ಗೋಸಲ ಚನ್ನಬಸವೇಶ್ವರ


ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗೋಸಲ ಚನ್ನಬಸವೇಶ್ವರ15ನೆಯ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಶಿವಯೋಗಿ.

ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಈತ ನಿರ್ವಯಲಾದ. ಈತನ ಗದ್ದಿಗೆಯ ಮೇಲೆ ದೇವಸ್ಥಾನವನ್ನು ಕಟ್ಟಿದ್ದಾರೆ. ಅದು ಗುಬ್ಬಿ ಚನ್ನಬಸವೇಶ್ವರ ಎಂಬ ಹೆಸರಿನ ಪ್ರಖ್ಯಾತ ದೇವಾಲಯವಾಗಿ ಸುತ್ತಮುತ್ತಲಿನ ಭಕ್ತರನ್ನು ಆಕರ್ಷಿಸಿದೆ. ಈತನ ಗುರು ಗೋಸಲ ಸಿದ್ಧೇಶ್ವರ. ಈತನ ಸಮಾಧಿ ತುಮಕೂರು ಜಿಲ್ಲೆಯ ಸಿದ್ಧರ ಬೆಟ್ಟದಲ್ಲಿದೆ. ಶಿಷ್ಯ ಎಡೆಯೂರು ಸಿದ್ಧಲಿಂಗ. ಈತನ ಸಮಾಧಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಎಡೆಯೂರಿನಲ್ಲಿದೆ. ಗೋಸಲ ಚನ್ನಬಸವೇಶ್ವರ ಮಹಾ ತಪಸ್ವಿಯೆಂದೂ ಅನೇಕ ಪವಾಡಗಳನ್ನು ಮೆರೆದನೆಂದೂ ಸ್ಥಳಪುರಾಣದಿಂದ ತಿಳಿದುಬರುತ್ತದೆ. ಈತನ ಗುರು ಪರಂಪರೆ ವಿಖ್ಯಾತವಾದುದು. ಈತ ಕ್ಷೇತ್ರಜ್ಞ ಸುಮನೋವಾದ ಎಂಬ ಗ್ರಂಥವನ್ನು ರಚಿಸಿದ್ದಾನೆ. ಇದರಲ್ಲಿ ವೀರಶೈವ ಷಟ್ಸ್ಥಲ ಸಿದ್ಧಾಂತವನ್ನು ವಿವಿಧ ಷಟ್ಪದಿಯಲ್ಲಿ ನಿರೂಪಿಸಲಾಗಿದೆ. ನಿರಂಜನ ವಂಶ ರತ್ನಾಕರದಲ್ಲಿ ಈತನ ವಿಷಯವನ್ನು ವಿಸ್ತಾರವಾಗಿ ಪ್ರಸ್ತಾಪಿಸಲಾಗಿದೆ. []

ಉಲ್ಲೇಖಗಳು

ಬದಲಾಯಿಸಿ


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: