ಗೌರಿ ಹಬ್ಬ
ಗೌರಿ ಹಬ್ಬ ಕನ್ನಡ ನಾಡಿನ ದೊಡ್ಡ ಹಬ್ಬ. ಭಾದ್ರಪದ ತದಿಗೆಯಂದು ಗೌರಿ ಹಬ್ಬ ಆಚರಿಸಲಾಗುತ್ತದೆ . ಇದು ಮುತ್ತೈದೆಯರಿಗೆಲ್ಲಾ ಸೌಭಾಗ್ಯ ನೀಡುವ ಹಬ್ಬ ಎಂಬ ನಂಬಿಕೆ.
ಒಮ್ಮೆ ಬಹಳ ಬರಗಾಲ ಬಂದು ಕೆರೆ ಕೊಳ್ಳಗಳೆಲ್ಲ ವರ್ಷಗಟ್ಟಲೆ ಬತ್ತಿ ಆಕಾರ ಎದ್ದೇಳುತ್ತದೆ. ಜನ ದನಗಳಿಗೆ ಕುಡಿವ ನೀರು ಕೂಡ ಇಲ್ಲದೇ ಕಂಗಾಲಾಗುತ್ತಾರೆ. ಬುಡಬಡಿಕೆಯವನೊಬ್ಬ "ಮುತ್ತೈದೆಯೊಬ್ಬಳನ್ನು ಕೆರೆಗೆ ಹಾರ (ಬಲಿ) ಕೊಡುವುದಾದರೆ ಕೆರೆ ತುಂಬುವಷ್ಟು ಮಳೆಯಾಗುತ್ತದೆ" ಎಂದು ಹೇಳಿ ಹೋಗುತ್ತಾನೆ. ಆಗ ಊರ ಗೌಡನಿಗೆ ಚಿಂತೆ ಆಗುತ್ತದೆ. ಯಾರು ಇದಕ್ಕೆ ಒಪ್ಪುತ್ತಾರೆ ಎಂದು.
ಆಗ ಅವನ ಹಿರಿ ಸೊಸೆ 'ಗೌರಿ' ಮುಂದೆ ಬಂದು "ಮಳೆ ಬಂದು ಕೆರೆ ತುಂಬಿದಲ್ಲಿ ಮುತ್ತೈದೆಯನ್ನು ಬಲಿ ಕೊಡುವುದಾಗಿ ಹರಕೆ ಹೊತ್ತುಕೊಳ್ಳಿ. ಕೆರೆ ತುಂಬಿದಲ್ಲಿ ತಾನು ಆ ಹರಕೆಯನ್ನು ನೆರವೇರಿಸುತ್ತೇನೆ" ಎಂದು ಹೇಳುತ್ತಾಳೆ. ಅದರಂತೆಯೇ ಗೌಡನು ಹರಕೆ ಹೊತ್ತುಕೊಳ್ಳುತ್ತಾನೆ. ಕಾಕತಾಳೀಯವೋ ಎಂಬಂತೆ ಅದೇ ವರ್ಷ ತುಂಬಾ ಮಳೆ ಸುರಿದು ಕೆರೆ ಕೊಳ್ಳಗಳೆಲ್ಲ ತುಂಬಿ ತುಳುಕುತ್ತವೆ.
ಮಾವನಿಗೆ ಕೊಟ್ಟ ಮಾತಿನಂತೆ ಗೌರಿ ಆ ಕೆರೆಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾಳೆ. ಅವಳ ತಂಗಿ 'ಗಂಗೆ' ( ಕಿರಿ ಸೊಸೆ ) ಕೂಡ ಮರುದಿನ ಅಕ್ಕನ ಅಗಲಿಕೆಯ ನೋವು ತಾಳಲಾಗದೆ ತಾನೂ ಕೆರೆಗೆ ಹಾರವಾಗುತ್ತಾಳೆ.
ಈ ಗೌರಿಯನ್ನು ನೆನಪಿಸಿಕೊಂಡು ಆ ಕೆರೆಯಿಂದ ( ಸೂಳೇಕೆರೆಯೇ ಅದು ಎಂಬ ನಂಬುಗೆಯಿದೆ ) ಒಂದು ತಂಬಿಗೆ ನೀರನ್ನು ತಂದು ಪೂಜಿಸಿ ಮತ್ತೆ ಅದೇ ಕೆರೆಗೆ ಬಿಡುವ ಆಚರಣೆ ಜಾರಿಗೆ ಬಂದಿರಬಹುದು. ಮಲೆನಾಡಿನ ಕೆಲವೆಡೆ ಗೌರಿಯನ್ನು ಬಿಟ್ಟ ಬಳಿಕ ಗಂಗೆಯನ್ನೂ ತಂದು ಪೂಜಿಸುವ ಆಚರಣೆ ಇದೆ.
ಪೌರಾಣಿಕ ಹಿನ್ನಲೆ
ಬದಲಾಯಿಸಿಗೌರಿಯು ತವರು ಮನೆಗೆ ಹೋಗುವ ಸಂಭ್ರಮ ಇಲ್ಲಿ ಸಾಂಕೇತಿಕವಾಗಿದೆ.
pl explain full story as explained above.
ತದಿಗೆ ದಿನದಂದು ಗೌರಿಯನ್ನು ಸರ್ವಳಂಕೃತ ಭೂಷಿತಳಾಗಿ ಪೂಜಿಸಿ, ಮೊರದ ಬಾಗಿನವನ್ನು ಕೊಟ್ಟು ಆಶೀರ್ವಾದ ವನ್ನು ಪಡೆಯುತ್ತಾರೆ.
ಮರುದಿದಂದು ಗೌರಿಯ ಮಗ ಗಣಪತಿಯು ಬಂದು ಕಡುಬು ಹಾಗೂ ಮೋದಕಗಳನ್ನು ತಿಂದು ಸರ್ವರನ್ನು ಆಶೀರ್ವದಿಸಿ ತನ್ನ ತಾಯಿಯೊಡನೆ ಕೈಲಾಸಕ್ಕೆ ತೆರಳುತ್ತಾನೆ.