ಗೋಸಾನ್
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಖನಿಜ ಸಿರಗಳ ಮತ್ತು ಅದಿರು ನಿಕ್ಷೇಪಗಳ ಅಪಘಟನೆಗೊಂಡ (ಡೀಕಂಪೋಸ್ಡ್) ಮೇಲುಭಾಗಗಳಿಗೆ ಇರುವ ಹೆಸರು. ರಾಸಾಯನಿಕ ಶಿಥಿಲತೆಯಿಂದ ಕರಗದ ಖನಿಜ ನಿಕ್ಷೇಪಗಳು ಶೇಷ ನಿಕ್ಷೇಪಗಳಾಗಿ ಭೂಮಿಯ ಮೇಲುಭಾಗದಲ್ಲಿ ಉಳಿಯುತ್ತವೆ. ಲೋಹ ನಿಕ್ಷೇಪಗಳು ಸಾಮಾನ್ಯವಾಗಿ ನೆಲಮಟ್ಟದಲ್ಲಿ ರಂಧ್ರಾನ್ವಿತ ಕಾವಿ ಅದಿರನ್ನು (ಸೆಲ್ಯುಲರ್ ಲಿಮೊನೈಟ್) ಇಲ್ಲವೇ ಜಲಯೋಜಿತ (ಹೈಡ್ರೇಟೆಡ್) ಕಬ್ಬಿಣದ ಆಕ್ಸೈಡ್ ಮೇಲ್ಪದರವನ್ನು ಪಡೆದಿರುತ್ತವೆ. ಈ ಮೇಲ್ಪದರವೇ ಗೋಸಾನ್. ಇದರ ದಪ್ಪ (ಎಂದರೆ ಮಂದತ್ವ) ರಾಸಾಯನಿಕ ಕ್ರಿಯೆಯ ಪ್ರಮಾಣವನ್ನು ಅನುಸರಿಸಿ ಒಂದೆರಡು ಅಂಗುಲಗಳಿಂದ ಹತ್ತಿಪ್ಪತ್ತು ಅಂಗುಲಗಳ ವರೆಗೂ ಅಪರೂಪಕ್ಕೆ ಇನ್ನೂ ಹೆಚ್ಚಾಗಿ ಕೂಡ ಇರಬಹುದು. ಗೋಸಾನಿನ ಬಣ್ಣ, ರೂಪ, ರಚನೆ ಮುಂತಾದ ಲಕ್ಷಣಗಳ ಅಧ್ಯಯನದಿಂದ ಅದರ ತಳಭಾಗದಲ್ಲಿ ಯಾವ ಲೋಹ ನಿಕ್ಷೇಪವಿದೆ ಎಂಬುದನ್ನು ನಿರ್ಧರಿಸಬಹುದು.