞಾನ ಶಿಕ್ಷಣ ಸಂಸ್ಥೆಗಳು ಸ್ಥಾಪಿತವಾಗಿವೆ. ಸ್ನಾತಕೋತ್ತರ ಗ್ರಂಥಾಲಯ ವಿಜ್ಞಾನದ ಪದವಿಗಳಲ್ಲಿ ಈ ಕೆಳಗಿನ ಅವಧಿ ಮತ್ತು ಶಿಕ್ಷಣ ವಿಧಾನಗಳು ಪ್ರಚುರವಾಗಿವೆ. ಗ್ರಂಥಾಲಯ ಸಂಘದ ಒಂದು ವರ್ಷ ಅವಧಿಯ ಸ್ನಾತಕೋತ್ತರ ಪರೀಕ್ಷೆ; ಒಂದು ವರ್ಷ ಅವಧಿಯ ಸ್ನಾತಕೋತ್ತರ ಡಿಪ್ಲೊಮ ಮಟ್ಟದ ವಿಶ್ವವಿದ್ಯಾಲಯ ಪರೀಕ್ಷೆ; ವಿಶ್ವವಿದ್ಯಾಲಯದ ಪದವಿಯಿಲ್ಲದ ನಡೆಸುವರಿಗೆ ಎರಡು ವರ್ಷದ ಪರೀಕ್ಷೆ ಮತ್ತು ಒಂದು ವರ್ಷ ಅವಧಿಯ ಎಂ.ಎ. ಅಥವಾ ಎಂ.ಎಸ್.ಸಿ. ಪರೀಕ್ಷೆ. ಈ ರೀತಿಯ ಶಿಕ್ಷಣ ವಿಧಾನಗಳು ಲಂಡನ್ ವಿಶ್ವವಿದ್ಯಾಲಯದಲ್ಲಿ ಪ್ರಚುರದಲ್ಲಿವೆ. ಗ್ರಂಥಾಲಯ ವಿಜ್ಞಾನದ ವಿವಿಧ ವಿಭಾಗಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಿರುವ ತರಬೇತಿಗಳನ್ನು ಷಫೀಲ್ಡ್, ಸ್ಟ್ರಾಚ್‍ಲೈಡ್ ಮತ್ತು ಕ್ವೀನ್ಸ್ ವಿಶ್ವವಿದ್ಯಾಲಯಗಳು ನಡೆಸುತ್ತಿವೆ. ಷಫೀಲ್ಡ್ ವಿಶ್ವವಿದ್ಯಾಲಯ ವೈe್ಞÁನಿಕ ಹಾಗೂ ಕೈಗಾರಿಕಾ ಕ್ಷೇತ್ರಗಳ ಗ್ರಂಥಪಾಲರಿಗೆ ವಿಶಿಷ್ಟ ರೀತಿಯ ಪಠ್ಯಕ್ರಮವನ್ನು ಹೊಂದಿದೆ. ಇದು ಗ್ರಂಥಾಲಯ ವಿಜ್ಞಾನದ ಜೊತೆಗೆ ಮಾಹಿತಿ ಶಾಸ್ತ್ರದಲ್ಲಿಯೂ ತರಬೇತಿ ನೀಡುತ್ತದೆ. ಇಲ್ಲಿನ ವಿದ್ಯಾರ್ಥಿಗಳು ಗ್ರಂಥಾಲಯ ಹಾಗೂ ಮಾಹಿತಿ ಶಾಸ್ತ್ರದ ಯಾವುದಾದರೊಂದು ವಿಶಿಷ್ಟ ಅಂಗದಲ್ಲಿ ಆಳವಾದ ಅಧ್ಯಯನ ನಡೆಸಿ ಪರಿಣತಿಯನ್ನು ಪಡೆಯಬೇಕಾಗುತ್ತದೆ. ಲಂಡನ್ ವಿಶ್ವವಿದ್ಯಾಲಯ ಕೂಡ ಇದೇ ರೀತಿಯ ಶಿಕ್ಷಣ ಪದ್ಧತಿಯನ್ನು ಹೊಂದಿದ್ದು ಜೊತೆಗೆ ಅಧ್ಯಾಪಕ ಗ್ರಂಥಪಾಲರಿಗೆ ವಿಶಿಷ್ಟ ತರಬೇತಿ ನೀಡುತ್ತಿದೆ. ಈ ಎಲ್ಲ ನಾಲ್ಕು ವಿಶ್ವವಿದ್ಯಾಲಯಗಳ ಶಿಕ್ಷಣ ಕ್ರಮವನ್ನೂ ಗ್ರಂಥಾಲಯ ಸಂಘ ಪುರಸ್ಕರಿಸಿದೆ. ವಿಶ್ವವಿದ್ಯಾಲಯದ ಒಂದು ಶಿಕ್ಷಣ ಕೇಂದ್ರವಿದ್ದರೆ, ಅದು ಪದವಿಪೂರ್ವದ ಅಭ್ಯರ್ಥಿಗಳ ಆಶೋತ್ತರ ಮತ್ತು ಅಭಿರುಚಿಗಳ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಬಲ್ಲದು. ಆಸಕ್ತಿಯುಳ್ಳ ಅಭ್ಯರ್ಥಿಗಳನ್ನೂ ಪ್ರತಿಭಾವಂತ ಶಿಕ್ಷಕರನ್ನೂ ಆಕರ್ಷಿಸಬಲ್ಲುದು. ಗ್ರಂಥಾಲಯ ವಿಜ್ಞಾನದ ಯಾವುದಾದರೊಂದು ವಿಷಯದ ಮೇಲೆ ಪ್ರೌಢ ಪ್ರಬಂಧವೊಂದನ್ನು ಬರೆದು ಗ್ರಂಥಾಲಯ ಸಂಘದ ಸದಸ್ಯತ್ವವನ್ನು ಪಡೆಯಬಹುದು. ಸದ್ಯದಲ್ಲಿ ಇನ್ನೂರಕ್ಕೂ ಹೆಚ್ಚಿನ ವಿದ್ವಾಂಸರು ಈ ರೀತಿಯ ಪ್ರೌಢ ಪ್ರಬಂಧದ ಬರೆವಣಿಗೆಯಲ್ಲಿ ನಿರತರಾಗಿದ್ದಾರೆ. ಇವರಲ್ಲಿ ಪ್ರತಿವರ್ಷ ಐವತ್ತಕ್ಕಿಂತ ಹೆಚ್ಚಿನವರು ಅಂಗೀಕಾರ ಪಡೆಯುತ್ತಾರೆ. ಸೋವಿಯತ್ ದೇಶದಲ್ಲಿ ಇಪ್ಪತ್ತನೆಯ ಶತಕದ ಪ್ರಾರಂಭದಲ್ಲಿ ಒಂದೇ ಒಂದು ಗ್ರಂಥಾಲಯ ವಿಜ್ಞಾನ ಶಿಕ್ಷಣ ಕೇಂದ್ರವಾಗಲೀ ಆ ವಿಷಯವನ್ನು ಕುರಿತ ನಿಯತಕಾಲಿಕೆವಾಗಲೀ ಸಂಘ ಸಂಸ್ಥೆಯಾಗಲೀ ಸೋವಿಯತ್ ದೇಶದಲ್ಲಿರಲಿಲ್ಲ. 1913 ರಲ್ಲಿ ಶಾನಿವ್‍ಸ್ಕಿ ಸಾರ್ವಜನಿಕ ವಿಶ್ವವಿದ್ಯಾಲಯ ಸಾರ್ವಜನಿಕ ಮತ್ತು ಸಾಮಾಜಿಕ ಗ್ರಂಥಾಲಯಗಳ ಸಿಬ್ಬಂದಿಗೆ ತರಬೇತಿ ನೀಡುವ ಒಂದು ಮೂರು ವಾರದ ತರಗತಿಯನ್ನು ಪ್ರಾರಂಭಿಸಿತು. ಎಲ್.ಬಿ. ಖವ್ಕೀನಾ ಎಂಬುವರು ಈ ಯೋಜನೆಯ ನಿರ್ದೇಶಕರಾಗಿದ್ದರು. ಈಕೆ ಗ್ರಂಥಾಲಯ ವಿಜ್ಞಾನದಲ್ಲಿ ಒಳ್ಳೆಯ ಪರಿಣತಿ ಪಡೆದವರಲ್ಲದೆ ರಷ್ಯದಲ್ಲಿ ಗ್ರಂಥಾಲಯ ಶಾಸ್ತ್ರ ಶಿಕ್ಷಣದ ಸಂಸ್ಥಾಪಕಳೂ ಆಗಿದ್ದಳು. 1918ರ ಅಂತರ್ಯುದ್ಧ ಮತ್ತು ಸೈನಿಕ ಕಾರ್ಯಾಚರಣೆಗಳ ಗೊಂದಲಮಯ ವಾತಾವರಣದಲ್ಲಿಯೇ ಪೀಪಲ್ಸ್ ಕಮೀಷನ್ ಆಫ್ ಎಜುಕೇಷನ್ ಸಂಸ್ಥೆ ವಯಸ್ಕರ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿತು. ಇದು ಈಗ ಲೆನಿನ್‍ಗ್ರಾಡಿನಲ್ಲಿ ಕೃಪ್ಸ್‍ಕಾಯಯಾ ಗ್ರಂಥಾಲಯ ಸಂಸ್ಥೆಯಾಗಿ ಮುಂದುವರಿಯುತ್ತಿದೆ. ರಷ್ಯದ ಸಾಂಸ್ಕøತಿಕ ಕ್ರಾಂತಿಯಲ್ಲಿ ಇದು ಮಹತ್ವದ ಪಾತ್ರ ವಹಿಸಿದೆ. ರಷ್ಯದ ಮಹಾನಾಯಕ ಲೆನಿನ್ನನ ತೀವ್ರ ಆಸಕ್ತಿಯೂ ಗ್ರಂಥಾಲಯಗಳ ಅಭಿವೃದ್ಧಿಯ ಕಡೆಗೆ ಹೋಯಿತು. ಆಧುನಿಕ ರಷ್ಯದ ಮಹಾಶಿಲ್ಪಿಯೆನಿಸಿದ ಈತ ಗ್ರಂಥಾಲಯಗಳ ಸುವ್ಯವಸ್ಥಿತ ಬೆಳವಣಿಗೆಯಲ್ಲಿ ತೀವ್ರ ಆಸಕ್ತಿ ಹೊಂದಿದ್ದ. ವಿಶೇಷ ಹಾಗೂ ಏಕೈಕ ಗ್ರಂಥಾಲಯ ಪದ್ಧತಿಯ ನಿರ್ಮಾಣದೊಡನೆ ಲಭ್ಯವಿರುವ ಗ್ರಂಥಾಲಯ ಸಾಧನ-ಸಲಕರಣೆಗಳ ಪರಿಣಾಮಕಾರೀ ಉಪಯೋಗಗಳನ್ನು ಪಡೆದು ರಾಷ್ಟ್ರದ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕøತಿಕ ಬೆಳವಣಿಗೆಗೆ ದಾರಿ ಮಾಡಿಕೊಡುವುದರಲ್ಲಿ ಲೆನಿನ್ ಕೃತಕೃತ್ಯನಾದ. ಮಾಸ್ಕೊ, ಲೆನಿನ್‍ಗ್ರಾಡ್, ಖೆಂಖೋಫ್ ಮತ್ತು ಉಲಾನ್-ಉಡೆ ವಿಶ್ವವಿದ್ಯಾಲಯಗಳ ಆಶ್ರಯದಲ್ಲಿ ನಾಲ್ಕು ಗ್ರಂಥಾಲಯ ಶಿಕ್ಷಣ ವಿಭಾಗಗಳು ಅಸ್ತಿತ್ವದಲ್ಲಿದೆ. ಇವುಗಳ ಜೊತೆಗೆ ದೇಶದ ಹಲವೆಡೆ ಅನೇಕ ಶಿಕ್ಷಕ ತರಬೇತಿ ಕೇಂದ್ರಗಳು ಗ್ರಂಥಾಲಯ ವಿಜ್ಞಾನದಲ್ಲಿ ಅಧ್ಯಯನ ಸೌಲಭ್ಯಗಳನ್ನು ಹೊಂದಿವೆ. ಮಾಸ್ಕೊ ಹಾಗೂ ಲೆನಿನ್‍ಗ್ರಾಡ್ ವಿಶ್ವವಿದ್ಯಾಲಯಗಳು ಮತ್ತು ವಿಜ್ಞಾನ ಅಕಾಡಮಿ-ಈ ಮೂರು ಸಂಸ್ಥೆಗಳು ಸ್ನಾತಕೋತ್ತರ ಗ್ರಂಥಾಲಯ ಅಧ್ಯಯನ ಯೋಜನೆಗಳನ್ನು ಹೊಂದಿವೆ. ಈ ಯೋಜನೆಗಳು ಪರಿಣತರಿಗೆ ಗ್ರಂಥಾಲಯ ಶಾಸ್ತ್ರದಲ್ಲಿ ತರಬೇತಿ ನೀಡುವುದಲ್ಲದೆ, ಗ್ರಂಥಾಲಯ ಕೇಂದ್ರಗಳಿಗೆ ಶಿಕ್ಷಕರನ್ನು ಒದಗಿಸುತ್ತವೆ. ಇಲ್ಲಿ ವಿದ್ಯಾರ್ಥಿಗಳು ಗ್ರಂಥಾಲಯ ವಿಜ್ಞಾನದಲ್ಲಿ ಪರಿಣತಿಯನ್ನು ಪಡೆಯುವುದರ ಜೊತೆಗೆ ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲೂ ಶಕ್ತರಾಗಿರುತ್ತಾರೆ. ಸ್ನಾತಕೋತ್ತರ ಶಿಕ್ಷಣ ಮೂರು ವರ್ಷದ ಪೂರ್ಣ ಅವಧಿಯದಿರುತ್ತದೆ. ಈ ಅವಧಿಯ ಕೊನೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಯೂ ಒಂದೊಂದು ಪ್ರೌಢ ಪ್ರಬಂಧವನ್ನು ಬರೆದು ಸಲ್ಲಿಸಿ ತಾನು ಬರೆದದ್ದನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ. ಈ ವರದಿ ಗಳಿಸಿದವ ಗ್ರಂಥಾಲಯ ವಿಜ್ಞಾನದಲ್ಲಿ ಶಿಕ್ಷಣ ನೀಡುವ ಅರ್ಹತೆಯನ್ನು ಪಡೆಯುತ್ತಾನೆ. ತರಬೇತಿ ಪಡೆಯುವ ಪ್ರತಿಯೊಬ್ಬ ಅಭ್ಯರ್ಥಿಗೂ ತರಬೇತಿ ಅವಧಿಯಲ್ಲಿ ವಿದ್ಯಾರ್ಥಿವೇತನ ಉಂಟು. ಕಳೆದ ಕೆಲವು ವರ್ಷಗಳಲ್ಲಿ ಗ್ರಂಥಪಾಲನ ವೃತ್ತಿ, ಗ್ರಂಥ ಸೂಚೀಕರಣ, ಗ್ರಂಥಾಲಯ ಇತಿಹಾಸ ಮೊದಲಾದ ವಿಷಯಗಳ ಮೇಲೆ 150 ಕ್ಕೂ ಹೆಚ್ಚು ಪ್ರೌಢಪ್ರಬಂಧಗಳು ಅಂಗೀಕೃತವಾಗಿವೆ. ಪ್ರೌಢ ಶಾಲೆಗಳಲ್ಲಿ ಉತ್ತಿರ್ಣರಾದ ಮತ್ತು ಎಂಟ್ರೆನ್ಸ್ ಪರೀಕ್ಷೆಗಳನ್ನು ಮುಗಿಸಿದ ಗ್ರಂಥಪಾಲರಿಗೆ ರಷ್ಯದಲ್ಲಿ 100 ಕ್ಕೂ ಹೆಚ್ಚು ತರಬೇತಿ ಕೇಂದ್ರಗಳಿವೆ. ಇಂಥ ಕೇಂದ್ರಗಳು ಸಾಂಸ್ಕøತಿಕ ಕೇಂದ್ರಗಳ ವಿಭಾಗಗಳಾಗಿ ಇಲ್ಲವೆ ಅವುಗಳ ಅಧೀನದಲ್ಲಿ ನಡೆಯುತ್ತವೆ. ಇಲ್ಲಿ ತರಬೇತಿ ಪಡೆದ ಗ್ರಂಥಪಾಲರು ಸಾಮಾನ್ಯವಾಗಿ ಗ್ರಾಮೀಣ ಗ್ರಂಥಾಲಯಗಳು ನಗರ ಗ್ರಂಥಾಲಯಗಳ ಮಕ್ಕಳ ವಿಭಾಗಗಳು ಮತ್ತು ಪ್ರೌಢಶಾಲಾ ಗ್ರಂಥಾಲಯಗಳಲ್ಲಿ ಕೆಲಸ ಮಾಡುತ್ತಾರೆ. ತರಬೇತಿ ಅವಧಿ ಎರಡು ವರ್ಷ. ಇಡೀ ರಾಷ್ಟ್ರದಲ್ಲಿ ಇಂಥ ಅಭ್ಯರ್ಥಿಗಳ ಸಂಖ್ಯೆ 20,000 ಕ್ಕೂ ಹೆಚ್ಚು. []

ಡಿಸೆಂಬರ್ 1970 ರಿಂದ ಕೆಲಸ ಮಾಡುತ್ತಿರುವ ಮತ್ತೊಂದು ಬೃಹತ್ ಸಂಸ್ಥೆಯೆಂದರೆ ಪೂರ್ವ ಸೈಬೀರಿಯದಲ್ಲಿ ಸ್ಥಾಪಿತವಾದ ಗ್ರಂಥಾಲಯ ಶಿಕ್ಷಣ ಕೇಂದ್ರ ಸೈಬೀರಿಯದ 15 ವಿಭಾಗಗಳಿಂದ ಮತ್ತು ದೂರಪ್ರಾಚ್ಯ ವಿಭಾಗಗಳಿಂದ ಯುವಕರು ಬಂದು ಇಲ್ಲಿ ಶಿಕ್ಷಣ ಪಡೆಯುತ್ತಾರೆ. ಉಲಾನ್-ಉಡೆಯಲ್ಲಿರುವ ಮುಖ್ಯ ಗ್ರಂಥಾಲಯದಲ್ಲಿ 1,00,000 ಕ್ಕೂ ಹೆಚ್ಚು ಗ್ರಂಥಗಳಿವೆ. 1965 ರಲ್ಲಿ ಸುಮಾರು 2,700 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇವರಲ್ಲಿ 1500 ರಷ್ಟು ವಿದ್ಯಾರ್ಥಿಗಳು ಅಂಚೆ ಮೂಲಕ ಶಿಕ್ಷಣ ಪಡೆಯುತ್ತಿದ್ದರು. ಇವೆಲ್ಲದರ ಜೊತೆಗೆ ಪ್ರತಿವರ್ಷ 600 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತಮ್ಮ ತಮ್ಮ ಕೆಲಸಗಳಲ್ಲಿದ್ದುಕೊಂಡೇ ತೆರಪಿನ ಶಿಕ್ಷಣ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಈ ಗ್ರಂಥಾಲಯ ಕೇಂದ್ರದ ಸುತ್ತಮುತ್ತ ಹೊಸದೊಂದು ನಗರವೇ ನಿರ್ಮಾಣವಾಗಿದೆ. ಸದ್ಯಕ್ಕೆ ಇಲ್ಲಿ 5,00,000 ಗ್ರಂಥಗಳ ಸ್ವಾಸ್ಥ್ಯಕ್ಕೆ ಅವಕಾಶವಿರುವ ಒಂದು ಕಟ್ಟಡ, ತರಗತಿ ಕೊಠಡಿಗಳು, ವಿದ್ಯಾರ್ಥಿ ಭವನಗಳು, ಅಧ್ಯಾಪಕರ ಮನೆಗಳು ಮತ್ತು ಸ್ಟೇಡಿಯಂ-ಅಸ್ತಿತ್ವಕ್ಕೆ ಬರುತ್ತಿವೆ.

ತಾಂತ್ರಿಕ ಹಾಗೂ ಸಂಶೋಧನ ಕೇಂದ್ರಗಳಲ್ಲಿರುವ ಗ್ರಂಥಾಲಯಗಳ ಸಿಬ್ಬಂದಿಗೆ ಪ್ರಲೇಖನ ಹಾಗೂ ಮಾಹಿತಿ ಶಾಸ್ತ್ರದಲ್ಲಿ ಶಿಕ್ಷಣ ಕೊಡುವ ವ್ಯವಸ್ಥೆ ರಷ್ಯದಲ್ಲಿದೆ. ಆಲ್ ಯೂನಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈಂಟಿಫಿಕ್ ಅಂಡ್ ಟೆಕ್ನಿಕಲ್ ಇನ್‍ಫರ್ಮೇಷನ್ ಎಂಬುದು ಹಲವಾರು ವಿಶಿಷ್ಟ ವಿಭಾಗಗಳಲ್ಲಿ ಸ್ನಾತಕೋತ್ತರ ಶಿಕ್ಷಣ ನೀಡುತ್ತಿದೆ. ಇಷ್ಟೇ ಅಲ್ಲದೇ ಮಾಸ್ಕೋದಲ್ಲಿರುವ ಎಂ. ವಿ. ಲೊಮೊನೊಸೊಫ್ ಸ್ಟೇಟ್ ವಿಶ್ವವಿದ್ಯಾಲಯ ವಿಜ್ಞಾನ ಮಾಹಿತಿಯ ವಿಭಾಗವನ್ನು ಹೊಸದಾಗಿ ಸ್ಥಾಪಿಸಿದೆ. (ಪಿ.ಕೆ.ಪಿ.)

ಉಲ್ಲೇಖಗಳು

ಬದಲಾಯಿಸಿ

http://granthapala.blospot.com