ಗೋಪಾಲಕೃಷ್ಣ ಗಾಂಧಿ

ಗೋಪಾಲ ಕೃಷ್ಣ ಗಾಂಧಿ, [೧] ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಮೊಮ್ಮಗ. ಐ.ಎ.ಎಸ್. ಅದವೀಧರರಾದ ಅವರು, ಭಾರತದ ಆಡಳಿತ ಸೇವೆಯಲ್ಲಿ ಬಹಳ ಮಹತ್ವದ ಸ್ಥಾನವನ್ನು ಹೊಂದಿದ್ದರು,[೨] ಹಾಗೂ ಹಲವಾರು ರಾಷ್ಟ್ರಗಳಲ್ಲಿ ಭಾರತದ ರಾಯಭಾರಿಯಾಗಿ ಯಶಸ್ವಿಯಾಗಿದ್ದರು. ಇದಲ್ಲದೆ, ಗಾಂಧಿಯವರು ಕಾದಂಬರಿಕಾರ, ನಾಟಕಕಾರ, ಅಂಕಣಕಾರ, [೩] ಹಾಗೂ ಪ್ರಭಾವಿಮಾತುಗಾರರೆಂದು ಹೆಸರಾಗಿದ್ದಾರೆ. ಕಲೆ, ನಾಟ್ಯ, ಸಂಗೀತಗಳ ಬಗ್ಗೆ ಹೆಚ್ಚು ಒಲವಿದೆ.

ಪ್ರಾರಂಭಿಕ ಜೀವನ ಬದಲಾಯಿಸಿ

ಜನನ ಬದಲಾಯಿಸಿ

ತಂದೆಯ ಕಡೆಯಿಂದ ಮಹಾತ್ಮಾ ಗಾಂಧಿಯವರ ಮೊಮ್ಮೊಗ. ತಾಯಿಯವರ ಕಡೆಯಿಂದ ಸಿ. ರಾಜಾಜಿಯವರ ಮೊಮ್ಮೊಗ.ದೇವದಾಸ್ ಗಾಂಧಿ, ಹಾಗೂ ಲಕ್ಷ್ಮೀರಾಜಗೋಪಾಲಾಚಾರಿಯವರ ಮಗನಾಗಿ ೨೨, ಏಪ್ರಿಲ್, ೧೯೪೫ ರಲ್ಲಿ ಜನಿಸಿದರು. ಇವರ ಇತರ ಸೋದರಿ,ಸೋದರರು.

  1. ತಾರಾ ಗಾಂಧಿ (ತಾರಾ ಭಟ್ಟಾಚಾರ್ಜಿ)
  2. ರಾಜಮೋಹನ್ ಗಾಂಧಿ,
  3. ರಾಮಚಂದ್ರ ಗಾಂಧಿ,

ಗೋಪಾಲಕೃಷ್ಣ ಗಾಂಧಿಯವರು, ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ದೆಹಲಿ ವಿಶ್ವವಿದ್ಯಾಲಯದ ಸ್ಟೀಫನ್ ಕಾಲೇಜಿನಿಂದ ಗಳಿಸಿದರು.

ಮದುವೆ ಬದಲಾಯಿಸಿ

ಗೋಪಾಲಕೃಷ್ಣಗಾಂಧಿಯವರು ತಾರಾ ರನ್ನು ವಿವಾಹವಾದರು. ಈ ದಂಪತಿಗಳಿಗೆ, ದಿವ್ಯಾ, ಹಾಗೂ ಅಮೃತ ಎಂಬ ಇಬ್ಬರು ಹೆಣ್ಣುಮಕ್ಕಳು.

ವೃತ್ತಿಜೀವನ ಬದಲಾಯಿಸಿ

  1. ೧೯೬೮ ರಲ್ಲಿ ಐ.ಎ ಎಸ್ ಪದವಿ ಗಳಿಸಿ, ತಮಿಳುನಾಡಿನಲ್ಲಿ ೧೯೮೫ ರ ವರೆಗೆ, ಉಪ ರಾಷ್ಟ್ರಪತಿಗಳಿಗೆ ಕಾರ್ಯದರ್ಶಿಯಾಗಿ (೧೯೮೫-೮೭) ಜಂಟಿ ಕಾರ್ಯದರ್ಶಿಯಾಗಿ ರಾಷ್ಟ್ರಪತಿಗಳಿಗೆ (೧೯೮೭-೧೯೯೨)
  2. ೧೯೯೨ ರಲ್ಲಿ ಮಿನಿಸ್ಟರ್ (ಸಂಸ್ಕೃತಿ) ಆಗಿ ಹೈ ಕಮಿಷನರ್ ಆಫ್ ಇಂಡಿಯಾ ಆಗಿ ಯು.ಕೆ ನಿರ್ದೇಶಕ, ದಿ ನೆಹರು ಸೇಂಟರ್ ಲಂಡನ್, ಯುಕೆ ಇದರ ಬಳಿಕ ಹಲವಾರು ರಾಜತಾಂತ್ರಿಕ ಹಾಗೂ ಆಡಳಿತ ವಿಭಾಗಗಳಲ್ಲಿ ತಮ್ಮ ಜೀವನದುದ್ದಕ್ಕೂ ತಮ್ಮನ್ನು ತೊಡಗಿಸಿಕೊಂಡರು
  3. ೧೯೯೬ ರಲ್ಲಿ ಭಾರತದ ರಾಷ್ಟ್ರಾಧ್ಯಕ್ಷರಿಗೆ ದಕ್ಷಿಣ ಆಫ್ರಿಕ ಹಾಗೂ ಲೆಸೋಥೋ (Lesotho) ದ ಕಾರ್ಯದರ್ಶಿಯಾಗಿ,
  4. ೧೯೯೭-೨೦೦೦ ಪ್ರೆಸ್ ಸೆಕ್ರೆಟರಿ,
  5. ೨೦೦೦ ಶ್ರೀಲಂಕಾದಲ್ಲಿ ಭಾರತದ ಹೈ ಕಮಿಷನರ್
  6. ೨೦೦೨ ರಲ್ಲಿ ನಾರ್ವೆ ಮತ್ತು ಐಸ್ ಲ್ಯಾಂಡ್ ದೇಶದಲ್ಲಿ ಭಾರತದ ರಾಯಭಾರಿಯಾಗಿ,
  7. ೨೦೦೩ ರಲ್ಲಿ ಐ ಎ ಎಸ್ ಪದವಿಯಿಂದ ನಿವೃತ್ತಿಹೊಂದಿದರು.
  8. ಪಚ್ಚಿಮ ಬಂಗಾಳದ ಗವರ್ನರ್ ಆಗಿ ಡಿಸೆಂಬರ್ ೧೪, ೨೦೦೪ ರಿಂದ ವೀರೇನ್ ಜೆ. ಶಾ ರವರ ಕಾರ್ಯಾವಧಿ ಮುಗಿದ ಬಳಿಕ,
  9. ದೇವಾನಂದ ಕೊನ್ವಾರ್ (ತ್ರಿಪುರ ರಾಜ್ಯದ ಗವರ್ನರ್ ಆಗಿದ್ದರು ) ಪಶ್ಚಿಮ ಬಂಗಾಳದ ಹೆಚ್ಚುವರಿ ಕಾರ್ಯದರ್ಶಿಯಾಗಿ
  10. ೨೦೦೬ ನ ಕೆಲವು ತಿಂಗಳವರೆಗೆ ಬಿಹಾರದ ಗವರ್ನರ್ ಆಗಿ ಸೇವೆ ಸಲ್ಲಿಸಿದರು.
  11. ಚೆನ್ನೈ ನ ಕಲಾಕ್ಷೇತ್ರ ಫೌಂಡೇಶನ್, ನ ಚೇರ್ಮನ್ ಆಗಿ ಡಿಸೆಂಬರ್, ೨೦೧೧ ರಿಂದ ಮೇ ೨೦೧೪ ರ ತನಕ,
  12. ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿ ಸಂಸ್ಥೆಯಲ್ಲಿ ಚೇರ್ಮನ್ ಮತ್ತು ಆಡಳಿತ ಮಂಡಲಿಯ ಅಧ್ಯಕ್ಷನಾಗಿ, ೫ ಮಾರ್ಚ್, ೨೦೧೨ ಹಾಗೂ ಮೇ ೨೦೧೪ ರ ತನಕ ಸೇವೆಸಲ್ಲಿಸಿದರು. [೪],
  13. ಅಶೋಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ, ರಾಜಕೀಯವಿಜ್ಞಾನ, ಭಾರತೀಯ ನಾಗರೀಕತೆ ವಿಷಯಗಳ ಪ್ರಾಧ್ಯಾಪಕರಾಗಿ ಕೆಲಸಮಾಡಿದರು.

ವಿವಾದಗಳ ಸುರುಳಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು ಬದಲಾಯಿಸಿ

  • ಸಿ.ಬಿ.ಐ.ಆಯೋಜಿಸಿದ ೧೫ನೆಯ ಡಿ.ಪಿ.ಕೊಹ್ಲಿ ಸ್ಮಾರಕ ಭಾಷಣ ಮಾಲೆಯಲ್ಲಿ "Eclipse at Noon: Shadows Over India's Conscience" ಎಂಬ ವಿಷಯದಮೇಲೆ ೩೦೦೦ ಜನ ಆಹ್ವಾನಿತ ಶ್ರೋತೃಗಳ ಮುಂದೆ ಮಾತನಾಡುತ್ತಾ ಗೋಪಾಲಕೃಷ್ಣ ಗಾಂಧಿಯವರು ಹೇಳಿದ ಮಾತುಗಳು ಹೀಗಿವೆ :
"[The CBI] is seen as the government's hatchet, rather than honesty's ally. It is often called DDT — meaning not the dichloro diphenyl trichloroethane, the colourless, tasteless, odourless insecticide it should be, but the department of dirty tricks."
  • ೧೯೯೩ರಲ್ಲಿ ಮುಂಬಯಿನಗರದಲ್ಲಿ ಜರುಗಿದ 'ಭಯಂಕರ ಸರಣಿ-ಬಾಂಬ್ ಸ್ಫೋಟದಲ್ಲಿ, ಸುಪ್ರೀಂ ಕೋರ್ಟ್ ಲ್ಲಿ ತಪ್ಪಿತಸ್ಥನೆಂದು ತೀರ್ಪುಪಡೆದ "ಯಾಕುಬ್ ಮೆಮನ್", 'ರಾಷ್ಟ್ರಪತಿಯವರಿಗೆ ಕ್ಷಮಾ ಯಾಚನೆ ಮಾಡಲು ಅರ್ಜಿ' ಸಲ್ಲಿಸಿದ್ದನು. ಗೋಪಾಲಕೃಷ್ಣ ಗಾಂಧಿಯವರು ವರ್ಷ.೨೦೧೫ ರಲ್ಲಿ, ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿಯವರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಮರಣದಂಡನೆಯ ತೀರ್ಪನ್ನು ಮರು ಪರಿಶೀಲಿಸಲು ಮನವಿಮಾಡಿದ್ದರು. [೫]

ಸಾಹಿತ್ಯ ಕೃಷಿ ಬದಲಾಯಿಸಿ

ಹಿಂದಿಭಾಷೆಯಲ್ಲಿ :

  1. Saranam, translated as Refuge in English
  2. Dara Shukoh, a play in verse
  3. Koi Acchha Sa Larka (translation into Hindustani of Vikram Seth's A Suitable Boy)

'ಇಂಗ್ಲಿಷ್ ಭಾಷೆಯಲ್ಲಿ :

  1. Gandhi and South Africa
  2. Gandhi and Sri Lanka
  3. Nehru and Sri Lanka
  4. India House, Colombo: Portrait of a Residence
  5. Gandhi Is Gone. Who Will Guide Us Now? (edited)
  6. A Frank Friendship/ Gandhi and Bengal: A Descriptive Chronology (compiled and edited).

ಇವನ್ನೂ ಓದಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. ವಿಜಯ ಕರ್ನಾಟಕ,ಜುಲೈ,೧೨, ೨೦೧೭, ಗೋಪಾಲಕೃಷ್ಣ ಗಾಂಧಿ ಸಂಕ್ಷಿಪ್ತ ಪರಿಚಯ[ಶಾಶ್ವತವಾಗಿ ಮಡಿದ ಕೊಂಡಿ]
  2. At-farewell-Gopalkrishna-Gandhi-calls-for-change-in-mindsetsHindu, DECEMBER 14, 2009,
  3. thewire.in, gopalkrishna-gandhi
  4. Chairman's profile,IIAS, Rashtrapati Nivas, Shimla 171005,Indian institute of advanced study,
  5. Pardoning Yakub Memon will be a tribute to Dr. Kalam: Gopalkrishna Gandhi, Hindu, July,29,2015

ಬಾಹ್ಯಸಂಪರ್ಕಗಳು ಬದಲಾಯಿಸಿ

  1. thewire.in All stories[ಶಾಶ್ವತವಾಗಿ ಮಡಿದ ಕೊಂಡಿ]