ಗುಲ್ಶನ್ ಬಾವ್ರಾ
ಗುಲ್ಶನ್ ಬಾವ್ರಾ(೧೯೩೭ - ೭ ಆಗಸ್ಟ್, ೨೦೦೯)ಖ್ಯಾತ ಹಿಂದಿ ಚಿತ್ರ ಗೀತೆಗಳ ರಚನಾಕಾರ. ಗುಲ್ಶನ್ ಬಾವ್ರ ರವರು ಈಗಿನ ಪಾಕಿಸ್ಥಾನದಲ್ಲಿ ಜನಿಸಿದರು. ದೇಶವಿಭಜನೆಯ ಸಮಯದಲ್ಲಿ ಗುಲ್ಶನ್ ಬಾವ್ರಾರವರ ತಂದೆ-ತಾಯಿಗಳು ಕೊಲ್ಲಲ್ಪಟ್ಟರು. ಆಗ ಅವರು ಭಾರತದ ಜೈಪುರಕ್ಕೆ ಬಂದು ಸ್ವಲ್ಪದಿನ ಇದ್ದರು. ಅಲ್ಲಿಂದ ದೆಹಲಿಗೆ, ತೆರಳಿ, ಅಲ್ಲಿ ತಮ್ಮ ವಿಧ್ಯಾಭ್ಯಾಸವನ್ನು ನಡೆಸಿದರು. ಕಾಲೇಜಿನ ದಿನಗಳಲ್ಲಿ ಗುಲ್ಶನ್ ಬಾವ್ರಾ’ ರವರಿಗೆ ಬರೆಯುವ ಹುಚ್ಚು ಅಸಾಧ್ಯವಿತ್ತು. ರೈಲ್ವೆ ವಿಭಾಗದಲ್ಲಿ ನೌಕರಿ ಹುಡುಕಿಕೊಂಡು ಮುಂಬಯಿಗೆ ಬಂದರು. ಗೀತರಚನೆಯಿಂದ ಸಿನಿಮಾರಂಗಕ್ಕೆ ಹೇಗಾದರೂ ಸೇರಿಕೊಳ್ಳುವ ಸಾಧ್ಯತೆಗಳನ್ನು ಅವರು ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡೇಇದ್ದರು. ೧೯೫೯ ರಲ್ಲಿ, ಕಾಲಕ್ರಮೇಣ, ’ಸಟ್ಟಾ ಬಝಾರ್,’ ಎಂಬ ಚಿತ್ರನಿರ್ಮಾಣದ ಸಮಯದಲ್ಲಿ, ಶಾಂತಿ ಪಟೇಲ್ ರವರು ಬಾವ್ರಾ, ಎಂದು ಬದಲಾಯಿಸಲು ಸೂಚಿಸಿದರು. ಗುಲ್ಶನ್ ಬಾವ್ರಾರ ಬಾಲ್ಯದ ಹೆಸರು, ’ಗುಲ್ಶನ್ ಮೆಹ್ತಾ,’ ಎಂದು, ತಮ್ಮ ೪೨ ವರ್ಷಗಳ ಜೀವನದಲ್ಲಿ ಸುಮಾರು ೨೪೦ ಗೀತೆಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಅರ್ಧದಷ್ಟು ಆರ್. ಡಿ ಬರ್ಮನ್ ದಾ ರವರು, ಸಂಗೀತ ಸಂಯೋಜಿಸಿದ್ದು. ಗುಲ್ಶನ್ ಬಾವ್ರಾರವರ ಲೇಖನಿಯಿಂದ ಮೂಡಿದ ಕೆಲವು ಜನಪ್ರಿಯ ಗೀತೆಗಳು :
- ’ಆತಿ ರಹೇಗಿ ಬಹಾಂ ರೆ’ (ಕಸ್ಮೆ ವಾದೇಂ’)
- ’ಜೀವನ್ ಕೆ ಹರ್ ಮೋಡ್ ಪೆ ಮಿಲ್ ಜಾಯೆಂಗೆ ಹಮ್ ಸಫರ್’ (ಝೂಟ ಕಹೀಂ ಕಾ)
- ’ದುಖಿ ಪೆ ದುಖಿ ಹೊ’ (ಸತ್ತೆ ಪೆ ಸತ್ತ)
- ’ರಫೂ ಚಕ್ಕರ್ ಚಿತ್ರ,’ ದ ಗೀತೆಗಳೆಲ್ಲಾ.
ಗುಲ್ಶನ್ ಬಾವ್ರಾ | |
---|---|
Born | ಗುಲ್ಶನ್ ಕುಮಾರ್ ಮೆಹ್ತಾ ೧೨ ಏಪ್ರಿಲ್ ೧೯೩೭ |
Died | ೭ ಆಗಸ್ಟ್ ೨೦೦೯ ಮುಂಬೈ, Maharashtra | (aged ೭೨)
Occupation | lyricist, actor |
Years active | 1961-1999 |
೧೯೯೫ ರಲ್ಲಿ ಚಿತ್ರ ’ ಹಕೀಕತ್ ಚಿತ್ರದ ಗೀತೆ, " ಲೆ ಪಾಪಿಯಾಂ ಝಪ್ಪಿಯಾಂ ಪಾಲೇ ಹೂಂ ಜನರ ವಿಮರ್ಶಕರ ನಿಂದೆಗೆ ಒಳಗಾದರು. ಅಶ್ಲೀಲವೆಂಬ ಶಿರೋಪಟ್ಟಿಯೂ ಅವರ ಮುಡಿಗೇರಿತು. ಇದು ಅವರ ಸಿನೆಮಾ ಜೀವನದಲ್ಲಾದ ಒಂದು ದುರಂತ. ಹೇಗೋ ಕಷ್ಟದಿಂದ ಬಂದ ಗಂಡಾಂತರದಿಂದ ಚೇತರಿಸಿಕೊಂಡರು.
ಗುಲ್ಶನ್ ಬಾವ್ರಾ, ನಟನೆಯನ್ನೂ ಮಾಡಿದ್ದಾರೆಸಂಪಾದಿಸಿ
ಸುಮಾರು ೨೧ ಚಿತ್ರಗಳಲ್ಲಿ ನಟಿಸಿದ್ದಾರೆ. 'ಉಪ್ಕಾರ್', 'ಪವಿತ್ರ-ಪಾಪಿ', 'ಬೇಇಮಾನ್,' 'ಝಂಜೀರ್', 'ಇಂದ್ರಜೀತ್ ' ಮತ್ತು 'ಜ್ವಾರ್ ಭಾಟ', ಅವರ ಕೊನೆಯ ಎರಡು ಚಿತ್ರಗಳು ಇಂಗ್ಲೀಷ್, ಭಾಷೆಯಲ್ಲಿದ್ದವು. 'ಬಾಬು, ದೇಸಿ ಮೇಮ್', ಮತ್ತು, 'ಝುಲ್ಮಿ'.
೪೨ ವರ್ಷಗಳ ಸಿನಿಮಾರಂಗದಲ್ಲಿ, ೨೪೦ ಗೀತೆಗಳ ರಚನೆಸಂಪಾದಿಸಿ
' ಚಂದ್ರಸೇನ,' ಎಂಬ ಚಿತ್ರಕ್ಕೆ ಕಲ್ಯಾಣ್ಜಿ ಅವರನ್ನು ಆರಿಸಿಕೊಂಡರು. ಗುಲ್ಶನ್ ಬಾವ್ರಾರವರು ಚಲನಚಿತ್ರರಂಗಕ್ಕೆ ಪಾದಾರ್ಪಣೆಮಾಡಿ ಸುಮಾರು , ೪೨ ವರ್ಷಗಳ ಅವಧಿಯಲ್ಲಿ ವೃತ್ತಿಜೀವನದಲ್ಲಿದ್ದರು. ಬಾವ್ರಾ ರವರ ಚಿತ್ರಗಳ ಸಂಗೀತ ಸಂಯೋಜನೆಯನ್ನು, ಆದಿನಗಳ, ಪ್ರಖ್ಯಾತ ಸಂಯೋಜಕ, 'ಆರ್. ಡಿ. ಬರ್ಮನ್' ಮಾಡಿದ್ದರು.
ಫಿಲ್ಮ್ ಫೇರ್ ಪ್ರಶಸ್ತಿಸಂಪಾದಿಸಿ
'ಯಾರಿ ಹೈ ಇಮಾನ್ ಮೇರಾ', ಚಿತ್ರದ ಹಾಡಿಗೆ 'ಫಿಲ್ಮ್ ಫೇರ್ ಪ್ರಶಸ್ತಿ ಪುರಸ್ಕೃತರಾಗಿದ್ದರು,' ಇನ್ನೂ ಹಲವಾರು ’ಸೂಪರ್ ಹಿಟ್ ಚಲನ-ಚಿತ್ರ,’ ಗಳಿಗೆ ಗೀತೆಗಳನ್ನು ಬರೆದು, ಚಿತ್ರ ವೀಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ.
ಗುಲ್ಶನ್ ಬಾವ್ರಾರವರು ರಚಿಸಿದ, ಕೆಲವು ಅವಿಸ್ಮರಣೀಯ ಚಿತ್ರ-ಗೀತೆಗಳುಸಂಪಾದಿಸಿ
- ಮೇರೀ ದೇಶ್ ಕಿ ಧರ್ತೀ’ (ಉಪ್ಕಾರ್ ಚಿತ್ರ)
- ಸನಮ್ ತೇರೀ ಕಸಮ್, (
- ಅಗರ್ ತುಮ್ ನ ಹೋತೆ,
ಮರಣಸಂಪಾದಿಸಿ
೭೨ ವರ್ಷ ಪ್ರಾಯದ, ಕಳೆದ ಕೆಲವು ತಿಂಗಳುಗಳಿಂದ ಹಾಸಿಗೆ ಹಿಡಿದಿದ್ದರು. ಮುಂಬಯಿ ನ ಉಪನಗರ, ಬಾಂದ್ರದ ತಮ್ಮ ನಿವಾಸದಲ್ಲಿ, ಶುಕ್ರವಾರ, ೭, ಆಗಸ್ಟ್, ೨೦೦೯ ರಂದು, ಬೆಳಗಿನ ಜಾವದಲ್ಲಿ ಹೃದಯಾಘಾತದಿಂದ ಮರಣಿಸಿದರು. ಗುಲ್ಶನ್ ಬಾವ್ರಾ, ಪತ್ನಿ, ಅಂಜು ರವರನ್ನು ಅಗಲಿದ್ದಾರೆ. ಮರಣಾನಂತರ ಗುಲ್ಶನ್ ಬಾವ್ರಾ, ತಮ್ಮ ಇಡೀ ದೇಹವನ್ನು ಹಾಗೂ ನೇತ್ರದಾನಮಾಡಲು. ಇಚ್ಛಿಸಿದ್ದರು. ಅದರಂತೆ, ಮರಣ ಸಂಭವಿಸಿದ ಕೆಲವೇ ನಿಮಿಶಗಳಲ್ಲಿ ಬಾಂದ್ರ ದ ಅವರ ’ಪಾಲೀ ಹಿಲ್ ರೆಸಿಡೆನ್ಸ್,’ ನಿಂದ, ಪಾರ್ಥಿವ ಶರೀರವನ್ನು ಸರಕಾರಿ ಸ್ವಾಮ್ಯದ, 'ಜೆ. ಜೆ. ಆಸ್ಪತ್ರೆ,' ಗೆ ಒಯ್ಯಲಾಯಿತು, ಎನ್ನುವ ವಿಶಯವನ್ನು ಅವರ ಪಡೋಸಿಯವರಾದ ಮೋನಿಕಾಖನ್ನರವರು ತಿಳಿಸಿದರು, ಹಾಗೂ ಅವರ ಇಚ್ಛೆಯಂತೆ ಎರಡೂಕಣ್ಣುಗಳನ್ನು, ಹಾಗೂ ದೇಹವನ್ನೂ, ದಾನವಾಗಿ ಸ್ವೀಕರಿಸಲಾಯಿತು.
’ಗುಲ್ಶನ್ ಬಾವ್ರಾ,’ ರವರ ’ಚೌಥ-ವಿಧಿಗಳು’ಸಂಪಾದಿಸಿ
ಅಂತ್ಯ ವಿಧಿಗಳು, ಖಾರ್-ಲಿಂಕ್ ರೋಡ್ ನ, ’ಆರ್ಯ ಸಮಾಜ್’, ನಲ್ಲಿ ವ್ಯವಸ್ಥೆಗೊಳಿಸಲಾಗಿತ್ತು.