ಗುಲ್ವಾಡಿ ವೆಂಕಟರಾಯರು

ಗುಲ್ವಾಡಿ ವೆಂಕಟರಾಯರು ೧೮೪೪ರಲ್ಲಿ ಜನಿಸಿದರು;ಮಡಿಕೇರಿಯಲ್ಲಿ ವಾಸವಾಗಿದ್ದರು. ಇವರು ಕನ್ನಡ ಸಾಹಿತ್ಯದ ಆದ್ಯಪುರುಷರಲ್ಲಿ ಒಬ್ಬರು. ೧೯ನೆಯ ಶತಮಾನದ ಅಂತ್ಯದಲ್ಲಿ ಅಂದರೆ ೧೮೯೯ರಲ್ಲಿ ಇವರು ‘ಇಂದಿರಾಬಾಯಿ’ ಕಾದಂಬರಿ ರಚಿಸಿದರು. ಇವರು 'ಭಾಗೀರಥಿ' ಹಾಗು ‘ಸೀಮಂತಿನಿ’ ಕಾದಂಬರಿಗಳನ್ನೂ ರಚಿಸಿದ್ದರೆಂದು ಹೇಳಲಾಗಿದೆ. ಆದರೆ ಅವು ಲಭ್ಯವಿಲ್ಲ. ೧೯೧೩ರಲ್ಲಿ ಇವರ ದೇಹಾಂತವಾಯಿತು.

ಉಲ್ಲೇಖಗಳು ಬದಲಾಯಿಸಿ