ಗೊರವಾಲೆ ರುದ್ರಪ್ಪ

ತತ್ತ್ವಪದ, ಜನಪದ ಗಾಯಕ

ಗೊರವಾಲೆ ರುದ್ರಪ್ಪ ನವರು ತತ್ವ್ತಪದಕಾರರು[], ವಚನ, ದಾಸರಪದಗಳ ಗಾಯಕರು, ಜನಪದ ಕಲಾವಿದರು ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತರು.

ಇವರು ಮಂಡ್ಯ ತಾಲ್ಲೂಕಿನ, ಮಂಡ್ಯ ಜಿಲ್ಲೆ ಗೊರವಾಲೆಯಲ್ಲಿ ೧೮-೦೫-೧೯೬೮ರಲ್ಲಿ ಜನಿಸಿದರು. ತಂದೆ -ಮರಿವೀರಯ್ಯ, ತಾಯಿ-ಚಿಕ್ಕತಾಯಮ್ಮ. ಬಾಲ್ಯದಿಂದಲೂ ಓದಿಗಿಂತ ಹಾಡುಗಾರಿಕೆಯನ್ನೇ ಪ್ರಮುಖ ಎಂದು ಭಾವಿಸಿ, ಅದರಲ್ಲೇ ಹೆಚ್ಚಿನ ಸಾಧನೆ ಮಾಡುವ ಹಂಬಲದಲ್ಲಿದ್ದಾರೆ. ಪಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಾಗಿರುವ ಅವರಿಗೆ ಈಗ ಸುಮಾರು ೬೮ ವರ್ಷಗಳು.

ಮಾಧ್ಯಮಗಳಲ್ಲಿ ಗೊರವಾಲೆ ರುದ್ರಪ್ಪ

ಬದಲಾಯಿಸಿ
  • ೧೯೮೩ರಿಂದ ೧೯೯೫ರವರೆಗೆ ಬೆಂಗಳೂರು ಮತ್ತು ಮೈಸೂರು ಆಕಾಶವಾಣಿಯಲ್ಲಿ ನಿರಂತರವಾಗಿ ಜಾನಪದಗೀತೆ ಹಾಗೂ ತತ್ವ್ತಪದ ಗಾಯನವನ್ನು ನಡೆಸಿಕೊಟ್ಟಿದ್ದಾರೆ.
  • ೨೦೦೮ ಮತ್ತು ೨೦೧೨ರಲ್ಲಿ ದೂರದರ್ಶನ ಚಂದನವಾಹಿನಿಯ "ಬೆಳಗು" ಕಾರ್ಯಕ್ರಮದಲ್ಲಿ ತತ್ವ್ತಪದ ಗಾಯನವನ್ನು ನಡೆಸಿಕೊಟ್ಟಿದ್ದಾರೆ.
  • ಈಗಾಗಲೇ ಮಂಡ್ಯ ಜಿಲ್ಲೆಯ ಹಲವಾರು ಪತ್ರಿಕೆಗಳು ಇವರನ್ನು ಸಂದರ್ಶಿಸಿ, ಸಂದರ್ಶನವನ್ನು ಪ್ರಕಟಿಸಿವೆ[].

ಸಂದ ಸನ್ಮಾನ, ಗೌರವಗಳು

ಬದಲಾಯಿಸಿ
  • ೬೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ತತ್ವ್ತಪದ ಗಾಯನ ನಡೆಸಿ, ಸಮ್ಮೇಳನದ ಅಧ್ಯಕ್ಷರಾಗಿದ್ದ ಶ್ರೀ ಚದುರಂಗರಿಂದ ಅಭಿನಂದನೆ.
  • ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿವತಿಯಿಂದ ಪಾಂಡವಪುರದ ಲಕ್ಷ್ಮೀಸಾಗರದಲ್ಲಿ ನಡೆಸಿದ "ಸೋಬಾನೆ ಸಂಜೆ" ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿದ್ದ ಶ್ರೀ ಕಾಳೇಗೌಡ ನಾಗವಾರ ಅವರಿಂದ ಅಭಿನಂದನೆ.
  • ೧೯೯೭ ರಲ್ಲಿ ಪಾಂಡವಪುರದಲ್ಲಿ ನಡೆದ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀ ಜಗದ್ಗುರು ಆದಿ ಚುಂಚನಗಿರಿ ಸ್ವಾಮಿಗಳ ಸಮ್ಮುಖದಲ್ಲಿ, ಬೆಂಗಳೂರಿನ ಮಾಜಿ ಮೇಯರ್ ಶ್ರೀ ಜಿ. ನಾರಾಯಣ್ ಅವರಿಂದ ಸನ್ಮಾನ. ಅಲ್ಲದೆ ಬೇಬಿಮಠದಲ್ಲಿ ಶ್ರೀ ಸಿದ್ದಗಂಗಾಮಠದ ಡಾ.ಶಿವಕುಮಾರಸ್ವಾಮಿಗಳ ಸಮ್ಮಖದಲ್ಲಿ ತತ್ವ್ತಪದ ಗಾಯನ-ಅಭಿನಂದನೆ ಸ್ವೀಕಾರ.
  • ಮಂಡ್ಯ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಹರಿಪ್ರಿಯ ಹೋಟೆಲ್ ಸಭಾಂಗಣದಲ್ಲಿ ಸನ್ಮಾನ.
  • ಶ್ರೀರಂಗಪಟ್ಟಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಡೆಸಿದ ಕಾವೇರಿ ಉತ್ಸವದ ಕಾರ್ಯಕ್ರಮದಲ್ಲಿ, ನಾಡಿನ ಪ್ರಖ್ಯಾತ ಕವಿಪುಂಗವರ ಸಮ್ಮಖದಲ್ಲಿ ತತ್ವ್ತಪದ, ವಚನ ಹಾಗೂ ದೇವರನಾಮ ಗಾಯನ, ನಂತರ ಗೌರವ ಸನ್ಮಾನ.
  • ಬೆಂಗಳೂರು ಜಿಲ್ಲೆ, ರಾಮನಗರದ ಜಾನಪದಲೋಕದಲ್ಲಿ ನಡೆಸಿದ ತತ್ವ್ತಪದ, ವಚನ ಗಾಯನ ನಡೆಸಿ, ಹೆಚ್.ಎಲ್.ನಾಗೇಗೌಡರಿಂದ ಅಭಿನಂದನೆ, ಗೌರವ ಸನ್ಮಾನ.
  • ಮದ್ದೂರಿನಲ್ಲಿ ಶರಣ ಸಾಹಿತ್ಯ ಪರಿಷತ್ ವತಿಯಿಂದ ನಡೆಸಿದ ವಚನ ಸಾಹಿತ್ಯ ಕಾರ್ಯಕ್ರಮದಲ್ಲಿ, ತತ್ವ್ತಪದ ಹಾಗೂ ವಚನ ಗಾಯನ, ನಂತರ ಗೌರವ ಸನ್ಮಾನ. ಜೊತೆಗೆ ಹನುಮಂತನಗರದ ಆತ್ಮಲಿಂಗೇಶ್ವರ ಸನ್ನಿದಿಯ, ಧರ್ಮಜಾಗೃತಿ ಸಮ್ಮೇಳನದಲ್ಲಿ ತತ್ವ್ತಪದ ಹಾಗೂ ವಚನ ಗಾಯನ, ನಂತರ ಗೌರವ ಸನ್ಮಾನ. ಅದರೊಂದಿಗೆ ಶ್ರೀ ಶಂಕರ ಬಗವತ್ಪಾದರ ಆಧ್ಯಾತ್ಮ ಮಂದಿರದಲ್ಲಿ ತತ್ವ್ತಪದ ಹಾಗೂ ವಚನ ಗಾಯನ - ನೆನಪಿನ ಕಾಣಿಕೆಯ ಸ್ವೀಕಾರ.
  • ಮೈಸೂರಿನ ದಸರಾ ಮಹೋತ್ಸವದಲ್ಲಿ, ದಸರಾ ವಸ್ತು ಪ್ರದರ್ಶನದಲ್ಲಿ ತತ್ವ್ತಪದ ಹಾಗೂ ವಚನ ಗಾಯನ - ನೆನಪಿನ ಕಾಣಿಕೆಯ ಸ್ವೀಕಾರ.
  • ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯಲ್ಲಿ ಶ್ರೀ ಒಡೆಯರ್ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳ ಸಮ್ಮಖದಲ್ಲಿ ತತ್ವ್ತಪದ-ವಚನ ಗಾಯನ - ಅಭಿನಂದನೆ, ನೆನಪಿನ ಕಾಣಿಕೆ ಸ್ವೀಕಾರ.
  • ರಾಜ್ಯಾದಾದ್ಯಂತ ನಡೆಸಿದ ಧಾರ್ಮಿಕ ಸಭೆಗಳಲ್ಲಿ ತತ್ವ್ತಪದ-ವಚನ ಗಾಯನ - ಅಭಿನಂದನೆ, ನೆನಪಿನ ಕಾಣಿಕೆ ಸ್ವೀಕಾರ.

ಪ್ರಶಸ್ತಿಗಳು

ಬದಲಾಯಿಸಿ
  • ೧೯೮೨ ರಲ್ಲಿ ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರ ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳವರಿಂದ "ಗುರುಸೇವಾ ಧುರೀಣ" ಪ್ರಶಸ್ತಿ.
  • ೧೯೮೯ ರಲ್ಲಿ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರಿಂದ "ಜಾನಪದ ಗೀತಗಾನ ಗಾರುಡಿಗ" ಪ್ರಶಸ್ತಿ.
  • ೧೯೯೭ ರಲ್ಲಿ "ಮಂಡ್ಯ ರಾಜ್ಯೋತ್ಸವ" ಪ್ರಶಸ್ತಿ.
  • ಬೆಂಗಳೂರು ಟೌನ್ ಹಾಲ್ ನಲ್ಲಿ ಅಹಿಂದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ "ಕರ್ನಾಟಕ ಸೇವಾ ರತ್ನ" ಪ್ರಶಸ್ತಿ.
  • ಮಂಡ್ಯ ಜಿಲ್ಲಾ ಬಸವ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ "ಗಾನ ಕೋಗಿಲೆ" ಪ್ರಶಸ್ತಿ.
  • ೨೦೦೭ ರಲ್ಲಿ ಬೆಂಗಳೂರು ಜಿಲ್ಲೆ, ರಾಮನಗರದ ಜಾನಪದಲೋಕದಲ್ಲಿ, ಅಧ್ಯಕ್ಷರಾಗಿದ್ದ, ಬೆಂಗಳೂರಿನ ಮಾಜಿ ಮೇಯರ್ ಶ್ರೀ ಜಿ. ನಾರಾಯಣ್ ಅವರಿಂದ "ಜಾನಪದ ಲೋಕ" ಪ್ರಶಸ್ತಿ.
  • ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ, ಚಿತ್ರದುರ್ಗದಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಎಂ.ಗೋವೊಂದ ಕಾರಜೋಳ ಅವರಿಂದ "ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ"[] ಪ್ರಧಾನ.

ಉಲ್ಲೇಖಗಳು

ಬದಲಾಯಿಸಿ
  1. http://vijaykarnataka.indiatimes.com/district/mandya/-10/articleshow/46147496.cms
  2. ಮಂಡ್ಯ: ಸಂಘಟನೆಯಿಂದ ಮಾತ್ರ ಯಶಸ್ಸು
  3. 30 ಮಂದಿಗೆ ಜಾನಪದ ಅಕಾಡಮಿ ಪ್ರಶಸ್ತಿ : ಮಾ.3ರಂದು ಚಿತ್ರದುರ್ಗದಲ್ಲಿ ಪ್ರಶಸ್ತಿ ಪ್ರದಾನ

[] [] [] [][]

ಬಾಹ್ಯಕೊಂಡಿಗಳು

ಬದಲಾಯಿಸಿ
  1. http://vbnewsonline.com/Benguluru/83065/
  2. http://vijaykarnataka.indiatimes.com/district/mandya/-/articleshow/17847783.cms
  3. http://kannada.eenaduindia.com/State/Mandya/2014/08/03081640/request-letter-agaist-maharashtra-shouts-to-dc.vpf
  4. >> ಜಿಲ್ಲೆ› ಮಂಡ್ಯ
  5. http://www.prajavani.net/article/%E0%B2%9A%E0%B2%BF%E0%B2%95%E0%B3%8D%E0%B2%95%E0%B2%B0%E0%B2%B8%E0%B2%BF%E0%B2%A8%E0%B2%95%E0%B3%86%E0%B2%B0%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%AE%E0%B2%A8%E0%B2%B8%E0%B3%82%E0%B2%B0%E0%B3%86%E0%B2%97%E0%B3%8A%E0%B2%82%E0%B2%A1-%E2%80%98%E0%B2%9C%E0%B2%BE%E0%B2%A8%E0%B2%AA%E0%B2%A6-%E0%B2%A4%E0%B2%A4%E0%B3%8D%E0%B2%B5%E0%B2%AA%E0%B2%A6-%E0%B2%AE%E0%B3%87%E0%B2%B3%E2%80%99