ಮಾಧವ ಸದಾಶಿವರಾವ್ ಗೋಳ್‍ವಲ್ಕರ್

(ಗುರೂಜಿ ಇಂದ ಪುನರ್ನಿರ್ದೇಶಿತ)

ಶ್ರೀ ಗುರೂಜಿ ಯಾರು ? ಬದಲಾಯಿಸಿ

ಶ್ರೀ ಗುರೂಜಿ ಆರ್.ಎಸ್.ಎಸ್ ನ ಎರಡನೆಯ ಸರಸಂಘ ಚಾಲಕರು(ಸಂಘಟನೆಯ ರಾಷ್ಟ್ರೀಯ ಮಟ್ಟದ ಮುಖ್ಯಸ್ಥರು). ಶ್ರೀ ಗುರೂಜಿ ಎಂಬುದು ಅವರ ಮೂಲ ಹೆಸರಲ್ಲ. ಅವರು ಕಾಶಿ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದಾಗ, ವಿದ್ಯಾರ್ಥಿ ಗಳು ಅವರನ್ನು ಆದರದಿಂದ 'ಶ್ರೀ ಗುರೂಜಿ' ಎಂದು ಕರೆಯುತ್ತಿದ್ದರು. ಆಗಿನಿಂದ ಅದೇ ಹೆಸರು ಸಂಘದಲ್ಲಿ ಮತ್ತು ದೇಶದಲ್ಲಿ ಬಳಕೆಯಲ್ಲಿದೆ. ಅವರ ಹೆಸರು 'ಮಾಧವ ಸದಾಶಿವರಾವ್ ಗೋಳವಲಕರ್'. ಇವರು ಕ್ರಿ.ಶ ೧೯೦೬ ಫೆಬ್ರವರಿ ೧೯ರಂದು ನಾಗಪುರದಲ್ಲಿ ಜನಿಸಿದರು. ತಂದೆ ಸದಾಶಿವರಾವ್ ಮತ್ತು ತಾಯಿ ಲಕ್ಷ್ಮೀಬಾಯಿ.

ವಿದ್ಯಾಭ್ಯಾಸ ಬದಲಾಯಿಸಿ

ಆ ದಿನಗಳಲ್ಲಿ ನಾಗಪುರ ಈಗಿನ ಮಧ್ಯ ಪ್ರದೇಶದಲ್ಲಿ ಇತ್ತು. ತಂದೆ ಅಧ್ಯಾಪಕರಾಗಿದ್ದರು. ತಂದೆಯವರ ವರ್ಗಾವಣೆ ಹಿಂದಿ ಭಾಷಾ ಪ್ರದೇಶಗಳಲ್ಲೇ ಆಗುತ್ತಿತ್ತು. ಹೀಗಾಗಿ ಗುರೂಜಿ ಅವರಿಗೆ ಹಿಂದಿ ಭಾಷೆಯ ಮೇಲೆ ಒಳ್ಳೆಯ ಹಿಡಿತವಿತ್ತು. ಗುರೂಜಿಯವರು ಕ್ರೈಸ್ತ ಮಿಷನರಿಗಳು ನಡೆಸುತ್ತಿದ್ದ ವಿದ್ಯಾಲಯದಲ್ಲಿ ಕಲಿತಿದ್ದರಿಂದ ಆಂಗ್ಲಭಾಷೆಯಲ್ಲಿಯೂ ಪ್ರಾವೀಣ್ಯ ಹೊಂದಿದ್ದರು. ೧೯೨೪ ರಲ್ಲಿ ಆಂಗ್ಲಭಾಷೆಯಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆಯಾದರು ಹಾಗೂ ೧೯೨೬ ರಲ್ಲಿ ಬಿ.ಎಸ್ಸಿ ಯಲ್ಲಿ ಉತ್ತೀರ್ಣರಾದರು. ೧೯೨೮ ರಲ್ಲಿ ಎಂ.ಎಸ್ಸಿ (ಪ್ರಾಣಿಶಾಸ್ತ್ರ)ದಲ್ಲೂ ಉತ್ತೀರ್ಣರಾದರು. ನಂತರ ೧೯೨೯ ರಲ್ಲಿ ಚೆನ್ನೈನ ಮತ್ಸ್ಯಾಲಯದಲ್ಲಿ ಸಂಶೋಧನೆಯಲ್ಲಿ ನಿರತರಾದರು.

ಜೀವನ ಮತ್ತು ಸಂಘಟನೆಯೊಡನೆ ಬದಲಾಯಿಸಿ

ಶ್ರೀ ಗುರೂಜಿ ಅವರು ೧೯೩೧ ರಲ್ಲಿ ಡಾ. ಕೇಶವ ಬಲಿರಾಂ ಹೆಡಗೆವಾರ್ ರವರು ೧೯೨೫ ರಲ್ಲಿ ಸ್ಥಾಪಿಸಿದ್ದ ಸಂಘವನ್ನು ಪ್ರವೇಶಿಸಿದರು. ನಂತರ (೧೯೩೧-೧೯೩೩)ರವರೆಗೆ ಕಾಶೀ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು ಹಾಗೂ ೧೯೩೫ ರಲ್ಲಿ ಎಲ್.ಎಲ್.ಬಿ ಯಲ್ಲಿ ಉತ್ತೀರ್ಣರಾದರು.

ನಂತರದ ದಿನಗಳಲ್ಲಿ ನಾಗಪುರದ ಸಂಘ ಶಿಕ್ಷಾವರ್ಗದ ಸರ್ವಾಧಿಕಾರಿಯಾಗಿ ನೇಮಕಗೊಂಡರು ಹಾಗೂ ೧೯೫೪ ರಲ್ಲಿ ಗೋಹತ್ಯಾ ನಿಷೇಧ ಆಂದೋಲನದಲ್ಲಿ ಪಾಲ್ಗೊಂಡರು ಮತ್ತು ರಾಷ್ಟ್ರಪತಿ ಡಾ|| ರಾಜೇಂದ್ರ ಪ್ರಸಾದರಿಗೆ ಸುಮಾರು ೧.೭೫ ಕೋಟಿ ಹಸ್ತಾಕ್ಷರಗಳ ನಿವೇದನೆಯನ್ನು ಮಾಡಿದರು. ೧೯೬೪ ರಲ್ಲಿ ಕೃಷ್ಣಜನ್ಮಾಷ್ಟಮಿಯಂದು ಮುಂಬಯಿಯ ಸಾಂದೀಪಿನಿ ಆಶ್ರಮದಲ್ಲಿ ವಿಶ್ವಹಿಂದು ಪರಿಷತ್ತಿನ ಸ್ಥಾಪನೆಯನ್ನು ಮಾಡಿದರು.

ವಿದಾಯ ಬದಲಾಯಿಸಿ

ಶ್ರೀ ಗುರೂಜಿ ಅವರು ಜೂನ್ ೫, ೧೯೭೩ ರಂದು ನಿಧನರಾದರು.

ಬಾಹ್ಯ ಸಂಪರ್ಕಗಳು ಬದಲಾಯಿಸಿ