ಗುಲಾಲು (ಅಬೀರ್ ಎಂದೂ ಪರಿಚಿತವಾಗಿದೆ) ಸಾಮಾನ್ಯ ಹಿಂದೂ ಆಚರಣೆಗಳಿಗೆ ಬಳಸಲಾಗುವ, ವಿಶೇಷವಾಗಿ ಹೋಳಿ ಹಬ್ಬಕ್ಕೆ ಬಳಸಲಾಗುವ ಬಣ್ಣದ ಪುಡಿಗಳಿಗೆ ನೀಡಲಾದ ಸಾಂಪ್ರದಾಯಿಕ ಹೆಸರಾಗಿದೆ (ಆದರೆ ಸಾಮಾನ್ಯವಾಗಿ ಈ ಹೆಸರನ್ನು ಹಬ್ಬದಲ್ಲಿ ಬಳಸಲಾಗುವ ಗುಲಾಬಿ ಬಣ್ಣಕ್ಕೆ ಸಂಬಂಧಿಸಲಾಗುತ್ತದೆ). ಪ್ರೀತಿ ಮತ್ತು ಸಮಾನತೆಯನ್ನು ಆಚರಿಸುವ ಈ ಹಬ್ಬದ ಸಂದರ್ಭದಲ್ಲಿ, ಜನರು ಹಾಡುತ್ತ ಕುಣಿಯುತ್ತ ಒಬ್ಬರ ಮೇಲೆ ಒಬ್ಬರು ಈ ಪುಡಿಗಳನ್ನು ಎರಚುತ್ತಾರೆ.

ಹೋಳಿ ಹಬ್ಬಕ್ಕಾಗಿ ಮಾರಾಟಕ್ಕಿಡಲಾದ ಬಣ್ಣಗಳು

ಮುಂಚಿನ ಕಾಲದಲ್ಲಿ, ಗುಲಾಲು ಪುಡಿಗಳನ್ನು ಮರಗಳಿಂದ ಬರುವ ಹೂವುಗಳಿಂದ ತಯಾರಿಸಲಾಗುತ್ತಿತ್ತು, ಉದಾಹರಣೆಗೆ ಹಾಲವಾಣ ಮತ್ತು ಪಲಾಶ ಮರಗಳು. ಇವು ಚರ್ಮಕ್ಕೆ ಪ್ರಯೋಜನಕಾರಿಯಾದ ಔಷಧೀಯ ಗುಣಗಳನ್ನು ಹೊಂದಿರುತ್ತಿದ್ದವು. ೧೯ನೇ ಶತಮಾನದ ಮಧ್ಯದಲ್ಲಿ ಕೃತಕ ಬಣ್ಣಗಳ ಆಗಮನ, ನಗರ ಪ್ರದೇಶಗಳಲ್ಲಿ ಮರಗಳ ಕಾಣದಾಗುವಿಕೆ ಮತ್ತು ಹೆಚ್ಚಿನ ಲಾಭದ ಅನ್ವೇಷಣೆಯ ನಂತರ ನೈಸರ್ಗಿಕ ಬಣ್ಣಗಳನ್ನು ತ್ಯಾಗ ಮಾಡಲಾಯಿತು.[]

ಉಲ್ಲೇಖಗಳು

ಬದಲಾಯಿಸಿ
  1. Chaudhary H.H, Patel A.K., Patel K.S., Sen D.J., "Colour of ecofriendly dyes used in Holi rather than triphenyl methane dyes"[ಶಾಶ್ವತವಾಗಿ ಮಡಿದ ಕೊಂಡಿ], in World Journal of Pharmacy and Pharmaceutical Sciences, Vol. 3, Issue 9, 2014
"https://kn.wikipedia.org/w/index.php?title=ಗುಲಾಲು&oldid=1054866" ಇಂದ ಪಡೆಯಲ್ಪಟ್ಟಿದೆ