ಗೋರಖಪುರ ಜಿಲ್ಲೆ
ಗೋರಖಪುರ ಜಿಲ್ಲೆಉತ್ತರ ಪ್ರದೇಶದ ಒಂದು ಆಡಳಿತ ವಿಭಾಗ, ಜಿಲ್ಲೆ ಮತ್ತು ಅದರ ಮುಖ್ಯ ಪಟ್ಟಣ.
ಗೋರಖಪುರ ಜಿಲ್ಲೆ
गोरखपुर ज़िला | |
---|---|
ದೇಶ | ಭಾರತ |
ರಾಜ್ಯ | ಉತ್ತರ ಪ್ರದೇಶ |
ಆಡಳಿತ ವಿಭಾಗ | ಗೋರಖಪುರ |
ಜಿಲ್ಲಾ ಕೇಂದ್ರ | ಗೋರಖಪುರ |
ತಾಲೂಕುಗಳು | 7 |
Government | |
• ಲೋಕಸಭಾ ಕ್ಷೇತ್ರ/ಗಳು | Gorakhpur, Bansgaon |
ಜನಸಂಖ್ಯಾ ವಿಜ್ಞಾನ | |
• ಸಾಕ್ಷರತೆ | 73.25%. |
• ಲಿಂಗಾನುಪಾತ | 944 |
ಮುಖ್ಯ ಹೆದ್ದಾರಿಗಳು | NH 28,NH 233B |
Website | [೧] |
ಜನಸಂಖ್ಯೆ ಮತ್ತು ವಿಸ್ತೀರ್ಣ
ಬದಲಾಯಿಸಿಗೋರಖ್ಪುರ ಜಿಲ್ಲೆಯ ವಿಸ್ತೀರ್ಣ 3,321 ಚ.ಕಿಮೀ. ಜನಸಂಖ್ಯೆ 44,36,275 (2011).
ಮೇಲ್ಮೈ ಲಕ್ಷಣಗಳು
ಬದಲಾಯಿಸಿಉತ್ತರ ಪ್ರದೇಶದ ಈಶಾನ್ಯ ದಿಕ್ಕಿನಲ್ಲಿ ಹಿಮಾಲಯದ ದಕ್ಷಿಣದ ತಪ್ಪಲಿನಲ್ಲಿರುವ ಈ ಜಿಲ್ಲೆ ಬಹುತೇಕ ಸಮಭೂಮಿ. ಅಲ್ಲಲ್ಲಿ ಕೆಲವು ಮರಳುಗುಡ್ಡೆಗಳಿವೆ. ರಾಪ್ತಿ, ಆಮೀ ಮತ್ತು ಘಾಘ್ರ ನದಿಗಳು ಇಲ್ಲಿ ಹರಿಯುತ್ತವೆ. ಉತ್ತರದಲ್ಲಿ ಅಲ್ಲಲ್ಲಿ ಕಾಡುಗಳುಂಟು. ಬೇಸಿಗೆಯಲ್ಲಿ ಹೆಚ್ಚು ಸೆಕೆಯಾಗುವುದಿಲ್ಲ. ವಾರ್ಷಿಕ ಮಳೆ 50". ನೆಲ ಫಲವತ್ತಾಗಿದೆ. ಆದರೆ ಪದೇ ಪದೇ ಸಂಭವಿಸುವ ಪ್ರವಾಹಗಳಿಂದಾಗಿ ಬೇಸಾಯಕ್ಕೆ ಅಡಚಣೆ ಒದಗುವುದುಂಟು.
ವಾಣಿಜ್ಯ
ಬದಲಾಯಿಸಿಬತ್ತ, ಬಾರ್ಲಿ, ಗೋದಿ, ಕಬ್ಬು ಮುಖ್ಯ ಬೆಳೆಗಳು. ಜಿಲ್ಲೆಯಲ್ಲಿ ಹಲವು ಸಕ್ಕರೆ ಕಾರ್ಖಾನೆಗಳಿವೆ. ಬುದ್ಧ ಪರಿನಿರ್ವಾಣ ಹೊಂದಿದ ಸ್ಥಳವಾದ ಕಾಸಿಯಾ ಎಂಬುದು ಗೋರಖ್‍ಪುರ ನಗರದ ಪೂರ್ವಕ್ಕೆ 55 ಕಿಮೀ ದೂರದಲ್ಲಿದೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: