ಗೆರಾಲ್ಡ್ ಆಂಗಿಯೆರ್

ಗೆರಾಲ್ಡ್ ಆಂಗಿಯೆರ್ (೧೬೪೦ – 30 ಜೂನ್ 1677) ಬ್ರಿಟಿಷ್ ಕಂಪೆನಿ ಸರ್ಕಾರದವರು ಆಳುತ್ತಿದ್ದಕಾಲದಲ್ಲಿ ಬೊಂಬಾಯಿನ ಎರಡನೆಯ ಗವರ್ನರ್ ಆಗಿದ್ದರು. ೧೬೭೨ ರಲ್ಲಿ ಅವರನ್ನು ಸೂರತ್ ನಗರದ ಅಧ್ಯಕ್ಷರನ್ನಾಗಿ ಹಾಗೂ ಆಗತಾನೇ ಪ್ರವೃದ್ಧಮಾನಕ್ಕೆ ಬರುತ್ತಿದ್ದ ಬೊಂಬಾಯ್ ನಗರದ ಗವರ್ನರ್ ಆಗಿ ಮಾಡಲಾಯಿತು. ೧೬೭೫ ರವರೆಗೆ ಹಾಗೆ ಅವರು, ಬಾಂಬೆಯ ಗವರ್ನರ್ ಹುದ್ದೆಯಲ್ಲಿದ್ದರು.

ಗುಜರಾತ್ ದಕ್ಷಿಣ ಮಹಾರಾಷ್ಟ್ರದ ಪ್ರತಿಭಾನ್ವಿತ ಜನಸಮುದಾಯಗಳನ್ನು ಬೊಂಬಾಯಿಗೆ ತರಲು ಬಹಳವಾಗಿ ಶ್ರಮಿಸಿದರು.ಗೋವಾ ಪ್ರದೇಶದಿಂದ, ಕೊಂಕಣಿಗಳು, ಮಹಾರಾಷ್ಟ್ರದ ಸಿಂಧುದುರ್ಗ, ಮಾಲ್ವಾಣ್, ರತ್ನಾಗಿರಿ, ರಾಯ್ಘಡ್ ನಿಂದ ಗುಜರಾತ್ ನಿಂದ ಜನರ ಸೈನ್ಯವೇ ಬರಲಾರಂಬಿಸಿತು ಬೊಂಬಾಯಿನ ಸರ್ವತೋಮುಖ ಬೆಳವಣಿಗೆಗೆ ಕಾರಣರಾದರು. ೧೬೭೭ ರಲ್ಲಿ ನಿಧನರಾದರು. ಯೂರೋಪ್ ನ ಪೋರ್ಚುಗೀಸ್ ರಾಜನು ಬ್ರಿಟಿಷ್ ರಾಜಕುಮಾರ, ಚಾರ್ಲ್ಸ್ ರಿಗೆ ಬೊಂಬಾಯಿಯನ್ನು ಉಡುಗೊರೆಯಾಗಿ, ಪ್ರೀತಿಯಿಂದ ಒಪ್ಪಿಸಿಕೊಟ್ಟಿದ್ದಾಗ್ಯೂ, ಭಾರತದಲಿ ವಾಸಿದುತ್ತಿದ್ದ ಪೋರ್ಚುಗಿಸ್ ಸರದಾರರು, ಹಾಗೂ ಕೆಲವು ಪ್ರತಿಷ್ಟಿತ ಪೋರ್ಚುಗಿಸರು ಅದನ್ನು ಒಪ್ಪದೆ ವಿರೋಧಿಸಿದರು. ಬೊಂಬಾಯಿನಗರದ ಆಳ್ವಿಕೆಯ ಹೊಣೆ, ೧೬೭೫ ರಲ್ಲಿ ಆಂಗಿಯೆರ್ ರ ಸುಪರ್ದಿಗೆ ಬಂತು. ಅವರು, ಕೊಲಾಬ ಮತ್ತು ಓಲ್ದ್ ಮ್ಯಾನ್ಸ್ ಐಲೆಂಡ್ ಗಳನ್ನು ವಶಪಡಿಸಿಕೊಂಡು, ಅವುಗಳನ್ನು ಬ್ರಿಟಿಷ್ ಸರ್ಕಾರದ ಅಧಿಕಾರಕ್ಕೆ ಸ್ಥಾನಾಂತರಗೊಳಿಸಿದನು.ಆಂಗಿಯೆರ್ ರವರಿಗೆ ಮುಖ್ಯವಾಗಿ, ಬೊಂಬಾಯಿನ ಮಧ್ಯಭೂಭಾಗ ಉತ್ತರದ ಡೊಂಗ್ರಿ ಯಿಂದ ಹಾರ್ಬರ್ ವರೆಗಿನ ಜಾಗವನ್ನು ದುರಸ್ತಿಮಾಡಿ ಪ್ರಸಿದ್ಧಿಪಡಿಸುವ ಯೋಜನೆಯಿತ್ತು. ನಿಧಾನವಾಗಿ ಆದ ಬದಲಾವಣೆಗಾಗಿ, ೧೭೧೫ ರವರೆಗೆ ಕಾಯಬೇಕಾಯಿತು. ಕಂಪೆನಿ ಸರ್ಕಾರ, ಅಷ್ಟುಹೊತ್ತಿಗೆ ಚಾರ್ಲ್ಸ್ ಬೂನ್ ಎಂಬ ಹೊಸ ಗವರ್ನರ್ ನ್ನು ಆಯ್ಕೆಮಾಡಿ ಕಳಿಸಿಕೊಕೊಟ್ಟರು.

ಅಭಿವೃದ್ಧಿ ಕಾರ್ಯ

ಬದಲಾಯಿಸಿ
 
The tomb of Aungier located in the English Cemetery at Surat. Sir George Oxenden, first governor of Bombay, is buried in one of the nearby tombs.

ಪಾರ್ಸಿಸಮುದಾಯದವರಿಗೆ, 'ಟವರ್ ಆಫ್ ಸೈಲೆನ್ಸ್,' ಕಟ್ಟಿಸಿಕೊಟ್ಟಿದ್ದು ಬೊಂಬಾಯಿನಲ್ಲಿ ವಾಸ್ತವ್ಯಹೂಡಲು ಸಹಕಾರಿಯಾಯಿತು.ಬೊಂಬಾಯಿನ ಅಭಿವೃದ್ಧಿಗೆ, ಬಡಾವಣೆಗೆ ಕುಶಲಕರ್ಮಿಗಳು, ವ್ಯಾಪಾರಸ್ತರುಗಳನ್ನು ಆಹ್ವಾನಿಸಿದರು. ಗುಜರಾತ್ ನಿಂದ ಬರಲು ಒಪ್ಪಿದ ಹಲವು ಉದ್ಯಮಿಗಳಿಗೆ ಹೆಚ್ಚು-ಹೆಚ್ಚು ಸವಲತ್ತುಗಳನ್ನು ಕೊಡುವ ಆಶೆ ತೋರಿಸಿ ಕರೆದುಕೊಂಡು ಬಂದರು. ಈ ಬದಲಾವಣೆಯಿಂದ ಪ್ರಥಮವಾಗಿ ಜನಸಂಖ್ಯೆ ಹೆಚ್ಚಿತು. ೧೬೬೧ ಮತ್ತು ೧೬೭೫ರಲ್ಲಿ ೬ ಪಟ್ಟು ಜನಸಂಖ್ಯೆಯಲ್ಲಿ ಹೆಚ್ಚಳವಾಯಿತು. ಮೊಟ್ಟಮೊದಲ ಟಂಕಸಾಲೆಯನ್ನು (ಮಿಂಟ್ )ಸ್ಥಾಪನೆಮಾಡಿದರು. ಮಲಬಾರ್ ಹಿಲ್ ಪ್ರದೇಶದ ಭೂಮಿಯನ್ನು ಆಗಿನಕಾಲದ ಪ್ರಮುಖ ವಲಸೆಗಾರರಾಗಿದ್ದ ಪಾರ್ಸಿಗಳಿಗೆ ಹಂಚಿದರು. ಅಲ್ಲಿ ಪಾರ್ಸಿ ಪೂಜಾರಿಗಳು, 'ಟವರ್ ಆಫ್ ಸೈಲೆನ್ಸ್ ' ಸ್ಥಾಪಿಸಿದರು. ಪಾರ್ಸಿಸಮುದಾಯದವರು, ಇದರಿಂದ ಬಹಳ ಹರ್ಷಚಿತ್ತರಾದರು. ೧೬೭೦ ರಲ್ಲಿ ಮೊಟ್ಟಮೊದಲ ಮುದ್ರಣಯಂತ್ರವನ್ನು ತಮ್ಮದೇಶದಿಂದ ಬೊಂಬಾಯಿನಗರಕ್ಕೆ ಆಮದುಮಾಡಿಕೊಂಡರು. ವಲಸೆಗಾರರು, ಸ್ಥಳೀಯ ಕೋಳಿಜನರು (ಮೀನುಹಿಡಿಯುವ ಬೆಸ್ತರು) ಅಕ್ಕ-ಪಕ್ಕದ ಪ್ರದೇಶಗಳಿಂದ ಬಂದವರು, ಹಾಗೂ ಬ್ರಿಟನ್ ನಿಂದನೇರವಾಗಿ ನಗರಕ್ಕೆ ಬಂದವರು. ೧೬೭೦ ರಲ್ಲಿ, ಒಟ್ಟಾರೆ ೧,೫೦೦ ಸೈನಿಕರು,ಸ್ಥಳೀಯಜನರನ್ನು ನಿವಾಸಿಗಳನ್ನು ಕಾಪಾಡಲು,(ಇಂಗ್ಲೀಷ್ ಮತ್ತು ನಮ್ಮವರು.)ಬಂದರು. ೧೬೭೫,ರ ಹೊತ್ತಿಗೆ, ಒಟ್ಟು ೬೦,೦೦೦ ಜನರಿದ್ದರು. ೧೬೮೭,ರಲ್ಲಿ, ಕಂಪೆನಿಸರ್ಕಾರವು, ಬೊಂಬಾಯಿಯನ್ನು ಭಾರತದ ತಮ್ಮ ಪ್ರಮುಖ ವ್ಯವಹಾರಗಳ (ವ್ಯಾಪಾರ ಆಡಳಿತಶಾಖೆಯನ್ನಾಗಿ ಮಾಡಿಕೊಂಡರು). ಈ ಪರಿಸ್ಥಿತಿ, ೧೭೦೮ ರವರೆಗೂ ಇತ್ತು.