ಗೋರ್, ಕ್ಯಾಥರೀನ್ ಗ್ರೇಸ್, ಫ್ರಾನ್ಸಸ್

ಕ್ಯಾಥರೀನ್ ಗ್ರೇಸ್, ಫ್ರಾನ್ಸಸ್ ಗೋರ್, (1799-1861) ಈಕೆ ಆಂಗ್ಲ ಕಾದಂಬರಿಗಾರ್ತಿ.

Catherine Grace Frances Gore

ಬದುಕು ಬದಲಾಯಿಸಿ

ಹುಟ್ಟಿದ್ದು ನಾಟಿಂಗ್ಹಂಷೈರಿನ ರೆಟ್ಫರ್ಡ್ನಲ್ಲಿ. ತಂದೆ ಮದ್ಯ ವ್ಯಾಪಾರಿ. ಗಂಡ ಕ್ಯಾಪ್ಟನ್ ಗೋರ್. ಈಕೆ ತನ್ನ ಬರೆವಣಿಗೆಯಿಂದಲೇ ಜೀವನವನ್ನು ಸಾಗಿಸಿದಳು.

ಕಾದಂಬರಿಗಳು ಬದಲಾಯಿಸಿ

1824 ರಿಂದ 1861 ರವರೆಗೆ ಈಕೆಯ 70 ಕೃತಿಗಳು ಹೊರಬಿದ್ದವು. ಅವುಗಳಲ್ಲಿ ಬಹುತೇಕ ಕಾದಂಬರಿಗಳು ಆಂಗ್ಲರ ಸೊಗಸು ಜೀವನವನ್ನು ಚಿತ್ರಿಸುತ್ತವೆ. ಮ್ಯಾನರ್ಸ್‌ ಆಫ್ ದಿ ಡೇ (1830), ಸೆಸಿಲ್ ಆರ್ ದಿ ಅಡ್ವೆಂಚರ್ಸ್‌ ಆಫ್ ಎ ಕಾಕ್ಸ್‌ಕೂರಾನ್ (1841), ದಿ ಬ್ಯಾಂಕರ್ಸ್‌ ವೈಫ್ (1843) ಈ ಕಾದಂಬರಿಗಳು ಹೆಸರಿಸತಕ್ಕವು.