ಗೋವಾ ಪ್ರವಾಸೋದ್ಯಮ

ಭಾರತದ ಗೋವಾ ರಾಜ್ಯವು ಕಡಲತೀರಗಳು ಮತ್ತು ಪೂಜಾ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಪ್ರವಾಸೋದ್ಯಮವು ಇಲ್ಲಿಯ ಪ್ರಾಥಮಿಕ ಉದ್ಯಮವಾಗಿದೆ ಮತ್ತು ಸಾಮಾನ್ಯವಾಗಿ ಗೋವಾದ ಕರಾವಳಿ ಪ್ರದೇಶಗಳ ಮೇಲೆ ಕೇಂದ್ರೀಕರಿಸಿದೆ. ಒಳನಾಡಿನಲ್ಲಿ ಪ್ರವಾಸಿ ಚಟುವಟಿಕೆಗಳು ಕಡಿಮೆಯಿವೆ.

ಹೆಚ್ಚಾಗಿ ಯುರೋಪಿನಿಂದ ವಿದೇಶಿ ಪ್ರವಾಸಿಗರು ಚಳಿಗಾಲದಲ್ಲಿ ಗೋವಾಕ್ಕೆ ಆಗಮಿಸುತ್ತಾರೆ, ಆದರೆ ಬೇಸಿಗೆ ಮತ್ತು ಮಳೆಗಾಲದಲ್ಲಿ ಅನೇಕ ಭಾರತೀಯ ಪ್ರವಾಸಿಗರು ಕಾಣಸಿಗುತ್ತಾರೆ. 2011 ರಲ್ಲಿ ಭಾರತಕ್ಕೆ ಬ೦ದ ವಿದೇಶಿ ಪ್ರವಾಸಿಗರ ಸ೦ಖ್ಯೆಯಲ್ಲಿ ಗೋವಾ 2.29% ರಷ್ಟು ಜನರು ಗೊವಾಕ್ಕೆ ಭೇಟಿ ನೀಡಿದ್ದಾರೆ. ಈ ಸಣ್ಣ ರಾಜ್ಯವು ಭಾರತದ ಪಶ್ಚಿಮ ಕರಾವಳಿಯಲ್ಲಿ, ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಗಳ ನಡುವೆ ಇದೆ, ಮತ್ತು ಭಾರತೀಯರಿಗೆ ಮಾಜಿ ಪೋರ್ಚುಗೀಸ್ ವಸಾಹತಾಗಿ ಜಗತ್ತಿಗೆ ಚಿರಪರಿಚಿತವಾಗಿದೆ. ಪ್ರವಾಸೋದ್ಯಮವು ಗೋವಾದ ಆರ್ಥಿಕತೆಯ ಬೆನ್ನೆಲುಬಾಗಿ ರೂಪುಗೊ೦ಡಿದೆ.

450 ವರ್ಷಗಳ ಪೋರ್ಚುಗೀಸ್ ಆಡಳಿತ ಮತ್ತು ಲ್ಯಾಟಿನ್ ಸಂಸ್ಕೃತಿಯಿಂದ ಪ್ರಭಾವಿತವಾದ ಗೋವಾ, ವಿದೇಶಿ ಪ್ರವಾಸಿಗರಿಗೆ ದೇಶದ ಸ್ವಲ್ಪ ವಿಭಿನ್ನ ಚಿತ್ರಣವನ್ನು ನೀಡುತ್ತದೆ. [] ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಬೊಮ್ ಜೀಸಸ್ ಬೆಸಿಲಿಕಾ, ಫೋರ್ಟ್ ಅಗುವಾಡಾ, ಭಾರತೀಯ ಸಂಸ್ಕೃತಿಯ ಮೇಣದ ವಸ್ತು ಸಂಗ್ರಹಾಲಯ ಮತ್ತು ಪಾರಂಪರಿಕ ವಸ್ತುಸಂಗ್ರಹಾಲಯ ಸೇರಿವೆ. ಗೋವಾದ ಚರ್ಚುಗಳು ಮತ್ತು ಕಾನ್ವೆಂಟ್‌ಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಗಿದೆ.

2013 ರ ಹೊತ್ತಿಗೆ, ಗೋವಾ ಭಾರತೀಯ ಮತ್ತು ವಿದೇಶಿ ಪ್ರವಾಸಿಗರಿಗೆ, ವಿಶೇಷವಾಗಿ ಬ್ರಿಟನ್ನರಿಗೆ ಆಯ್ಕೆಯ ತಾಣವಾಗಿತ್ತು, ಅವರು ಕಡಿಮೆ ಹಣದಲ್ಲಿ ಪಾರ್ಟಿ ಮಾಡಲು ಬಯಸುವವರಿಗೆ ನೆಚ್ಚಿನ ಆಯ್ಕೆ ಆಗಿತ್ತು. ಹೆಚ್ಚು ಐಷಾರಾಮಿ ಪ್ರವಾಸಿಗರನ್ನು ಆಕರ್ಷಿಸುವಂತಹ ಬದಲಾವಣೆಗಳನ್ನು ಮಾಡಲು ರಾಜ್ಯವು ಪ್ರಯತ್ನಿಸುತ್ತಿದೆ. []

24 ನವೆಂಬರ್ 2017 ರಂದು, ಡೆಲ್ಟಾ ಕಾರ್ಪ್ ಲಿಮಿಟೆಡ್ ಗೋವಾದಲ್ಲಿ ಭಾರತದ ಮೊದಲ ಕ್ಯಾಸಿನೊ ಗೇಮ್ ತರಬೇತಿ ಕೋರ್ಸ್ ಕೇಂದ್ರವನ್ನು ಸ್ಥಾಪಿಸಿದೆ ಎಂದು ಹೇಳಿಕೊಂಡಿದೆ.

ಉಲ್ಲೇಖ

ಬದಲಾಯಿಸಿ
  1. "Goa holidays: The exotic Indian state peppered with Portuguese influence | Mail Online". dailymail.co.uk. Retrieved 12 July 2014.
  2. Gethin Chamberlain (31 August 2013). "Why Goa is looking to go upmarket – and banish Brits and backpackers: As visitor numbers dip, the Indian state wants to rid itself of budget tourists – but its rubbish mountains and beach gangs are putting off the rich". The Observer, The Guardian. Retrieved 31 August 2013.